Tuesday, 21st March 2023

ಕಾರು ಡಿಕ್ಕಿ ಯುವಕ ಸ್ಥಳದಲ್ಲೇ ಸಾವು

ಸಿಂಧನೂರು: ತಾಲೂಕಿನ ತುರುವಿಹಾಳ ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗು ತ್ತಿದ್ದ ಯುವಕನಿಗೆ ಕಾರ್ ಡಿಕ್ಕಿ ಒಡೆದ ಪರಿಣಾಮದಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ಜರುಗಿದೆ

ತುರುವಿಹಾಳ ಗ್ರಾಮದ ಬಸವರಾಜ (22) ಸಾವನಪ್ಪಿರುವ ದುರ್ದೈವಿ ಆಗಿದ್ದಾನೆ ಹೊಲಕ್ಕೆ ಹೋಗಿ ವಾಪಸ್ ಮನೆಗೆ ಬರಬೇಕಾ ಗಿರುವ ಸಮಯದಲ್ಲಿ ಕುಷ್ಟಗಿ ಮಾರ್ಗದಿಂದ ಸಿಂಧನೂರಿಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಇದರಿಂದ ಯುವಕನಿಗೆ ತಲೆಗೆ ಪೆಟ್ಟು ಬಿದ್ದು ಪರಿಣಾಮದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕಾರಿನ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ತುರುವಿಹಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!