Monday, 20th January 2020

ಮಾಸದ ಬಾಲ್ಯದ ನೆನಪುಗಳು…

*ಬಸವರಾಜ ಹೇಮನೂರು
ಹುಟ್ಟಿದ್ದು ಒಂದು ಊರು (ಹೇಮನೂರು) ಬೆಳೆದಿದ್ದು ಅಜ್ಜಿಯ ಊರಲ್ಲಿ (ಮಲ್ಲಟ) ಹನ್ನೊೊಂದು ವರ್ಷಗಳನ್ನು ಅಜ್ಜಿ ಊರಲ್ಲೆೆ ಕಳೆದಿದ್ದೆೆನೆ ಇಲ್ಲಿಗೆ ಬಂದು ಕೆಲವೆ ದಿನಗಳಲ್ಲಿ ಎಲ್ಲ ಗೆಳೆಯರ ನೆನಪುಗಳು ಇಲ್ಲಿಂದಲೇ ಶುರುವಾಗಿದ್ದು. ಪ್ರಾಾಥಮಿಕ ಶಿಕ್ಷಣವನ್ನು ಮಲ್ಲಟದಲ್ಲಿ ಮುಂದುವರೆಸುವಾಗ ಹೀಗೆೆ ಎಲ್ಲ ಗೆಳೆಯರ ಜೊತೆಯಲ್ಲಿ ಬೆರೆತು ಒಂದಾಗಿ, ಏನಾದರೊಂದು ಹೊಸ ಹೊಸ ರೀತಿಯ ಚಟುವಟಿಕೆಗಳನ್ನು ಮಾಡುತಿದ್ದೆೆವು. ನಾನು, ಗೋಪಿಕಟ್ಟಿಮನಿ, ಮೇಟಿ ಶಿವು ಮತ್ತು ಮಲ್ಲಿಕಾರ್ಜುನ ಒಂದೆ ದಾರಿಯಿಂದ ಶಾಲೆಗೆ ಹೊಗಬೇಕಾದ ಗೆಳೆಯರು, ಮತ್ತು ವಿದ್ಯಾಾರ್ಥಿಗಳಾಗಿದ್ದೆೆವು. ನಾವು ಯಾವಾಗಲು ದಾರಿಯಲ್ಲಿ ಏನಾದರು ಒಂದು ವಸ್ತುವಿನ ಬಗ್ಗೆೆ ಅಥವಾ ನಮ್ಮ ಸುತ್ತಮುತ್ತ ಇರುವ ಹಿರಿಯರ ಬಗ್ಗೆೆ ಅವರಿವರು ಹೀಗೆ ಹಾಗೆ ಎಂದು ನಗೆ ಚಟಾಕಿಗಳು ಹೊರನುಸುಳುತಿದ್ದವು. ಆದರೆ ಎಲ್ಲರು ಒಂದೆ ಓಣಿಯವರಾಗಿರುದರಿಂದ ನಮ್ಮ ಓಣಿಯ ಜನರನ್ನು ನಾವು ತುಂಬಾ ವಿಡಂಬನೆ ಮಾಡಿದ್ದುಂಟು. ಹೀಗೆ ಕಾಲ ನೂಕಿದೆ ನಾವು ಯಾವ ದಿನಗಳು ಕೂಡ ನಾವು ನಮ್ಮಲ್ಲಿ ಒಬ್ಬರನ್ನು ಬಿಟ್ಟು ಇರುವ ಮನಸ್ಸು ಇರುತ್ತಿಿರಲಿಲ್ಲ.

ಈ ಕೀಟಲೆಗಳು ಎಲ್ಲರಲ್ಲೂ ಸಾಮಾನ್ಯವಾಗಿಬಿಟ್ಟಿಿದ್ದವು, ನಮ್ಮ ಗೆಳೆಯರ ಗುಂಪಿನಲ್ಲಿ ಗೋಪಿ ಮನೆಯಲ್ಲಿ ಸುಳ್ಳು ಹೇಳಿ ಹೊರಗಡೆ ಬಂದರೆ, ಇನ್ನೂ ಶಿವು ಯಾವುದಾದರು ಕೆಲಸ ಮಾಡುವ ಸುಳ್ಳಿಿನ ಮೇಲೆ ಹೊರಗಡೆ ಬಂದು ಬಿಡುತಿದ್ದರು. ಇನ್ನೂ ಮಲ್ಲಿಕಾರ್ಜುನ ಇರುವವನು ಒಬ್ಬ ಮಗನೆಂದು ಮುದ್ದು ಮಾಡಿ ಅವರ ಅಮ್ಮ ಅವನನ್ನು ಫ್ರೀ.. ಬಿಟ್ಟಿಿದ್ದರು. ಇನ್ನೂ ನನ್ನ ಕತೆ ಏನು ಕೆಳುತಿರ ಬಿಡಿ ನಮ್ ತಾತನ ಮನೆಯಲ್ಲಿ ಕೆಲವು ಸಾಮಾನ್ಯ ಕೆಲಸಗಳನ್ನು ಟಾರ್ಗೆಟ್ ಮಾಡುತ್ತಿಿದ್ದರು. ಆಯಾ ಟಾರ್ಗೆಟ್ ಕೆಲಸಗಳನ್ನು ಮಾಡಿ ಮೊದಲೆ ನಾವು ಎಲ್ಲಾಾ ಪ್ಲಾಾನ್ ಹಾಕಿ ಕೊಂಡು ಸಮಯವನ್ನು ಫಿಕ್‌ಸ್‌ ಮಾಡಿಕೊಂಡು ಇರುತ್ತಿಿದ್ದೆೆವು.

ಹಚ್ಚ ಹಸಿರಿನ ಶಾಲೆ ಊರಿಂದ ಸುಮಾರು 0.5 ಕಿ.ಮಿ ದೂರದಲ್ಲಿದೆ ಮೇನ್ ರೋಡ್‌ನಲ್ಲಿದೆ. ಆ ನಿಸರ್ಗಧಾಮ ಶಾಲೆ ಸೇರಬೇಕಾದರೆ ಎರಡು ಮಾರ್ಗಗಳು ಒಂದು ರೋಡ್ ಹಿಡಿದುಕೊಂಡು ಸೇತುವೆ ದಾಟುವುದು, ಮತ್ತು ಸಿದ್ಧಯ್ಯ ತಾತನ ಮನೆಯಿಂದ ಮಲ್ಲಿಕಾರ್ಜುನ ಗುಡಿಯ ಮಾರ್ಗವಾಗಿ ಹಿಡಿದು ಹಳ್ಳದಲ್ಲಿ ನಡೆಯುವುದು. ಸಾಮಾನ್ಯವಾಗಿ ಊರಿನ ಎಲ್ಲ ವಿದ್ಯಾಾರ್ಥಿಗಳು ಬರುತ್ತಿಿದ್ದ ದಾರಿ ಇದಾಗಿತ್ತು. ಹೀಗೆ ಹಳ್ಳ ದಾಟಿ ದುರ್ಗಮ್ಮನ ಗುಡಿಯನ್ನ ತಟ್ಟಿಿ ಶಾಲೆಯ ಒಳಗೆ ಮುನ್ನಡೆಯುತ್ತಿಿದ್ದೆೆವು. ಇನ್ನೇನು ಮಳೆ ಬಂದು ಹಳ್ಳದಲ್ಲಿ ಅಲ್ಲಲ್ಲಿ ನೀರು ನಿಂತಿದ್ದವು, ಕೊನೆ ಘಳಿಗೆ ಎಂಟನೆ ತರಗತಿಯಲ್ಲಿ ಮಲ್ಲಟ ಶಾಲೆಯ ಅಭ್ಯಾಾಸ (ಪ್ರಾಾಥಮಿಕ ಶಿಕ್ಷಣ) ಮುಕ್ತಾಾಯವಾಯ್ತು. ಮುಂದೆ ಗೆಳೆಯ ಗೆಳತಿಯರು ಚಿದ್ರ ಚಿದ್ರವಾದರು ಬೇರೆ ಬೇರೆ ಹೈಸ್ಕೂಲುಗಳನ್ನ ಸೇರಿಕೊಂಡರು. ನಾನು(ಬಸವ) ಗೋಪಿ, ಶ್ರೀಕಾಂತ್‌ಚನ್ನುರು, ಮಲ್ಲಿಕಾರ್ಜುನ ಸಿರವಾರದ (ಪಟ್ಟಣ) ಬಾಲಕರ ಶಾಲೆಗೆ ಸೇರಿಕೊಂಡರೆ. ಶಿವು ಲಿಂಗಸೂಗೂರು ಮತ್ತು ಉಳಿದವರೆಲ್ಲ ನವಲಕಲ್ ಹೈಸ್ಕೂಲು ಸೇರಿದರು. ಆದರೆ ಇಂದಿಗೂ ನಾವು ಹಬ್ಬ ಹುಣ್ಣಿಿಮೆ ಜಾತ್ರೆೆಗಳಲ್ಲಿ ಊರಿನ ಒಂದು ಕಡೆ ಸೇರಿ ನೆನಪುಗಳನ್ನ ಬಿಚ್ಚಿಿಟ್ಟು ನಗುತ್ತಾಾ ನಲಿಯುತಾ ನಗಿಸುತ್ತಾಾ ಇರುತ್ತೇವೆ. ಕಳೆದು ಹೋದವರು ಫೇಸ್‌ಬುಕ್‌ನಲ್ಲಿ ಇಲ್ಲವೆ ಇಂದಿನ ವಾಟ್‌ಸ್‌ ಆಪ್ ಗ್ರೂಪ್‌ಗಳಲ್ಲಿ ಸಿಗುತ್ತಿಿದ್ದಾಾರೆ ಇದೆ ನಾನು ಪ್ರಾಾರಂಭದಲ್ಲಿ ತಿಳಿಸಿದ ಬಿಡಲಾರದ ಅಂಟು-ನಂಟು ಎಂಬುದು.

Leave a Reply

Your email address will not be published. Required fields are marked *