Thursday, 23rd March 2023

ಮನಸ್ಸಿನಿಂದ ಮನಸ್ಸಿಗೆ ಹಬ್ಬದಿರಲಿ ಕೋಪದುರಿಯ ಕಿಡಿ

ಶ್ವೇತ ಪತ್ರ

shwethabc@gmail.com

ಕೋಪದ ನಿರ್ವಹಣೆ ಒಂದು ಕಲೆ. ಒಂದೇ ದಿನಕ್ಕೆ ಒಂದೇ ಕ್ಷಣಕ್ಕೆ ಸಿದ್ಧಿಸುವುದಿಲ್ಲ. ಸಾಧನೆ ಮಾಡಬೇಕು. ನಿಮ್ಮ ಕೋಪದ ಹಿಂದಿನ ನಿಜವಾದ ಕಾರಣ ಅರ್ಥಮಾಡಿಕೊಳ್ಳಿ. ನಾನು ಈ ಕಾರಣಕ್ಕೆ ಕೋಪ ಮಾಡಿಕೊಳ್ಳಬೇಕಾ? ಎಂದು ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ. ನಿಮ್ಮ ಕೋಪದ ಮೂಲ ಏನು ಎನ್ನುವುದನ್ನು ಹುಡುಕಿ. ಹೀಗೆ ಹುಡುಕಿದ ಕಾರಣಗಳನ್ನು ಎಷ್ಟು ಚೆನ್ನಾಗಿ ಕಮ್ಯುನಿಕೇಟ್ ಮಾಡಬಹುದು, ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದನ್ನು ಯೋಚಿಸಿ.

ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ? ತನಗಾದ ಆಗೇನು? ಅವರಿಗಾದ ಚೇಗೇನು? ತನುವಿನ ಕೋಪ ತನ್ನ ಹಿರಿಯತನದ ಕೇಡು ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವಾ!

ಬಸವಣ್ಣ ಅಸಮಾನತೆಯ ವಿರುದ್ಧ ಸಿಡಿದೆದ್ದ ಒಬ್ಬ  ಕ್ರಾಂತಿಕಾರಿ ಅಷ್ಟೇ ಅಲ್ಲ ಬಸವಣ್ಣ ಒಬ್ಬ ಸೋಶಿಯಲ್ ಡಾಕ್ಟರ್, ಮನೋವಿಜ್ಞಾನಿ ಹಾಗೂ ಥೆರಪಿಸ್ಟ್ ಕೂಡ ಹೌದು! ಇದು ನನ್ನ ವಿಶ್ಲೇಷಣೆ. ನಾವೆಲ್ಲ ಕೋಪ ಮತ್ತು ಅದರ ನಿರ್ವಹಣೆಯ ಬಗ್ಗೆ ತುಂಬಾ ಮಾತ ನಾಡ್ತೀವಿ. ಆದರೆ ಬಸವಣ್ಣನವರ ಮೇಲಿನ ವಚನದ ಕೊನೆಯ ಸಾಲುಗಳನ್ನು ಜೀವನಕ್ಕೆ ನಾವೆಲ್ಲ ಅನ್ವಯಿಸಿಕೊಂಡರೆ ಜೀವನ ಪರ್ಫೆಕ್ಟ್. ಬಟ್ ನಾವು ನಮ್ಮ ಬದುಕಿಗೆ ಅಪ್ಲೈ ಮಾಡಿಕೊಳ್ಳಲ್ಲ ಹಂಗಾಗಿ we are failures in handling our anger. ಕೋಪ ಸಂಪೂರ್ಣ ಸಹಜ, ಆರೋಗ್ಯಕರ ಮನುಷ್ಯನ ಒಂದು ಎಮೋಷನ್. ಆದರೆ ಈ ಕೋಪವೆಂಬ ಎಮೋಷನ್ ನಮ್ಮ ನಿಯಂತ್ರಣ ತಪ್ಪಿದರೆ ಅದು ವಿನಾಶ ಕಾರಕವಾಗಿ ಬದಲಾಗುತ್ತದೆ. ಕೋಪ ಅನ್ನುವುದು ಭಾವನೆಗಳ ಒಂದು ಸ್ಥಿತಿ.

ಒಂದು ಸಣ್ಣ ಕೆರಳುವಿಕೆಯಿಂದ ಶುರುವಾಗಿ ತೀವ್ರತರ ಕ್ರೋಧಕ್ಕೆ ಒಳಗಾಗುತ್ತದೆ. ಕೋಪಕ್ಕೆ ಜೈವಿಕ ಮೌಲ್ಯವಿದೆ. ಅದರಲ್ಲೂ ಪ್ರಾಣಿ ಗಳು ತಮ್ಮ ಜೀವಕ್ಕೆ ಅಪಾಯ ಒದಗಿದಾಗ ಕೋಪದಿಂದ ಪ್ರತಿಭಟಿಸದಿದ್ದರೆ ಅವುಗಳ ಜೀವಕ್ಕೆ ಸಂಚಕಾರ ಉಂಟಾಗುತ್ತದೆ. ಕೋಪಕ್ಕೆ ಮುಖ್ಯವಾಗಿ ಎರಡು ಕಾರಣಗಳು ಒಂದು ಮನಸ್ಸಿನ ಒಳಗಿನ ಕಾರಣ. ಉದಾಹರಣೆಗೆ ನಮ್ಮ ಬದುಕಲ್ಲಿ ಆದ ಆಘಾತಕಾರಿ ಘಟನೆಗಳು, ಸಣ್ಣವಯಸ್ಸಿನದ ಲೈಂಗಿಕ ದೌರ್ಜನ್ಯಗಳು, ಎಂದೋ ನಡೆದ ಘಟನೆಗಳು-ಅವಮಾನಗಳು, ಹಸಿವು ಹೀಗೆ… ಎರಡನೇಯ ಕಾರಣ ಮನಸ್ಸಿನ ಹೊರಗಿನ ಅಂಶಗಳು.

ಉದಾಹರಣೆಗೆ ಟ್ರಾಫಿಕ್‌ನ ಕಿರಿಕಿರಿ, ಬಾಸ್‌ನ ಬೈಗುಳ ಹೀಗೆ… ಭಯಗಳಿಗೆ ಹೊಂದಿಕೊಂಡ ಸಹಜ ಪ್ರತಿಕ್ರಿಯೇ ಕೋಪ. ಯಾವಾಗ ಮನಸ್ಸು ಭಯಕ್ಕೊಳಗಾಗುತ್ತದೆಯೋ ಕೋಪ ಉದ್ರಿಕ್ತಗೊಳ್ಳುತ್ತದೆ. ತಮಾಷೆಗೆ ಯಾರಾದ್ರೂ ರಾತ್ರಿಯ ಹೊತ್ತು ಮನೆಯ ಎಲ್ಲ ಲೈಟ್‌ ಗಳನ್ನು ಆರಿಸಿ ಬಾಗಿಲ ಹಿಂದೆ ನಿಂತು ನಮ್ಮನ್ನ ಹೆದರಿಸಿದರೆ ಇಮ್ಮಿಡಿಯೇಟ್ ನಮ್ಮಿಂದ ಹೊರಬರುವ ರಿಯಾಕ್ಷನ್ ಕೋಪ.
ಬದುಕಲ್ಲಿ ಕೆಲವು ಸಂದರ್ಭಗಳು ಬರುತ್ತವೆ.

ಬಸ್ಟಾಂಡಲ್ಲಿ ನಿಂತಿzಗ ಚುಡಾಯಿಸುವುದು, ಹೋಂವರ್ಕ್ ಮಾಡದ ಮಕ್ಕಳು, ರಸ್ತೆಯಲ್ಲಿ ಹುಡುಗರ ವೀಲಿಂಗ್… ಇಂತಹ ಅನೇಕ ಸಂದರ್ಭಗಳಲ್ಲಿ ನಮಗೆ ಕೋಪದ ಅವಶ್ಯಕತೆ ಖಂಡಿತ ಇದೆ. ಇವೆಲ್ಲವುಗಳಿಂದ ಅರ್ಥವಾಗುವ ಒಂದು ಅಂಶವೆಂದರೆ ಬೇರೆಯವರು ನಮ್ಮನ್ನು ಅಟ್ಯಾಕ್ ಮಾಡಿದಾಗ ಮನುಷ್ಯನ ಸರ್ವೈವಲ್‌ಗೆ ಕೋಪದ ಅವಶ್ಯಕತೆ ಖಂಡಿತವಾಗಿಯೂ ಇದೆ. ಮನೆಯಲ್ಲಿ ಮಾಡಿದಂತೆ ಎಲ್ಲ ಜಾಗಗಳಲ್ಲೂ ಎಲ್ಲರ ಜತೆಯಲ್ಲೂ ಬೈದಾಡಿ, ಕೂಗಾಡಿ, ಹೊಡೆದಾಡಿ ಕೋಪವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಏಕೆಂದರೆ ಸಾಮಾಜಿಕ ಕಟ್ಟುಪಾಡು ಹಾಗೂ ಕಾನೂನಿನ ಚೌಕಟ್ಟಿನೊಳಗೆ ನಾವು ಬದುಕುತ್ತಿದ್ದೇವೆ.

ಸಂಶೋಧನೆಗಳ ಪ್ರಕಾರ ಜನರು ಮೂರು ರೀತಿಗಳಲ್ಲಿ ಕೋಪವನ್ನು ವ್ಯಕ್ತಪಡಿಸುತ್ತಾರೆ – ಮೊದಲನೆಯವರು ಸಾತ್ವಿಕವಾಗಿ, ಅಂದರೆ ಯಾವುದೇ ಆಕ್ರಣಾಮಕಾರಿಯಾಗಲ್ಲ. ಅವರಿಗೆ ಅವರ ಅವಶ್ಯಕತೆಗಳನ್ನು ಹೇಗೆ ಪೂರೈಸಿಕೊಳ್ಳಬೇಕು ಎನ್ನುವುದು ಗೊತ್ತಿರುತ್ತದೆ.
ಸಾತ್ವಿಕ ಕೋಪವನ್ನು ಎಕ್ಸ್ಪ್ರೆಸ್ ಮಾಡುವಾಗ ಯಾರಿಗೂ ನೋವಾಗದಂತೆ ನೋಡಿಕೊಳ್ಳುತ್ತಾರೆ. ಹೇಳುವುದನ್ನು ಇನ್ನೊಬ್ಬರಿಗೆ ಅರ್ಥೈಸಿ ಹೇಳುವುದು ಇವರ ಸ್ವಭಾವ. ಎರಡನೇಯ ವರ್ಗದವರು ಬಹಳ ಆಕ್ರಮಣಕಾರಿಯಾಗಿ ತಮ್ಮ ಕೋಪ ಅಭಿವ್ಯಕ್ತಿಸುತ್ತಾರೆ. ಅಲ್ಲಿ ಹೊಡೆದಾಟ-ಬಡಿದಾಟ, ಕೂಗಾಟ, ಅವ್ಯಾಚ ಪದಗಳ ಬಳಕೆ, ನಿಂದನೆ ಇವೆಲ್ಲವುಗಳ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ.

ಮೂರನೆಯ ಬಗೆಯವರು ಕೋಪ ಬಂದರೂ ನಿಗ್ರಹಿಸಿಕೊಳ್ಳುತ್ತಾರೆ ಇದನ್ನು ನಾವು passive expression of anger ಅಂತಲೂ ಕರೀತೀವಿ. ಇಲ್ಲಿ ವ್ಯಕ್ತಿಗಳು ತಮ್ಮ ಕೋಪವನ್ನು ಕನ್ವರ್ಟ್ ಮಾಡ್ಕೊಂಡು ಬೇರೆ ದಿಕ್ಕಿಗೆ ತಿರುಗಿಸಿಕೊಳ್ಳುತ್ತಾರೆ. ಕೋಪವನ್ನು ಹೋಲ್ಡ
ಮಾಡುತ್ತಾರೆ. ಅದರ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸುತ್ತಾರೆ. ಕೋಪದ ಈ ಮೂರೂ ವ್ಯಕ್ತರೂಪಗಳನ್ನು ನೋಡಿದಾಗ ಕೊನೆಯ
ಎರಡು ಬಗೆಯದ್ದು ಅಪಾಯಕಾರಿ. ಕೋಪವನ್ನು ವ್ಯಕ್ತಪಡಿಸದೆ ಸಪ್ರೆಸ್ ಮಾಡ್ತಾ ಹೋದಾಗ ಅದು ಬೇರೆ ರೀತಿಯ ವ್ಯಕ್ತಿತ್ವದ ಸಮಸ್ಯೆ ಗಳಾಗಿ ತಲೆದೋರುತ್ತದೆ.

ಜನರು ತುಂಬ ಸಿನಿಕಲ್ ಆಗೋದು, ಹೊಟ್ಟೆಕಿಚ್ಚನ್ನ ಬೆಳೆಸಿಕೊಳ್ಳುವುದು, ಕೀಳರಿಮೆ ಮತ್ತು ಆತ್ಮವಿಶ್ವಾಸದ ಕೊರತೆ ಹೀಗೆ ಬೇರೆ
ಬೇರೆ ರೀತಿಯ ಮಾನಸಿಕ ಸಮಸ್ಯೆಗಳು ಉಂಟಾಗತೊಡಗುತ್ತವೆ. ಕೋಪಕ್ಕೆ ಒಳಗಾದ ವ್ಯಕ್ತಿಯಲ್ಲಿ ಶಾರೀರಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಸಂಜ್ಞಾನಾತ್ಮಕವಾಗಿ, ಭಾವನಾತ್ಮಕವಾಗಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಕೋಪಕ್ಕೆ ಒಳಗಾದ ವ್ಯಕ್ತಿಯ ಮನಃಸ್ಥಿತಿಯಲ್ಲಿ ಏರುಪೇರು ಉಂಟಾಗಿ ಆತ ಅಥವಾ ಆಕೆ ವಿಚಿತ್ರವಾಗಿ ವರ್ತಿಸುವುದನ್ನು ನಾವು ಕಾಣುತ್ತೇವೆ.

ಇದರಿಂದ ಸಾಮಾಜಿಕ ಸಂಬಂಧಗಳು ಹಾಳಾಗುತ್ತವೆ. ಸ್ನೇಹಿತರು ದೂರ ಸರಿಯುತ್ತಾರೆ, ನಕಾರಾತ್ಮಕ ಭಾವನೆ ಬೆಳೆಯುತ್ತದೆ. ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ. ಕೋಪದಿಂದ ಶಾರೀರಿಕವಾಗಿಯೂ ಬದಲಾವಣೆಗಳಾಗುತ್ತವೆ. ಅಡ್ರಿನಲಿನ್ ಮತ್ತು ಕಾರ್ಟಿ ಸೋಲ್ ಎಂಬ ಅಂತಃಸ್ರಾವಗಳು ರಕ್ತಕ್ಕೆ ಬಿಡುಗಡೆಯಾಗುವುದರಿಂದ ಶಾರೀರಿಕ ಹಾಗೂ ಮಾನಸಿಕ ಚಟುವಟಿಕೆಗಳು ಉಂಟಾಗುತ್ತವೆ. ಹೃದಯಬಡಿತ, ರಕ್ತದೊತ್ತಡ ಮುಂತಾದ ಕ್ರಿಯೆಗಳ ವೇಗ ಹೆಚ್ಚಾಗುತ್ತದೆ. ಇದು ದೀರ್ಘಕಾಲದವರೆಗೆ ಆದಾಗ ಶರೀರದ ಮೇಲೆ ಗಂಭೀರ ದುಷ್ಪರಿಣಾಮಗಳುಂಟಾಗುತ್ತವೆ.

ಜೀರ್ಣಕ್ರಿಯೆ ತಗ್ಗತ್ತದೆ, ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬರುತ್ತವೆ. ನಿರಂತರ ಕೋಪ ಮಾಡಿಕೊಳ್ಳುವುದರಿಂದ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಇಳಿಮುಖವಾಗುತ್ತದೆ. ಮನೆಯಲ್ಲಿ ಹಾಗೂ ವೃತ್ತಿಯಲ್ಲಿ ಅನಗತ್ಯ ವಾದ-ವಿವಾದಗಳು ಉಂಟಾಗುತ್ತವೆ ಮತ್ತು ಆರ್ಥಿಕ ಮುಗ್ಗಟ್ಟು ಸಹ ಕಂಡುಬರುತ್ತದೆ. ಕೆಲಸ ಕಳೆದುಕೊಳ್ಳುವ ಸಂಭವವಿರುತ್ತದೆ, ನೆನಪಿನ ಶಕ್ತಿಯ ಕೊರತೆ ಮುಂತಾದ ಸಂಜ್ಞಾ ನಾತ್ಮಕ ಸಮಸ್ಯೆಗಳು ಕೂಡ ಕಂಡು ಬರುತ್ತವೆ. ಕೋಪಿಷ್ಟ ವ್ಯಕ್ತಿಯಲ್ಲಿ ಕಂಡುಬರುವ ಪ್ರಮುಖ ವರ್ತನಾ ಸಮಸ್ಯೆಗಳೆಂದರೆ ಊಟದ ಬಗ್ಗೆ ಆಸಕ್ತಿ ಇಲ್ಲದಿರುವುದು, ಕಾಫಿ-ಟೀ ಹೆಚ್ಚಾಗಿ ಸೇವಿಸುವುದು, ಸಿಗರೇಟ್ ಸೇವನೆ, ಮಾದಕ ವಸ್ತು ಹಾಗೂ ಮದ್ಯಪಾನದ ದುಶ್ಚಟ ಗಳಿಂದಾಗಿ ಸಮನ್ವಯತೆ- ಅಚ್ಚುಕಟ್ಟುತನ ಇಲ್ಲದಿರುವುದು, ತಲೆಸುತ್ತುವಿಕೆ, ನಿದ್ರೆಯಿಂದ ಆಗಾಗ ಎಚ್ಚರವಾಗುವುದು, ಕೆಲಸಕ್ಕೆ
ಗೈರುಹಾಜರಾಗುವುದು ಮತ್ತು ಕೆಲಸ ನಿರ್ವಹಣೆಯ ಸಾಮರ್ಥ್ಯ ತಗ್ಗುವುದು ಇವೇ ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ.

ಕ್ರಿಕೆಟ್ ಆಟದಲ್ಲಿ sledging ಅಂತ ಒಂದು ಕಾನ್ಸೆಪ್ಟ್ ಇದೆ. ಒಂದು ದಿನ ತಂಡದ ಆಟಗಾರ ಮತ್ತೊಂದು ತಂಡದ ಆಟಗಾರರನ್ನು ಅವಮಾನಿಸಿ ಬೆದರಿಸುವುದೂ ಮಾಡುತ್ತಾರೆ. ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ತರಹದ ಕ್ರಿಕೆಟ್ ಆಟಗಾರರು ಇಂತಹ sledging ಸಂದರ್ಭಗಳಲ್ಲೂ ತಾಳ್ಮೆಯನ್ನು ಕಳೆದುಕೊಳ್ಳದೆ ಬಹಳ ಸಹನೆಯಿಂದ ನಿಭಾಯಿಸುತ್ತಾರೆ.

ಹೀಗೆ ನಮ್ಮ ಬದುಕಲ್ಲೂ ಟೀಕೆಗಳು, ಅಪಮಾನಗಳು, ನೋವುಗಳು, ಹೇಳಿಕೆ ಮಾತುಗಳು ನಮ್ಮನ್ನು ನೋಯಿಸುತ್ತವೆ. ಹರ್ಟ್ ಮಾಡು ತ್ತವೆ. ಇಂತಹ ಸಂದರ್ಭಗಳಲ್ಲಿ ನಾವು ಸಚಿನ್, ಧೋನಿ ರೀತಿ ತಾಳ್ಮೆ, ಸಹನೆ ಕಳೆದುಕೊಳ್ಳದೇ cool ಆಗಿ ಇರ್ತೀವಾ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಕೋಪ ಮಾಡಿಕೊಳ್ಳುವ ಮೊದಲು ಒಂದು ವಿಚಾರ ಮಾಡೋಣ ನಮ್ಮನ್ನು ಯಾರಾದರೂ ಟೀಕೆ
ಮಾಡೋದನ್ನ ತಡೆಯಲು ಆಗುತ್ತಾ? ಸಂದರ್ಭ ಮತ್ತು ಜನ ನಮ್ಮ ನಿಯಂತ್ರಣದಲ್ಲಿ ಇರುತ್ತಾರಾ? We need to just overlook things and move on. ನಮ್ಮಲ್ಲಿ ಅನೇಕರಿಗೆ ಒಂದು ತಪ್ಪು ತಿಳಿವಳಿಕೆಯಿದೆ. ಕೋಪ ನಿಯಂತ್ರಿಸುವುದು ಅಂದರೆ ನಮ್ಮ ಕೋಪವನ್ನ ಸಪ್ರೆಸ್ ಮಾಡೋದು ಎಂದು. ಕೋಪಾನೇ ಮಾಡಿಕೊಳ್ಳದೆ ಬದುಕಿ ಬಿಡಬಹುದು ಅಂತಿದ್ದರೆ I’am sory ಅದು ಸಂಪೂರ್ಣವಾಗಿ ಸಾಧ್ಯ ವಿಲ್ಲ. ಕೋಪವನ್ನು ಸಮರ್ಥವಾಗಿ ನಿರ್ವಹಣೆ ಮಾಡುವಲ್ಲಿ ನಾವು ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾಗಿರುವುದು ಕೋಪದ ಹಿಂದಿನ ಸಂದೇಶವನ್ನು ಅರ್ಥಮಾಡಿಕೊಂಡು ಆರೋಗ್ಯಕರವಾಗಿ ಅದನ್ನು ಯಾವುದೇ ನಿಯಂತ್ರಣ ತಪ್ಪದೇ ವ್ಯಕ್ತಪಡಿಸುವುದು.

ಈ ಪ್ರಕ್ರಿಯೆ ನಮಗೆ ಸಮಾಧಾನವನ್ನಷ್ಟೇ ಅಲ್ಲ ನಮ್ಮ ಅವಶ್ಯಕತೆಗಳನ್ನೂ ಪೂರೈಸುತ್ತದೆ. ನಮ್ಮೊಳಗೆ ಘರ್ಷಣೆಗಳು, ತಿಕ್ಕಾಟಗಳು ಕಡಿಮೆಯಾಗುತ್ತವೆ. ಇದು ಸೌಹಾರ್ದ ಯುತ ಸಂಬಂಧಗಳಿಗೂ ದಾರಿಮಾಡಿಕೊಡುತ್ತದೆ. ಕೋಪದ ನಿರ್ವಹಣೆ ಒಂದು ಕಲೆ. ಒಂದೇ ದಿನಕ್ಕೆ ಒಂದೇ ಕ್ಷಣಕ್ಕೆ ಸಿದ್ಧಿಸುವುದಿಲ್ಲ. ಸಾಧನೆ ಮಾಡಬೇಕು. ರಿಯಾಕ್ಟ್ ಮಾಡುವುದಲ್ಲ ರೆಸ್ಪಾಂಡ್ ಮಾಡುವುದನ್ನು ಕಲಿತುಕೊಳ್ಳ ಬೇಕು. ನಿಮ್ಮ ಕೋಪದ ಹಿಂದಿನ ನಿಜವಾದ ಕಾರಣ ಅರ್ಥಮಾಡಿಕೊಳ್ಳಿ. ನಾನು ಈ ಕಾರಣಕ್ಕೆ ಕೋಪ ಮಾಡಿಕೊಳ್ಳಬೇಕಾ? ಎಂದು ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ.

ನಿಮ್ಮ ಕೋಪದ ಮೂಲ ಏನು ಎನ್ನುವುದನ್ನು ಹುಡುಕಿ. ಹೀಗೆ ಹುಡುಕಿದ ಕಾರಣಗಳನ್ನುಎಷ್ಟು ಚೆನ್ನಾಗಿ ಕಮ್ಯುನಿಕೇಟ್ ಮಾಡಬಹುದು, ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದನ್ನು ಯೋಚಿಸಿ. ಎಷ್ಟೋ ಸಲ ನಮ್ಮ ಕೆಲವೊಂದು ನ್ಯೂನತೆಗಳನ್ನು ಮುಚ್ಚಿ ಹಾಕಿ ಕೊಳ್ಳಲು ನಾವು ಕೋಪ ಮಾಡಿಕೊಳ್ಳುತ್ತೇವೆ. ಒಂದು ಕ್ಷಣ ಯೋಚಿಸಿ ನಮ್ಮ ಅವಮಾನಗಳನ್ನು, ಅಭದ್ರತೆಯನ್ನು, ನೋವನ್ನು, ಮುಜುಗರವನ್ನು, ದುರ್ಬಲತೆಯನ್ನು ಮುಚ್ಚಿಕೊಳ್ಳಲು ಕೋಪ ಮಾಡಿಕೊಂಡಿರುತ್ತೇವೆ.

ಭಯದಿಂದಲೂ ಕೂಡ ಕೋಪ ಉಂಟಾಗುತ್ತದೆ. ಆ ಭಯಗಳನ್ನು ಹುಡುಕಿ resolve  ಮಾಡಿಕೊಳ್ಳಿ. ಎಷ್ಟೋ ಸಲ ಕಾಂಪ್ರಮೈಸ್ ಮಾಡಿ ಕೊಳ್ಳುವುದಕ್ಕೆ ಹೆದರಿ ಅಥವಾ ಅದನ್ನು ದುರ್ಬಲತೆ ಅಂದುಕೊಂಡು ನಾವು ಕೋಪ ಮಾಡಿಕೊಂಡಿರುತ್ತೇವೆ. ನಮ್ಮ ಇಗೋ ಕೈಯಲ್ಲಿ ನಾವು ಬುದ್ಧಿ ಕೊಟ್ಟಾಗ ಕೋಪ ಬರುತ್ತದೆ. ಸಹಾನುಭೂತಿಯಿಂದ ವಿಷಯಗಳನ್ನು ಬೇರೆ ದೃಷ್ಟಿಕೋನದಲ್ಲಿ ನೋಡಿ ಕೋಪವನ್ನು avoid ಮಾಡಬಹುದು.

ಕೋಪವನ್ನು ಬರಿಸುವ ಕೆಲವೊಂದು triggering factors ಪ್ರಚೋದನೆಗಳು ಯಾವುವು ಅಂತ ಲಿಸ್ಟ್ ಮಾಡಿಕೊಳ್ಳಿ. ಆ
ಪ್ರಚೋದನೆ ಗಳಿಗೆ ಆದಷ್ಟು ಸಮಾಧಾನವಾಗಿ ಪ್ರತಿಕ್ರಿಯಿಸುವ ಅಭ್ಯಾಸವನ್ನು ನಿಧಾನವಾಗಿ ರೂಢಿಸಿಕೊಳ್ಳಿ. ನಕಾರಾತ್ಮಕವಾದ ಆಲೋಚನಾ ಕ್ರಮಗಳು ಸಹ ಕೆಲವೊಮ್ಮೆ ಕೋಪಕ್ಕೆ ಕಾರಣವಾಗುತ್ತವೆ. ಉದಾಹರಣೆಗೆ ಯಾರಾದರೂ ನಾನು ಏನೇ ಹೇಳ ಬೇಕಾದರೂ ಮಧ್ಯೆ ಬಾಯಿ ಹಾಕುತ್ತಾರೆ ಆಗ ನನಗೆ ಕೋಪ ಬರುತ್ತದೆ, ನನ್ನ ಅಗತ್ಯಗಳೇನು ಬೇಕು-ಬೇಡಗಳೇನು ಕೇಳದೇ ಇಲ್ಲ ಅಂದಾಗ, ನನ್ನ ಎಲ್ಲ disrespect ಮಾಡ್ತಾರೆ ಅಂದಾಗ ಕೋಪ ಉಂಟಾಗುತ್ತದೆ.

ಕೆಲವೊಮ್ಮೆ ನಾವು ಬೇರೆಯವರು ನಮ್ಮನ್ನು ಬೇಕಂತಲೇ disrespect ಮಾಡ್ತಾ ಇದ್ದಾರೆ ಇಗ್ನೋರ್ ಮಾಡ್ತಾ ಇದ್ದಾರೆ ಅಂತ ಕೋಪ ಮಾಡಿಕೊಳ್ಳುತ್ತೇವೆ. ಇನ್ನೂ ಕೆಲವೊಮ್ಮೆ ನಮ್ಮಿಂದ ಏನಾದರೂ ತಪ್ಪು ನಡೆದಾಗ ನಾವು ಬೇರೆಯವರನ್ನು blame ಮಾಡಲಿಕ್ಕೆ ಶುರು ಮಾಡ್ತೀವಿ. ಈ ತರಹದ ನಕಾರಾತ್ಮಕ ಆಲೋಚನೆಗಳು ನಮ್ಮ ಕೋಪಕ್ಕೆ ಕಾರಣವಾಗುತ್ತವೆ. ಅವುಗಳನ್ನು ರೀ ಫ್ರೇಮ್ ಮಾಡಿಕೊಳ್ಳಿ. ಅದರಲ್ಲಿ ನಂದು ಎಷ್ಟು ಸರಿ ಬೇರೆಯವರು ಎಷ್ಟು ಸರಿ ಎಂದು ಸಕಾರಾತ್ಮಕವಾಗಿ ವಾಸ್ತವವಾಗಿ ಯೋಚಿಸಿ ಕೋಪ ನಿಯಂತ್ರಣಕ್ಕೆ ಬರುತ್ತದೆ.

ಕೋಪದ ಸಮರ್ಥ ನಿರ್ವಹಣೆಯ ಮತ್ತೊಂದು ಟಿಟ್, ಯಾವಾಗ ನೀವು ಟ್ರಿಗರ್ ಆಗ್ತಾ ಇದ್ದೀರಾ, ಇರಿಟೇಟ್ ಆಗ್ತಾ ಇದ್ದೀರಾ ಕೋಪ ಬರ್ತಾ ಇದೆ ಅನ್ನೋ ಸುಳಿವು ನಿಮಗೆ ಸಿಗುತ್ತೋ ಕೋಪಬಂದು ನಿಯಂತ್ರಣ ತಪ್ಪಿ ಹೋಗುವುದಕ್ಕೆ ಮುಂಚೆ ಆ ಜಾಗ ಬಿಟ್ಟು ಹೋಗಿ ಬಿಡಿ. Just go for a walk, ದೀರ್ಘವಾಗಿ ಉಸಿರಾಡಿ. ಇದಾವುದನ್ನು ಮಾಡಲಿಕ್ಕೆ ಸಾಧ್ಯವಾಗಲಿಲ್ಲವೆಂದರೆ ಸೈಲೆಂಟಾಗಿ ಇದ್ದುಬಿಡಿ. ಕೋಪಮಾಡಿಕೊಂಡು ಸಂಬಂಧಗಳನ್ನು ವೃತ್ತಿಯನ್ನು ಹಾಳು ಮಾಡಿಕೊಳ್ಳುವ ಬದಲು ಕೋಪವನ್ನು ಸಾತ್ವಿಕವಾಗಿ ನಿಭಾಯಿಸುವುದನ್ನು ಕಲಿಯಿರಿ.

ದೀರ್ಘ ಉಸಿರಾಟದ ರಿಲ್ಯಾಕ್ಸೇಶನ್ ಟೆಕ್ನಿಕ್ ಕೋಪಕ್ಕೆ ಅತಿದೊಡ್ಡ ಮದ್ದು ಇದನ್ನು ಪ್ರತಿದಿನ ಪ್ರಾಕ್ಟೀಸ್ ಮಾಡ್ತಾ ಬನ್ನಿ. ವಾಸ್ತವಿಕ ಹಿನ್ನೆಲೆಯಲ್ಲಿ ಕೋಪವನ್ನು ಉಂಟುಮಾಡುವ ಸನ್ನಿವೇಶದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಸಮಸ್ಯೆ ಪರಿಹಾರಕ್ಕೆ ಕಾರ್ಯಪ್ರವೃತ್ತರಾಗಿ. ಕೋಪ ನಿವಾರಣೆಯಾಗುತ್ತದೆ ಎಂಬ ಭರವಸೆ ಹೊಂದುವುದು ಮತ್ತು ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಮತ್ತೊಂದು
ಪ್ರಮುಖವಾದ ತಂತ್ರ. ಕೋಪ ಅತಿಯಾದಾಗ ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದರಿಂದ ಕೋಪ ಕಡಿಮೆಯಾಗುತ್ತದೆ. ಯಾವುದಾದರೂ ಸನ್ನಿವೇಶ ನಿಮ್ಮಲ್ಲಿ ತೀವ್ರತರವಾದ ಕೋಪವನ್ನು ಉಂಟು ಮಾಡಿದರೆ ಅದರಿಂದ ಪಾರಾಗಲು ಬೇರೆ ಕೆಲಸದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಿ.

ಕೋಪವನ್ನು ನಿಭಾಯಿಸುವುದು ಒಂದು ನಿರಂತರ ಬದಲಾವಣೆ ಹೊಂದುವ ಪ್ರಕ್ರಿಯೆಯೇ ಹೊರತು ಅದು ಒಂದು ಗುಣವಲ್ಲ. ಮನೋ ವೈಜ್ಞಾನಿಕವಾಗಿ ಕೋಪವನ್ನು ನಿಭಾಯಿಸಲು ನಾವು ಮುಖ್ಯವಾಗಿ ಗಮನಿಸಬೇಕಾದ ಎರಡು ಅಂಶಗಳೆಂದರೆ ಸಮಸ್ಯೆ ಕೇಂದ್ರಿತ ಹಾಗೂ ಸಂವೇಗ ಕೇಂದ್ರಿತ ಅಂಶಗಳನ್ನು ಮೈಗೂಡಿಸಿಕೊಳ್ಳುವುದು. ಸಮಸ್ಯೆ ಕೇಂದ್ರಿತ ತಂತ್ರವು ನೇರವಾಗಿ ಸಮಸ್ಯೆಯನ್ನೇ ಗುರಿಯಾಗಿಟ್ಟುಕೊಂಡು ಅದರ ನಿವಾರಣೆಗಾಗಿ ನಾನಾ ತಂತ್ರಗಳನ್ನು ರೂಪಿಸುತ್ತ ಕೋಪವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಸಂವೇಗ ಅಥವಾ ಭಾವನೆ ಕೇಂದ್ರಿತ ತಂತ್ರದಲ್ಲಿ ಕೋಪದಿಂದ ಮನಸ್ಸಿನಲ್ಲಿ ಉಂಟಾದ ಕ್ರಿಯೆಗಳಲ್ಲಿ ಆಗುವ ಬದಲಾವಣೆಗಳ ಬಗ್ಗೆ ಒತ್ತು ನೀಡುತ್ತ ಮಾನಸಿಕ ವೈಪರೀತ್ಯಗಳನ್ನು ತಡೆಗಟ್ಟುತ್ತದೆ. ಶರೀರವನ್ನು ಕಾಲಿನಿಂದ ತಲೆಯವರೆಗೂ ಸಡಿಲಗೊಳಿಸುತ್ತ ದೀರ್ಘವಾಗಿ ಉಸಿರು ತೆಗೆದುಕೊಳ್ಳುತ್ತ ಸಿರನ್ನು ಹೊರಹಾಕುವುದನ್ನು ಮಾಡುವುದರಿಂದ ದೇಹ ಮತ್ತು ಮನಸ್ಸು
ಸಂಪೂರ್ಣ ವಿಶ್ರಾಂತಿ ಹೊಂದಿ ಕೋಪ ಸಮಾಧಾನವಾಗುತ್ತದೆ.

ಸಡಿಲವಾದ ಬಟ್ಟೆ ತೊಟ್ಟು ಖಾಲಿ ಹೊಟ್ಟೆಯಲ್ಲಿ ಒಂದು ಚಾಪೆಯ ಮೇಲೆ ಆರಾಮವಾಗಿ ಮಲಗಿ ಪ್ರತಿದಿನ ಸುಮಾರು ಅರ್ಧ ಗಂಟೆಗಳ ಕಾಲ ವಿಶ್ರಾಂತಿ ಪಡೆದರೆ ಕೋಪ ಎಷ್ಟೋ ನಿಯಂತ್ರಣಕ್ಕೆ ಬರುತ್ತದೆ. ಸೃಜನಾತ್ಮಕ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವು ದರಿಂದ ಕೋಪದ ನಿರ್ವಹಣೆ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. ಅಸಂಬದ್ಧ ಅರ್ಥರಹಿತ ಆಲೋಚನೆಗಳನ್ನು ದೂರಮಾಡಿ
ಅರ್ಥಪೂರ್ಣ ಹಾಗೂ ವಾಸ್ತವದ ಆಲೋಚನೆಗಳನ್ನು ರೂಢಿಸಿಕೊಂಡು ಆ ಮೂಲಕ ಕೋಪದ ಗಂಭೀರತೆಯನ್ನು ಅರಿತು ನಮಗೆ ನಾವೇ ಸ್ವಯಂ ಸೂಚನೆಗಳನ್ನು ಕೊಡುವ ಮೂಲಕ ಕೋಪವನ್ನು ಸಮರ್ಥವಾಗಿ ನಿಭಾಯಿಸಬಹುದು.

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ|
ಕೊರತೆಯೊಂದನು ನೀನು ನೆನೆನೆನೆದು ಕೆರಳಿ| ಧರೆ
ಎಲ್ಲವನು ಶಪಿಸಿ ಮನದಿ ನರಕವ ನಿಲ್ಲಿಸಿ|ನರಳುವುದು
ಬದುಕೇನೋ? ಮಂಕುತಿಮ್ಮ||
ನೀವೆ ಯೋಚಿಸಿ…?

error: Content is protected !!