Thursday, 22nd February 2024

ಮತ್ತೊಂದು ಆಪರೇಷನ್‌ಗೆ ಬಿಜೆಪಿ ಸಜ್ಜು?

ಉಪಚುನಾವಣೆ ಫಲಿತಾಂಶ ನೋಡಿ ತೀರ್ಮಾನ ಜೆಡಿಎಸ್ ಮೇಲೆ ಬಿಜೆಪಿ ಕಣ್ಣು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಉಪಚುನಾವಣೆ ಫಲಿತಾಂಶ ತನ್ನ ನಿರೀಕ್ಷೆೆಯ ಮಟ್ಟಕ್ಕೆೆ ಬರುವುದಿಲ್ಲ ಎಂಬುದನ್ನು ಅರಿತಿರುವ ಬಿಜೆಪಿ, ಮತ್ತೊೊಂದು ಸುತ್ತಿಿನ ಆಪರೇಷನ್‌ಗೆ ತೆರೆಮರೆಯಲ್ಲಿ ಸಿದ್ಧತೆ ನಡೆಸಿದೆಯೇ?
ಹೀಗೊಂದು ಅನುಮಾನ ರಾಜಕೀಯ ವಲಯಗಳಲ್ಲಿ ಹುಟ್ಟಿಿಕೊಂಡಿದೆ. ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ನಿರೀಕ್ಷೆೆ ಅಷ್ಟೊೊಂದು ದೊಡ್ಡ ಪ್ರಮಾಣದಲ್ಲಿ ಸಾಧ್ಯವಾಗುವುದಿಲ್ಲ. ಆಗ ಸರಕಾರ ಅತಂತ್ರ ಸ್ಥಿಿತಿಗೆ ತಲುಪುತ್ತದೆ. ಇದನ್ನು ನಿವಾರಿಸಿಕೊಳ್ಳಲು ಈಗಾಗಲೇ ಎರಡನೇ ಹಂತದ ಆಪರೇಷನ್ ಮಾಡಲು ಬಿಜೆಪಿ ನಾಯಕರು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾಾರೆಯೇ ಎಂಬ ಮಾತುಗಳು ಕೇಳಿಬರುತ್ತಿಿವೆ. ಇದು ಮತ್ತೊೊಂದು ಸುತ್ತಿಿನ ಚುನಾವಣಾ ಪರ್ವಕ್ಕೆೆ ವೇದಿಕೆ ಒದಗಿಸಲಿದೆಯೇ ಎಂಬುದು ಈಗಿನ ಕುತೂಹಲ.

ಜೆಡಿಎಸ್ ನಾಯಕರ ಜಿ.ಟಿ.ದೇವೇಗೌಡ ಸೇರಿದಂತೆ ಹಳೆ ಮೈಸೂರು ಭಾಗದ ಜೆಡಿಎಸ್ ಶಾಸಕರು ಬಿಜೆಪಿ ಸೇರಲಿದ್ದಾಾರೆ ಎಂಬ ವದಂತಿ ಹರಡಿತ್ತು. ಆದರೆ, ಅನರ್ಹರ ತೀರ್ಪು ವಿಳಂಬ ಹಿನ್ನೆೆಲೆಯಲ್ಲಿ ರಾಜೀನಾಮೆ ನೀಡಲು ಶಾಸಕರು ಹೆದರಿದ್ದರು. ಈಗ ರಾಜೀನಾಮೆ ನೀಡಲು ಮತ್ತು ರಾಜೀನಾಮೆ ನೀಡಿದ ನಂತರ ಚುನಾವಣೆ ಎದುರಿಸಲು ಯಾವುದೇ ಸಮಸ್ಯೆೆಗಳಿಲ್ಲದ ಕಾರಣದಿಂದ ಮತ್ತಷ್ಟು ಜನ ಶಾಸಕರು ರಾಜೀನಾಮೆ ನೀಡಲು ಸಿದ್ಧವಾಗಿದ್ದಾಾರೆ. ಆ ಮೂಲಕ ಬಿಜೆಪಿ ತನ್ನ ಬಲವನ್ನು ಹೆಚ್ಚಿಿಸಿಕೊಳ್ಳಲು ತೀರ್ಮಾನಿಸಿದೆ ಎನ್ನಲಾಗುತ್ತಿಿದೆ.

ಬಿಜೆಪಿಯ ಮುಂದಿನ ಆಪರೇಷನ್ ಯೋಜನೆಯ ಬಿಜೆಪಿ ಶಾಸಕ ಹಾಗೂ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಮಾತುಗಳಿಂದ ಸ್ಪಷ್ಟಚಾಗಿ ಗೋಚರಿಸುತ್ತಿಿದೆ. ಸರಕಾರದ ಅಸ್ತಿಿತ್ವದ ಬಗ್ಗೆೆ ಮಾತನ್ನಾಾಡುತ್ತಾಾ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆೆಸ್ ಇಲ್ಲದಂತಹ ಪರಿಸ್ಥಿಿತಿ ನಿರ್ಮಾಣವಾಗುತ್ತಿಿದೆ.

ಮಾಜಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಮತ್ತೆೆ ಸಿಎಂ ಆಗುವ ಭ್ರಮೆಯಲ್ಲಿದ್ದು, ಹಗಲುಗನಸು ಕಾಣುತ್ತಿಿದ್ದಾರೆ. ಅದು ಸಾಧ್ಯವಾಗುವುದಿಲ್ಲ. ಕಾಂಗ್ರೆೆಸ್‌ನಲ್ಲಿ ಈಗಾಗಲೇ ಭಿನ್ನಾಾಭಿಪ್ರಾಾಯ ವ್ಯಕ್ತವಾಗಿದ್ದು, ಹಿರಿಯ ಕಾಂಗ್ರೆೆಸ್ಸಿಿಗರು ಸಿದ್ದು ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಡಿ, ಬೇಡಿ ಅವರು ವಿರೋಧ ಪಕ್ಷದ ನಾಯಕನ ಸ್ಥಾಾನ ಪಡೆದಿದ್ದಾರೆ. ಸಿದ್ದರಾಮಯ್ಯ ಅವರು ಜವಾಬ್ದಾಾರಿ ಅರಿತು ಮಾತನಾಡಬೇಕು. ಅವರು ಸಿಎಂ ಆಗಿದ್ದಾಗ ಯಾವ ರೀತಿ ಆಡಳಿತ ಇತ್ತು ಎಂಬುದನ್ನು ಆತ್ಮಾಾವಲೋಕನ ಮಾಡಿಕೊಳ್ಳಲಿ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿಿ ಎಚ್.ಡಿ.ಕುಮಾರಸ್ವಾಾಮಿ ಅವರು ಸಿಎಂ ಸ್ಥಾಾನ ಕಳೆದುಕೊಂಡು ಹತಾಶೆಯಿಂದ ಗೊಂದಲದ ಹೇಳಿಕೆ ನೀಡುತ್ತಿಿದ್ದಾರೆ. ಬಿಎಸ್‌ವೈ ಸರಕಾರವನ್ನು ಬೀಳಲು ಬಿಡುವುದಿಲ್ಲ ಎಂದು ಒಂದೆಡೆ ಹೇಳಿದರೆ, ಮತ್ತೊೊಂದೆಡೆ ಬಿಜೆಪಿಯ 15 ಮಂದಿ ಅಭ್ಯರ್ಥಿಗಳನ್ನು ಸೋಲಿಸುವುದೇ ನಮ್ಮ ಗುರಿ ಎಂದು ಹೇಳುತ್ತಾಾರೆ. ವಚನ ಭ್ರಷ್ಟತೆ ಆಪಾದನೆಯಿಂದ ಪಾರಾಗಲು ಬಿಜೆಪಿ ಸರಕಾರ ಬೀಳಲು ಬಿಡುವುದಿಲ್ಲ ಎಂಬ ಹೇಳಿಕೆ ನೀಡಿರಬಹುದೆಂದು ಅಂದುಕೊಂಡಿದ್ದೆವು. ಆದರೆ, ಇದೀಗ ಗೊಂದಲದ ಹೇಳಿಕೆ ನೀಡುತ್ತಿಿದ್ದಾರೆ. ಎಚ್‌ಡಿಕೆ ಅವರಲ್ಲಿ ಸೋಲಿಸುವ-ಗೆಲ್ಲಿಸುವ ಶಕ್ತಿಿ ಇಲ್ಲ. ಉಪ ಚುನಾವಣೆ ಆದ ನಂತರ ಅವರ ಪಕ್ಷವೇ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು.

15 ಕ್ಷೇತ್ರಗಳಲ್ಲೂ ಬಿಜೆಪಿಗೆ ಜಯ: ರೇಣುಕಾಚಾರ್ಯ
ಜೆಡಿಎಸ್ ಹಾಗೂ ಕಾಂಗ್ರೆೆಸ್ ಪಕ್ಷದ ಆಂತರಿಕ ಅಸಮಾಧಾನದಿಂದ ಮತ್ತು ಸ್ವಾಾಭಿಮಾನಕ್ಕೆೆ ಧಕ್ಕೆೆಯಾದ ಹಿನ್ನೆೆಲೆಯಲ್ಲಿ 17 ಮಂದಿ ಶಾಸಕರು ತಮ್ಮ ಸ್ಥಾಾನಕ್ಕೆೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆೆ ಸೇರ್ಪಡೆಯಾಗಿದ್ದಾರೆ. ಈಗ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಉಪ ಚುನಾವಣೆ ಎದುರಿಸುತ್ತಿಿದ್ದೇವೆ. ನಮ್ಮಲ್ಲಿ ಮೂಲ, ವಲಸಿಗ ಎಂಬ ತಾರತಮ್ಯವಿಲ್ಲ. 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವುದು ಸೂರ್ಯ, ಚಂದ್ರರಷ್ಟೇ ಸತ್ಯ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!