Tuesday, 5th July 2022

ರೂಪದರ್ಶಿ ಮಂಜುಷಾ ನಿಯೋಗಿ ಶವ ಪತ್ತೆ

ಕೋಲ್ಕತ್ತ: ಬಂಗಾಳಿ ರೂಪದರ್ಶಿ ಶವ ಕೋಲ್ಕತ್ತದ ಪಟುಲಿಯ ಅಪಾರ್ಟ್‌ ಮೆಂಟ್‌ನಲ್ಲಿ ಪತ್ತೆಯಾಗಿದೆ.

ರೂಪದರ್ಶಿಯನ್ನು ಮಂಜುಷಾ ನಿಯೋಗಿ ಎಂದು ಗುರುತಿಸಲಾಗಿದ್ದು, ಬಿದಿಶಾ ಡಿ ಮಜುಂದಾರ್ ಅವರ ಗೆಳತಿಯಾಗಿದ್ದಾರೆ.

ಬಂಗಾಳಿ ನಟಿ, ರೂಪದರ್ಶಿ ಬಿದಿಶಾ ಡಿ ಮಜುಂದಾರ್ ಅವರ ಶವ ಬುಧವಾರ ಫ್ಲ್ಯಾಟ್‌ನಲ್ಲಿ ಪತ್ತೆಯಾದ ಬೆನ್ನಲ್ಲೇ ಈ ಘಟನೆ ನಡೆದಿದೆ.  ಮಂಜುಷಾ ಶವ ಪತ್ತೆಯಾಗಿರುವ ಕುರಿತು ತಾಯಿ ಹೇಳಿಕೆ ನೀಡಿದ್ದು, ಮಗಳು ಆಕೆಯ ಗೆಳತಿ ಸಾವಿನ ಬಳಿಕ ತೀವ್ರವಾಗಿ ನೊಂದು ಕೊಂಡಿದ್ದಳು ಎಂದಿದ್ದಾರೆ.

ಮಂಜುಷಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ತನಿಖೆಯ ಬಳಿಕ ಸಾವಿಗೆ ಸೂಕ್ತ ಕಾರಣ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಿದಿಶಾ ಅವರ ಶವ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದೇ ರೀತಿಯಲ್ಲಿ ಮಂಜುಷಾ ಶವ ಪತ್ತೆಯಾಗಿದೆ.