ತುಮಕೂರು: ಅಕ್ರಮವಾಗಿ ಬಿಲ್ ಸೃಷ್ಟಿಸಿ ಸರಕಾರಿ ಖಜಾನೆಗೆ 20 ಲಕ್ಷಕ್ಕೂ ಅಧಿಕ ವಂಚನೆ ಮಾಡಿರುವ ಆರೋಪದಡಿಯಲ್ಲಿ ಎಸ್ಪಿ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಯಶಸ್ವಿನಿಯನ್ನು ಹೊಸ ಬಡಾವಣೆ ಠಾಣೆಯ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಈಕೆಯ ವಿರುದ್ದ ದೂರು ದಾಖಲಾಗಿದ್ದರೂ ಪೊಲೀಸರು ಬಂಧಿಸದೆ ನಾಟಕವಾಡುತ್ತಿದ್ದರು. ಈ ಬಗ್ಗೆ ನ್ಯಾಯಾಲಯ ಜಿಲ್ಲಾ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಅಕ್ರಮ ಪ್ರಕರಣದಲ್ಲಿ ಎಸ್ಪಿ ಕಚೇರಿಯ ಆಡಳಿತಾಧಿಕಾರಿ ಕೃಷ್ಣಪ್ಪ, ಕೋಶಾಧಿಕಾರಿ ಪುಟ್ಟಾರಾಧ್ಯ ಇವರುಗಳ ಕೈವಾಡ ವಿರುವ ಬಗ್ಗೆ ಆರೋಪ ಕೇಳಿಬಂದಿದ್ದು ತನಿಖೆ ನಡೆಯುತ್ತಿದೆ. ಶೀಘ್ರವೇ ಉಳಿದ ಆರೋಪಿಗಳ ಬಂಧನವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಅಕ್ರಮದ ಬಗ್ಗೆ ಪತ್ರಿಕೆ ವರದಿ ಮಾಡಿತ್ತು.