Tuesday, 27th February 2024

ಅಬಕಾರಿ ಪೊಲೀಸರ ಕಾರ್ಯಾಚರಣೆ: 3.23 ಕೋಟಿ ರು. ಮೌಲ್ಯದ ಮದ್ಯ ವಶ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಚುನಾವಣಾ ನೀತಿ ಜಾರಿಯಾಗಿರುವ ಹಿನ್ನೆೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆೆ ವ್ಯಾಾಪ್ತಿಿಯಲ್ಲಿ ಅಕ್ರಮ ಮದ್ಯ ಸಂಗ್ರಹಿಸಿದ ಸ್ಥಳಗಳ ಮೇಲೆ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, 3.23 ಕೋಟಿ ರು. ಮೌಲ್ಯದ ಮದ್ಯ ವಶಪಡಿಸಿಕೊಂಡು, ಹಲವು ವಾಹನಗಳನ್ನು ಜಪ್ತಿಿ ಮಾಡಿದ್ದಾಾರೆ.

ಬಿಬಿಎಂಪಿ ವ್ಯಾಾಪ್ತಿಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್.ಪುರ, ಶಿವಾಜಿನಗರ, ಯಶವಂತಪುರ ಮತ್ತು ಮಹಾಲಕ್ಷ್ಮೀ ಲೇಔಟ್ ವ್ಯಾಾಪ್ತಿಿಯಲ್ಲಿ ನೀತಿಸಂಹಿತೆ ಜಾರಿಯಾದ ದಿನದಿಂದ ಈವರೆಗೆ ಅಬಕಾರಿ ಪೊಲೀಸರು ಸುಮಾರು 373 ಕಡೆ ದಾಳಿ ನಡೆಸಿ ವಿವಿಧ ಪ್ರಕರಣ ದಾಖಲಿಸಿದ್ದಾರೆ.

ಒಟ್ಟು 45 ಕಡೆ ದಾಳಿ ನಡೆಸಲಾಗಿದ್ದು, 125 ವ್ಯಕ್ತಿಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ, 69,550 ಲೀಟರ್ ಮದ್ಯ, ಒಂದು ವಾಹನ ಹಾಗೂ 22 ಆರೋಪಿಗಳನ್ನು ವಶಕ್ಕೆೆ ಪಡೆಯಲಾಗಿದೆ. ಕೆ.ಆರ್.ಪುರ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ 153 ಕಡೆ ದಾಳಿ ನಡೆಸಿ, 26763 ಲೀಟರ್ ಮದ್ಯ, 5,460 ಲೀಟರ್ ಬಿಯರ್, 6 ವಾಹನಗಳನ್ನು ಜಪ್ತಿಿ ಮಾಡಲಾಗಿದೆ.

ಯಶವಂತಪುರದಲ್ಲಿ 174 ಕಡೆ ದಾಳಿ ನಡೆಸಿ, 5,430 ಲೀಟರ್ ಮದ್ಯ, 37,960 ಲೀಟರ್ ಬಿಯರ್, ಐದು ವಾಹನ ಹಾಗೂ 46 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಒಟ್ಟು 1,93,50,421 ರು. ಮೌಲ್ಯದ ಮದ್ಯ, 9,07,224 ರು. ಮೌಲ್ಯದ ಬಿಯರ್ ಹಾಗೂ 1,21,25,000 ರು. ಮೌಲ್ಯದ ವಾಹನಗಳನ್ನು ಜಪ್ತಿಿ ಮಾಡಲಾಗಿದೆ. ಅಲ್ಲದೆ, ದೊಡ್ಡ ಆಲದ ಮರ ರಸ್ತೆೆಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿಿದ್ದ ಒಂದು ದ್ವಿಿಚಕ್ರ ವಾಹನ ಮತ್ತು 12.600 ಲೀಟರ್ ಮದ್ಯ ಜಪ್ತಿಿ ಮಾಡಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾಾರೆ.

Leave a Reply

Your email address will not be published. Required fields are marked *

error: Content is protected !!