Monday, 4th March 2024

ಗೆದ್ದರೆ ಬಿಜೆಪಿ ಸೇರುವೆ

ಹೊಸಪೇಟೆ: ಮುಖ್ಯಮಂತ್ರಿಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರ ಮನವೊಲಿಕೆಗೆ ಜಗ್ಗದ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್ ವಿಜಯನಗರ ಕ್ಷೇತ್ರದ ಉಪಚುನಾವಣೆ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ. ಗುರುವಾರ ನಾಮಪತ್ರ ಕೊನೆಯ ದಿನವಿತ್ತು. ಆದರೆ, ಕವಿರಾಜ ನಾಮಪತ್ರ ವಾಪಸ್ ಪಡೆಯಲಿಲ್ಲ. ನಾನು ಬಿಜೆಪಿಯ ನಿಷ್ಠಾಾವಂತ ಕಾರ್ಯಕರ್ತ. ನನಗೆ ಅನ್ಯಾಾಯವಾಗಿದೆ. ಹಾಗಾಗಿ ಚುನಾವಣೆಗೆ ನಿಂತಿದ್ದೇನೆ. ನಾನು ಗೆದ್ದ ನಂತರ ಪುನಃ ಬಿಜೆಪಿಗೆ ಸೇರಿ ಆ ಪಕ್ಷದ ಋಣ ತೀರಿಸುತ್ತೇನೆ ಎಂದು ಹೇಳಿದರು. ನನಗೆ ಬಿಜೆಪಿ ಮೇಲಾಗಲಿ ಅಥವಾ ಆ ಪಕ್ಷದ ಮುಖಂಡರ ಮೇಲಾಗಲಿ ಅಸಮಾಧಾನವಿಲ್ಲ. ಪಕ್ಷಕ್ಕೆೆ ಮೋಸ ಮಾಡಿದ ಆನಂದ್ ಸಿಂಗ್ ಅವರಿಗೆ ಟಿಕೆಟ್ ನೀಡಿರುವುದಕ್ಕೆೆ ಬೇಸರವಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!