ಶ್ವೇತಪತ್ರ
ಹೊಸ ಸಂದರ್ಭಗಳನ್ನು ಒಪ್ಪಿಕೊಂಡು ಮುಂದೆ ನಡೆಯುವುದಕ್ಕೆ ಅನುವುಮಾಡಿಕೊಡುತ್ತವೆ. ನಿಮ್ಮ ನಿಮ್ಮ ಭಾವನೆ ಗಳನ್ನು ಅನುಭವಿಸಿ ಕಷ್ಟಗಳು ನಿಧಾನವಾಗಿ ಕರಗಿ ಹೊಸ ದಾರಿಗಳು ಕಾಣಸಿಗುತ್ತವೆ. ಕಷ್ಟದ ಸಂದರ್ಭದಲ್ಲಿ ಎಷ್ಟು ಪ್ರಜ್ಞಾಪೂರ್ವಕ ವಾಗಿ ನಾವು ಅದರಿಂದ ಹೊರ ಬರಲು ಪ್ರಯತ್ನಿಸುತ್ತೇವೆ ಎಂಬುದು ಹೊಸ ಬದುಕಿನ ಜತೆಗೆ reconnect ಆಗಲು ಸಹಕಾರಿಯಾಗುತ್ತದೆ.
ಬದುಕಲ್ಲಿ ಕಷ್ಟಗಳನ್ನು ಎದುರಿಸಬೇಕಾದದ್ದು ಅನಿವಾರ್ಯ, ಆದರೆ ಕಷ್ಟದ ಸಂದರ್ಭಗಳಲ್ಲಿ ಧೈರ್ಯ, ಹುರುಪು, ಸೂರ್ತಿ ತುಂಬಿಕೊಳ್ಳುತ್ತಾ ನಮ್ಮನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎಂಬುದು ಬದುಕಿಗೆ ಭರವಸೆಯನ್ನು, ಭವಿಷ್ಯವನ್ನು ಕಟ್ಟಿ ಕೊಡುತ್ತದೆ.
ನಮ್ಮೆಲ್ಲರ ಜೀವನದಲ್ಲೂ ಒದ್ದಾಟಗಳು ಸಹಜ ಪ್ರೀತಿ ಪಾತ್ರರ ಸಾವು, ಕೈಕೊಟ್ಟ ಆರೋಗ್ಯ, ಕಳೆದುಕೊಂಡ ಕೆಲಸ, ದುಡ್ಡುಕಾಸಿನ ಒತ್ತಡಗಳು, ದುರಂತಮಯ ಅಪಘಾತಗಳು ಹೀಗೆ ಅನೇಕರು ನಮ್ಮದೇ ಆದ ವೈಯಕ್ತಿಕ ಆಘಾತಗಳ ಜತೆಗೆ ಸೆಣೆಸಾಡು ತ್ತಿರುತ್ತೇವೆ. ಈ ಎಲ್ಲ ಹೋರಾಟಗಳ ನಡುವೆ ಸಹಜವಾಗಿ ಮನಸ್ಸು ಮಂಕಾಗುತ್ತದೆ ಮನೋಸ್ಥೈರ್ಯ ಕಳೆದುಕೊಳ್ಳುತ್ತದೆ. ಕಷ್ಟಗಳು ನಮ್ಮನ್ನು ಅಸಹಾಯಕರನ್ನಾಗಿಯೂ, ಅಧೈರ್ಯರನ್ನಾಗಿಯೂ ಮಾಡಿಬಿಡುತ್ತವೆ.
ಕಳೆದುಕೊಂಡ ದುಃಖ, ಭಾವನೆಗಳ ನಡುವಿನ ಘರ್ಷಣೆ, ಮುಂದಿನ ಜೀವನದ ಕುರಿತಾದ ಅಭದ್ರತೆಗಳು ನಮ್ಮ ಮುಂದೆ question ಮಾರ್ಕ್‌ಗಳಾಗಿ ನಿಂತು ಬಿಡುತ್ತವೆ. ಇಂತಹ ಸಂದರ್ಭದಲ್ಲಿ ನಮ್ಮ ಬದುಕು ನಮಗೇ… ಹಿಡಿತಕ್ಕೆ ಸಿಗುತ್ತಿಲ್ಲವೇನೋ ಅನಿಸಿ ಬಿಡುತ್ತದೆ. ಮುಂದೇನು? ಎಂಬ ಪ್ರಶ್ನೆ ತುಮುಲತೆಯನ್ನು ತಂದೊಡ್ಡುತ್ತಿರುತ್ತದೆ. ನೆನಪಿರಲಿ ನಮ್ಮ ದುಃಖ, ಯಾತನೆ ಪ್ರತಿಕೂಲತೆಗಳನ್ನು avoid ಮಾಡಲು ಯಾವುದೇ ದಾರಿಗಳಿಲ್ಲ. ಆದರೆ ಕಠಿಣ ದಾರಿಗಳ ಕಲ್ಲುಮುಳ್ಳುಗಳನ್ನು ಪಕ್ಕಕ್ಕೆ ಸರಿಸಿ ಬದುಕಿಗೆ ಅರ್ಥ ಕಂಡುಕೊಳ್ಳುವ ಮಾರ್ಗಗಳು ಬೇಕಾದಷ್ಟು ಇರುತ್ತವೆ ಮನಸ್ಸು ಮಾಡಬೇಕಷ್ಟೆ.
ಮನಸ್ಸಿಗೆ ಪುನಹ ಚೈತನ್ಯ ಶಕ್ತಿ ತುಂಬಿಕೊಳ್ಳುತ್ತ ಮುಂದೆ ಸಾಗುವುದೇ ಕಳೆದುಕೊಳ್ಳುವಿಕೆ, ಬದಲಾವಣೆ , ಆಘಾತಗಳಿಗೆ ನಮಗೆ
ನಾವೇ ಕೊಟ್ಟುಕೊಳ್ಳಬಹುದಾದ ಉತ್ತರಗಳಾಗಿರುತ್ತವೆ. ಮನಸ್ಸಿನ ಈ ಸ್ಥಿತಪ್ರಜ್ಞತೆ ಬದಲಾದ ಬದುಕಿನ ಸಂದರ್ಭಗಳಿಗೆ ನಾವು ಹೊಂದಿಕೊಳ್ಳಲು ಸಹಕಾರಿಯಾಗಿರುತ್ತವೆ. ಕಂಗೆಡಿಸಿದ ಕಷ್ಟಗಳ ನಡುವೆ ಮತ್ತೆ ಪುಟಿದೇಳುವಂತೆ ಮಾಡುತ್ತವೆ. ನಮ್ಮಲ್ಲಿ ಅನೇಕರು ಹೀಗೆ ಬದುಕಲ್ಲಿ ಬಂದ ಬಿಕ್ಕಟ್ಟಿನ ಸಂದರ್ಭಗಳನ್ನು ಉತ್ತಮವಾಗಿ ನಿರ್ವಹಿಸುತ್ತೇವೆ.
ಒಬ್ಬೊಬ್ಬರ ಬದುಕಿನ ಕಷ್ಟಗಳು ಒಂದೊಂದು ತೆರನಾಗಿರುತ್ತವೆ. ಇಲ್ಲಿ ನಾವು ಮನಗಾಣಬೇಕಾದ ಮುಖ್ಯವಾದ ವಿಷಯವೆಂದರೆ ಆಘಾತದ ನಂತರದಲ್ಲಿ ಪುನಹ ಚೈತನ್ಯ ಶಕ್ತಿ ತುಂಬಿಕೊಳ್ಳುವ ಮನಸ್ಸಿನ ಸ್ಥಿತಪ್ರಜ್ಞತೆಯನ್ನು ಬೆಳೆಸಿಕೊಳ್ಳುವುದು. ಹೀಗೆ ಬೆಳೆಸಿ ಕೊಂಡ ಸ್ಥಿತಪ್ರಜ್ಞತೆ ನಮ್ಮಲ್ಲಿ ಒತ್ತಡವನ್ನು, ಆತಂಕವನ್ನು, ದುಃಖವನ್ನು, ಹಿನ್ನೆಡೆಯನ್ನು ಸಹಿಸಿಕೊಳ್ಳುವ ಧೈರ್ಯವನ್ನು ತುಂಬುತ್ತದೆ.
ನಮ್ಮೆಲ್ಲರಿಗೂ ನಮ್ಮವೇ ಆದ ನಿರಾಸೆ ಗಳಿರುತ್ತವೆ ಗಟ್ಟಿಯಾಗುತ್ತ ಹೋಗಬೇಕು. ಗಟ್ಟಿಗೊಳ್ಳುತ್ತ ನಮ್ಮ ಭಯಗಳನ್ನು ಬಹಳ positive outlook ನೊಂದಿಗೆ ಗೆಲ್ಲಬೇಕು. ಮತ್ತೊಂದು ವಿಷಯ ಕಷ್ಟಗಳು ಎದುರಾದಾಗ ನಮ್ಮಲ್ಲಿ ಅನೇಕರು emotionally disturb ಆಗಿ ಬಿಡುತ್ತೇವೆ, sensitive ಆಗುತ್ತೇವೆ ಇದು ಸಹಜ ಆದರೆ ಹೀಗೆ disturb ಆಗುವುದನ್ನು ನಾವು ತಪ್ಪು ಅಥವ ವೀಕ್ ನೆಸ್ ಎಂದೇ ಭಾವಿಸಿಬಿಡುತ್ತೆವೆ.
ಈ ಭಾವನೆ ತಪ್ಪು ಹಾರ್ಟ್‌ಬೀಟ್‌ನ ಏರಿಳಿತಗಳು ಎಷ್ಟು ಸಹಜವೋ ಮನಸ್ಸಿನ up’s down’s ಗಳು ಕೂಡ ಅಷ್ಟೇ ಸಹಜ. ಈ ಸಮಯದಲ್ಲಿ ಮನಸ್ಸಿನ ಸ್ಥಿತಪ್ರಜ್ಞತೆಯನ್ನು ನಿರಂತರ ಪ್ರಕ್ರಿಯೆಯಾಗಿಸಿಕೊಳ್ಳುತ್ತ ಹೋಗಬೇಕು ಈ ಪ್ರಕ್ರಿಯೆ ನಮಗೆ ಬದುಕಿನ ಹೊಸ ಅವಕಾಶಗಳನ್ನು ಅಪ್ಪಿಕೊಂಡು ಬದುಕುವುದನ್ನು ಹೇಳಿಕೊಡುತ್ತದೆ ಜತೆಗೆ ನಮ್ಮ ಹಿಂದಿನ ಅನುಭವಗಳ ಮೂಲಕ ಇವತ್ತಿನ ಸವಾಲುಗಳನ್ನು ಎದುರಿಸಲು ಸಿದ್ಧಪಡಿಸುತ್ತದೆ.
ಹಾಗಿದ್ದರೆ ಸ್ಥಿತಪ್ರಜ್ಞರಾಗುವುದು ಹೇಗೆ? ಗಟ್ಟಿಯಾಗುವುದು ಹೇಗೆ? ಮತ್ತೆ Rebounce ಆಗುವುದು ಹೇಗೆ? ಕತ್ತಲೆ ಕಳೆದು ಬೆಳಕು ಮೂಡುತ್ತದೆ ಕಷ್ಟಗಳ ಅಡವಿಯನ್ನು ಕಳೆದು ಬೆಟ್ಟ ಹೊಳೆಗಳ ಹಾದು ಬಾಳಿನ ಇರುಳನ್ನು ನೋಕಬೇಕಷ್ಟೆ. ಬಹಳ poetic ಆಗಿದ್ದರು ಬಾಳಿನ philosophy ಯೇ ಈ ಸಾಲುಗಳಲ್ಲಿದೆ. ಕಂಗೆಡಿಸುವ ಕಷ್ಟಗಳಿವೆಯೇ ಬದುಕಲ್ಲಿ ಆಗಿದ್ದರೆ ಮೊದಲನೆಯದಾಗಿ ಆಕ್ಸೆಪ್ಟ್‌ದ ಸಿಚುಯೇಶನ್. ಸಂದರ್ಭಗಳನ್ನು ಒಪ್ಪಿಕೊಳ್ಳಿ.
ಬದಲಾವಣೆ ಬದುಕಿನ ನಿಯಮ ಅನೇಕ ಬದಲಾವಣೆಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ ಆದರೆ ಈ ಬದಲಾವಣೆಗಳಿಗೆ ನಾವು ಹೇಗೆ ಸ್ಪಂದಿಸುತ್ತೇವೆ ಎಂಬುದು ನಮ್ಮನ್ನು ಮಾನಸಿಕವಾಗಿ ಗಟ್ಟಿಯಾಗಿಸುತ್ತ ಹೋಗುತ್ತದೆ. ನಮ್ಮ ನಿಯಂತ್ರಣಕ್ಕೆ ಸಿಗದ ಸಂದರ್ಭಗಳ ಕುರಿತಾಗಿ ಯೋಚಿಸುವುದರಿಂದ ನಾವು ಕುಗ್ಗುತ್ತೇವೆ ಹೊರತು ಬೇರೆ ಯಾವ ತರಹದ ಬದಲಾವಣೆಗಳಾಗುವುದಿಲ್ಲ. ಸಂದರ್ಭಗಳನ್ನು ಒಪ್ಪಿಕೊಳ್ಳಬೇಕು. ಈ ಒಪ್ಪಿಕೊಳ್ಳುವಿಕೆ ನಮ್ಮಲ್ಲಿ ಧೈರ್ಯ ತುಂಬುತ್ತದೆ. ಎರಡನೆಯದಾಗಿ ನೀವು ನಿಯಂ
ತ್ರಿಸಬಹುದಾದ ವಿಷಯಗಳ ಬಗ್ಗೆ ಮಾತ್ರ ಗಮನಹರಿಸಿ ನಿಮಗೆ ಕಂಟ್ರೋಲ್ ಮಾಡಲಿಕ್ಕೆ ಸಾಧ್ಯವಾಗದ ವಿಷಯಗಳಾವುವು ಒಂದು ಲಿಸ್ಟ್ ಮಾಡಿ ಆ ವಿಷಯಗಳ ಬಗ್ಗೆ ಚಿಂತೆ ಮಾಡುವುದನ್ನು ನಿಲ್ಲಿಸಿ.
ನಮ್ಮ ಕಂಟ್ರೋಲ್‌ನಲ್ಲಿ ಇಲ್ಲದ ವಿಷಯಗಳ ಬಗ್ಗೆ ನಾವ್ಯಾಕೆ ಚಿಂತಿಸಬೇಕು? instead ಬದುಕುವುದಕ್ಕೆ ಏನೆಲ್ಲ ಮಾಡಬಹುದು ಅದರ ಬಗ್ಗೆ ಗಮನಹರಿಸೋಣ. ಉದಾಹರಣೆಗೆ ನೀವು ನಿರುದ್ಯೋಗಿಗಳಾಗಿzರೆ ಕೆಲಸ ಹುಡುಕಿಕೊಳ್ಳಲು ಬೇಕಾದ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಲ್ಲಿ ಕೆಲಸದ ಅವಕಾಶಗಳಿರುತ್ತವೆ ಹುಡುಕಿ ಹೊರಡಬೇಕು ನಾವು ಅವಕಾಶಗಳನ್ನು ಹುಡುಕಬೇಕೇ ಹೊರತು ಅವಕಾಶಗಳು ನಮ್ಮನ್ನು ಹುಡುಕಿಬರುವುದಿಲ್ಲ.
ಆದರೆ ನಮ್ಮಲ್ಲಿ ಅನೇಕರು ಇದೆಲ್ಲವನ್ನು ಮಾಡುವುದನ್ನು ಬಿಟ್ಟು ನಮ್ಮ ಟೈಮ್ ಸರಿ ಇಲ್ಲ, ವಾಸ್ತು ಸರಿ ಇಲ್ಲ , ನನ್ನ
ಹಣೆಬರಹ ಸರಿ ಇಲ್ಲ ಅಂತ ಕೊರಗುತ್ತ ಇರ್ತೀವಿ. ಕೊರಗುವಿಕೆ ನಮ್ಮ ಸಮಸ್ಯೆಗಳಿಗೆ ಕಷ್ಟಗಳಿಗೆ ಉತ್ತರವಲ್ಲ. ನಮ್ಮ ಹಿಂದಿನ ಅನುಭವಗಳನ್ನು ಗುರುತಿಸಿಕೊಳ್ಳುತ್ತ ಹೊಸ ಬದಲಾವಣೆಗಳಿಗೆ ಮುಖಾಮುಖಿಯಾಗೋಣ. ಅಭದ್ರತೆಗಳನ್ನು, ಅಸ್ಥಿರತೆಗಳನ್ನು ಹಿಂದೊಮ್ಮೆ ನಾವು ಎದುರಿಸಿರುತ್ತೇವಲ್ಲ ಆ ಕಷ್ಟಗಳನ್ನು ಮತ್ತೊಮ್ಮೆ ಹಿಂದಿರುಗಿ ನೋಡೋಣ. ಆ ದಿನಗಳ ಅನುಭವಗಳು ಇವತ್ತಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಎದುರಿಸಲು ನೆರವಾಗುತ್ತವೆ.
ನಮ್ಮೆಲ್ಲರಿಗೂ ಒಂದು ಪಾಸ್ಟ್ ಇದೆ. ನಮ್ಮೆಲ್ಲರ ಪಾಸ್ಟ್ ಗಳಲ್ಲೂ ನೋವುಗಳಿವೆ, ಕಷ್ಟದ ಹಾದಿಗಳಿವೆ. ಇವುಗಳನ್ನು ನಾವೆಲ್ಲರೂ ಒಂದಿಂದು ರೀತಿಯಲ್ಲಿ ಗೆದ್ದು ಬಂದಿರುತ್ತೇವೆ. ಆ ಯಶಸ್ಸು ಇವತ್ತಿನ ನಮ್ಮ ಪ್ರಸ್ತುತ ಸಂಕಷ್ಟಗಳನ್ನು ಎದುರಿಸಲು ಚೈತನ್ಯವಾಗ ಬೇಕು, ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು, ಮತ್ತೆ ನಮ್ಮ ಕೈಯನ್ನು ಹಿಡಿದು ಎಳೆದು ನಾರ್ಮಲ್ ಮನಸ್ಥಿತಿಗೆ ಮರಳು ವಂತೆ ಮಾಡಬೇಕು. ಹೀಗಾಗಲು ನಮ್ಮ ಫೀಲಿಂಗ್ಸ್ ಅನ್ನು ಕೂಡ ನಾವು ಆಕ್ಸೆಪ್ಟ್ ಮಾಡಿಕೊಳ್ಳಬೇಕು ಬೆಸ್ಟ್ ವೇ ಏನು ಗೊತ್ತಾ? ಕಷ್ಟಗಳನ್ನು ಅವು ತಂದೊಡ್ಡುವ ಭಾವನಾತ್ಮಕ ನೋವುಗಳನ್ನು ಜಸ್ಟ್ ಇಗ್ನೋರ್ ಮಾಡುತ್ತ ಧೈರ್ಯವಾಗಿ ಬದುಕುವುದನ್ನು ಕಲಿಯಬೇಕು.
ನೆಗೆಟಿವ್ ಎಮೋಷನ್ಸ್‌ನ ನಾವು ಎಷ್ಟು ಪ್ರೋತ್ಸಾಹಿಸುತ್ತೇವೆ ಎನ್ನುವ ಆಧಾರದಲ್ಲಿ ಅವು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ನೆಗೆಟಿವ್ ಎಮೋಷನ್ಸ್‌ನ ನಾವು ಎಷ್ಟು ತಡೆಹಿಡಿಯುತ್ತೆವೆಯೋ ಅಷ್ಟು ನಮ್ಮಲ್ಲಿ ಮತ್ತೆ ಮತ್ತೆ ಒತ್ತಡಗಳು ಜಾಸ್ತಿ ಆಗುತ್ತ ಹೋಗುತ್ತವೆ. ಅದರ ಬದಲು just bring it out. ಅಳುವಿನ ಮೂಲಕವೋ, ಕೋಪದ ಮೂಲಕವೋ ಒಟ್ಟಾರೆ ನಕಾರಾತ್ಮಕ ಭಾವನೆಗಳನ್ನು ಹೊರಹಾಕಿಬಿಡಿ. ಹೀಗೆ ಹೊರ ಬಂದ ಭಾವನೆಗಳು ನಮ್ಮನ್ನು ಹಗುರಾಗಿಸುತ್ತವೆ.
ಹೊಸ ಸಂದರ್ಭಗಳನ್ನು ಒಪ್ಪಿಕೊಂಡು ಮುಂದೆ ನಡೆಯುವುದಕ್ಕೆ ಅನುವುಮಾಡಿಕೊಡುತ್ತವೆ.ನಿಮ್ಮ ನಿಮ್ಮ ಭಾವನೆಗಳನ್ನು ಅನುಭವಿಸಿ ಕಷ್ಟಗಳು ನಿಧಾನವಾಗಿ ಕರಗಿ ಹೊಸ ದಾರಿಗಳು ಕಾಣಸಿಗುತ್ತವೆ. ಕಷ್ಟದ ಸಂದರ್ಭದಲ್ಲಿ ಎಷ್ಟು ಪ್ರಜ್ಞಾಪೂರ್ವಕ ವಾಗಿ ನಾವು ಅದರಿಂದ ಹೊರ ಬರಲು ಪ್ರಯತ್ನಿಸುತ್ತೇವೆ ಎಂಬುದು ಹೊಸ ಬದುಕಿನ ಜತೆಗೆ reconnect ಆಗಲು ಸಹಕಾರಿ ಯಾಗುತ್ತದೆ.
ಮೂರನೆಯದಾಗಿ ಕಷ್ಟಗಳ ಸಂದರ್ಭಗಳಲ್ಲಿ ಜನರ ಜೊತೆಗೆ ಕನೆಕ್ಟ್ ಆಗಿ. ನಿಮ್ಮ ಫ್ಯಾಮಿಲಿ, ನಿಮ್ಮ ಫ್ರೆಂಡ್ಸ್ ಜತೆಗಿನ ಒಡನಾಟ ನಿಮ್ಮಲ್ಲಿ ಒಂದು ಎಮೋಷನಲ, ಮಾರಲ್ ಸಪೋರ್ಟ್ ಅನ್ನು ತುಂಬುತ್ತದೆ. ನಿಮ್ಮ ಮನಃಸ್ಥಿತಿಯನ್ನು ಎಲಿವೇಟ್ ಮಾಡುತ್ತದೆ. Ofcourse ನಿಮ್ಮ ಕಷ್ಟಗಳನ್ನು ನೀವೇ ಎದುರಿಸಬೇಕು. ಆದರೆ ಫ್ಯಾಮಿಲಿ ಫ್ರೆಂಡ್ಸ್ ಜತೆಗಿದ್ದಾರೆ ಎಂಬ ಧೈರ್ಯ ನಿಮ್ಮಲ್ಲಿ ನೈತಿಕ ಬೆಂಬಲವನ್ನು ತುಂಬಿ ಕೈಹಿಡಿದು ಮುನ್ನಡೆಸುತ್ತದೆ. ನಿಮ್ಮ ಕಷ್ಟಗಳನ್ನು ನೀವು ಬೇರೆಯವರ ಬಳಿ ಹೇಳಿಕೊಂಡಾಗ ನಿಮ್ಮ ಕಷ್ಟಗಳಿಗೆ ಉತ್ತರ ಸಿಕ್ಕೆ ಬಿಡ್ತು ಅಂತಲ್ಲ ಕೇಳಿಸಿಕೊಳ್ಳುವ ಕಿವಿಗಳು ಇವೆ ಎಂಬ ಸಮಾಧಾನ ನಿಮ್ಮದಾಗುತ್ತದೆ. ಅವರು ನೀಡುವ ಒಂದು ಸ್ಮೈಲ್, ಒಂದು ಹಗ್ ನಿಮ್ಮಲ್ಲಿ ನಾನು ಒಬ್ಬಂಟಿಯಲ್ಲ ಎಂಬ ಭಾವವನ್ನು ಮೂಡಿಸುತ್ತದೆ.
ನಮ್ಮನ್ನು ಯಾರೋ ಕೇರ್ ಮಾಡ್ತಾರೆ ಅವರಿಗೆ ನಮ್ಮ ಬಗ್ಗೆ ಸಹಾನುಭೂತಿ ಇದೆ ಅನ್ನೋದೇ ದೊಡ್ಡ ಸಾಂತ್ವನವನ್ನು ತುಂಬೋ ಸಂಗತಿ. ಕಷ್ಟಗಳು ಬಂದಾಗ ಸಾಮಾನ್ಯವಾಗಿ ನಾವೆಲ್ಲ ಸಮಾಜದಿಂದ ವಿಮುಖರಾಗಿ ನಮ್ಮ ನಮ್ಮ ಚಿಪ್ಪಿನೊಳಗೆ ಬಚ್ಚಿಟ್ಟುಕೊಂಡು ಬಿಟ್ಟಿರುತ್ತೇವೆ; ಬೇರೆಯವರ ಹತ್ತಿರ ಮಾತಾಡಿದ್ರೆ ಹಂಚಿಕೊಂಡರೆ ನಮ್ಮ ಕಷ್ಟದ ಹೊರೆ ಅವರದ್ದಾಗಿ ಬಿಡಬಹುದು ಎಂಬ ಹಿಂಜರಿಕೆಯಲ್ಲಿ.
ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಎದುರಿಸಿ ಆಫ್ಟರಾಲ್ ನಮಗಿರುವುದು ಕಷ್ಟಗಳು ತಾನೇ? ಕ್ರಿಮಿನಲ್ ಕೇಸ್ ಅಲ್ಲವಲ್ಲ. ಎಲ್ಲರಿಗೂ ಅವರದ್ದೇ ಆದ struggles ಇದ್ದೇ ಇರುತ್ತವೆ. ಕೆಲವರು ಇರ್ತಾರೆ ಬೆಂಕಿಗೆ ತುಪ್ಪ ಸುರಿ
ಯುವ ಬುದ್ಧಿಯವರು ಅಂತಹವರಿಂದ ಸಾಧ್ಯವಾದಷ್ಟು ದೂರವಿರಿ ಅವರ ಟೀಕೆಗಳು, ಕುಹಕಗಳು ನಿಮ್ಮನ್ನು ಕಂಗೆಡಿಸದಿರಲಿ. ಬದುಕಿಗೆ ಅರ್ಥವನ್ನು ಉದ್ದೇಶವನ್ನು ತುಂಬುವ ಕೆಲಸಗಳನ್ನು ಮೈಗೂಡಿಸಿಕೊಳ್ಳಿ ಇವು ಬದುಕಿನ ಸಂತೃಪ್ತಿಯನ್ನು ಹೆಚ್ಚಿಸು ತ್ತವೆ.
ನಿಮ್ಮ ಹವ್ಯಾಸ ಆಸಕ್ತಿಗಳನ್ನು prioritise ಮಾಡಿಕೊಳ್ಳಿ ಕಷ್ಟದ ಸಮಯದಲ್ಲಿ ಒತ್ತಡ ನಿರ್ವಹಣೆಗಯಾಗಿ ಇವು ಪೂರಕವಾಗಿ ಕೆಲಸ ಮಾಡುತ್ತವೆ. ಕೊನೆಯದಾಗಿ ಸಹಿಷ್ಣತೆ, ನಿರಂತರತೆ ಸದಾ ನಿಮ್ಮ ಜತೆಯಾಗಿರಲಿ ಕತ್ತಲಿನ ರಸ್ತೆಗಳನ್ನು ಸವೆಸಲು ಟಾರ್ಚ್ಗಳಾಗಿ ಇವು ನಿಮ್ಮೊಂದಿಗಿರುತ್ತವೆ. ನಿಮ್ಮನ್ನು ನೀವು ಮೋಟಿವೇಟ್ ಮಾಡಿಕೊಳ್ಳಿ ಕಷ್ಟಗಳನ್ನು ಎದುರಿಸಲು ಲಾಜಿಕಲ್ ಆಲೋಚನೆಗಳನ್ನು ನಿಮ್ಮದಾಗಿಸಿಕೊಳ್ಳಿ ನಿಮ್ಮ ಸಮಸ್ಯೆಗಳಿಗೆ ಒಂದರಂತೆ ಒಂದು ಸಲ್ಯೂಷನ್ಸ ಗಳನ್ನು ಪಡೆದು ಕೊಳ್ಳುತ್ತಾ ಹೋಗಿ.
ಸಣ್ಣಪುಟ್ಟ ಖುಷಿಗಳನ್ನು ನಿಮ್ಮದಾಗಿಸಿಕೊಳ್ಳಿ ಇಡೀ ನಿಮ್ಮ ವ್ಯಕ್ತಿತ್ವದಲ್ಲಿ ಆಶಾವಾದ ಮೂಡಲಿ. ಕಷ್ಟಗಳ ಜೊತೆಗಿನ ನಿಮ್ಮ ಹೋರಾಟ ಪರಿಚಯವಿಲ್ಲದ ನಿಮ್ಮನ್ನು ನಿಮಗೆ ಮತ್ತೆ ರೀ-ಇಂಟ್ರಡ್ಯೂಸ್ ಮಾಡಿಸುತ್ತದೆ. ಕಷ್ಟಗಳ ಜೊತೆಗೆ ದಿನಗಳೆದ ಹಾಗೆ ಮಾನಸಿಕವಾಗಿ, ಭಾವನಾತ್ಮಕವಾಗಿ,ಆಧ್ಯಾತ್ಮಕವಾಗಿ ನಾವು ಬೆಳೆಯುತ್ತೇವೆ ಇನ್ನೂ ಹೆಚ್ಚು ಸೂಕ್ಷ್ಮಜ್ಞರಾಗುತ್ತೇವೆ, ಸ್ಥಿತಪ್ರಜ್ಞ ರಾಗುತ್ತೇವೆ. ಈ ಸ್ಥಿತಪ್ರಜ್ಞತೆ ನಮ್ಮ ಬದುಕಿಗೆ ಮತ್ತಷ್ಟು ಭರವಸೆಗಳನ್ನು ತುಂಬುತ್ತದೆ.
ಅದಕ್ಕೆ ಡಿವಿಜಿಯವರು ಹೇಳಿರುವುದು ಹುಗು ಬೆಟ್ಟ ದಡಿ, ಮನೆಗೆ ಮಲ್ಲಿಗೆಯಾಗು, ಕಗು ಕಷ್ಟಗಳ ಮಳೆಯ ವಿಧಿಸುರಿಯೇ, ಬೆಲ್ಲ-ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ ಅಂತ. ಕಡೆಯದಾಗಿ ಒಂದು ಮಾತು ಸೀಮಿತ ನಿರಾಶೆಗಳನ್ನು ಒಪ್ಪಿಕೊಳ್ಳೋಣ ಆದರೆ ಅನಂತ ಭರವಸೆಗಳನ್ನು ಎಂದಿಗೂ ಕಳೆದುಕೊಳ್ಳದಿರೋಣ.