Tuesday, 15th October 2019

ನಾಡಹಬ್ಬ ಸಂಭ್ರಮಕ್ಕೆ ಯೋಗಾಸನದ ಮೆರುಗು

ಫಿಟ್ ಇಂಡಿಯಾ ಪರಿಕಲ್ಪನೆಯಲ್ಲೇ ಜನರನ್ನು ಸದೃಢರನ್ನಾಗಿಸಲು ಹಲವು ಪ್ರಕಾರದ ಯೋಗಾಸನ

ಕೆ.ಬಿ.ರಮೇಶನಾಯಕ ಮೈಸೂರು
ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಪರಿಕಲ್ಪನೆ ಜತೆಗೆ ಯೋಗ ನಗರಿ ಮೈಸೂರನ್ನು ಮತ್ತಷ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲು ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ವಿಭಿನ್ನ ಯೋಗಾಸನ ಕಾರ್ಯಕ್ರಮ ರೂಪಿಸಲು ಜಿಲ್ಲಾಾಡಳಿತ ಮುಂದಾಗಿದೆ.

ಯೋಗದ ಮೂಲಕವೇ ಇಡೀ ಜಗತ್ತಿಿನ ಗಮನ ಸೆಳೆದಿರುವ ಮೈಸೂರಿನಲ್ಲಿ ಈ ಬಾರಿ ಫಿಟ್ ಇಂಡಿಯಾ ಪರಿಕಲ್ಪನೆಯಲ್ಲೇ ಜನರನ್ನು ಸದೃಢರನ್ನಾಾಗಿಸಲು ಹಲವು ಪ್ರಕಾರದ ಯೋಗಾಸನ ನಡೆಸಲು ಯೋಜನೆ ರೂಪಿಸಲಾಗಿದೆ.
ಸಾಂಸ್ಕೃತಿಕ, ಪಾರಂಪರಿಕ, ಸ್ವಚ್ಛ ಮೈಸೂರನ್ನು ಆರೋಗ್ಯ ಮೈಸೂರನ್ನಾಾಗಿಸುವ ನಿಟ್ಟಿಿನಲ್ಲಿ ದಸರಾ ಆಚರಣೆ ವೇಳೆ ಹಮ್ಮಿಿಕೊಳ್ಳುವ ಯೋಗ ದಸರಾ ಕಾರ್ಯಕ್ರಮದಲ್ಲಿ ಯೋಗದ ಟಚ್ ಕೊಟ್ಟು, ಅದಕ್ಕಾಾಗಿ ಯೋಗ ನೃತ್ಯ ರೂಪಕ, ಯೋಗ ವಾಹಿನಿ, ಯೋಗ ಸಂಭ್ರಮ, ಯೋಗ ಸರಪಳಿ, ಸ್ವಚ್ಛ ಸರ್ವೇಕ್ಷಣಾ ಯೋಗದಂತಹ ಬಗೆ ಬಗೆಯ ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ. ಸೆ.30 ರಂದು ಯೋಗ ದಸರಾ ಕಾರ್ಯಕ್ರಮ ಉದ್ಘಾಾಟನೆಯಾಗಲಿದ್ದು, ಕಳೆದ ವರ್ಷಕ್ಕಿಿಂತ ಈ ಬಾರಿ 6 ದಿನಗಳವರೆಗೆ ವಿವಿಧ ಯೋಗಾಸನ ಪ್ರಕಾರಗಳನ್ನು ನಡೆಸಲಾಗುತ್ತದೆ. ದಾಖಲೆ ನಿರ್ಮಿಸಿರುವ ಮೈಸೂರಿನ ಯೋಗ ಪ್ರಿಿಯರಿಗೆ ಯೋಗದ ಹಬ್ಬವನ್ನು ಸವಿಯುವ ಸುವರ್ಣಾವಕಾಶ ಒದಗಿ ಬಂದಿದ್ದು, ಪ್ರತಿಯೊಬ್ಬರು ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಿಸಲಾಗುತ್ತಿಿದೆ.

ಮೈಸೂರಿನ ಕ್ರಾಾಫರ್ಡ್‌ಭವನದ ಎದುರಿನ ಒವೆಲ್ ಮೈದಾನದಲ್ಲಿ ಸೆ.30ರಂದು ಸಂಜೆ 5 ಗಂಟೆಗೆ ಯೋಗ ದಸರಾ ಉದ್ಘಾಾಟನೆಯಾಗಲಿದ್ದು, ನಂತರ ಐದಕ್ಕೂ ಹೆಚ್ಚು ತಂಡಗಳಿಂದ ಯೋಗ ನೃತ್ಯ ರೂಪಕವನ್ನು ಪ್ರದರ್ಶನ ನೀಡಲಾಗುತ್ತದೆ. ದಸರಾ ಉತ್ಸವದಲ್ಲಿ ಮೊಟ್ಟಮೊದಲ ಬಾರಿಗೆ ಮಾಧ್ಯಮ ಮತ್ತು ಪತ್ರಿಿಕಾ ಪ್ರತಿನಿಧಿಗಳಿಗೆ ಯೋಗಾಭ್ಯಾಾಸ ಶಿಬಿರವನ್ನು ಅ.1ರಂದು ಬೆಳಗ್ಗೆೆ 8ರಿಂದ 9 ಗಂಟೆವರೆಗೆ ಕುವೆಂಪು ನಗರದ ಸೌಗಂಧಿಕ ಉದ್ಯಾಾನವನದಲ್ಲಿ ಏರ್ಪಡಿಸಲಾಗುತ್ತಿಿದೆ. ಸುದ್ದಿಗಳನ್ನು ಸಮಾಜಕ್ಕೆೆ ತಿಳಿಸುವ ಹಾಗೂ ಸದಾ ಜನರನ್ನು ಎಚ್ಚರಿಸುವ ಜವಾಬ್ದಾಾರಿಯನ್ನು ನಿರ್ವಹಿಸುತ್ತಿಿರುವ ಪತ್ರಕರ್ತರು ಯೋಗದ ಮೂಲಕ ತಮ್ಮ ಆರೋಗ್ಯವನ್ನು ವೃದ್ಧಿಿಸಿಕೊಳ್ಳಲು ವೇದಿಕೆ ಸಿದ್ಧಪಡಿಸಲಾಗಿದೆ.

8 ರಿಂದ 55 ವರ್ಷದವರಿಗೆ ಭಾಗವಹಿಸಲು ಅವಕಾಶ
ಸರ್ವಧರ್ಮ ಗುರುಗಳ ಸಮಕ್ಷಮದಲ್ಲಿ ಅ.2ರಂದು ಬೆಳಗ್ಗೆೆ 6ರಿಂದ 8 ರವರೆಗೆ ಮೈಸೂರು ಅರಮನೆ ಆವರಣದಲ್ಲಿ ಯೋಗ ಸಂಭ್ರಮ ನಡೆಯಲಿದೆ. ಈ ವೇಳೆ ಮೈಸೂರಿನ ಪ್ರಮುಖ ಧರ್ಮ ಪ್ರಚಾರಕರು ಭಾಗವಹಿಸಲಿದ್ದು, ಸಾಮೂಹಿಕ ಯೋಗಾಭ್ಯಾಾಸ ಮತ್ತು ಸೂರ್ಯನಮಸ್ಕಾಾರ ಮಾಡಲಾಗುತ್ತದೆ. ಎಲ್ಲ ಧರ್ಮಿಯರನ್ನು ಒಂದಾಗಿಸಿ, ಸರ್ವರು ಸಮಾನರು ಎಂದು ತಿಳಿಸುವುದು ಯೋಗ ಸಂಭ್ರಮದ ಉದ್ದೇಶವಾಗಿದೆ. ಅ.2 ರಂದು ಬೆಳಗ್ಗೆೆ 9 ರಿಂದ ಸಂಜೆ 5 ಗಂಟೆ ವರೆಗೆ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪಿ.ಕಾಳಿಂಗ ರಾವ್ ಸಭಾಂಗಣದಲ್ಲಿ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಗಳು ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ನೂರಾರು ಯೋಗಪಟುಗಳು ಭಾಗವಹಿಸಲಿದ್ದಾಾರೆ. ವಯೋಮಿತಿಗೆ ಅನುಗುಣವಾಗಿ ಯೋಗಾಸನ ಸ್ಪರ್ಧೆಗಳು ನಡೆಯಲಿದ್ದು, 8 ರಿಂದ 55 ವರ್ಷದ ವಯಸ್ಸಿಿನವರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ.

ಯೋಗ ಸರಪಳಿ
ನಗರದ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾಾರ್ಥಿಗಳಿಂದ ಅ.4ರಂದು ಬೆಳಗ್ಗೆೆ 9 ರಿಂದ 11ರವರೆಗೆ ಅರಮನೆ ಆವರಣದಲ್ಲಿ ವಿವಿಧ ಆಸನಗಳನ್ನು ಮಾಡುವ ಮೂಲಕ ಸರಪಳಿಯನ್ನು ಸೃಷ್ಟಿಿಸಲಿದ್ದಾಾರೆ.
ಮೈಸೂರಿಗೆ ಸ್ವಚ್ಛ ನಗರವೆಂಬ ಪಟ್ಟವನ್ನು ದೊರಕಿಸಿಕೊಟ್ಟ ನಗರಪಾಲಿಕೆ ಪೌರ ಕಾರ್ಮಿರಿಗಾಗಿಯೇ ವಿಶೇಷವಾಗಿ ಸ್ವಚ್ಛ ಸರ್ವೇಕ್ಷಣಾ ಯೋಗ ಶಿಬಿರವನ್ನು ಹಮ್ಮಿಿಕೊಳ್ಳಲಾಗಿದೆ. ನಗರವನ್ನು ಸ್ವಚ್ಛವಾಗಿ ಕಾಣುವಂತೆ ಮಾಡುವ ಪೌರ ಕಾರ್ಮಿಕರಲ್ಲಿ ಆರೋಗ್ಯದ ಅರಿವು ಮೂಡಿಸಲು ಅ.4ರಂದು ಕುವೆಂಪು ನಗರದ ಸೌಗಂಧಿಕ ಉದ್ಯಾಾನವನದಲ್ಲಿ ಶಿಬಿರವನ್ನು ಆಯೋಜಿಸಲಾಗುತ್ತಿಿದೆ.

ಯೋಗ ದಸರಾದ ಅಂತಿಮ ದಿನವಾದ ಅ.6ರಂದು ಬೆಳಗ್ಗೆೆ 6 ರಿಂದ 8 ರವರೆಗೆ ಯೋಗಚಾರಣ ಮತ್ತು ದುರ್ಗಾ ನಮಸ್ಕಾಾರವನ್ನು ಚಾಮುಂಡಿ ಬೆಟ್ಟ ಆವರಣದಲ್ಲಿ ನಡೆಸಲಾಗುತ್ತದೆ. ಯೋಗಾಸಕ್ತರು ಬೆಟ್ಟದ ಆವರಣದಲ್ಲಿ ಯೋಗಾಸನ ಮಾಡುವ ಮೂಲಕ ತಾಯಿ ಚಾಮುಂಡೇಶ್ವರಿಗೆ ನಮಸ್ಕರಿಸಲಿದ್ದಾಾರೆ.
ಗೀತಾಲಕ್ಷ್ಮೀ
ಆಯುರ್ವೇದ ಇಲಾಖೆ ಉಪ ನಿರ್ದೇಶಕಿ

Leave a Reply

Your email address will not be published. Required fields are marked *