Tuesday, 20th February 2024

ಅಪ್ರಾಪ್ತನನ್ನು ಕೆರೆಗೆ ತಳ್ಳಿ ದೈಹಿಕ ಹಿಂಸೆ ನೀಡಿದ ಯುವಕರು

ನಗರದ ಕಂಠೀರವ ಸ್ಟೇಡಿಯಂ ಬಳಿ ಇರುವ ಕೆರೆಗೆ ಅಪ್ರಾಾಪ್ತ ಬಾಲಕನನ್ನು ತಳ್ಳಿಿ ದೈಹಿಕ ಹಿಂಸೆ ನೀಡಿದ ಅಮಾನವೀಯ ಘಟನೆ ನಡೆದಿದ್ದು, ಘಟನೆಯ ವಿಡಿಯೊ ವೈರಲ್ ಆಗಿದೆ.
ನನಗೆ ಈಜು ಬರಲ್ಲ ಎಂದು ಅಪ್ರಾಾಪ್ತ ಬಾಲಕ ಕಿರುಚಾಡುತ್ತಿಿದ್ದರೂ ಬಿಡದೇ ಮೂರು ಜನ ಯುವಕರ ತಂಡ ನೀರಿನಲ್ಲಿ ಮುಳುಗಿಸಿ ಬಾಲಕನಿಗೆ ಹಿಂಸೆ ನೀಡಿದ್ದಾರೆ. ಜತೆಗೆ ಅವಾಚ್ಯ ಶಬ್ಧಗಳಿಂದ ಈ ಬಾಲಕನಿಗೆ ಬೈದಿದ್ದಾರೆ. ಮ್ಯಾಾನುಯಲ್, ಸೂರ್ಯ, ಚರಣ್ ಎಂಬ ಮೂರು ಜನ ಯುವಕರು ಅಪ್ರಾಾಪ್ತ ಬಾಲಕನನ್ನು ನೀರಿಗೆ ತಳ್ಳಿಿದ್ದಾರೆ. ಆ ಬಾಲಕ ಕಿರುಚಾಡಿದರೂ ಕರುಣೆ ತೋರದೆ ನೀರಿನಲ್ಲಿಯೇ ದೈಹಿಕ ಹಿಂಸೆ ಮಾಡಿದ್ದಾರೆ. ಇನ್ನು ಈ ಘಟನೆಯನ್ನು ಅವರೇ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣಕ್ಕೆೆ ಅಪ್ಲೋೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋೋಶ ವ್ಯಕ್ತವಾಗಿದೆ. ಇನ್ನು ಈ ಮೂರು ಜನ ಯುವಕರ ವಿರುದ್ಧ ಸಂಪಂಗಿರಾಮ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನನಗೆ ಉಸಿರಾಡಲು ಆಗುತ್ತಿಿಲ್ಲ ಬಿಟ್ಟು ಬಿಡಿ
ವಿಡಿಯೊದಲ್ಲಿ ಬಾಲಕ ಅಣ್ಣ ನನಗೆ ಈಜು ಬರುವುದಿಲ್ಲ. ನನಗೆ ಉಸಿರಾಡಲು ಆಗುತ್ತಿಿಲ್ಲ ಬಿಟ್ಟು ಬಿಡಿ ಎಂದು ಬೇಡಿಕೊಂಡರೂ ಬಿಡದ ಯುವಕರು ಬಾಲಕನನ್ನು ನೀರಿನ ಒಳಗೆ ಎತ್ತಿಿಕೊಂಡು ಹೋಗಿ ಮುಳುಗಿಸಿದ್ದಾರೆ. ಬಾಹುಬಲಿ ನಾನು ಎಂದು ಹೇಳಿ ಎತ್ತಿಿ ಎಸೆದಿದ್ದಾರೆ.ಬಾಲಕನನ್ನು ಕೆರೆಯ ದಡದಲ್ಲಿ ನಿಲ್ಲಿಸಿ ಅವನನ್ನು ಗುದ್ದಿಕೊಂಡು ಕೆರೆಗೆ ಹಾರಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೊದಲ್ಲಿ ಯುವಕರು ಬಾಲಕನನ್ನು ಹಿಡಿದುಕೊಂಡು ನೀರಿನಲ್ಲಿ ಮುಳುಗಿಸುತ್ತಿಿರುವುದು, ದೈಹಿಕವಾಗಿ ಹಲ್ಲೆ ಮಾಡುತ್ತಿಿರುವುದು ಮತ್ತು ಅವಾಚ್ಯ ಪದಗಳಿಂದ ನಿಂದಿಸುತ್ತಿಿರುವುದು ಕಂಡು ಬಂದಿದೆ.
ಫೋಟೋ
ಬಾಲಕನಿಗೆ ಹಿಂಸೆ ಕೊಡುತ್ತಿಿರುವ ಯುವಕರು.

Leave a Reply

Your email address will not be published. Required fields are marked *

error: Content is protected !!