Friday, 24th September 2021

ಮೈಕ್ ಚಂದ್ರು ಎನ್.ಚಂದ್ರಶೇಖರ್ ನಿಧನ

ಮೈಸೂರು: ಮೈಕ್ ಚಂದ್ರು ಎಂದೇ ಖ್ಯಾತರಾಗಿದ್ದ ಎನ್.ಚಂದ್ರಶೇಖರ್(71) ಹೃದಯಾಘಾತದಿಂದ ಭಾನುವಾರ ಮೈಸೂರಿನ ಜೆ.ಪಿ ನಗರದ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಮೈಕ್ ಚಂದ್ರು ತಮ್ಮ ವಿಭಿನ್ನ ಧ್ವನಿಯಿಂದ ನಾಟಕಗಳು, ಸರ್ಕಾರಿ ಕಾರ್ಯಕ್ರಮ, ದಸರಾ ವಸ್ತು ಪ್ರದರ್ಶನ, ಕುಸ್ತಿ ಅಖಾಡ, ಆಟೋ ಪ್ರಚಾರಗಳಲ್ಲಿ ತೊಡಗಿಸಿ ಕೊಂಡಿದ್ದರು.

ಅವರು ಟಿ ನರಸೀಪುರದವರಾಗಿದ್ದು, ರಂಗಭೂಮಿ ಕಲಾವಿದರಾಗಿ ತಮ್ಮ ಪ್ರಯಾಣ ಆರಂಭಿಸಿದರು ಮತ್ತು ಅಮರ ಕಲಾ ಸಂಘ, ಕಲಾಪ್ರಿಯ, ಸಮುದಾಯ ದಂತಹ ಹಲವಾರು ತಂಡಗಳೊಂದಿಗೆ ಕೆಲಸ ಮಾಡಿದರು. ಅವರು ತಮ್ಮ ಜನಪ್ರಿಯ ನಾಟಕ ಲಂಚಾವತಾರದಲ್ಲಿ ಪ್ರಸಿದ್ಧ ರಂಗಕರ್ಮಿ ದಿವಂಗತ ಹಿರಣ್ಣಯ್ಯ ನವರ ಜೊತೆಯೂ ನಟಿಸಿದ್ದರು.

Leave a Reply

Your email address will not be published. Required fields are marked *