Monday, 3rd October 2022

ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ

ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿ ದಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಶುಕ್ರವಾರ ಮಧ್ಯಾಹ್ನ ಪಶ್ಚಿಮ ಬೊರಿವಲಿಯಲ್ಲಿರುವ ಸಾಯಿಬಾಬಾ ನಗರ ದಲ್ಲಿ ನಾಲ್ಕು ಅಂತಸ್ತಿನ ಗೀತಾಂಜಲಿ ಕಟ್ಟಡ ಕುಸಿದು ಬಿದ್ದಿದೆ. ತುಂಬಾ ಹಳೆಯ ಕಟ್ಟಡ ಇದಾಗಿದ್ದು, ತುಂಬಾ ದಿನಗಳಿಂದ ಖಾಲಿ ಇತ್ತು ಎನ್ನಲಾಗಿದೆ. ಕಟ್ಟಡ ಕುಸಿತದ ವೇಳೆ ಕಟ್ಟಡ ಸಮೀಪ ಯಾರೂ ಇರಲಿಲ್ಲ.

ವಿಚಾರ ತಿಳಿಯುತ್ತಲೇ ಅಗ್ನಿಶಾಮಕ ದಳ ದೌಡಾಯಿಸಿದ್ದು, ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಶಿಥಿಲಗೊಂಡಿರುವ ಈ ಕಟ್ಟಡ ಬೀಳುವ ಹಂತದಲ್ಲಿದ್ದು ಜನರನ್ನು ಅಲ್ಲಿಂದ ಖಾಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಂಟು ಅಗ್ನಿಶಾಮಕದಳದ ವಾಹನ, ಎರಡು ರಕ್ಷಣಾ ದಳದ ವ್ಯಾನ್, ಮೂರು ಆಂಬುಲೆನ್ಸ್ ಘಟನಾ ಸ್ಥಳದಲ್ಲಿವೆ ಎನ್ನಲಾಗಿದೆ.

BMC ನೀಡಿದ ಮಾಹಿತಿಯ ಪ್ರಕಾರ, ಕಟ್ಟಡವು ಶಿಥಿಲವಾಗಿದೆ ಎಂದು ಈ ಹಿಂದೆಯೇ ಘೋಷಿಸಲಾಗಿತ್ತು ಮತ್ತು ಅದನ್ನು ಖಾಲಿ ಮಾಡಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.