Friday, 27th May 2022

ಸಂಸದ ಪ್ರತಾಪ್ ಸಿಂಹ ಕಾರು ಪಲ್ಟಿ, ಚಾಲಕನಿಗೆ ಗಾಯ

ರಾಮನಗರ: ಮೈಸೂರಿನಿಂದ ಬೆಂಗಳೂರಿಗೆ ಕಾರ್ಯ ನಿಮಿತ್ತ ತೆರಳುತ್ತಿದ್ದ ಸಂಸದ ಪ್ರತಾಪ್ ಸಿಂಹ ಕಾರು, ಪಲ್ಟಿಯಾಗಿದೆ.

ಕಾರು ಪಲ್ಟಿಯಾಗಿದ್ದರಿಂದ ಚಾಲಕ ಗಾಯಗೊಂಡು, ಮಿಕ್ಕವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.

ಸಂಸದ ಪ್ರತಾಪ್ ಸಿಂಹ ಅವರು, ಅವರ ಪತ್ನಿ, ಮಗಳು, ಕಾರು ಚಾಲಕ ಸೇರಿದಂತೆ ಆರು ಜನರೊಂದಿಗೆ ತಮ್ಮ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು.

ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಮುದುಗೆರೆ ಬಳಿಯಲ್ಲಿ ಕಾರು ಪಲ್ಟಿಯಾಗಿ, ಕಾರಿನಲ್ಲಿದ್ದ ಸಂಸದ ಪ್ರತಾಪ್ ಸಿಂಹ, ಪತ್ನಿ, ಮಗಳು ಪ್ರಾಣಾಪಾಯದಿಂದ ಪಾರಾಗಿ ದ್ದಾರೆ. ಈ ಸಂಬಂಧ ಚನ್ನಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.