Tuesday, 27th October 2020

ದೃಶ್ಯಂ 2 ಚಿತ್ರದ ಶೂಟಿಂಗ್‌ಗೆ ಮುಹೂರ್ತ ಫಿಕ್ಸ್

ಕೊಚ್ಚಿ: ದೃಶ್ಯಂ ಚಿತ್ರದ ಯಶಸ್ಸಿನ ನಂತರ, ಈಗ ಬಹುಭಾಷಾ ನಟ ಮೋಹನ್ ಲಾಲ್ ಅವರು ನಟನೆಯ ದೃಶ್ಯಂ 2 ಚಿತ್ರದ ಶೂಟಿಂಗ್‌ ಕೊಚ್ಚಿಯಲ್ಲಿ ಆರಂಭಗೊಂಡಿದೆ.

ತುಂಬಾ ಸಿಂಪಲ್ಲಾಗಿ ಶೂಟಿಂಗಿಗೆ ಸಿದ್ದತೆ ನಡೆದಿದೆ. ಶೂಟಿಂಗ್ ಸೆಟ್ ನಲ್ಲಿ ಪೂಜೆ ಇಟ್ಟು, ಶೂಟಿಂಗ್ ಆರಂಭಕ್ಕೆ ಮುಹೂರ್ತ ಫಿಕ್ಸ್‌ ಮಾಡಲಾಗಿದೆ. ಕಳೆದ ಮಾರ್ಚ್‌‌ನಲ್ಲಿ ಕೋವಿಡ್ ನಿಂದಾಗಿ ದೇಶಾದ್ಯಂತ ಲಾಕ್ ಡೌನ್ ಬಳಿಕ ಚಿತ್ರದ ಶೂಟಿಂಗಿಗೆ ವೇದಿಕೆ
ಸಿದ್ದವಾಗಿದೆ. ಶೂಟಿಂಗಿಗೆ ಸಂಬಂಧಪಟ್ಟವರು ಈಗಾಗಲೇ ಕೊರೊನಾ ಟೆಸ್ಟ್‌ ಮಾಡಿಸಿಕೊಂಡಿರುವ ಕಾರಣ, ಶೂಟಿಂಗ್ ಸರಾಗ ವಾಗಿ ಸಾಗುವ ನಿರೀಕ್ಷೆಯಿದೆ.

ಶೂಟಿಂಗ್ ಕುರಿತ ಕೆಲವು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚಿತ್ರದ ನಿರ್ದೇಶಕ ಜೀತು ಜೋಸೆಫ್‌ ಹಾಗೂ ತಂಡದವರು ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೇ, ಮೋಹನ್‌ ಲಾಲ್‌ ಹಾಗೂ ನಿರ್ದೇಶಕ ಜೀತು ಜೋಸೆಫ್ ರಾಮ್ ಚಿತ್ರದ ಶೂಟಿಂಗ್‌ನಲ್ಲೂ ಒಟ್ಟಾಗಿದ್ದಾರೆ.

ದೃಶ್ಯ ಚಿತ್ರ ತಮಿಳಿನಲ್ಲಿ ಮೂಡಿ ಬಂದಿದ್ದು, ನಟ ಕಮಲ್ ಹಸನ್‌, ಹಿಂದಿಯಲ್ಲಿ ಅಜಯ್ ದೇವಗನ್ ಹಾಗೂ ಕನ್ನಡದಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ನಟಿಸಿದ್ದರು.

Leave a Reply

Your email address will not be published. Required fields are marked *