Monday, 9th December 2019

ಮುಳುಗಡೆ ಜಿಲ್ಲೆಗೆ ಅಧಿಕಾರದ ಬಾಹುಬಲ

ಕೆಳಮನೆ-ಮೇಲ್ಮನೆಗೆ ಬಾಗಲಕೋಟೆ ನಾಯಕರೇ ಕಿಂಗ್ ಕೋಟೆ ನಾಡಿಗೆ ಕಾಂಗ್ರೆೆಸ್‌ನ ಡಬಲ್ ಧಮಾಕಾ ಗಿಫ್‌ಟ್‌

ರಾಘವೇಂದ್ರ ಕಲಾದಗಿ ಬಾಗಲಕೋಟೆ
ಜಿಲ್ಲೆೆಗೆ ಕಾಂಗ್ರೆೆಸ್ ಹೈಕಮಾಂಡ್ ದಸರಾ-ದೀಪಾವಳಿಯ ಡಬಲ್ ಧಮಾಕಾ ಉಡುಗೊರೆಯನ್ನು ನೀಡಿದೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆೆಸ್ ಮಕಾಡೆ ಮಲಗಿದ್ದರೂ ಪಕ್ಷ ಚೇತರಿಕೆಗೆ ಇಂಬು ನೀಡುವಂಥ ಹುದ್ದೆೆಗಳಿಗೆ ಸೂಕ್ತ ವ್ಯಕ್ತಿಿಗಳ ನೇಮಕದ ಮೂಲಕ ಆಡಳಿತಾರೂಢ ಸರಕಾರಕ್ಕೆೆ ಛಾಟಿ ಬೀಸುವ ಮಹತ್ತರ ಹೆಜ್ಜೆೆ ಇಡಲಾಗಿದೆ.

ರಾಜ್ಯ ವಿಧಾನಸಭೆ ಮತ್ತು ಮೇಲ್ಮನೆ ಪ್ರತಿಪಕ್ಷ ನಾಯಕನ ಸ್ಥಾಾನಕ್ಕಾಾಗಿ ನಡೆದ ಪ್ರಬಲ ಲಾಬಿಯಲ್ಲಿ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸಿದ್ದು, ಈಗಿನ ಬಾದಾಮಿ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬಹಳಷ್ಟು ಪ್ರಯಾಸದಿಂದ ವಿಧಾನಸಭೆ ಪ್ರತಿಪಕ್ಷ ಸ್ಥಾಾನವನ್ನು ಗಿಟ್ಟಿಿಸಿಕೊಳ್ಳುವಲ್ಲಿ ಯಶ ಕಂಡಿದ್ದಾಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆೆಸ್ ಸರಕಾರದ ಅವಧಿಯಲ್ಲಿ ಮಂತ್ರಿಿಗಿರಿಯಿಂದ ವಂಚಿತರಾಗಿದ್ದ ಮೇಲ್ಮನೆ ಹಿರಿಯ ಸದಸ್ಯ ಎಸ್.ಆರ್.ಪಾಟೀಲ ರಾಜಕೀಯವಾಗಿ ನೇಪಥ್ಯಕ್ಕೆೆ ಸರಿದೇ ಬಿಟ್ಟಿಿದ್ದರು ಎನ್ನುವ ಅನುಮಾನ ಅವರ ಬೆಂಬಲಿಗರನ್ನು ಕಾಡಲಾರಂಭಿಸಿತ್ತು. ಮೇಲ್ಮನೆ ಸದಸ್ಯತ್ವ ಬಿಟ್ಟರೆ ಯಾವುದೇ ಸ್ಥಾಾನಮಾನಗಳು ಇರಲಿಲ್ಲ. ಇದೀಗ ಮೇಲ್ಮನೆ ಪ್ರತಿಪಕ್ಷ ಸ್ಥಾಾನಕ್ಕಾಾಗಿ ನಡೆದ ತೀವ್ರ ಪೈಪೋಟಿಯಲ್ಲಿ ಫೀನಿಕ್‌ಸ್‌ ಪಕ್ಷಿಿಯಂತೆ ಮತ್ತೆೆ ಎದ್ದು ಬಂದಿದ್ದಾಾರೆ.

ಸಿದ್ದರಾಮಯ್ಯ ಮತ್ತು ಎಸ್.ಆರ್.ಪಾಟೀಲ ಇಬ್ಬರೂ ಬಾಗಲಕೋಟೆ ಜಿಲ್ಲೆೆಗೆ ಸೇರಿದವರು ಎನ್ನುವುದು ಸದ್ಯದ ವಿಶೇಷವಾಗಿದೆ. ಕೆಳಮನೆ ಹಾಗೂ ಮೇಲ್ಮನೆ ಎರಡೂ ಬಾಗಲಕೋಟೆ ಜಿಲ್ಲೆೆಯ ಪ್ರತಿನಿಧಿಗಳಿಗೆ ಸಿಕ್ಕಿಿರುವುದು ಜಿಲ್ಲಾಾ ಕಾಂಗ್ರೆೆಸ್ ಪಾಲಿಗೆ ಖುಷಿಯ ಸಂಗತಿಯಾಗಿದೆ. ಸಾರ್ವತ್ರಿಿಕ ಚುನಾವಣೆಗಳಲ್ಲಿ ಕಾಂಗ್ರೆೆಸ್ ಸೋತು ಸುಣ್ಣವಾಗಿರುವ ಬಾಗಲಕೋಟೆ ಜಿಲ್ಲೆೆಗೆ ಆದ್ಯತೆ ನೀಡಿರುವುದು ಅಚ್ಚರಿಯ ಸಂಗತಿ ಒಂದಡೆಯಾದರೆ ಪಕ್ಷಕ್ಕೆೆ ಹೊಸ ಕಳೆ ನೀಡುವಲ್ಲಿ ಇಬ್ಬರೂ ನಾಯಕರ ಶ್ರಮವೂ ಅಷ್ಟೆೆ ಮುಖ್ಯವಾಗಿದೆ.

ಸಿದ್ದರಾಮಯ್ಯ ಮತ್ತು ಎಸ್.ಆರ್.ಪಾಟೀಲ ಸದನಗಳ ಒಳಗೆ ಮತ್ತು ಹೊರಗೆ ಪ್ರತಿಪಕ್ಷ ನಾಯಕರಾಗಿ ರಚನಾತ್ಮಕವಾಗಿ ಕಾರ್ಯ ನಿರ್ವಹಿಸುವ ರಾಜ್ಯ ಮತ್ತು ಜಿಲ್ಲೆೆಯಲ್ಲಿ ಕಳೆದು ಹೋಗಿರುವ ಕಾಂಗ್ರೆೆಸ್ ಕಟ್ಟಬೇಕಿದೆ. ಆ ನಿಟ್ಟಿಿನಲ್ಲಿ ಹೇಗೆ ನಡೆದುಕೊಳ್ಳುತ್ತಾಾರೆ ಎನ್ನುವುದಕ್ಕೆೆ ಭವಿಷ್ಯದ ಕಾಲವೇ ಉತ್ತರಿಸಲಿದೆ.

ಈಗಾಗಲೇ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಗೋವಿಂದ ಕಾರಜೋಳ ಉಪಮುಖ್ಯಮಂತ್ರಿಿ ಆಗಿದ್ದಾಾರೆ. ಇವರೆಲ್ಲರೂ ಒಟ್ಟಾಾಗಿ, ಸಿಕ್ಕಿಿರುವ ಅವಕಾಶಗಳನ್ನು ಬಳಸಿಕೊಂಡು ಜಿಲ್ಲೆೆಯ ಅಭಿವೃದ್ಧಿಿಗೂ ಒಂದಿಷ್ಟು ಕೆಲಸ ಮಾಡಬೇಕಿದೆ. ವಿಶೇಷವಾಗಿ ಯುಕೆಪಿ ಕಾಮಗಾರಿ, ಆಲಮಟ್ಟಿಿ ಜಲಾಶಯದ ಎತ್ತರದ ಹೆಚ್ಚಳ ಮತ್ತು ನೀರಾವರಿ ವಿಷಯದಲ್ಲಿ ಜಿಲ್ಲೆೆಗೆ ನ್ಯಾಾಯ ಕೊಡಿಸುವ ಕೆಲಸ ಮಾಡಬೇಕಿದೆ. ಅದನ್ನು ಎಷ್ಟರ ಮಟ್ಟಿಿಗೆ ನಿಭಾಯಿಸಲಿದ್ದಾಾರೆ ಎನ್ನುವುದದನ್ನು ಕಾದು ನೋಡಬೇಕಿದೆ.

ಮುಳುಗಡೆ ಜಿಲ್ಲೆೆಗೆ ಅಧಿಕಾರದ ಬಾಹುಬಲ
ಈಗಾಗಲೇ ಶತಮಾನ ಕಂಡ ನೆರೆ ದುರಂತಗಳ ವೈಫಲ್ಯಗಳನ್ನು ಜನರ ಮುಂದೆ ಸಾದರಪಡಿಸಲು ಸೂಕ್ತ ಹುದ್ದೆೆಗಳು ಜಿಲ್ಲೆೆಯ ಮಡಿಲಿಗೆ ಲಭ್ಯವಾಗಿದ್ದು ವಿಶೇಷ. ಹಲವು ದಶಕಗಳಿಂದ ಸದಾ ಸುದ್ದಿಯಲ್ಲಿರುವ ಆಲಮಟ್ಟಿಿ ಸಂತ್ರಸ್ತರ ಸಮಸ್ಯೆೆಗಳಿಗೆ ಮುಕ್ತಿಿ ಕಾಣಿಸಲು ಸದಾವಕಾಶ ದೊರೆತಿದ್ದು, ಎಷ್ಟರ ಮಟ್ಟಿಿಗೆ ನ್ಯಾಾಯ ಕಲ್ಪಿಿಸುವರು ಎಂಬುದನ್ನು ಭವಿಷ್ಯದ ದಿನಗಳಲ್ಲಿ ಕಾಣಬಹುದು. ಮುಳುಗಡೆ ಜಿಲ್ಲೆೆಗೆ ಈಗ ಅಧಿಕಾರದ ಬಾಹುಬಲ ದೊರೆತಿದೆ. ಬಿ.ಎಸ್.ಯಡಿಯೂರಪ್ಪ ಸರಕಾರದಲ್ಲಿ ಬಿಜೆಪಿಯು ಮುಧೋಳ ಶಾಸಕ ಗೋವಿಂದ ಕಾರಜೋಳರಿಗೆ ಉಪಮುಖ್ಯಮಂತ್ರಿಿ ನೀಡಿದರೆ, ಇತ್ತ ಕಾಂಗ್ರೆೆಸ್‌ನಲ್ಲಿ ಮೇಲ್ಮನೆ-ಕೆಳಮನೆಯ ಪ್ರತಿಪಕ್ಷ ಸ್ಥಾಾನಗಳು ಸಿಕ್ಕಿಿವೆ.

Leave a Reply

Your email address will not be published. Required fields are marked *