Wednesday, 5th October 2022

ಇಂದು ಗೆದ್ದ ತಂಡದ ಪ್ಲೇ ಆಫ್ ಕನಸು ನನಸು !

ಶಾರ್ಜಾ: ಐಪಿಎಲ್(14 ನೇ ಆವೃತ್ತಿ) ನಲ್ಲಿ ಈಗಾಗಲೇ ಮೂರು ತಂಡಗಳೂ ಪ್ಲೇ ಆಫ್ ಟಿಕೆಟ್ ಪಡೆದಿದ್ದು, ನಾಲ್ಕನೇ ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಈ ಪೈಕಿ ರಾಜಸ್ಥಾನ ರಾಯಲ್ಸ್ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಗಳು ಮಂಗಳವಾರ ಮುಖಾಮುಖಿ ಯಾಗುತ್ತಿದೆ. ಶಾರ್ಜಾದಲ್ಲಿ ನಡೆಯುವ ಪಂದ್ಯದಲ್ಲಿ ಗೆದ್ದ ತಂಡದ ಪ್ಲೇ ಆಫ್ ಕನಸು ಚಿಗುರಲಿದೆ. ಸೋತ ತಂಡ ಅದೃಷ್ಟ ಬಲವನ್ನೇ ನೆಚ್ಚಿಕೊಳ್ಳಬೇಕು.

ಉಭಯ ತಂಡಗಳು 10 ಅಂಕ ಸಂಪಾದಿಸಿವೆ. ಅಂಕಪಟ್ಟಿಯಲ್ಲಿ ರಾಯಲ್ಸ್ ಮತ್ತು ಮುಂಬೈ ತಂಡಗಳು ಕ್ರಮವಾಗಿ ಆರು ಮತ್ತು ಏಳನೇ ಸ್ಥಾನದಲ್ಲಿದೆ.

ಸಂಭಾವ್ಯ ತಂಡಗಳು:

ರಾಜಸ್ಥಾನ: ಎವಿನ್ ಲೆವಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾ &ವಿ.ಕೀ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ಆಕಾಶ್ ಸಿಂಗ್/ಶ್ರೇಯಸ್ ಗೋಪಾಲ್, ಮಯಾಂಕ್ ಮಾರ್ಕಂಡೆ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್.

ಮುಂಬೈ: ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿ.ಕೀ), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೈರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್