ಮಾನವಿ : ರಾಜ್ಯದಲ್ಲಿ ಮಾದಿಗ ಸಮಾಜದ ನಾಯಕರಿಗೆ ಸ್ಥಾನ ಮಾನ ನೀಡುವ ಬಿಜೆಪಿ ಪಕ್ಷಕ್ಕೆ ಮಸ್ಕಿ ಉಪ ಚುನಾವಣೆಯಲ್ಲಿ ಮತ ನೀಡಬೇಕು ನಮ್ಮ ಜನಾಂಗದ ಗೋವಿಂದ ಕಾರಜೋಳ ಅವರಿಗೆ ಬಿಜೆಪಿ ಪಕ್ಷದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಹಾಗೂ ದಲಿತ ಮೀಸಲಾತಿ ಕ್ಷೇತ್ರದಲ್ಲಿ ಅತಿ ಹೆಚ್ಚು ನಮ್ಮ ಜನಾಂಗದ ನಾಯಕರಿಗೆ ಟಿಕೆಟ್ ನೀಡಿದೆ ಎಂದು ಪುರಸಭೆ ಮಾಜಿ ಸದಸ್ಯ ಪಿ ಅನಿಲ್ ಕುಮಾರ್ ಕೋನಾಪುರಪೇಟೆ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಕರೆದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಮಾದಿಗ ಜನಾಂಗಕ್ಕೆ ಯಾವುದೇ ಉನ್ನತ ಸ್ಥಾನ ಮಾನ ನೀಡುವುದಕ್ಕೆ ಯೋಚನೆ ಮಾಡುವ ಪಕ್ಷವಾಗಿದೆ ಮತ್ತು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಮಾದಿಗ ಜನಾಂಗಕ್ಕೆ ಟಿಕೆಟ್ ನೀಡುವುದಿಲ್ಲ ಹಾಗಾಗಿ ಕಾಂಗ್ರೆಸ್ ಪಕ್ಷ ಮಾದಿಗ ಜನಾಂಗವನ್ನು ಕೈ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಮೂಲಕ ನಮ್ಮ ಜನಾಂಗದ ಅಭಿವೃದ್ಧಿಗೆ ಕಾರಣವಾಗಿರುವ ಬಿಜೆಪಿ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಹೇಳಿದರು..
ಬಿಜೆಪಿ ಪಕ್ಷಯು ರಾಜ್ಯ ಚುನಾವಣೆಯಲ್ಲಿ ದಲಿತ ಮೀಸಲಾತಿಯಾಗಿರುವ ಅನೇಕ ಕ್ಷೇತ್ರದಲ್ಲಿ ಮಾದಿಗರಿಗೆ ಬಿಜೆಪಿ ಪಕ್ಷವು ಟಿಕೆಟ್ ನೀಡುವುದರ ಜೊತೆಗೆ ಗೆಲುವುಗಾಗಿ ಶ್ರಮಿಸುತ್ತಿದೆ ಉದಾಹರಣೆಗೆ ರಾಜ್ಯದ ಅತ್ಯುತ್ತಮ ರಾಜಕೀಯ ಸ್ಥಾನಮಾನವಾದ ಉಪಮುಖ್ಯಮಂತ್ರಿಯನ್ನಾಗಿ ಗೋವಿಂದ ಕಾರಜೋಳ ಅವರನ್ನು ನೇಮಕ ಮಾಡಿ ನಮ್ಮ ಸಮಾಜಕ್ಕೆ ಗೌರವ ನೀಡಿದ್ದು ನಮ್ಮ ಭಾಗದ ಶಾಸಕರಾದ ದಡೆಸೂಗುರು ಬಸವರಾಜ ಅವರ ರಾಜಕೀಯ ಬಲವನ್ನು ನೀಡುವ ಉದ್ದೇಶದಿಂದ ಬಿಜೆಪಿ ಮತ ಯಾಚನೆ ಮಾಡಿದರು.
ನಮ್ಮ ಭಾಗದ ಇನ್ನೋರ್ವ ಮುಖಂಡರಾದ ಹನುಮಂತಪ್ಪ ಹಾಲ್ಕೋಡ ಇವರಿಗೆ ಲಿಂಗಸ್ಗೂರು ಕ್ಷೇತ್ರದ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡುವುದಾಗಿ ಸುಳ್ಳು ಭರವಸೆ ನೀಡಿ ಮೋಸ ಮಾಡಿದೆ ಎಂದರು.
ಅದರಂತೆ ಹುಬ್ಬಳ್ಳಿಯಲ್ಲಿ ನಡೆದ ಮಾದಿಗ ಜಾಗೃತಿ ಸಮಾವೇಶದಲ್ಲಿ ನಮ್ಮ ಸಮುದಾಯದ 6 ಜನ ಮಾದಿಗರು ಮೃತರಾದರು ಕೂಡ ಯಾವುದನ್ನು ಲೆಕ್ಕಿಸದೆ ಕೈ ಸರ್ಕಾರ ನಮಗೆ ಮೋಸ ಮಾಡಿದೆ ಎಂದರು ಆರೋಪಿಸಿದರು. ಈ ಸಂದರ್ಭದಲ್ಲಿ ಶಿವಲಿಂಗ ಮೂಸ್ಟೂರು ಇದ್ದರು.