Sunday, 27th September 2020

ಮ್ಯಾಚ್ ಫಿಕ್ಸಿಂಗ್: ಸಿ.ಎಂ.ಗೌತಮ್ ಸೇರಿ ಇಬ್ಬರ

2019ರ ಕೆಪಿಎಲ್ ಫೈನಲ್ ಪಂದ್ಯ, ಐಪಿಎಲ್‌ನಲ್ಲೂ ಸ್ಪಾಾಟ್ ಫಿಕ್ಸಿಿಂಗ್ ನಿಧಾನಗತಿ ಬ್ಯಾಾಟಿಂಗ್‌ಗೆ ಪಡೆದಿದ್ದರು 20 ಲಕ್ಷ ರು.

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಿಕೆಟ್ ಬೆಟ್ಟಿಿಂಗ್ ಮತ್ತು ಮ್ಯಾಾಚ್ ಫಿಕ್ಸಿಿಂಗ್ ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ಬಳ್ಳಾಾರಿ ತಂಡದ ನಾಯಕ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಬಳ್ಳಾಾರಿ ತಂಡದ ನಾಯಕ ಸಿ.ಎಂ.ಗೌತಮ್ ಮತ್ತು ಅಬ್ರಾಾರ್ ಖಾಜಿ ಬಂಧಿತ ಆರೋಪಿಗಳಾಗಿದ್ದು, ಇವರನ್ನು ವಿಚಾರಣೆಗೆ ಒಳಪಡಿಸಿ ಹೆಚ್ಚಿಿನ ಮಾಹಿತಿ ಪಡೆಯಲಾಗುತ್ತಿಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಈ ಇಬ್ಬರು ಆಟಗಾರರು 2019ರ ಕೆಪಿಎಲ್ ಟೂರ್ನಿಯ ಹುಬ್ಬಳ್ಳಿಿ ಮತ್ತು ಬಳ್ಳಾಾರಿ ನಡುವಿನ ಫೈನಲ್ ಪಂದ್ಯದಲ್ಲಿ ಸ್ಪಾಾಟ್ ಫಿಕ್ಸಿಿಂಗ್ ನಡೆಸಿದ್ದರು ಎನ್ನಲಾಗಿದೆ. ಆ ಪಂದ್ಯದಲ್ಲಿ ನಿಧಾನವಾಗಿ ಬ್ಯಾಾಟಿಂಗ್ ಮಾಡಿದ್ದಕ್ಕೆೆ ಅವರು 20 ಲಕ್ಷ ರು. ಪಡೆದಿದ್ದರು. ಅಲ್ಲದೆ, ಅವರು ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲೂ ಮ್ಯಾಾಚ್ ಫಿಕ್ಸಿಿಂಗ್ ಮಾಡಿರುವುದು ತನಿಖೆಯಲ್ಲಿ ಪತ್ತೆೆಯಾಗಿದೆ.

ಬಂಧಿತ ಆಟಗಾರ ಸಿ.ಎಂ.ಗೌತಮ್, ರಣಜಿ, ಐಪಿಎಲ್‌ನಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್‌ಸ್‌ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪರವಾಗಿ ಆಡಿದ್ದರು. ಅಬ್ರಾಾರ್ ಖಾಜಿ ಕರ್ನಾಟಕದ ಪರವಾಗಿ ರಣಜಿ ಪಂದ್ಯದಲ್ಲಿ ಆಡಿದ್ದರು. ಈಗ ಮಿಜೋರಾಂ ತಂಡದ ಪರವಾಗಿ ಆಡುತ್ತಿಿದ್ದಾರೆ. ಎರಡು ದಿನಗಳ ಹಿಂದಷ್ಟೇ ಮ್ಯಾಾಚ್ ಫಿಕ್ಸಿಿಂಗ್‌ನಲ್ಲಿ ಭಾಗಿಯಾಗಿದ್ದ ಬೆಂಗಳೂರು ಬ್ಲಾಾಸ್ಟರ್ಸ್ ತಂಡದ ಬ್ಯಾಾಟ್ಸಮನ್ ನಿಶಾಂತ್ ಸಿಂಗ್ ಶೆಖಾವತ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಯಲ್ಲಿ ಆತ ಪ್ರಮುಖ ಬುಕ್ಕಿಿಗಳ ಜತೆ ಸಂಪರ್ಕದಲ್ಲಿರುವುದು ಬಯಲಿಗೆ ಬಂದಿತ್ತು.

ಆಟಗಾರರು ಮತ್ತು ಬುಕ್ಕಿಗಳ ಮಧ್ಯೆೆ ಶೇಖಾವತ್ ಕೊಂಡಿ:
ಮೂಲತಃ ರಾಜಸ್ಥಾಾನದವನಾದ ಶೆಖಾವತ್, ಕೆಪಿಎಲ್ ಆರಂಭವಾದ ವರ್ಷದಿಂದ ಹುಬ್ಬಳ್ಳಿಿ, ಮಂಗಳೂರು, ಶಿವಮೊಗ್ಗ ತಂಡ ಪ್ರತಿನಿಧಿಸಿದ್ದಾನೆ. ಪ್ರಸ್ತುತ ಬೆಂಗಳೂರು ಬ್ಲಾಾಸ್ಟರ್ ತಂಡದ ಪರ ಆಡುತ್ತಿಿದ್ದ. ತಲೆಮರೆಸಿಕೊಂಡಿರುವ ಪ್ರಮುಖ ಬುಕ್ಕಿಿಗಳಾದ ಸಯ್ಯಾಾಂ, ಜತ್ತಿಿನ್ ಮತ್ತು ಚಂಡೀಗಡದ ಬುಕ್ಕಿಿ ಮನೋಜ್ ಕುಮಾರ್ ಜತೆ ಶೆಖಾವತ್ ನಿರಂತರವಾಗಿ ಸಂಪರ್ಕದಲ್ಲಿದ್ದ. ಈಗಾಗಲೇ ಬಂಧನದಲ್ಲಿರುವ ಬೆಂಗಳೂರು ಬ್ಲಾಾಸ್ಟರ್ ಬೌಲಿಂಗ್ ಕೋಚ್ ವಿನೂ ಪ್ರಸಾದ್ ಮತ್ತು ಬ್ಯಾಾಟ್ಸಮನ್ ವಿಶ್ವನಾಥನ್ ಎಂಬುವವರಿಗೆ ಬುಕ್ಕಿಿಗಳನ್ನು ಪರಿಚಯ ಮಾಡಿಕೊಟ್ಟಿಿದ್ದ ಎನ್ನುವುದು ತನಿಖೆಯಲ್ಲಿ ಕಂಡು ಬಂದಿತ್ತು.

2018ರ ಆ.31ರಂದು ಹುಬ್ಬಳ್ಳಿಿ ಟೈಗರ್ಸ್ ಮತ್ತು ಬೆಂಗಳೂರು ಬ್ಲಾಾಸ್ಟರ್ಸ್ ತಂಡದ ಮಧ್ಯೆೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಪಂದ್ಯ ನಡೆದಿತ್ತು. ಈ ಪಂದ್ಯ ನಡೆಯುವ ಕೆಲವು ದಿನಗಳ ಮೊದಲು ಮೈಸೂರಿನ ಹೋಟೆಲ್‌ವೊಂದರಲ್ಲಿ ಬುಕ್ಕಿಿ ಮನೋಜ್‌ನನ್ನು ನಿಶಾಂತ್ ಸಂಪರ್ಕಿಸಿದ್ದ. ಬಳಿಕ ವಿನೂಪ್ರಸಾದ್ ಮತ್ತು ವಿಶ್ವನಾಥನ್ ಬಳಿಗೆ ಕರೆದೊಯ್ದು ಈ ಮ್ಯಾಾಚ್ ಫಿಕ್ಸಿಿಂಗ್‌ನಲ್ಲಿ ಹಣ ಪಡೆದಿರುವ ಬಗ್ಗೆೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಬುಕ್ಕಿಿಗಳು:
ಶೆಖಾವತ್‌ಗೆ ಎಲ್ಲ ತಂಡಗಳ ಕೋಚ್ ಮತ್ತು ಆಟಗಾರರ ಪರಿಚಯ ಇತ್ತು. ಆಟಗಾರರು ಮತ್ತು ಬುಕ್ಕಿಿಗಳ ಮಧ್ಯೆೆ ಈತ ಸಂಪರ್ಕ ಕೊಂಡಿಯಾಗಿದ್ದ. ಬುಕ್ಕಿಿಗಳನ್ನು ಹಲವು ಆಟಗಾರರಿಗೆ ಈತ ಪರಿಚಯಿಸಿರುವ ಸಾಧ್ಯತೆಯಿದೆ. ಈ ಬಗ್ಗೆೆ ತನಿಖೆ ನಡೆಯುತ್ತಿಿದೆ. ಬೆಟ್ಟಿಿಂಗ್‌ನಲ್ಲಿ ಪ್ರಮುಖ ಪಾತ್ರವಹಿಸಿದ ದೆಹಲಿಯ ಬುಕ್ಕಿಿಗಳಾದ ಜತಿನ್ ಮತ್ತು ಸಯ್ಯಾಾಂ ಎಂಬ ಇಬ್ಬರ ಬಂಧನಕ್ಕೆೆ ಲುಕ್‌ಔಟ್ ಹೊರಡಿಸಲಾಗಿದೆ. ಸಿಸಿಬಿ ಪೊಲೀಸರು ಬೆನ್ನು ಬಿದ್ದಿರುವ ವಿಷಯ ತಿಳಿದು ಅವರಿಬ್ಬರೂ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆೆ ಸಂಬಂಧಿಸಿದಂತೆ ಬೆಳಗಾವಿ ಫ್ಯಾಾಂಥರ್ಸ್ ತಂಡದ ಮಾಲೀಕ ಅಶ್ಪಾಾಕ್ ಅಲಿ ತಾರ್ ಅವರನ್ನು ಮೊದಲು ಬಂಧಿಸಲಾಗಿತ್ತು. ಅಶ್ಪಾಾಕ್ ನೀಡಿದ ಮಾಹಿತಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಬಳ್ಳಾಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್ ಎಂಬಾತನನ್ನು ಬಂಧಿಸಿದ್ದರು. ಕೆಪಿಎಲ್ ಮ್ಯಾಾಚ್ ಫಿಕ್ಸಿಿಂಗ್ ಪ್ರಕರಣದಲ್ಲಿ ಬಗೆದಷ್ಟು ಆಘಾತಕಾರಿ ಅಂಶಗಳು ಸಿಸಿಬಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬರುತ್ತಿಿದ್ದು, ಬ್ಲಾಾಸ್ಟರ್ ತಂಡದ ಆಲ್‌ರೌಂಡರ್ ಆಟಗಾರನೊಬ್ಬನನ್ನು ಬಂಧಿಸಲಾಗಿದೆ.

ಯಾರನ್ನೂ ಬಿಡುವ ಪ್ರಶ್ನೆೆಯೇ ಇಲ್ಲ
ಮ್ಯಾಾಚ್ ಫಿಕ್ಸಿಿಂಗ್ ಪ್ರಕರಣದ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಗೌತಮ್ ಸೇರಿ ಇಬ್ಬರು ಆಟಗಾರರನ್ನು ಬಂಧಿಸಲಾಗಿದೆ. 20 ಲಕ್ಷಕ್ಕೆೆ ಮ್ಯಾಾಚ್‌ಫಿಕ್ಸಿಿಂಗ್ ಮಾಡಿಕೊಂಡಿದ್ದಾಾರೆ. ನಮ್ಮ ಮೇಲೆ ಬಹಳಷ್ಟು ಒತ್ತಡ ಇದೆ. ಅವರನ್ನು ಬಿಡಿ, ಇವರನ್ನು ಬಿಡಿ ಎಂದು ಸಾಕಷ್ಟು ಒತ್ತಡ ಬರುತ್ತಿಿದ್ದು, ಯಾರನ್ನೂ ಬಿಡುವ ಪ್ರಶ್ನೆೆಯೇ ಇಲ್ಲ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾಾರೆ.

ಮ್ಯಾಚ್ ಫಿಕ್ಸಿಿಂಗ್ ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದ್ದು, ಬಳ್ಳಾಾರಿ ತಂಡದ ನಾಯಕ ಸಿ.ಎಂ.ಗೌತಮ್ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಮ್ಯಾಾಚ್‌ಫಿಕ್ಸಿಿಂಗ್‌ನಲ್ಲಿ ಕ್ಯಾಾಫ್ಟನ್‌ಗಳು, ಆಟಗಾರರು, ದಲ್ಲಾಾಳಿಗಳು, ಉದ್ಯಮಿಗಳು ಸೇರಿ ಹಲವಾರು ಮಂದಿ ಇದ್ದಾಾರೆ. ಸೂಕ್ತ ಸಾಕ್ಷ್ಯಾಾಧಾರಗಳನ್ನು ಪತ್ತೆೆ ಹಚ್ಚಿಿ ಶೀಘ್ರದಲ್ಲೇ ಇನ್ನಷ್ಟು ಮಂದಿಯನ್ನು ಬಂಧಿಸಲಾಗುವುದು.
-ಸಂದೀಪ್ ಪಾಟೀಲ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ

Leave a Reply

Your email address will not be published. Required fields are marked *