Sunday, 25th September 2022

ಭಾರತ ಧಾರ್ಮಿಕ, ಅಧ್ಯಾತ್ಮಿಕ ತವರೂರು: ಶಾಸಕ ಯಶವಂತರಾಯಗೌಡ

ಇಂಡಿ: ಭಾರತ ಅಧ್ಯಾತ್ಮಿಕ, ಧಾರ್ಮಿಕ ತವರೂರು ಇಲ್ಲಿನ ಜನರು ಧಾರ್ಮಿಕ ತಳಹದಿಯ ಮೇಲೆ ನಂಬಿಕೆ ಇರುವ ಬಹು ಸಂಖ್ಯಾತರು ನಂಬಿಕೆ ವಿಶ್ವಾಸಗಳಿಂದ ಬದುಕು ಸಾಗಿಸುತ್ತಿದ್ದು, ಮಠ ಮಾನ್ಯಗಳು ಮಾನವ ಕುಲಕೋಟಿಗೆ ಧರ್ಮವನ್ನು ಎತ್ತಿ ಹಿಡಿದಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಚೋರಗಿ ಗ್ರಾಮದ ಶ್ರೀವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾನಪನೆ ಮಹಾದ್ವಾರ ಲೋಕಾ ರ್ಪಣೆ, ಧಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು ೧೨ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ನಾಡಿನಲ್ಲಿ ಹುಟ್ಟಿರುವುದು ನಮ್ಮ ಭಾಗ್ಯ. ಅಧಿಕಾರ ಶಾಶ್ವತ ಅಲ್ಲ ನಾವು ಮಾಡಿರುವ ಕೆಲಸ ಕಾರ್ಯಗಳು ಶಾಶ್ವತ ಇರುತ್ತದೆ, ಬಸವಣ್ಣನ ಸಂದೇಶದ0ತೆ ಸರ್ವ ಸಮುದಾಯವನ್ನು ಸಾಮಾಜಿಕ ನೆಲಗಟ್ಟಿನ ಮೇಲೆ ಸ್ಥಳೀಯ ಎಲ್ಲಾ ಆಡಳಿತದಲ್ಲಿ ಅಧಿಕಾರ ಹಂಚಿಕೆ ಮಾಡಿ ಸರ್ವರಿಗೂ ಸಮಬಾಳು ಸಮಪಾಲು ನೀಡಿದ್ದೇನೆ.

ಇಂಡಿ ಗಡಿ ಭಾಗ ಅಭಿವೃದ್ದಿಯಿಂದ ವಂಚಿತವಾದ ಈ ಕ್ಷೇತ್ರ ಶೈಕ್ಷಣಿಕ, ರಸ್ತೆ, ನೀರಾವರಿ, ಉದ್ಯಮೇ, ಕೃಷಿ ಕ್ಷೇತ್ರದಲ್ಲಿ ತಕ್ಕ ಮಟ್ಟಿಗೆ ಸುಧಾರಣೆ ಮಾಡಿರುವೆ.

ಚೋರಗಿ ಗ್ರಾಮಸ್ಥರು ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣ ಅನುಧಾನ ಕೇಳಿದ್ದೀರಿ ಪ್ರೌಢ ಶಾಲೆ ಶಿಕ್ಷಣ ಕಲಿಯಲು ಅವಕಾಶ ಕೇಳಿದ್ದು ಒಂದು ಕೋಣೆ ಕಟ್ಟಡ ಅನುಧಾನ ನೀಡುವೆ. ಪ್ರೌಢ ಶಾಲೆ ಮಂಜೂರಾತಿಗಾಗಿ ಪ್ರಮಾಣಿಕ ಪ್ರಯತ್ನ ಮಾಡುವೆ ಎಂದರು.

ತಡವಲಗಾ ಹಿರೇಮಠದ ಶ್ರೀರಾಚೋಟೇಶ್ವರ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸಿದರು. ಮಹಾಂತಯ್ಯ ಹಿರೇಮಠ,  ದುಂಡಯ್ಯಾ ಹಿರೇಮಠ, ರಾಚಯ್ಯ ಹಿರೇಮಠ ಸಾನಿಧ್ಯವಹಿಸಿದರು. ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ, ಮಹಾದೇವಗೌಡ ಬಿರಾದಾರ, ಅಶೋಕಗೌಡ ಬಿರಾದಾರ, ಸೋಮಣ್ಣಾ ಪ್ರಚಂಡಿ, ಸಿದ್ದನಗೌಡ ಪಾಟೀಲ, ಗಂಗಾಧರಗೌಡ ಬಿರಾದಾರ, ಅಪ್ಪಸಾಬ ಹೊಸಮನಿ, ಗಂಗಾಧರ ದೇಸಾಯಿ, ಸುಭಾಷ ಮೇಡೆದಾರ, ರಾಚಣ್ಣಾ ಬಿರಾದಾರ. ಚಂದ್ರಾಮ ಮೆಡೇದಾರ, ಕಾಶೀನಾಥ ಹೊಸಮನಿ ಸೇರಿದಂತೆ ಗ್ರಾಮಸ್ಥರು ಇದ್ದರು.