Wednesday, 26th February 2020

ನಮ್ಮನ್ನು ಬೇರೆಯವರು ಪ್ರೀತಿಯಿಂದ ಮಾತನಾಡಿಸಬೇಕು, ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ನಿರೀಕ್ಷಿಿಸುತ್ತೇವಾದರೆ, ನಾವು ಎಲ್ಲರನ್ನೂ ಅದೇ ಪ್ರೀತಿಯಿಂದ ಕಾಣಬೇಕಲ್ಲವೆ?

ಒಂದು ದಿನ ನಡೆದು ಹೋಗುತ್ತಿಿದ್ದಾಾಗ ಬೆಕ್ಕೊೊಂದು ಪೈಪ್‌ನ ಒಳ ಸಿಕ್ಕು, ಹೊರ ಬರಲಾರದೇ ಒದ್ದಾಾಡುತ್ತಿಿತ್ತು. ಅದೇ ದಾರಿಯಲ್ಲಿ ಬರುತ್ತಿಿದ್ದ ಒಬ್ಬ ಅದನ್ನು ನೋಡಿದ. ಬೆಕ್ಕು ಒದ್ದಾಾಡುತ್ತಿಿರುವುದನ್ನು ಕಂಡು ಅದಕ್ಕೆೆ ಸಹಾಯ ಮಾಡಲು ಮುಂದಾದ. ಆದರೆ ಬೆಕ್ಕು ಸಹಜವಾಗಿಯೇ ಅವನ ಕೈ ಪರಚಿತು. ಆತ ಜೋರಾಗಿ ಕೂಗಿಕೊಂಡು ಕೈ ಹಿಂದೆ ತೆಗೆದ. ಮತ್ತೆೆ ಸ್ವಲ್ಪ ಸಮಯದ ನಂತರ ಬೆಕ್ಕನ್ನು ಹೊರತೆಗೆಯಲು ಪ್ರಯತ್ನಿಿಸಿದ. ಮತ್ತೆೆ ಪರಚಿತು. ಇದನ್ನು ದೂರದಿಂದಲೇ ನಿಂತು ನೋಡುತ್ತಿಿದ್ದ ವ್ಯಕ್ತಿಿ ಬಂದು ‘ಆ ಬೆಕ್ಕಿಿನ ಹಣೆಬರಹವೇ ಅಷ್ಟು. ಒಳ್ಳೆೆಯದು ಮಾಡಲು ಹೋದರೆ ಅದಕ್ಕೆೆ ಆಗುವುದಿಲ್ಲ. ಸಾಯಲಿ ಬಿಡಿ’ ಎಂದ.
ಇದನ್ನು ಕೇಳಿ ಆತ ವಿಚಲಿತನಾಗಲಿಲ್ಲ. ತನ್ನ ಪ್ರಯತ್ನ ಕೈ ಬಿಡಲಿಲ್ಲ. ಕಷ್ಟ ಪಟ್ಟು ಬೆಕ್ಕಿಿಗೂ ನೋವಾಗದಂತೆ ಅದನ್ನು ಹೊರತೆಗೆದ. ಹೆದರಿದ ಬೆಕ್ಕು ಓಡಿ ಹೋಯ್ತ. ಆನಂತರ ಈ ವ್ಯಕ್ತಿಿಯ ಬಳಿ ಬಂದು, ‘ಅದು ಪ್ರಾಾಣಿ ಅದಕ್ಕೇನೂ ತಿಳಿಯುವುದಿಲ್ಲ. ನಾವು ಮನುಷ್ಯರಲ್ಲವೆ? ಪರಚುವುದು, ಕಚ್ಚುವುದು ಅದರ ಗುಣವಾದರೆ, ಪ್ರೀತಿಸುವುದು, ಸಹಾಯ ಮಾಡುವುದು ನಮ್ಮ ಗುಣವಲ್ಲವೆ?’ ಎಂದ.

ಗುರುವೊಬ್ಬ ತನ್ನ ಶಿಷ್ಯರೊಂದಿಗೆ ಗಂಗಾನದಿಗೆ ಮೀಯಲು ಹೋಗಿದ್ದ. ಅಲ್ಲಿ ಒಂದು ಕುಟುಂಬದವರು ಒಬ್ಬರಿಗೊಬ್ಬರು ಜೋರಾಗಿ ಬೈದಾಡಿಕೊಂಡು ಜಗಳವಾಡುತ್ತಿಿದ್ದುದನ್ನು ನೋಡಿದರು. ಗುರು ತನ್ನ ಶಿಷ್ಯರಿಗೆ, ‘ಅವರ್ಯಾಾಕೆ ಕೂಗಾಡುತಿದ್ದಾಾರೆ ಹೇಳಬಲ್ಲಿರಾ?’ ಎಂದು ಕೇಳಿದ. ಶಿಷ್ಯರಲ್ಲೊೊಬ್ಬ , ‘ಗುರುಗಳೇ.. ಅವರು ಒಬ್ಬರಿಗೊಬ್ಬರು ಸಿಟ್ಟಾಾಗಿದ್ದಾಾರೆ ಹಾಗಾಗಿ ಕೂಗಾಡುತ್ತಿಿದ್ದಾಾರೆ’ ಎಂದು ಉತ್ತರಿಸಿದ. ‘ತಮಗಾಗಿರುವ ಸಿಟ್ಟನ್ನು ಮೆಲ್ಲ ಮಾತುಗಳಲ್ಲಿ ಮುಂದಿನವರಿಗೆ ಹೇಳಿ ಬಗೆಹರಿಸಿಕೊಳ್ಳುವುದಿಲ್ಲ. ಅದು ಬಿಟ್ಟು ಯಾಕೆ ಹಾಗೆ ಕೂಗಾಡಬೇಕು?’ ಎಂದು ಗುರು ಮರುಪ್ರಶ್ನೆೆ ಹಾಕಿದ. ಶಿಷ್ಯರಿಗೆ ಏನೊಂದೂ ಉತ್ತರ ಹೊಳೆಯಲಿಲ್ಲ. ಸುಮ್ಮನೆ ನಿಂತಿದ್ದರು. ಆಗ ಗುರು, ‘ನೋಡಿ ಸಿಟ್ಟಾಾದ ಮನುಷ್ಯರ ಹೃದಯಗಳು ದೂರಾಗಿರುತ್ತವೆ. ಎಷ್ಟು ದೂರವಾಗಿರುತ್ತವೆ ಎಂದರೆ ಹೇಳಬೇಕಾದುದನ್ನು ಹೇಳಲು ಕೂಗಲೇಬೇಕಾಗುತ್ತದೆ. ಹಾಗಾಗಿ ಅವರು ಕೂಗಾಡುತ್ತಿಿದ್ದಾಾರೆ’ ಎಂದು ಹೇಳಿದ. ಶಿಷ್ಯರು ಹೌದೆಂಬಂತೆ ತಲೆಯಾಡಿಸಿದರು. ಗುರು ಮುಂದುವರಿಸಿದ, ‘ಆದರೆ ಪ್ರೀತಿಯ ವಿಷಯದಲ್ಲಿ ಹಾಗಾಗುವುದಿಲ್ಲ. ಪ್ರೀತಿಯಲ್ಲಿದ್ದಾಾಗ ಜನರ ಹೃದಯಗಳು ಎಷ್ಟೆೆಂದರೆ ಅಷ್ಟು ಹತ್ತಿಿರವಿರುತ್ತವೆ. ಅವುಗಳ ನಡುವೆ ಚೂರೂ ಅಂತರವಿರುವುದಿಲ್ಲ. ಹಾಗಾಗಿ ಪ್ರೀತಿ ಅಭಿವ್ಯಕ್ತಪಡಿಸಲು ಕೂಗಬೇಕಾಗಿಲ್ಲ. ಪಿಸುಮಾತುಗಳಾಡಿದರೆ ಸಾಕು. ಕೆಲವೊಮ್ಮೆೆ ಪಿಸುಮಾತುಗಳೂ ಬೇಕಾಗುವುದಿಲ್ಲ. ಪದಗಳ ಹಂಗಿಲ್ಲದೆ ಅಭಿವ್ಯಕ್ತವಾಗುವ ಶಕ್ತಿಿ ಪ್ರೀತಿಗಿದೆ’ ಎಂದರು.

ಹೌದು ಪಕ್ಕದಲ್ಲೇ ಇರುವವನಿಗೆ ಕೇಳಬೇಕಾದ್ದನ್ನು ಎಲ್ಲರಿಗೂ ಕೇಳುವಂತೆ ಕೂಗಿ ನಾವು ಸಿಟ್ಟಿಿನಲ್ಲಿದ್ದೇವೆ ಎಂದು ತೋರಿಸಿಕೊಳ್ಳುವುದರಲ್ಲಿ ಏನಾದರೂ ಅರ್ಥವಿದೆಯೆ? ಮೆದು ಮಾತಿನಲ್ಲಿ ಹೇಳಿದರೆ ಎಂಥವರೂ ಕೇಳುತ್ತಾಾರೆ. ಹೇಳುವ, ಕೇಳುವ ತಾಳ್ಮೆೆ ಇರಬೇಕು ಅಷ್ಟೆೆ.
***
ವರದಿಗಾರನೊಬ್ಬ ಅಜ್ಜಯ್ಯರೊಬ್ಬರನ್ನು ಮಾತನಾಡಿಸಿ ಮಾನವಾಸಕ್ತಿಿಯ ವರದಿಯೊಂದನ್ನು ಬರೆಯಲು ಯೋಜನೆ ಹಾಕಿದ. ಅದರಂತೆ ಅಜ್ಜಯ್ಯನನ್ನು ಮಾತನಾಡಿಸಿದ. ‘ಅಜ್ಜ ಈಗೇನಾದರೂ ನಿಮಗೆ ಒಂದು ಪತ್ರ ಬಂದು ಅದರಲ್ಲಿ ನಿಮ್ಮ ದೂರದ ಸಂಬಂಧಿಯೊಬ್ಬರು ತಮ್ಮ ಹತ್ತುಕೋಟಿ ಆಸ್ತಿಿಯನ್ನು ನಿಮ್ಮ ಹೆಸರಿಗೆ ಬರೆದಿಟ್ಟಿಿದ್ದಾಾರೆ ಎಂದು ಬರೆದಿದ್ದರೆ?’ ಎಂದು ಪ್ರಶ್ನೆೆ ಹಾಕಿದ. ಅಜ್ಜಯ್ಯ, ‘ಮಗೂ ಆಗಲೂ ನನ್ನ ವಯಸ್ಸು ತೊಂಬತ್ತೆೆಂಟೇ ಇರುತ್ತದೆ. ಅದೇನು ಬದಲಾಗುವುದಿಲ್ಲವಲ್ಲಪ್ಪ’ ಎಂದರು
ಹಣ, ಆಸ್ತಿಿ ಎಂದಾದರೂ ಬದಲಾಗಬಹುದು ಆದರೆ ವಯಸ್ಸು? ಎಷ್ಟೇ ಹಣವಿದ್ದರೂ ಸಮಯವನ್ನು ಖರೀದಿಸಲಾಗದು. ನಾಳೆ ಏನಾಗುತ್ತದೆ ಎಂದು ಯಾರೂ ತಿಳಿಯರು. ಈ ಕ್ಷಣವೇ ಜೀವಂತ ಅಲ್ಲವೆ?
***
ವಿಲಿಯಮ್ ಜೇಮ್‌ಸ್‌ ಹೆಸರು ಅಮೆರಿಕದ ಪ್ರಖ್ಯಾಾತ ಮನೋವಿಜ್ಞಾಾನಿ. ಇವನು ಬರೆದ ಒಂದು ಪುಸ್ತಕ ಧರ್ಮ ಹಾಗೂ ಮನೋವಿಜ್ಞಾಾನದ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲಾಾಯಿತು. ಆ ಪುಸ್ತಕದ ಹೆಸರು* ್ಖ್ಟಜಿಛಿಠಿಜಿಛಿ ಟ್ಛ ್ಕಛ್ಝಿಿಜಿಜಜಿಟ್ಠ ಉ್ಡಛ್ಟಿಿಜಿಛ್ಞ್ಚಿಿಛಿ. ವಿಲಿಯಮ್ ಜೇಮ್‌ಸ್‌ ಇಂಥ ಒಂದು ಮಹತ್ವದ ಪುಸ್ತಕ ಬರೆಯುವ ಮುನ್ನ ತನ್ನ ಗ್ರಂಥದ ಮೂಲ ದ್ರವ್ಯಕ್ಕಾಾಗಿ ಪ್ರಪಂಚವನ್ನು ಸುತ್ತಿಿದ. ಹಲವಾರು ಧರ್ಮ, ಸಂಸ್ಕೃತಿ, ಸಂಪ್ರದಾಯಗಳನ್ನು ಅಭ್ಯಸಿಸಿದ.
ಒಮ್ಮೆೆ ಭಾರತಕ್ಕೂ ಭೇಟಿ ನೀಡಿದ. ಅವನು ಮುಖ್ಯವಾಗಿ ಭಾರತಕ್ಕೆೆ ಬರಲೇಬೇಕಾಗಿತ್ತು. ಕಾರಣ ಭಾರತದ ಧರ್ಮ, ಸಂಸ್ಕೃತಿ ತಿಳಿಯದೇ ಯಾವ ಧರ್ಮದ ಬಗ್ಗೆೆ ಬರೆದರೂ ಅದು ಅಪೂರ್ಣ. ಅವನಿಗೆ ಗೊತ್ತಿಿದ್ದಿರಬೇಕು ಹಾಗಾಗಿ ಅವನು ಭಾರತಕ್ಕೆೆ ಭೇಟಿ ನೀಡಿದ.
ವಿಲಿಯಂ ಜೇಮ್‌ಸ್‌ ಭಾರತಕ್ಕೆೆ ಬಂದ ನಂತರ ಸೀದಾ ನಡೆದದ್ದು ಹಿಮಾಲಯಕ್ಕೆೆ. ಅಲ್ಲಿ ಸಂತನೊಬ್ಬನನ್ನು ಕಾಣಲು ಹೋದ. ವಿಲಿಯಂ ತನ್ನ ಪುಸ್ತಕದಲ್ಲಿ ಭೇಟಿ ಮಾಡಿದ ಆ ಸಂತನ ಹೆಸರು ಬರೆದಿಲ್ಲ. ಅದಕ್ಕೂ ಒಂದು ಕಾರಣವಿದೆ. ವಾಸ್ತವಿಕವಾಗಿ ಸಂತರಿಗೆ ಹೆಸರೇ ಇರುವುದಿಲ್ಲ. ಅವರಿಗೆ ಡ್ರೆೆಸ್ಸೂ, ಅಡ್ರೆೆಸ್ಸೂ ಯಾವುದೂ ಇರುವುದಿಲ್ಲ. ಇರಬೇಕಾದ ಅಗತ್ಯವೂ ಇಲ್ಲ.
ವಿಲಿಯಂ ಜೇಮ್‌ಸ್‌ ಭಾರತದ ಒಂದು ಪುರಾತನ ಶಾಸ್ತ್ರವನ್ನು ಓದುತ್ತಿಿದ್ದಾಾಗ ಅದರಲ್ಲಿ ಭೂಮಿಯನ್ನು ಎಂಟು ಬಿಳಿಯ ಆನೆಗಳು ಎತ್ತಿಿ ಹಿಡಿದಿದ್ದವೆಂದು ಓದಿದ್ದ. ಅವನಿಗೆ ಈ ವಿಷಯದ ಕುರಿತು ಗೊಂದಲ ಇತ್ತು. ಮೂಲತಃ ಅವನೊಬ್ಬ ತರ್ಕವಾದಿ, ತರ್ಕಶಾಸ್ತ್ರಜ್ಞ. ಯಾವುದನ್ನೂ ಸುಲಭಕ್ಕೆೆ ಒಪ್ಪಿಿಕೊಳ್ಳುವವನಲ್ಲ. ಈ ಭೇಟಿಯ ವೇಳೆ ತನ್ನ ಸಂಶಯ ಪರಿಹಾರಕ್ಕೆೆ ಒಳ್ಳೆೆಯ ಸಂದರ್ಭ ಒದಗಿದೆ ಎಂದು ವಿಚಾರ ಮಾಡಿದ ವಿಲಿಯಂ ಜೇಮ್‌ಸ್‌ ಸಂತನನ್ನು ಕೇಳಿದ, ‘ಇದು ತುಂಬಾ ಅಸಂಬದ್ಧವೆಂದು ಕಂಡು ಬರುತ್ತದೆ. ಆ ಎಂಟು ಬಿಳಿ ಆನೆಗಳು ಯಾವುದರ ಮೇಲೆ ನಿಂತಿವೆ? ಅವುಗಳಿಗೆ ಆಧಾರವೇನು?’
ಅದಕ್ಕೆೆ ಸಂತ ಹೇಳಿದ, ‘ಇತರ ಎಂಟು ಬಿಳಿಯ ಹಾಗೂ ಎರಡು ದೊಡ್ಡ ಆನೆಗಳ ಮೇಲೆ ಆಧಾರವಾಗಿವೆ’.
‘ಆದರೆ ಇದು ನನ್ನ ಪ್ರಶ್ನೆೆಯನ್ನು ಪರಿಹರಿಸುವುದಿಲ್ಲ. ಆ ದೊಡ್ಡ ಬಿಳಿಯ ಆನೆಗಳನ್ನು ಯಾರು ಹೊತ್ತುಕೊಂಡಿದ್ದಾಾರೆ?’ ಮತ್ತೆೆ ಪ್ರಶ್ನಿಿಸಿದ ಜೇಮ್‌ಸ್‌.
ಅದಕ್ಕೆೆ ಸಂತ ಮುಗುಳ್ನಕ್ಕು ಮತ್ತೆೆ ನುಡಿದ, ‘ಆನೆಗಳು ಆನೆಗಳ ಮೇಲೆ, ಆನೆಗಳು ಆನೆಗಳ ಕೆಳಕ್ಕೆೆ ಹೋದಂತೆಲ್ಲಾಾ.. ನೀನು ಪ್ರಶ್ನಿಿಸುತ್ತಲೇ ಹೋಗಬಹುದು. ನಾನೂ ಅದದೇ ಉತ್ತರವನ್ನು ಮುಂದುವರಿಸುತ್ತಲೇ ಹೋಗುವೆನು ಅತ್ಯಂತ ತಳದವರೆಗೂ..’
ವಿಲಿಯಂ ಜೇಮ್‌ಸ್‌ ಹಾಗೆಯೇ ಯೋಚಿಸಿದ, ಇನ್ನೊೊಂದು ಕೊನೆಯ ಪ್ರಶ್ನೆೆಯನ್ನು ಕೇಳಬಹುದೆಂದುಕೊಂಡು ಕೇಳಿದ, ‘ಸರಿ ಹಾಗಾದರೆ ಆ ಅತ್ಯಂತ ತಳಕ್ಕೆೆ ಆಧಾರ ಯಾವುದು?’
ಸಂತ ನಿರ್ವಿಕಾರನಾಗಿ ಹೇಳಿದ-‘ಯಾವುದೇ ಅನುಮಾನ ಬೇಡ, ಇನ್ನೂ ದೊಡ್ಡದಾದ ಎಂಟು ಆನೆಗಳು!’
ಇದು ಹೀಗೆಯೇ ಆಗಬೇಕು. ನೀವು ನಿಮ್ಮ ಭೂತದ ಬದುಕಿನ ಮೇಲೆ ನಿಂತಿರುವಿರಿ. ನಿಮ್ಮ ತಂದೆ, ನಿಮ್ಮ ತಾತ, ಮುತ್ತಾಾತ, ಆತನ ತಂದೆಯ ಮೇಲೆ ಹೀಗೆಯೇ ಮುಂದುವರಿಯುತ್ತಲೇ ಹೋಗುತ್ತದೆ. ಹಾಗಾಗಿ ನೀವು ಎಂದಿಗೂ ಮೊಟ್ಟ ಮೊದಲ ಬಾರಿಗೆ ಇಲ್ಲಿಗೆ ಬಂದೆ ಎಂದು ಹೇಳಲಾರಿರಿ. ನಿಮ್ಮ ಬಳಿ ಮೂರ್ಖತನಗಳನ್ನು ಕೊನೆಗಾಣಿಸುವ ಯಾವ ಸಾಧ್ಯತೆಯೂ ಇಲ್ಲ. ಇರುವ ಒಂದೇ ಒಂದು ದಾರಿಯೆಂದರೆ, ಅವು ಮೂರ್ಖತನಗಳು ಎಂಬ ಅರಿವುಂಟಾದಾಗ ಮಾತ್ರ. ಆ ಅರಿವಿನಲ್ಲಿ ಮೂರ್ಖತನಗಳು ಹಾಗೆಯೇ ಕರಗಲಾರಂಭಿಸುತ್ತವೆ.
****
ಅದೊಂದು ಗುರುಕುಲ. ಅಲ್ಲಿ ನಿತ್ಯ ಗುರು-ಶಿಷ್ಯರ ಸಂವಾದ ನಡೆಯುತ್ತಿಿದ್ದವು.
ಒಮ್ಮೆೆ ಹೀಗೆ ಗುರು-ಶಿಷ್ಯರು ಯಾವುದೋ ವಿಷಯದ ಬಗ್ಗೆೆ ಸಂವಾದ ಮಾಡುತ್ತಿಿದ್ದಾಾಗ ಗುರು ಹೇಳುತ್ತಾಾರೆ, ‘ ಇಂದ್ರಿಿಯಗಳ ಜಗತ್ತಿಿಗೆ ಸೇರಿದ ಸಕಲವೂ, ಆಲೋಚನೆಯನ್ನೂ ಒಳಗೊಂಡಂತೆ ಇರುವುದು ಇದು, ಇದಮ್ ಅನ್ನು ಪ್ರತಿನಿಧಿಸುತ್ತದೆ. ಇಂದ್ರಿಿಯ ಮನಸ್ಸಿಿನಾಚೆ ಇರುವದೆಲ್ಲವೂ ಅದು, ತತ್.
ನೇರ ಮನಸ್ಸಿಿನ ಯುವ ಶಿಷ್ಯ ಈ ಅಮೂರ್ತ ಸಂಗತಿಯನ್ನು ತನ್ನ ತಲೆಯನ್ನಾಾಡಿಸಿ ಸ್ವೀಕರಿಸಲು ಹಿಂಜರಿದ. ಶಿಷ್ಯ ಕೇಳಿದ,‘ಗುರುಗಳೇ ಹಾಗಾದರೆ ಸತ್ಯವಲ್ಲದರೊಂದಿಗೆ ನಮ್ಮ ಮನಸ್ಸುಗಳನ್ನು ಏಕೆ ಗೊಂದಲಕ್ಕೆೆ ದೂಡಬೇಕು?’
ಗುರು ನಕ್ಕರು.
‘ನಿನಗೆ ಕಂಡ ಯಾವುದಾದರೂ ಸತ್ಯ, ನಿಜವಾದದ್ದು ಎಂಬುದನ್ನು ಸ್ವಲ್ಪ ಇಲ್ಲಿ ನನಗೆ ತೋರಿಸುವೆಯಾ?’ ಗುರು ಕೇಳಿದರು.
ಖಂಡಿತ ಎಂದು ಮಾಳಿಗೆಯಿಂದ ಇಳಿಬಿದ್ದಿದ್ದ ಗಂಟೆಯನ್ನು ತೋರಿಸುತ್ತ ಶಿಷ್ಯ ನುಡಿದ, ‘ಈ ಗಂಟೆ, ಇದು ನನ್ನ ಪ್ರಕಾರ ನಿಜವಾದದ್ದು. ಆದರೆ ನೀವು ಇಲ್ಲಿಲ್ಲದ ಎರಡನೆಯ ಗಂಟೆಯನ್ನು ನಾನು ನಂಬಬೇಕೆಂದು ಇಚ್ಛಿಿಸಿದರೆ ಅದನ್ನು ನಾನು ಜೀರ್ಣಿಸಿಕೊಳ್ಳಲಾರೆ’ ಎಂದ.
ಮತ್ತೆೆ ಆ ಗುರು ನಕ್ಕರು. ಕೇಳಿದರು, ‘ಈ ಗಂಟೆ ನಿಜವಾದದ್ದು ಎಂದು ನೀನು ಹೇಗೆ ಹೇಳುವೆ?’
ಶಿಷ್ಯನ ಉತ್ತರ: ‘ಏಕೆಂದರೆ, ಅದನ್ನು ನನ್ನ ಕಣ್ಣುಗಳಿಂದ ಸ್ಪಷ್ಟವಾಗಿ ನೋಡಬಲ್ಲೆ!’
ಗುರು: ‘ಒಂದು ವೇಳೆ ನೀನು ಕುರುಡನಾಗಿದ್ದಲ್ಲಿ, ಈ ಗಂಟೆಯು ಸುಳ್ಳು ಎಂದಾಗುವುದಿಲ್ಲವೇ?’
ಅದಕ್ಕೆೆ ಶಿಷ್ಯ, ‘ಇಲ್ಲ, ಎಂದಿಗೂ ಇಲ್ಲ. ನಾನು ಕುರುಡನಾಗಿದ್ದರೂ ಅದರ ನಾದವನ್ನು ಕೇಳಬಲ್ಲೆ,ಅದರ ಇರುವಿಕೆಗೆ ಅಷ್ಟು ಸಾಕ್ಷಿ ಸಾಕಲ್ಲವೇ’ ಎಂದು ಮಾರುತ್ತರಿಸಿದ.
ಗುರು ಕೇಳಿದರು, ‘ನೀನು ಒಂದು ವೇಳೆ ಕಿವುಡನಾಗಿದ್ದರೆ?’
ಅದಕ್ಕೆೆ ಶಿಷ್ಯ ಹೇಳಿದ, ‘ಸರಿ. ನನ್ನ ಕೈಗಳಿಂದ ಅದನ್ನು ಸ್ಪರ್ಶಿಸಬಲ್ಲೆ. ಆಗಲೂ ಗಂಟೆ ನಿಜವಾಗೇ ಇರುತ್ತದೆ.’
ಗುರು ಮುಂದುವರಿದು, ‘ಒಂದು ವೇಳೆ ನಿನ್ನ ಸ್ಪರ್ಶ ಸಂವೇದನೆ ನಷ್ಟವಾಗಿದ್ದಲ್ಲಿ, ಮುಟ್ಟಲು, ಕೇಳಲು, ಕಾಣಲು, ರುಚಿಯನ್ನು ಆಸ್ವಾಾದಿಸುವ ಎಲ್ಲವನ್ನೂ ಕಳೆದುಕೊಂಡಿದ್ದಲ್ಲಿ ಆ ಗಂಟೆಯ ಕಥೆಯೇನಾಗುವುದು?’
ಶಿಷ್ಯ ಈಗ ಗೊಂದಲಕ್ಕೀಡಾದ. ಗುರುವಿನ ವಾದದಲ್ಲಿ ತಿರುಳಿರುವುದನ್ನು ಗ್ರಹಿಸಿದ.
ಈಗ ಗುರು ನುಡಿದರು, ‘ನಾವು ಈಗ ಈ ಎಲ್ಲ ಸಂದರ್ಭವನ್ನು ತಿರುಗುಮುರುಗು ಮಾಡೋಣ. ನೀನು ಒಂದು ಹೆಣವಿದ್ದಂತೆ. ಏನನ್ನಾಾದರೂ ಗ್ರಹಿಸುವ ಸಾಮರ್ಥ್ಯ ಕಳೆದುಕೊಂಡಿದ್ದೀ ಎಂದುಕೊಳ್ಳೋೋಣ. ನಾನು ನಿನಗೆ ಒಂದೇ ಒಂದು ಇಂದ್ರಿಿಯವನ್ನು ಅನುಗ್ರಹಿಸುವೆ. ಅದು ಸ್ಪರ್ಶ ಜ್ಞಾನ. ಗಂಟೆಯನ್ನು ನೀನು ಮುಟ್ಟುವೆ. ಅದು ನಿನಗೆ ಸತ್ಯವಾಯಿತು. ನಾನು ನಿನಗೆ ಇನ್ನೊೊಂದು ಇಂದ್ರಿಿಯವನ್ನು ಅನುಗ್ರಹಿಸುವೆ. ನೀನೀಗ ಆ ಗಂಟೆಯ ನಾದ ಕೇಳಬಲ್ಲೆ. ಎರಡನೇ ಇಂದ್ರಿಿಯದಿಂದಾಗಿ ಈ ಗಂಟೆ ಇನ್ನೂ ಹೆಚ್ಚಿಿನ ಸತ್ಯವಾಯಿತೇ? ನಿನ್ನ ಕಣ್ಣುಗಳನ್ನೂ ನಿನಗೆ ಮರಳಿಸುವೆ. ಆ ಗಂಟೆ ಇನ್ನೂ ಹೆಚ್ಚಿಿನ ಸತ್ಯವಾಯಿತೇ? ನಾನು ನಿನಗೆ ಎಲ್ಲ ಐದು ಇಂದ್ರಿಿಯಗಳನ್ನೂ ಮರಳಿಸುವೆ. ಆ ಗಂಟೆ ನಿನ್ನ ಪ್ರಕಾರ ಈಗ ಪರಿಪೂರ್ಣ ಸತ್ಯವಾಯಿತು! ಒಪ್ಪುುವೆಯಾ?’ ಎಂದಾಗ ಶಿಷ್ಯ ನಿರುತ್ತರನಾದ.
***
ಹೇಳಿ ಕೇಳಿ ಅದು ಜೈನ ಮುನಿಗಳ ಲೋಕ ಯಾತ್ರೆೆ. ಗುರುಗಳಾದಿಯಾಗಿ ಎಲ್ಲರೂ ಕಾಲಿಗೆ ಚಪ್ಪಲಿ ಇಲ್ಲದ ಕಲ್ಲು-ಮುಳ್ಳುಗಳ ಹಾದಿ ಸವೆಸಿದ್ದೇ ಸವೆಸಿದ್ದು. ಹೀಗೇ ಸಾಗುತ್ತಿಿರುವಾಗ ಒಂದು ಪಲ್ಲಕ್ಕಿಿ ಅಡ್ಡ ಬಂದಿತು. ಒಳಗೆ ವಜ್ರ ವೈಢೂರ‌್ಯಗಳಿಂದ ಅಲಂಕೃತ ಮಹಾರಾಜ. ಹಿಂದೆ ಭಟರ ದಂಡು. ಬೇಗ ಪಕ್ಕಕ್ಕೆೆ ಸರಿದು ಈ ‘ಮೆರವಣಿಗೆ’ ಹಾದುಹೋಗಲು ಶಿಷ್ಯಗಣ ಅವಕಾಶ ಮಾಡಿಕೊಟ್ಟಿಿತು. ಆದರೆ ಒಬ್ಬ ಶಿಷ್ಯನಿಗೆ ಬರಿಗಾಲಲ್ಲಿ ನಡೆಯುತ್ತಿಿರುವ ತಮ್ಮ ಗುರುಗಳ ಸ್ಥಿಿತಿ ಹಾಗೂ ರಾಜನ ವೈಭೋಗ ಎಷ್ಟೊೊಂದು ವೈದೃಶ್ಯ ಒದಗಿಸುತ್ತಿಿದೆ ಎನಿಸಿ ಪ್ರಶ್ನೆೆಯೊಂದು ಮೂಡಿತು. ಗುರುಗಳ ಬಳಿ ಸಾರಿ ಅದನ್ನು ಅರುಹಿಯೂ ಬಿಟ್ಟ: ‘ಇದೇನು ವೈಪರೀತ್ಯ ಗುರುಗಳೇ, ಪರಮ ಜ್ಞಾಾನಿಗಳಾದ ತಾವು ಹೀಗೆ ಬೀದಿಯಲ್ಲಿ, ಬರಿಗಾಲಲ್ಲಿ. ಆದರೆ ಆ ರಾಜ ಸುಖ ಸುಪ್ಪತ್ತಿಿಗೆಯ ಪಲ್ಲಕ್ಕಿಿಯಲ್ಲಿ. ಇದು ಯಾವ ನ್ಯಾಾಯ?’
‘ಎಲ್ಲ ಕರ್ಮ ಫಲ ಶಿಷ್ಯೋೋತ್ತಮಾ, ಆ ರಾಜ ಪೂರ್ವಜನ್ಮದಲ್ಲಿ ಜೈನ ಗುರುವಾಗಿರಬೇಕು’ ಎಂದು ನಕ್ಕರು ಗುರುವರ್ಯ!
==

Leave a Reply

Your email address will not be published. Required fields are marked *