Tuesday, 31st January 2023

ಮಾನಸಿಕ ಆರೋಗ್ಯ, ಯೋಗಕ್ಷೇಮ ಜಾಗತಿಕ ಆದ್ಯತೆಯಾಗಲಿ

ಶ್ವೇತಪತ್ರ

shwethabc@gmail.com

ಅಕ್ಟೋಬರ್ ೧೦ ವಿಶ್ವ ಮಾನಸಿಕ ಆರೋಗ್ಯ ದಿನ. ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಅಧ್ಯಾತ್ಮಿಕ ಸುಸ್ಥಿತಿ. ಕೇವಲ ರೋಗ ಭಾದೆಗಳ ಗೈರು ಹಾಜರಿಯಷ್ಟೇ ಅಲ್ಲ -ಹೀಗೆಂದು ವ್ಯಾಖ್ಯಾನಿಸುತ್ತದೆ WHO (World health Organisation). ಮನಸ್ಸಿಗೂ ಆರೋಗ್ಯವಿದೆ; ಇದು ಮನುಷ್ಯನ ಮಾನಸಿಕ ಹಾಗೂ ಭಾವನಾತ್ಮಕ ಯೋಗ ಕ್ಷೇಮದ ಅಂಶಗಳನ್ನು ಒಳಗೊಂಡಿದೆ.

ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ತಿಳಿವಳಿಕೆ ಬೆಳೆದಂತೆ ಅದರ ಜತೆ ಜತೆಗೆ ನಾವು ಬೆಳೆಯುತ್ತೇವೆ. ನಮ್ಮೆಲ್ಲರ ಸ್ವಯಂ ಅರಿವು ಮತ್ತು ಸೂಕ್ಷ್ಮತೆ ಮಾನಸಿಕ ಆರೋಗ್ಯದ ಅರ್ಥೈಸುವಿಕೆಯಲ್ಲಿ ಉತ್ತಮ ಬೆಳವಣಿಗೆಯನ್ನು ಮೂಡಿಸಿದೆ. ಆದಾಗ್ಯೂ ಸಾಮಾನ್ಯವಾಗಿ ನಾವೆಲ್ಲ ಮಾತನಾಡುವಾಗ, ಬಯ್ದಾಡುವಾಗ, ಸಿನಿಮಾಗಳ ಡೈಲಾಗ್‌ ಗಳಲ್ಲಿ ಹುಚ್ಚ, ಮೆಂಟಲ್, ಸೈಕೊ ಇತ್ಯಾದಿ ಪದ ಬಳಕೆ ಮಾಡುತ್ತೇವೆ.

ಇದರ ಹಿಂದಿನ ಉದ್ದೇಶ ಎದುರಿಗಿರುವ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಅಣಕಿಸುವುದೇ ಆಗಿರುತ್ತದೆ. ಸಾಮಾಜಿಕ ವಾಗಿ ನಾವೆಲ್ಲ ವಿಕಸನ ಹೊಂಂದ ಬೇಕಾಗಿರುವುದೇ ಇಲ್ಲಿ. ಇದೇ ಉದ್ದೇಶದಿಂದ ೯೦ರ ದಶಕದಲ್ಲಿ ‘ವರ್ಡ್ ಫೆಡರೇಶನ್ ಆಫ್ ಮೆಂಟಲ್ ಹೆಲ್ತ್’ನಿಂದ ಅಧಿಕೃತವಾಗಿ ಅಕ್ಟೋಬರ್ ೧೦ನ್ನು ‘ವಿಶ್ವ ಮಾನಸಿಕ ಆರೋಗ್ಯ ದಿನ’ವನ್ನಾಗಿ  ರೂಪುಗೊಳಿಸ ಲಾಯಿತು.

ಮಾನಸಿಕ ಅಸ್ವಸ್ಥತೆಯ ಬಗ್ಗೆ ಜನರಿಗಿರುವ ಕಳಂಕಿತ ಭಾವನೆಯನ್ನು ಹೋಗಲಾಡಿಸುತ್ತ ಅದರ ಚಿಕಿತ್ಸೆಯ ಬಗೆಗೆ ಅರಿವನ್ನು ಮೂಡಿಸುವುದೇ ಇದರ ಪ್ರಮುಖ ಉದ್ದೇಶ. ಎಷ್ಟೋ ಬಾರಿ ನಾವೆಲ್ಲ ಮಾನಸಿಕ ತೊಯ್ದಾಟ, ತುಮುಲತೆ, ಹೊಯ್ದಾಟ, ಘರ್ಷಣೆ, ಒತ್ತ, ಖಿನ್ನತೆ, ಭಾವನಾತ್ಮಕ ಡಿಸ್ಟರ್ಬೆನ್ಸ್‌ಗಳಿಗೆ ಒಳಗಾಗುತ್ತೇವೆ. ಆಗೆಲ್ಲ ನಮಗೆ ಒಂಟಿತನದ ಭಾವನೆ ಕಾಡುತ್ತದೆ. ಯಾರಿಗೂ ಇಲ್ಲದ ಸಮಸ್ಯೆಗಳು ನಮ್ಮವಾಗಿವೆ ಎಂದು ನಾವು ಮತ್ತಷ್ಟು ಕುಗ್ಗುತ್ತೇವೆ, ಕುಸಿಯುತ್ತೇವೆ.

ಆಗೆಲ್ಲ ನೀವು ಒಬ್ಬಂಟಿಯಲ್ಲ, ಕಷ್ಟದ ಸಮಯವು ಬರೀ ನಿಮ್ಮೊಬ್ಬರದ್ದೇ ಅಲ್ಲ ಎಂಬ ಭಾವನೆ ಮೂಡಿಸುತ್ತ ನಮ್ಮಲ್ಲಿ ಹೊಸ ಉತ್ಸಾಹ ಮತ್ತು ಚೈತನ್ಯವನ್ನು ಮರಿದುಂಬಿಸುತ್ತ ಮಾನಸಿಕ ನೋವುಗಳಿಂದ ನಮ್ಮನ್ನು ಮೇಲಕ್ಕೆತ್ತುವ ಆಶಯ ವಿಶ್ವ ಮಾನಸಿಕ ಆರೋಗ್ಯ ದಿನದ್ದು. ಮಾನಸಿಕ ಆರೋಗ್ಯಕ್ಕಾಗಿ ಪ್ರಪಂಚದೆಡೆಯಿಂದ ಎಲ್ಲ ರೀತಿಯ ಪ್ರಯತ್ನಗಳನ್ನು ಒಡಮೂಡಿಸುತ್ತ ಮಾನಸಿಕ ಸುಃಸ್ಥಿತಿ ಹಾಗೂ ಸ್ವಾಸ್ಥ್ಯದ ಬಗ್ಗೆ ಮತ್ತಷ್ಟು ಮಗದಷ್ಟು ಪ್ರಜ್ಞಾಪೂರ್ವಕ ಎಚ್ಚರವನ್ನು ವಿಶ್ವ ಮಾನಸಿಕ ಆರೋಗ್ಯ ದಿನ ನಮಗೆ ವಿಷದಪಡಿಸುತ್ತದೆ.

Make mental health and well&being for all a global priority 2022 ಘೋಷವಾಕ್ಯ. ದೇಹದ ಆರೋಗ್ಯದಷ್ಟೇ ಮುಖ್ಯವಾಗಿ ಮನಸ್ಸಿನ ಆರೋಗ್ಯವು ಜಗತ್ತಿನ ಪ್ರತಿಯೊಬ್ಬರzಗಬೇಕು. ಆಗಲೇ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ೨೦೨೦ರ ಕೋವಿಡ್ ಸಾಂಕ್ರಾಮಿಕ ಸಂಕಷ್ಟಗಳು ಮಾನಸಿಕವಾಗಿ ಹೊರೆಯಾಗಿ ಪರಿಣಮಿಸಿರುವ ಈ ಸಂದರ್ಭದಲ್ಲಿ ಜಗತ್ತನ್ನು ಮತ್ತೆ ಮಾನಸಿಕವಾಗಿ ರೀ ಕನೆಕ್ಟ್ ಮಾಡಲು ಸಾಧ್ಯವಿರುವುದು ವಿಶ್ವ ಮಾನಸಿಕ ಆರೋಗ್ಯ ದಿನದ ಮೂಲಕ.

ಜಾಗತಿಕವಾಗಿ ಜನರ ಮಾನಸಿಕತೆಯನ್ನು ಪುನರುಜ್ಜೀವನಗೊಳಿಸುತ್ತದೆ. ರಕ್ಷಿಸುತ್ತ ಮತ್ತಷ್ಟು ಸುಧಾರಿಸುವ ಪ್ರಯತ್ನ ವಿಶ್ವ ಮಾನಸಿಕ ಆರೋಗ್ಯ ದಿನದ್ದು. ಈಗಾಗಲೇ ಅನೇಕ ಮಾನಸಿಕ ಸಮಸ್ಯೆಗಳು ನಮ್ಮೆದುರಿಗೆ ಸವಾಲುಗಳಾಗಿ ನಿಂತಿವೆ. ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನ ಮುಂಚೆಯೇ ಒಂದು ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ ಹತ್ತರಲ್ಲಿ ಎಂಟು ಮಂದಿ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದನ್ನು ಅಧ್ಯಯನಗಳು ಸೂಚಿಸು ತ್ತವೆ. ಆದರೆ ಇದೆ ಮಾನಸಿಕ ಆರೋಗ್ಯಕ್ಕಾಗಿ ಬೇಕಾದ ವೈದ್ಯಕೀಯ ಸೇವೆ, ಕೌಶಲ, ಧನಸಹಾಯ ಅಗತ್ಯಕ್ಕಿಂತ ಕಡಿಮೆ ಇದೆ.

ಏನಿದು ಮಾನಸಿಕ ಆರೋಗ್ಯ?

ವ್ಯಕ್ತಿಯ ಭಾವನಾತ್ಮಕ, ಮಾನಸಿಕ, ಸಾಮಾಜಿಕ ಸುಸ್ಥಿತಿಯೇ ಮಾನಸಿಕ ಆರೋಗ್ಯ. ಇದು ನಮ್ಮ ಆಲೋಚನೆ, ಸಂವೇದನೆ, ವರ್ತನೆಯನ್ನು ಪ್ರಭಾ ವಿಸುತ್ತದೆ. ಜತೆಗೆ ಬದುಕಲ್ಲಿ ಬರುವ ಒತ್ತಡಕಾರಕ ಸಂದರ್ಭಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಹಾಗೂ ಆರೋಗ್ಯಕರ ಆಯ್ಕೆಯನ್ನು ನಮ್ಮದಾಗಿಸಿ ಕೊಳ್ಳುತ್ತೇವೆ ಎಂಬುದೇ ಮಾನಸಿಕ ಆರೋಗ್ಯ.

ನಮಗೇಕೆ ಮುಖ್ಯವಾಗಬೇಕು?
ಬದುಕಿನ ಪ್ರತಿ ದಿನದ ಒತ್ತಡ ಹಾಗೂ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು, ಉತ್ತಮವಾದ ದೈಹಿಕ ಆರೋಗ್ಯ ವನ್ನು ಹೊಂದಲು, ಸೌಹಾರ್ದ ಯುತ ಸಂಬಂಧಗಳನ್ನು ನಿಭಾಯಿಸಲು, ಸಮಾಜಕ್ಕೆ ಸಮುದಾಯಕ್ಕೆ ಅರ್ಥಪೂರ್ಣವಾದ ಕೊಡುಗೆಯನ್ನು ನೀಡಲು, ನಮ್ಮ ಅತ್ಯುತ್ತಮವಾದ ಸಾಮರ್ಥ್ಯವನ್ನು ಅರಿಯಲು, ಖುಷಿಯ-ನೆಮ್ಮದಿಯ ಬದುಕನ್ನು ನಮ್ಮದಾಗಿಸಿಕೊಳ್ಳಲು ನಮ್ಮೆಲ್ಲರಿಗೂ ಮಾನಸಿಕ ಆರೋಗ್ಯ ಬಹಳ ಮುಖ್ಯ.

ಸಮಯ ಬದಲಾದಂತೆ ಬದಲಾಗುತ್ತದೆಯೇ?
ಹೌದು! ಇಲ್ಲಿ ನಾವೆಲ್ಲ ಮುಖ್ಯವಾಗಿ ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ ಮಾನಸಿಕ ಆರೋಗ್ಯವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗು ತ್ತದೆ. ಇದಕ್ಕೆ ನಮ್ಮ ವಯಸ್ಸು, ಮಾಡುವ ಕೆಲಸ, ಬದುಕುವ ಪರಿಸರ ಹೀಗೆ ಅನೇಕ ಅಂಶಗಳು ಕಾರಣವಾಗುತ್ತವೆ. ಮನುಷ್ಯನ ಆಂತರ್ಯದ ಮೇಲೆ ಅಧಿಕ ಒತ್ತಡ, ಸಮಸ್ಯೆಗಳ ಸವಾಲುಗಳು ಬಿದ್ದಷ್ಟು ಇವು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತವೆ. ಉದಾ ಹರಣೆಗೆ ಅತಿಯಾದ ಕೆಲಸದ ಅವಽ, ಸಾಲದ ಹೊರೆಗಳು, ಸಂಬಂಧಗಳಲ್ಲಿ ಬಿರುಕು, ಲೈಂಗಿಕ ಶೋಷಣೆ ಹೀಗೆ ಪಟ್ಟಿ ಮುಂದುವರಿಯುತ್ತಲೇ ಹೋಗು ತ್ತದೆ.

ಎಷ್ಟು ಸಾಮಾನ್ಯ ಈ ಸಮಸ್ಯೆಗಳು?

2017ರಲ್ಲಿ ಅಂದಿನ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾರತದಲ್ಲಿ ಮಾನಸಿಕ ಸಮಸ್ಯೆ ಸಾಂಕ್ರಾಮಿಕವಾಗುತ್ತಿದೆ ಎಂದು ಉಖಿಸಿದರು. ಇದಕ್ಕೆ ಪೂರಕ ಎನ್ನುವಂತೆ ಭಾರತದಲ್ಲಿ ಇಂದು 56 ಮಿಲಿಯನ್ನಷ್ಟು ಮಂದಿ ಖಿನ್ನತೆಯಿಂದ (ಡಿಪ್ರೆಷನ ), 38 ಮಿಲಿಯನ್ ನಷ್ಟು ಜನರು ಉದ್ವಿಗ್ನತೆ ಯಿಂದಲು ಬಳಲುತ್ತಿದ್ದಾರೆ.

ಶೇಕಡಾ ಎರಡರಷ್ಟು ಫೋಬಿಯಾದ ಹೊರೆ ನಮ್ಮ ದೇಶಕ್ಕಿದೆ. ಸಾವಿರದಲ್ಲಿ ಮೂರುಜನ ಸ್ಕಿಜೋಫೋನಿಯಾದೊಂದಿಗೆ ಬದುಕುತ್ತಿದ್ದಾರೆ. ಶೇಕಡಾ ಪಾಯಿಂಟ್ ಮೂರರಷ್ಟು ಮಂದಿ ಬೈಪೋಲಾರ್ ಡಿಸಾರ್ಡರ್ ನಿಂದಲೂ, ಜನರೇಶನ್ ಝಡ್ (1995ರಿಂದ 2015ರವರ ನಡುವೆ ಹುಟ್ಟಿದವರು) ಆಹಾರಾ ಸೇವನಾ ಸಮಸ್ಯೆಗಳಿಂದಲೂ ಒದ್ದಾಡುತ್ತಿದ್ದಾರೆ. ಇವೆಲ್ಲ ಅಂಕಿ-ಅಂಶಗಳೇ ಸಾಕು ರಾಮನಾಥ್ ಕೋವಿಂದ್‌ರವರ ಮಾತನ್ನು ದೃಢಪಡಿಸಲು.

ಮೂಲ ಕಾರಣವಾದರೂ ಏನು?
ಮಾನಸಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಮುನ್ನ ಅವುಗಳಿಗೆ ಕಾರಣೀಭೂತವಾದ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗ ಬೇಕು. ಸಂಶೋಧನೆಗಳ ಪ್ರಕಾರ ಮೊದಲಿಗೆ – ಜೈವಿಕ ಅಂಶಗಳಾದ ಜೆನೆಟಿಕ್ (ಗುಣಾಣು)ಅಂಶಗಳು, ಮಿದುಳಿನ ಅಪಸಾಮಾನ್ಯತೆ, ಹಾರ್ಮೋನು ಗಳಲ್ಲಿನ ವ್ಯತ್ಯಾಸಗಳು, ಅಪೌಷ್ಟಿಕತೆ, ನರಸಾಗಣಿಕೆಗಳಲ್ಲಿನ (Neurotransmitters) ಅಪಸಾಮಾನ್ಯತೆ ಮಾನಸಿಕ ಸಮಸ್ಯೆಗಳು ಉಂಟಾಗುವಲ್ಲಿ
ಮುಖ್ಯ ಪಾತ್ರವಹಿಸುತ್ತವೆ.

ಉದಾಹರಣೆಗೆ ಹೇಳುವುದಾದರೆ ದೇಹದಲ್ಲಿ ಡೋಪಮೈನ್ ಎಂಬ ನರಸಾಗಾಣಿಕೆಯ ಅಂಶವು ಹೆಚ್ಚಾದಾಗ ಸ್ಕಿಜೋ-ನಿಯಾ (ಇಚ್ಛಿತ ಮನೋರೋಗ) ಎಂಬ ತೀವ್ರತರವಾದ ಮಾನಸಿಕ ಕಾಯಿಲೆ ಉಂಟಾಗುತ್ತದೆ, ಜೀನ್ ಮ್ಯೂಟೇಶನ್‌ನಿಂದಾಗಿ ಬುದ್ಧಿಮಾಂದ್ಯತೆ ಉಂಟಾಗುತ್ತದೆ. ಎರಡನೇಯದಾಗಿ ಮಾನಸಿಕ ಅಂಶಗಳು – ಪರಸ್ಪರ ಸಂಬಂಧಗಳಲ್ಲಿ ಬಿರುಕು, ಘರ್ಷಣೆ, ಒತ್ತಡ, ಕಲಿಕೆಯ ತತ್ವಗಳು, ನಂಬಿಕೆಯ ಕ್ರಮ, ಆಲೋಚನೆಯ ವಿನ್ಯಾಸ, ಬದುಕಲ್ಲಿ ಉಂಟಾಗುವ ಋಣಾತ್ಮಕ-ಅಹಿತಕರ ಅನುಭವಗಳು, ಬಾಲ್ಯದಲ್ಲಿ ಉಂಟಾದ ಲೈಂಗಿಕ ಶೋಷಣೆಗಳು, ಸ್ವ-ಸಾಮರ್ಥ್ಯವನ್ನು ಅರಿಯಲು ಸೋತು ಹೋಗುವುದು…  ಈ ರೀತಿಯ ಎಲ್ಲ ಮಾನಸಿಕ ಅಂಶಗಳು ಮಾನಸಿಕ ಸಮಸ್ಯೆಗಳು ಉಲ್ಬಣಗೊಳ್ಳುವುದು ಇದರಲ್ಲಿ ಪ್ರಮುಖವಾದ ಕಾರಣ ಗಳಾಗುತ್ತವೆ.

ಮೂರನೇಯದಾಗಿ ಸಾಮಾಜಿಕ ಸಾಂಸ್ಕೃತಿಕ ಅಂಶಗಳು – ಅನೇಕ ಸಾಮಾಜಿಕ-ಸಾಂಸ್ಕೃತಿಕ ಅಂಶಗಳಾದ ಕೌಟುಂಬಿಕ ವಾತಾವರಣ, ಸಾಮಾಜಿಕವಾದ ನೆಟ್ವರ್ಕ್, ಸಾಮಾಜಿಕ ನಿರೀಕ್ಷೆಗಳು ಕೂಡ ಮಾನಸಿಕ ಸಮಸ್ಯೆಗಳು ಉಂಟಾಗುವಲ್ಲಿ ನೇರವಾದ ಪರಿಣಾಮವನ್ನು ಬೀರುತ್ತವೆ.

ಉದಾಹರಣೆಗೆ ಹೇಳುವುದಾದರೆ ಒಡೆದ ಕುಟುಂಬಗಳು, ಭಾವನಾತ್ಮಕವಾಗಿ ಮಾನಸಿಕವಾಗಿ ತಂದೆ-ತಾಯಿಗಳಿಂದ ಸಿಗದ ಸಹಾಯಗಳು ವ್ಯಕ್ತಿಯಲ್ಲಿ ಸಮಾಜವಿರೋಧಿ ವ್ಯಕ್ತಿತ್ವದ (anti-social personality) ಬೆಳವಣಿಗೆಯಲ್ಲಿ ನೇರ ಪರಿಣಾಮವನ್ನು ಉಂಟುಮಾಡುತ್ತವೆ. ಕೊನೆಯದಾಗಿ ಡಯಾತಿಸಿಸ್ ಸ್ಟ್ರೆಸ್ ಮಾದರಿ – ಮನೋವೈಜ್ಞಾನಿಕವಾಗಿ ಇದು ಹೊಸ ಸಂಶೋಧನೆ ಈ ಸಂಶೋಧನೆಯ ಪ್ರಕಾರ ನಾವೆಲ್ಲ ನಮ್ಮ ತಂದೆ ತಾಯಂದಿರಿಂದ ಪೂರ್ವ ಜರಿಂದ ಅನೇಕ ಗುಣಾಣುಗಳನ್ನು (Genes) ಆ ಗುಣಾಗುಗಳಿಂದ ಅನೇಕ ಮಾನಸಿಕ ಗುಣ ಲಕ್ಷಣಗಳನ್ನು ವಂಶಪಾ ರಂರ್ಪರ್ಯವಾಗಿ ಪಡೆದಿರುತ್ತೇವೆ.

ಮುಂದೆ ನಮ್ಮ ಜೀವನದಲ್ಲಿ ಎಂದಾದರು ಅತ್ಯಂತ ಒತ್ತಡಕಾರಕವಾದ ಸಂದರ್ಭಗಳು ತಲೆದೊರಿದರೆ ಈ ಮಾನಸಿಕ ಗುಣಾಣುಗಳು ಆ ಒತ್ತಡಕಾರಕ ಸನ್ನಿವೇಶಗಳಿಗೆ ಸ್ಪಂದಿಸುತ್ತ ಮಾನಸಿಕ ಕಾಯಿಲೆಗಳಾಗಿ ರೂಪು ಪಡೆಯುತ್ತವೆ.

ಭಾರತದಂತಹ ಅಧಿಕ ಜನಸಂಖ್ಯೆಯುಳ್ಳ ದೇಶಕ್ಕೆ ಮಾನಸಿಕ ಆರೋಗ್ಯದ ಅರಿವು ಮೂಡಿಸಬೇಕಿರುವುದು ಈ ಕ್ಷಣದ ಆದ್ಯತೆಯಾಗಬೇಕು. ಮುಂಚಿತ ವಾಗಿಯೇ ಗುರುತಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕಿ ಗಂಭೀರವಾಗಿ ಆಗಬಹುದಾದ ದುಷ್ಪರಿಣಾಮಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗ ಬಹುದು. ಮಾನಸಿಕ ಆರೋಗ್ಯದ ಅರಿವನ್ನು ಜನರಿಗೆ ತಲುಪಿಸುವಲ್ಲಿ ಮುಖ್ಯವಾಹಿನಿ ಮಾಧ್ಯಮ, ಸರಕಾರದ ಯೋಜನೆಗಳು, ಶೈಕ್ಷಣಿಕ ವ್ಯವಸ್ಥೆ, ಉದ್ಯಮ, ಇಂಟರ್ನೆಟ್ -ಸಾಮಾಜಿಕ ಮಾಧ್ಯಮ- ಮೊಬೈಲ್ ಫೋನ್ ಈ ಎಲ್ಲವು ಬಹಳ ಪ್ರಮುಖವಾಗಿ ನಿಲ್ಲುತ್ತವೆ. ಮಾನಸಿಕ ಆರೋಗ್ಯದ ಅರಿವಿಗೆ ಅತಿ ಹೆಚ್ಚು ಯೋಜನೆಗಳನ್ನು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸರ್ಕಾರದ ಪಾತ್ರ ಕೂಡ ಅಷ್ಟೇ ದೊಡ್ಡದು.

ಕೆಲಸ ಮಾಡುವ ಜಾಗದಲ್ಲಿ ಒತ್ತಡರಹಿತ ಮನೋಸ್ಥಿತಿ ಪೂರಕ ಹಾಗೂ ಪ್ರಗತಿಪರ ಬೆಳವಣಿಗೆಗೆ ಬಹುಮುಖ್ಯ ಅಂಶ. ಮಾನಸಿಕ ರೋಗಿಗಳ ಬಗ್ಗೆ ನಮಗಿರುವ ತಾರತಮ್ಯ ಹಾಗೂ ಕಳಂಕಿತ ಭಾವನೆ ತಡೆಗೋಡೆಗಳಾಗಿ ನಿಲ್ಲದಂತೆ ಜನರಲ್ಲಿ ಭರವಸೆ, ವಿಶ್ವಾಸ, ಪ್ರೇರಣೆ, ಸೂರ್ತಿ, ಒಬ್ಬಂಟಿಯಲ್ಲ ಎಂಬ ಭಾವನೆಯನ್ನು ಮೂಡಿಸುವುದೇ ವಿಶ್ವ ಮಾನಸಿಕ ಆರೋಗ್ಯದ ಪ್ರಮುಖ ಉದ್ದೇಶ ಮತ್ತು ಆಶಯ.

error: Content is protected !!