Sunday, 27th November 2022

ಸಂಗೀತ ನಿರ್ದೇಶಕ ವಿ.ಹರಿಕೃಷ್ಣರಿಗೆ ಜನ್ಮದಿನದ ಸಂಭ್ರಮ

ಬೆಂಗಳೂರು: ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರಿಗೆ ಗುರುವಾರ ಜನ್ಮದಿನದ ಸಂಭ್ರಮ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ. ದರ್ಶನ್ ಅವರ ಹಲವು ಸಿನಿಮಾಗಳಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ.

ತನ್ನ ವೈವಿಧ್ಯಮಯ ಟ್ಯೂನುಗಳಿಂದ ಸಿನಿ ರಸಿಕರ ಮನಗೆದ್ದಿರುವ ಮ್ಯೂಸಿಕ್ ಮಾಂತ್ರಿಕ ಹರಿಕೃಷ್ಣಗೆ ಹುಟ್ಟುಹಬ್ಬದ ಹಾರ್ದಿಕ  ಶುಭಾಶಯಗಳು. ಇನ್ನೂ ಹೆಚ್ಚು ಕಲಾಸೇವೆ ಹರಿಯಿಂದಾಗಲಿ ಎಂದು ಆಶಿಸು ತ್ತೇನೆ ಎಂದು ಚ್ಯಾಲೆಂಜಿಂಗ್ ಸ್ಟಾರ್‌ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.