Monday, 20th January 2020

91ನೇ ವಸಂತಕ್ಕೆ ಕಾಲಿಟ್ಟ ಎಂ.ವಿ.ರಾಜಶೇಖರನ್

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಜೀವನದ ಮೌಲ್ಯಗಳನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿಿರುವ ಕೇಂದ್ರ ಮಾಜಿ ಸಚಿವ ಎಂ.ವಿ. ರಾಜಶೇಖರನ್ ಅವರು ಸೆ. 12ರಂದು (91 ವರ್ಷ) ಜನ್ಮಶತಮಾನೋತ್ಸವ.

12-09-1928ರಲ್ಲಿ ಬೆಂಗಳೂರು ಗ್ರಾಾಮಾಂತರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಜನಿಸಿರುವ ಎಂ.ವಿ. ರಾಜಶೇಖರನ್ ಅವರು ಕರ್ನಾಟಕದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. 1947-48ರ ಮೈಸೂರು ಚಲೋ ಚಳವಳಿಯಲ್ಲಿ ಸಕ್ರಿಿಯವಾಗಿ ಪಾಲ್ಗೊೊಂಡಿದ್ದ ಎಂ.ವಿ. ರಾಜಶೇಖರನ್ ಅವರು, ಅಪ್ಪರ್ (ಮಾಧ್ಯಮಿಕ ಶಾಲೆಯಲ್ಲಿ) ವ್ಯಾಾಸಂಗ ಮಾಡುತ್ತಿಿದ್ದಾಗಲೇ ಭಾರತದ ಸ್ವಾಾತಂತ್ರ್ಯ ಹೋರಾಟದ ಮೌಲ್ಯಗಳಿಗೆ ತಮ್ಮನ್ನ ತೆತ್ತುಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾಾನಿಲಯದಲ್ಲಿ ಪದವಿ ವ್ಯಾಾಸಂಗ ಮಾಡುತ್ತಿಿದ್ದಾಗ ಮಿತ್ರಮೇಳ ಎಂಬ ಸಾಂಸ್ಕೃತಿಕ ಸಂಘಟನೆಯಲ್ಲಿ ದುಡಿದು ತಮ್ಮ ಮುಂದಿನ ಬದುಕನ್ನು ರಚನಾತ್ಮಕ ಕೆಲಸಗಳಿಗೆ ಮೀಸಲಾಗಿಟ್ಟಿಿದ್ದಾರೆ.

1953ರಲ್ಲಿ ದೆಹಲಿ ವಿಶ್ವವಿದ್ಯಾಾನಿಲಯದಲ್ಲಿ ಕಾನೂನು ವ್ಯಾಾಸಂಗ ಮುಗಿಸುವ ಮುಂಚೆಯೇ ತಮ್ಮ ತಂದೆಯವರ ಅಕಾಲ ಮರಣದಿಂದ ಮರಳವಾಡಿಗೆ ಮರಳಿ ವ್ಯವಸಾಯಕ್ಕೆೆ ತಮ್ಮ ಸಂಪೂರ್ಣ ಸಮಯ ಮೀಸಲಿಟ್ಟು ಪ್ರಗತಿಪರ ರೈತರೆನಿಸಿಕೊಂಡಿದ್ದಾರೆ. ಅಖಿಲ ಭಾರತ ಕಾಂಗ್ರೆೆಸ್ ರಾಜ್ಯ ಘಟಕದ ವಿವಿಧ ಸ್ಥಾಾನಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿತ್ತು. ವಿಶೇಷವಾಗಿ ಯೂತ್ ಕಾಂಗ್ರೆೆಸ್ ರಾಜ್ಯದಲ್ಲಿ ಬಲಗೊಳ್ಳಲು ಅವರು ಕಾರಣಕರ್ತರಾಗಿದ್ದಾರೆ. 1967ರಲ್ಲಿ 50 ಸಾವಿರಕ್ಕೂ ಹೆಚ್ಚಿಿನ ಮತಗಳಿಂದ ಕನಕಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆೆಯಾದ ಎಂ.ವಿ.ರಾಜಶೇಖರನ್ ಯಾವ ಲೋಕಸಭಾ ಸದಸ್ಯರೂ ಯೋಚಿಸದ ರೀತಿ ಚಿಂತಿಸಿ, ಅವುಗಳನ್ನು ಅನುಷ್ಠಾಾನ ಮಾಡಿದರು.

ಮಂಚನಬೆಲೆ ನೀರಾವರಿ ಯೋಜನೆ ಹೀಗೆಯೇ ಅನುಷ್ಠಾಾನಗೊಂಡ ಒಂದು ಯೋಜನೆಯಾಗಿದೆ. 1978ರಲ್ಲಿ ಉತ್ತರಹಳ್ಳಿಿ ವಿಧಾನಸಭಾ ಕ್ಷೇತ್ರದಿಂದ ಜನತಾಪಕ್ಷದ ಅಭ್ಯರ್ಥಿಯಾಗಿ ಆಯ್ಕೆೆಯಾದ ರಾಜಶೇಖರನ್ ರಚನಾತ್ಮಕ ಕೆಲಸಗಳಿಂದ ತಮ್ಮ ಕ್ಷೇತ್ರದ ಎಲ್ಲೆಡೆ ಪ್ರಸಿದ್ಧಿಿಯಾಗಿದ್ದರು. 1999ರಲ್ಲಿ ವಿಧಾನಪರಿಷತ್ತಿಿನ ಸದಸ್ಯತ್ವ, 2002ರಲ್ಲಿ ರಾಜ್ಯಸಭಾ ಸದಸ್ಯತ್ವ ಸ್ಥಾಾನವು ಅವರನ್ನು ಅರಸಿಕೊಂಡು ಬಂದಿತು. ಭಾರತ ಸರಕಾರದಲ್ಲಿ ಯೋಜನಾ ರಾಜ್ಯ ಮಂತ್ರಿಿಯಾಗಿ ದುಡಿದರು.

2009ರವರೆಗೂ ಬದ್ಧತೆ, ಸಂಘಟನೆ ಹಾಗೂ ವಿಚಾರಶೀಲತೆಗೆ ರಾಜಶೇಖರನ್ ಸದಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗ್ರಾಾಮೀಣ ಅಭಿವೃದ್ಧಿಿ ಕುರಿತಂತೆ 100ಕ್ಕೂ ಹೆಚ್ಚಿಿನ ಪ್ರಬಂಧಗಳನ್ನು ಮಂಡಿಸಿದ್ದಾರೆ. ರಾಜಶೇಖರನ್ ಅವರ ಏಷ್ಯಾಾ ಗ್ರಾಾಮೀಣ ಅಭಿವೃದ್ಧಿಿ ಸಂಸ್ಥೆೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಾಮೀಣ ಅಭಿವೃದ್ಧಿಿಗಾಗಿ ಶ್ರಮಿಸುತ್ತಿಿರುವ ಸರಳತೆ, ಸಜ್ಜನಿಕೆ, ತಾಳ್ಮೆೆಗಳನ್ನು ರೂಢಿಸಿಕೊಂಡಿರುವ ರಾಜಶೇಖರನ್ ಮಹಾತ್ಮ ಗಾಂಧೀಜಿ ಹೇಳಿದ ಜೀವನ ಮೌಲ್ಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿಿದ್ದಾರೆ.

ಮೇಲ್ಜಾಾತಿಯಲ್ಲಿ ಹುಟ್ಟಿಿದರೂ, ಬಹಳ ದೊಡ್ಡ ಜಮೀನ್ದಾಾರ ಕುಟುಂಬದದಿಂದ ಬಂದಿದ್ದರೂ ಮಾಜಿ ಮುಖ್ಯಮಂತ್ರಿಿ ನಿಜಲಿಂಗಪ್ಪ ಅವರ ಅಳಿಯ ಎಂಬ ಹೆಗ್ಗಳಿಕೆ ಇದ್ದರೂ, 1960ರಿಂದ ಇಲ್ಲಿಯ ತನಕ ರಾಜಕೀಯ ರಂಗದಲ್ಲಿದ್ದು, ಹಲವಾರು ಹುದ್ದೆೆಗಳನ್ನು ಅಲಂಕರಿಸಿದ್ದಾಾರೆ. ಪ್ರಾಾಮಾಣೀಕತೆ, ಸರಳತೆ, ಸಜ್ಜನಿಕೆಗಳನ್ನು ಬಿಟ್ಟುಕೊಡದವರು. ನಾಣು ಯಾವುದೇ ಮಹಾತ್ವಾಾಕಾಂಕ್ಷೆೆ ಇಟ್ಟುಕೊಂಡು ರಾಜಕೀಯ ಕ್ಷೇತ್ರಕ್ಕೆೆ ಬಂದವನಲ್ಲ. ನನಗೆ ರಾಜಕೀಯಕ್ಕಿಿಂತ ಬಹಳ ಮುಖ್ಯವಾದುದು. ಬದಲಾವಣೆಯಾದರೆ ನಾನು ನಿರಾಳ ಎಂದು ವೇದಿಕೆಗಳಲ್ಲಿ ನುಡಿಯುತ್ತಿಿರುತ್ತಾಾರೆ.

ಇವರು ಯಾವುದೇ ಮಹತ್ವಾಾಕಾಂಕ್ಷೆ ಇಟ್ಟುಕೊಂಡು ರಾಜಕೀಯ ಕ್ಷೇತ್ರಕ್ಕೆೆ ಬಂದವನಲ್ಲ. ರಾಜಕೀಯಕ್ಕಿಿಂತ ಅಭಿವೃದ್ಧಿಿ ತುಂಬಾ ಪ್ರಿಿಯವಾದುದು. ಗ್ರಾಾಮೀಣ ಅಭಿವೃದ್ಧಿಿ, ಕೃಷಿ, ಗುಡಿ ಕೈಗಾರಿಕೆ ಹಾಗೂ ದೀನದಲಿತರ ಉದ್ಧಾಾರವೇ ಮುಖ್ಯ. ಗ್ರಾಾಮೀಣ ಭಾರತದ ಅಭಿವೃದ್ಧಿಿಯನ್ನು ಕುರಿತು ಇವರ ಚಿಂತನೆ. ಗ್ರಾಾಮೀಣ ಜನತೆಯಲ್ಲಿ ಜಾಗೃತಿ ಮೂಡಿ, ಅವರ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆಯಾಗುವ ತವಕ ಇವರಲ್ಲಿದೆ. ಅದೇ ಇವರ ಕನಸು ಜೀವನದ ಗುರಿ.

ಮನುಷ್ಯ ಸಂಘಜೀವಿ. ಆತನ ಮೇಲೆ ಎಲ್ಲಾ ರೀತಿಯ ಪ್ರಭಾವಗಳು ಬೀಳುತ್ತವೆ. ಅಂತಹ ಪ್ರಭಾವಗಳನ್ನು ಅರಗಿಸಿಕೊಂಡು ಬೆಳೆಯುತ್ತಾಾ ಹೋದರೆ ಆತ ಪರಿಪಕ್ವತೆಯತ್ತ ಸಾಗುತ್ತಾಾನೆ. ನನ್ನ ಮೇಲೆ ಬಾಲ್ಯದಲ್ಲಿ ನಮ್ಮ ತಾತ ಮುದ್ದಮಲ್ಲಶೆಟ್ಟರು ಗಾಢವಾದ ಪ್ರಭಾವ ಬೀರಿದ್ದರು. ಗುರುಹಿರಿಯರಲ್ಲಿ ಭಕ್ತಿಿ ಮೂಡಲು ನನ್ನ ತಂದೆಯವರು ಕಾರಣಕರ್ತರು ಎಂದು ಹೇಳಬಹುದು. ನಮ್ಮ ತಾಯಿ ಬಸಮ್ಮನವರಂತೂ ನನ್ನಲ್ಲಿ ಮಾನವೀಯ ಗುಣಗಳು ಸ್ಫುರಿಸಲು ಪ್ರೇರಕರಾದರು. ಸೋದರ ಮಾವ ವೀರಭದ್ರಯ್ಯ ಮತ್ತಿಿತರರು ನನ್ನನ್ನು ಕರುಣೆಯಿಂದ ನನಗೆ ಹೆಣ್ಣು ಕೊಟ್ಟ ನಿಜಲಿಂಗಪ್ಪನವರನ್ನಂತೂ ಮರೆಯುವ ಹಾಗಿಲ್ಲ. ಅವರ ವ್ಯಕ್ತಿಿತ್ವದ ಅನೇಕ ಗುಣಗಳು ನನ್ನನ್ನು ರೂಪಿಸಿವೆ. ವಿಶೇಷವಾಗಿ ನಿಜಿಲಿಂಗಪ್ಪನವರ ಸರಳತೆ, ಪ್ರಾಾಮಾಣಿಕತೆ, ತಾತ್ತ್ವಿಕ ಸಿದ್ಧಾಾಂತಕ್ಕಾಾಗಿ ಅಧಿಕಾರ ತ್ಯಾಾಗದ ಗುಣ-ಇವು ನನಗೆ ಆದರ್ಶವಾಗಿವೆ. ನನ್ನ ವ್ಯಕ್ತಿಿತ್ವ ಗಟ್ಟಿಿಯಾಗಲು ಇವುಗಳು ನನಗೆ ಸಹಾಯಕವಾಗಿವೆ ಎಂದು ಎಂ.ವಿ.ರಾಜಶೇಖರನ್ ಅವರು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾಾರೆ.

Leave a Reply

Your email address will not be published. Required fields are marked *