Saturday, 16th October 2021

ತಾಯಿ, ತಂಗಿಯ ಬರ್ಬರ ಹತ್ಯೆ

ಶಿರಸಿ: ತಾಯಿ ಮತ್ತು ಮಗಳ ಕೊಲೆಯಾಗಿದ್ದು, ಪುತ್ರನಿಂದಲೇ ತಾಯಿ ಮತ್ತು ತಂಗಿಯ ಹತ್ಯೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕುಡಗೋಡು ಬಳಿ ಘಟನೆ ನಡೆದಿದೆ. ಪಾರ್ವತಿ ನಾರಾಯಣ ಹಸ್ಲರ್ (42), ರಮ್ಯಾ ನಾರಾಯಣ ಹಸ್ಲರ್(19) ಮೃತ ದುರ್ದೈವಿಗಳಾಗಿದ್ದಾರೆ. ಮಂಜುನಾಥ ಹಸ್ಲರ್ (24) ಕೊಲೆ ಮಾಡಿದ ಆರೋಪಿ.

ಸಾಂಬಾರ‍್ ಸರಿಯಾಗಿಲ್ಲವೆಂದು ಜಗಳ ತೆಗೆದಿದ್ದ ಮಂಜುನಾಥ, ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಈತ ಕುಡಿತದ ಚಟ ಹೊಂದಿದ್ದನೆಂದು ಮಂಜುನಾಥನ ತಂದೆ ಮಗನ ವಿರುದ್ಧ ದೂರು ನೀಡಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿವೈ ಎಸ್ ಪಿ ರವಿ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *