Tuesday, 27th February 2024

ಸಾಫ್‌ಟ್‌‌ವೇರ್ ಹ್ಯಾಕ್: ಆರೋಪಿ ಬಂಧನ

ಬೆಂಗಳೂರು: ಬೆಲ್ ಟಿಪಿಒ ಕಂಪನಿಯ ಸಾಫ್‌ಟ್‌‌ವೇರ್ ಹ್ಯಾಕ್ ಮಾಡಿ ಪೈರಸಿ ಮಾಡಿ ನಷ್ಟವನ್ನುಂಟು ಮಾಡಿದ್ದ ಆರೋಪಿಯನ್ನು ಸಿ.ಕೆ.ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಪವಿತ್ರಸಿಂಹ(38) ಬಂಧಿತ ಆರೋಪಿ. ವಿನೋದ್ ಬೆಲ್ಲಾಂಕೊಂಡ ಎಂಬುವರು ಬನಶಂಕರಿಯಲ್ಲಿ ಬೆಲ್ ಟಿಪಿಒ ಎಂಬ ಕಂಪನಿ ನಡೆಸುತ್ತಿದ್ದರು. ಈ ವೇಳೆ ‘ಬೆಲ್ ಮಾರ್ಕರ್ ಪ್ರೊಫೈಲ್ ಪ್ರೋೋ ಆ್ಯಂಡ್ ಬೆಲ್ ಆರ್ಡರ್ ಪ್ಲೋ ಪ್ರೊ’ ಎಂಬ ಹೆಸರಿನ ಸಾಫ್‌ಟ್‌‌ವೇರ್ ಅನ್ನು ಆರೋಪಿ ಪವಿತ್ರಸಿಂಹ ಹ್ಯಾಾಕ್ ಮಾಡಿದ್ದ. ಬಳಿಕ ಅದನ್ನು ಪೈರಸಿ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ. ಅಲ್ಲದೆ ಇದರಿಂದ ಕಂಪನಿಗೆ ಬಹಳ ನಷ್ಟವಾಗಿತ್ತು. ಈ ಹಿನ್ನೆೆಲೆಯಲ್ಲಿ ವಿನೋದ್ ಬೆಲ್ಲಾಂಕೊಂಡ ದೂರು ದಾಖಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!