Friday, 7th August 2020

ಮಾಧ್ಯಮಗಳಿಗೆ ಸದನ ನಿರ್ಬಂಧ: ಕದನ

ಮಾಧ್ಯಮದವರನ್ನು ಹೊರದಬ್ಬಿ ಪ್ರಜಾಪ್ರಭುತ್ವದ ವ್ಯವಸ್ಥೆೆಗೆ ಅವಮಾನ ಮಾಧ್ಯಮ ಪ್ರತಿನಿಧಿಗಳಿಂದ ಆದೇಶ ಹಿಂಪಡೆಯುವಂತೆ ಆಗ್ರಹ ಬಿಎಸಿ ಸಭೆಯಲ್ಲಿಯೂ ಈ ಬಗ್ಗೆೆ ಚರ್ಚಿಸಿದ ಪ್ರತಿಪಕ್ಷ ನಾಯಕರು

ಅಧಿವೇಶನ ಕಲಾಪಕ್ಕೆ ಖಾಸಗಿ ಮಾಧ್ಯಮಗಳ ಕ್ಯಾಮೆರಾಗಳನ್ನು ನಿಷೇಧಿಸಿರುವ ಸರಕಾರದ ತೀರ್ಮಾನಕ್ಕೆೆ ಪ್ರತಿಪಕ್ಷ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಸ್ಪೀಕರ್ ಅವರ ಈ ನಡೆ ಪ್ರಜಾಪ್ರಭುತ್ವಕ್ಕೆೆ ವಿರೋಧವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಗುರುವಾರದಿಂದ ಆರಂಭಗೊಂಡ ಚಳಿಗಾಲದ ಅಧಿವೇಶನಕ್ಕೆೆ ಖಾಸಗಿ ಮಾಧ್ಯಮಗಳ ಕ್ಯಾಾಮೆರಾಗಳಿಗೆ ನಿಷೇಧಿಸಿರುವ ಬಗ್ಗೆೆ ಸದನದಲ್ಲಿ ಪ್ರತಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾಾರೆ. ಸದನ ಕಲಾಪದಲ್ಲಿ ನಡೆಯುವ ಹಾಗೂ ಸರಕಾರ ಹುಳುಕುಗಳು ಜನರಿಗೆ ತಿಳಿಯಬಾರದು ಎನ್ನುವ ಕಾರಣಕ್ಕೆೆ ಸ್ಪೀಕರ್ ಕಚೇರಿ ಈ ರೀತಿಯ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯೆಂದು ಟೀಕಿಸಿದರು.

ಈ ವಿಚಾರಕ್ಕೆೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಿ ಕುಮಾರಸ್ವಾಾಮಿ, ಮಾಜಿ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಅನೇಕ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಿಕಾರಂಗವನ್ನು ಮಾಡುವ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಈ ರೀತಿಯ ನಡೆ ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಮಾರಕ ಎಂದು ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ.

ಮಾಧ್ಯಮ ಪರ ಟ್ವೀಟ್-ಡಿಲಿಟ್:
ಇನ್ನು ಇದೇ ವಿಚಾರಕ್ಕೆೆ ಸಂಬಂಧಿಸಿದಂತೆ ಮುಖ್ಯಮಂತ್ರಿಿ ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆೆ, ಮಾಧ್ಯಮವನ್ನು ಹತ್ತಿಿಕ್ಕುವ ಪ್ರಯತ್ನವನ್ನು ಬಿಜೆಪಿ ಮಾಡುವುದಿಲ್ಲ. ಕ್ಯಾಾಮೆರಾ ನಿರ್ಬಂಧ ಆದೇಶವನ್ನು ಪುನರ್‌ಪರಿಶೀಲನೆ ಮಾಡುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಆದರೆ, ಈ ಟ್ವೀಟ್ ಮಾಡಿದ ಕೆಲವೇ ನಿಮಿಷದಲ್ಲಿ ಡಿಲಿಟ್ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಾಗೇರಿ ಅವರ ಈ ತೀರ್ಮಾನವನ್ನು ಖಂಡಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ರಾಷ್ಟ್ರೀಯ ಮಾಧ್ಯಮದ ಪ್ರತಿನಿಧಿಗಳು, ಪ್ರೆೆಸ್‌ಕ್ಲಬ್, ಖಾಸಗಿ ಮಾಧ್ಯಮದ ಪ್ರತಿನಿಧಿಗಳು ಖಂಡಿಸಿದ್ದು, ಈ ರೀತಿ ನಿರ್ಧಾರದಿಂದ ಮುಂದಿನ ದಿನದಲ್ಲಿ ಸಮಸ್ಯೆೆಯಾಗಲಿದೆ. ಆದ್ದರಿಂದ ಕೂಡಲೇ ಆದೇಶವನ್ನು ಹಿಂಪಡೆಯಬೇಕೆಂದು ಮನವಿ ಸಲ್ಲಿಸಿದ್ದಾಾರೆ. ಇದೇ ವಿಚಾರವಾಗಿ ಮುಖ್ಯಮಂತ್ರಿಿ ಯಡಿಯೂರಪ್ಪ, ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಾಮಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾಾರೆ. ಶುಕ್ರವಾರದ ಅಧಿವೇಶನದಲ್ಲಿ ಈ ವಿಚಾರವಾಗಿ ಧ್ವನಿ ಎತ್ತುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದಾಾರೆ.

ಮಾಧ್ಯಮ ನಿರ್ಬಂಧ ಪ್ರಾಯೋಗಿಕ: ಸ್ಪೀಕರ್
ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿರುವಂತೆಯೇ ರಾಜ್ಯದ ಉಭಯ ಸದನಗಳಲ್ಲಿಯೂ ವ್ಯವಸ್ಥೆೆ ಮಾಡಲಾಗಿದ್ದು, ಮಾಧ್ಯಮದವರಿಗೆ ಕಲಾಪದ ಎಲ್ಲ ಮಾಹಿತಿ ಸಿಗಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟನೆ ನೀಡಿದ್ದಾರೆ.
ಕಲಾಪ ದೃಶ್ಯ ಚಿತ್ರೀಕರಣಕ್ಕೆೆ ಖಾಸಗಿ ಮಾಧ್ಯಮಗಳಿಗೆ ನಿರ್ಬಂಧ ವಿಚಾರವಾಗಿ ಸುದ್ದಿಗಾರರಿಗೆ ವಿಧಾನಸೌಧದಲ್ಲಿ ಪ್ರತಿಕ್ರಿಿಯಿಸಿದ ಅವರು, ಅಧಿವೇಶನ ಆರಂಭವಾಗುತ್ತಿಿದ್ದು, ರಾಜ್ಯದ ಅಭಿವೃದ್ಧಿಿ ಬೆಳವಣಿಗೆಗೆ ಸದನದಲ್ಲಿ ಚರ್ಚೆ ಆಗಬೇಕು ಎನ್ನುವ ಅಪೇಕ್ಷೆಯಿದೆ. ಯಾವುದನ್ನು ನಾವು ಮುಚ್ಚಿಿಡುವುದಿಲ್ಲ. ಈ ಬಗ್ಗೆೆ ಕೆಲ ವರ್ಷಗಳ ಹಿಂದೆಯೇ ಚರ್ಚೆ ನಡೆದಿತ್ತು. ಸ್ಪೀಕರ್ ಸಮ್ಮೇಳನದಲ್ಲಿ ನಿರಂತರವಾಗಿ ಮಾಧ್ಯಮಗಳ ನಿರ್ಬಂಧ ಬಗ್ಗೆೆ ಚರ್ಚೆಯಾಗಿದೆ. ಲೋಕಸಭೆ ಮತ್ತು ರಾಜ್ಯಸಭೆ ಹಾಗೆಯೇ ನಾವು ಇಲ್ಲಿ ವ್ಯವಸ್ಥೆೆ ಮಾಡಲಾಗುವುದು ಎಂದರು.

ಮಾಧ್ಯಮಗಳ ನಿರ್ಬಂಧ ಪ್ರಾಾಯೋಗಿಕವಾಗಿ ಮೂರು ದಿನಗಳು ಇರಲಿದೆ. ಬಳಿಕ ಇದನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆೆ ಚರ್ಚಿಸಲಾಗುವುದು. ಈ ಮೂರು ದಿನಗಳಲ್ಲಿ ಬರುವ ಸಲಹೆ ಸೂಚನೆ ಪರಿಗಣಿಸಿ ಮಾಧ್ಯಮಗಳ ನಿರ್ಬಂಧ ಬಗ್ಗೆೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇಂದು ಸಾಂಕೇತಿಕ ಪ್ರತಿಭಟನೆ
ಮಾಧ್ಯಮವನ್ನು ಹೊರಗಿಡುವ ಕ್ರಮವನ್ನು ಖಂಡಿಸಿ, ಪ್ರೆೆಸ್‌ಕ್ಲಬ್ ವತಿಯಿಂದ ಶುಕ್ರವಾರ ಬೆಳಗ್ಗೆೆ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಿಕೊಳ್ಳಲಾಗಿದೆ. ಬೆಂಗಳೂರಿನ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರೆೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಸ್ಪಷ್ಟಪಡಿಸಿದ್ದಾಾರೆ.

ಮಾಧ್ಯಮಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇರಲಿಲ್ಲ. ಆದರೆ, ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪನ್ನು ಬಿಜೆಪಿ ಮುಂದುವರಿಸುತ್ತಿಿರಬೇಕು. ಆದ್ದರಿಂದ ತಮ್ಮ ಕೆಲಸಗಳಿಗೆ ಅಡ್ಡಿಿಯಾಗಬಾರದೆಂಬ ಕಾರಣಕ್ಕೆೆ ಮಾಧ್ಯಮಗಳಿಗೆ ಕಡಿವಾಣ ಹಾಕಿದ್ದಾರೆ.
– ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Leave a Reply

Your email address will not be published. Required fields are marked *