Wednesday, 5th October 2022

ಏಪ್ರಿಲ್ 1 ರಂದು ಸಿದ್ದಗಂಗಾ ಮಠದಲ್ಲಿ 115 ನವಜಾತ ಮಕ್ಕಳಿಗೆ ನಾಮಕರಣ

ಬೆಂಗಳೂರು: ರಾಜ್ಯಾದ್ಯಂತ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮಿಗಳವರ ಸ್ಮರಣೆ ಜೀವಂತವಾಗಿಡುವ ಉದ್ದೇಶದಿಂದ ಏಪ್ರಿಲ್ 1 ರಂದು ಮಹಾಸ್ವಾಮಿಗಳವರ 115ನೇ ಹುಟ್ಟುಹಬ್ಬದಂದು ಸಿದ್ದಗಂಗಾ ಮಠದಲ್ಲಿ 115 ನವಜಾತ ಮಕ್ಕಳಿಗೆ ಶ್ರೀಗಳ ಹೆಸರಿಡುವ ನಾಮಕರಣ ಕಾರ್ಯಕ್ರಮ ಆಯೋಜಿಸಲಾಗಿದೆ.

ಶ್ರೀ ಶಿವಕುಮಾರ ಮಹಾಸ್ವಾಮಿ ಅನ್ನದಾನ ಸೇವಾ ಟ್ರಸ್ಟ್ ಬೆಂಗಳೂರು ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, 115 ನವಜಾತ ಮಕ್ಕಳ ನಾಮಕರಣ ಹೊಂದುವ ಮಗುವಿಗೆ ತೊಟ್ಟಿಲು. ಹೊಸ ಉಡುಪು, ತೊಟ್ಟಿಲಿಗೆ ಹಾಸಿಗೆ, ಮಗುವಿಗೆ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಾದ ಮಾಡಲಿದ್ದಾರೆ.

ಮಗು ಹುಟ್ಟಿದ ದಿನದಿಂದ 1 ವರ್ಷದೊಳಗಿನ ಮಕ್ಕಳಿಗೆ ಅವಕಾಶವಿರುತ್ತದೆ. ಮಕ್ಕಳ ಪೋಷಕರು ಅರ್ಜಿ ನಮೂನೆಯಲ್ಲಿ ವಿವರ ಸಲ್ಲಿಸುವುದು, ಪೋಷಕರ ವಿಳಾಸದ ಪುರಾವೆ ಮತ್ತು ಭಾವಚಿತ್ರ ನೀಡಬೇಕು, ಮಗುವಿನ ಜನನ ಪ್ರಮಾಣ ಪತ್ರ, ಮಗುವಿನ ವೈದ್ಯಕೀಯ ಪಾಲನಾ ವಿವರ ಒದಗಿಸಬೇಕು. ನಾಮಕರಣ ಮಾಡಿರುವ ಮಕ್ಕಳಿಗೆ ಮರುನಾಮಕರಣಕ್ಕೆ ಅವಕಾಶವಿಲ್ಲ. ಅರ್ಜಿ ಸಲ್ಲಿಸಲು ಮಾ.29 ರೊಳಗೆ ಅರ್ಜಿ ಸಲ್ಲಿಸಬೇಕು.

ಪೋಷಕರು ಹೆಚ್ಚಿನ ವಿವರಗಳಿಗೆ 8951305174 ಮತ್ತು 9019405060 ಸಂಪರ್ಕಿಸಬಹುದು.