Tuesday, 7th December 2021

ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವೇಕೆ?

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಕಾರ್ಯಾನುಷ್ಠಾನಗೊಳಿಸುವ ಚಿಂತನೆಗಳು ಪ್ರಗತಿಯಲ್ಲಿರುವಾಗಲೇ ಕರ್ನಾಟಕದಲ್ಲಿ ಪದವಿ ಹಂತದಲ್ಲಿ
ಜಾರಿಗೊಳಿಸಲಾಗಿರುವುದು ಸರ್ವವಿದಿತ. ಆದರೆ ಅನುಷ್ಠಾನದಲ್ಲಿ ಇರುವ ಗೊಂದಲ ಹಾಗೇ ಮುಂದುವರಿದಿದ್ದು, ಅದರಲ್ಲೂ ಭಾಷೆಯ ವಿಚಾರದಲ್ಲಿ covidಸರಕಾರ ಮೊಂಡುತನ ಮಾಡುತ್ತಿರುವುದು ಅತ್ಯಂತ ಖೇದಕರ.

ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸದೇ ಎಲ್ಲ ವಿದ್ಯಾರ್ಥಿಗಳು ಅವರ ಆಯ್ಕೆಯ ಭಾಷೆಯ ಅಧ್ಯಯನಕ್ಕೆ ಅವಕಾಶ ನೀಡಬೇಕೆಂದು ಕೋರಿದರೂ ಅನಾದರ ಮಾಡುತ್ತಿರುವುದು ದುರಂತ. ಮಾನ್ಯಉಚ್ಚ ನ್ಯಾಯಾಲಯ ದಲ್ಲಿ ವಾದ ಮಾಡುವಾಗ ತನ್ನ ನೀತಿಯಲ್ಲಿ ನ್ಯಾಯಾಂಗಗಳು ಮಧ್ಯ ಪ್ರವೇಶ ಮಾಡಬಾರದೆಂದು ಹೇಳಲಾಗಿದೆ. ಸರಕಾರದ ನೀತಿಗಳಿಂದ ಸಮಾಜಕ್ಕೆ ತೊಂದರೆಯಾದಾಗ ನ್ಯಾಯಾಲಯದಲ್ಲಿ ಪ್ರಶ್ನಿಸಿದೇ ಇನ್ನೆಲ್ಲಿ ಹೋಗ ಬೇಕು? ಸರಕಾರದ ಭಾಷಾ ನೀತಿಯಿಂದ ಸಾವಿರಾರು ಅಲ್ಪಸಂಖ್ಯಾತ ಭಾಷಾ ಶಿಕ್ಷಕರು ತಮ್ಮ ಜೀವನದ ಆಧಾರವನ್ನು, ಅನ್ನವನ್ನು ಕಳೆದುಕೊಳ್ಳುವುದು ಅನ್ಯಾಯವಲ್ಲವೇ? ಇನ್ನು ವಿದ್ಯಾರ್ಥಿಯ ಆಯ್ಕೆಗೆ ಮುಕ್ತ ಅವಕಾಶ ಎನ್‌ಇಪಿಯಲ್ಲಿ ಇರುವಾಗ ಅವರನ್ನು ಕಟ್ಟಿ ಹಾಕುವುದು ಎಷ್ಟು ಸರಿ? ವಿದ್ಯಾರ್ಥಿಗಳನ್ನು ಆತಂಕ ದಲ್ಲಿ ಇಟ್ಟು, ಅವರ ಮೇಲೆ ಪ್ರಯೋಗ ಮಾಡುತ್ತ ಬಲಿಪಶು ಮಾಡುತ್ತಿರುವುದು ಸರಿಯಲ್ಲ.

ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವೇಕೆ?. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಭಾವನೆಗಳಿಗೆ ಬೆಲೆ ನೀಡದೇ ಹಠಮಾರಿ ಧೋರಣೆ ತೋರುತ್ತಿರುವುದು ಅತ್ಯಂತ ನಿರಾಶದಾಯಕ. ಜನರ ನಾಡಿಮಿಡಿತ ಅರ್ಥಮಾಡಿಕೊಳ್ಳದೇ ದರ್ಪ ಮೆರೆಯುತ್ತಿರುವುದು ಮುಂದಿನ ದಿನಗಳಲ್ಲಿ ದುಷ್ಪರಿಣಾಮಗಳಿಗೆ ಆಹ್ವಾನ ಮಾಡಿದಂತೆ.

ಮಾನ್ಯ ಪ್ರಧಾನಿಗಳ ಆಶೋತ್ತರಗಳಿಗೆ ತಿಲಾಂಜಲಿ ನೀಡದೇ, ಎನ್‌ಇಪಿ ದುರ್ಬಲಗೊಳಿಸದೇ, ಯಾವುದೋ ಒಂದು ಭಾಷೆಯನ್ನು ಕಡ್ಡಾಯಗೊಳಿಸದೇ ಅತಿ ಶೀಘ್ರದಲ್ಲಿ ವಿದ್ಯಾರ್ಥಿಯ ಆಯ್ಕೆಯ ಭಾಷೆಗಳ ಅಧ್ಯಯನಕ್ಕೆ ಮುಕ್ತ ಅವಕಾಶ ನೀಡಿ. ಗೊಂದಲ ಪರಿಹರಿಸಿ. ಬಕಪಕ್ಷಿಗಳಂತೆ ಕಾಯುತ್ತಿರುವ ವಿದ್ಯಾರ್ಥಿಗಳ ಮನಸ್ಸನ್ನು ಘಾಸಿಗೊಳಿಸದೇ, ವಿದ್ಯಾರ್ಥಿ ಶಕ್ತಿಯನ್ನುಅರಿತು ನಡೆಯಿರಿ. ಮಾನ್ಯ ಉಚ್ಚ ನ್ಯಾಯಾಲಯವು ಸಹ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳ ಹಿತಕಾಯುವ ತೀರ್ಮಾನ ಕೂಡಲೆ ತೆಗೆದುಕೊಂಡು ಆದೇಶ ಹೊರಡಿಸಬೇಕಾಗಿ ವಿನಂತಿ. -ಪ್ರೊ.ಕೆ.ಕೃಷ್ಣಮೂರ್ತಿ ಮಯ್ಯ ಬೆಂಗಳೂರು

ಮೂರನೇ ಅಲೆಯ ನಿರ್ಲಕ್ಷ್ಯ ಬೇಡ  
ಸಂಭಾವ್ಯ ಕೋವಿಡ್ ಮೂರನೇ ಅಲೆ ನಮ್ಮ ದೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ದೇಶದ ವೈದ್ಯ ವಿeನಿಗಳು ಹೇಳಿರುವುದು ಸರ್ಕಾರ ಮತ್ತು ಜನತೆ ನಿಟ್ಟುಸಿರು ಬಿಡುವಂತಾಗಿದೆ. ಅಮೆರಿಕ ಸೇರಿದಂತೆ ಐರೋಪ್ಯ ರಾಷ್ಟ್ರಗಳಲ್ಲಿ ಕೋವಿಡ್ ಮೂರನೇ ಅಲೆ ಭಾರಿ ಆತಂಕ ಸೃಷ್ಟಿಸಿ ರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಹೀಗಾ ಸರಕಾರ ಹಾಗೂ ಜನತೆ ಈ ಬಗ್ಗೆ ನಿರ್ಲಕ್ಷ್ಯ, ಅಸಡ್ಡೆ ತೋರುವಂತಿಲ್ಲ. ಏಕೆಂದರೆ, ಮೊದಲನೆ ಅಲೆ ಕಾಣಿಸಿಕೊಂಡ ನಂತರ ಸಂಭಾವ್ಯ ಎರಡನೇ ಅಲೆ ಬಗ್ಗೆ ಇದ್ದ ಉದಾಸೀನತೆಯೇ ಹೆಚ್ಚು ಹಾನಿ ಉಂಟು ಮಾಡಲು ಕಾರಣವಾಗಿತ್ತು. ಕೇಂದ್ರ ಸರ್ಕಾರದ ಇಚ್ಛಾಶಕ್ತಿಯ ಫಲವಾಗಿ ಕೋವಿಡ್ ಗೆ ದೇಶೀಯ ಲಸಿಕೆಗಳಾದ ಕೊವ್ಯಾಕ್ಸಿನ್, ಕೋವಿಶೀಲ್ಡ ಅಭಿವೃದ್ಧಿ ಪಡಿಸಲಾಯಿತು. ಆರಂಭದಲ್ಲಿ ಲಸಿಕಾ ಅಭಿಯಾನಕ್ಕೆ ದೇಶದ ಜನತೆಯಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಆದರೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮದ ಕಾರಣ ದೇಶದಲ್ಲಿ ಈವರೆವಿಗೂ ಸುಮಾರು ೧೦೦ ಕೋಟಿಗೂ ಅಧಿಕ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದ್ದು, ಇದರ ಪರಿಣಾಮವಾಗಿ ರೋಗ ನಿರೋಧಕ ಶಕ್ತಿ ಬಂದಿದ್ದು, ಸಂಭಾವ್ಯ ಮೂರನೇ ಅಲೆಗೆ ಬ್ರೇಕ್ ಹಾಕಲು ಕಾರಣವಾಗಿದೆ. ಈ ಹಂತದಲ್ಲಿ ಉದಾಸೀನ, ಅಸಡ್ಡೆ ತೋರುವಂತಿಲ್ಲ.

ಈಗಾಗಲೇ, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸದೇ ಇರುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು ಸದ್ಯ ಎಡೆ ಸಾಮಾನ್ಯವಾಗಿ ಕಂಡು ಬರುತ್ತಿರುವ ದೃಶ್ಯ. ಜನರ ನಿರ್ಲಕ್ಷ್ಯ ಮನೋಭಾವನೆಗೆ ಸರಕಾರ ಮತ್ತಷ್ಟು ತೀವ್ರವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಆಗಬೇಕಿದೆ. ಅಲ್ಲದೇ ಜನರು ಕೂಡ ಸ್ವತಃ ಅರಿವು ಹೊಂದಬೇಕಿದೆ. ದೇಶದ ಆರೋಗ್ಯ ಇಲಾಖೆಯ ಸಿಬ್ಬಂದಿ,ಆಶಾ, ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಸರ್ಕಾರೇತರ ಸ್ವಯಂ ಸಂಸ್ಥೆಗಳ ಬದ್ಧತೆ, ಪ್ರಾಮಾಣಿಕ ಪರಿಶ್ರಮದ ಕಾರಣ ಸಂಭಾವ್ಯ ಮೂರನೇ ಅಲೆ ಬರದಂತೆ ತಡೆಗಟ್ಟಲು ಕಾರಣವಾಗಿದೆ. ಈ ಕಾರಣಕ್ಕೆ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಅಭಿನಂದನಾರ್ಹರು!
-ಶ್ರೀಧರ್ ಡಿ.ರಾಮಚಂದ್ರಪ್ಪ, ತುರುವನೂರು ಭಟ್ಟ

ಭಟ್ಟಂಗಿಗಳ ದೂರವಿಡಿ ಜೋಶೀಯವರೇ!
ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅದ್ಯಕ್ಷರಾಗಿ ಆಯ್ಕೆ ಅದ ಮಹೇಶ ಜೋಷಿ ಅವರಿಗೆ ಅಭಿನಂದನೆಗಳು. ದಾಖಲೆಯ ಗೆಲುವಿನ ಅಂತರವೇ ನೀವೆಷ್ಟು ಜನಪ್ರಿಯರು ಎಂದು ತಿಳಿಸುತ್ತದೆ. ಹೆಸರಿಗೆ ತಕ್ಕಂತೆ ಜನರಿಂದ ದೂರ ಮತ್ತು ಸರಕಾರಿ ಬಾಬುಗಳು ನಡೆಸಿ ಕೊಡುತ್ತಿದ್ದ ಸಪ್ಪೆ ಕಾರ್ಯಕ್ರಮ
ಗಗಳಿಂದ ತುಂಬಿದ್ದ ದೂರದರ್ಶನ ವನ್ನು ನೀವು ನಿಮ್ಮ ಕ್ರಿಯಾಶೀಲತೆ ಮತ್ತು ಪ್ರತಿಭೆಇಂದ ವಿವಿಧ ಜನಪ್ರಿಯ ಕಾರ್ಯಕ್ರಮಗಳಿಂದ ಜನರಿಗೆ ಸಮೀಪ ಮಾಡಿದ್ದು ನಿಮ್ಮ ದೊಡ್ಡ ಸಾಧನೆಯೇ ಸರಿ, ಯಾಕೆಂದರೆ ಸರಕಾರಿ ಯಂತ್ರಾಂಗದಲ್ಲಿ ಪ್ರತಿಭೆಗಳು ಹೇಗೆ ಮುರುಟಿ ಹೋಗುತ್ತದೆ ಎಂದು ಎಲ್ಲರಿಗೂ ಗೊತ್ತು.

ಬಹಳಷ್ಟು ಗೊಡ್ಡುಗಳಿಂದ ತುಂಬಿರುವ ಕಸಾಪ ಕಕ್ಕೆ ನಿಮ್ಮಂತವರ ಅಗತ್ಯ ತುಂಬಾ ಇತ್ತು, ದೂರದರ್ಶನದಲ್ಲಿ ಮಾಡಿದ ಜಾದೂ ಇಲ್ಲಿಯೂ
ಮಾಡುತ್ತೀರಿ ಎಂದು ನಂಬಿದ್ದೇವೆ. ದಯವಿಟ್ಟು ನಿಮ್ಮ ಸುತ್ತ ಇರುವ ಕೆಲವು ಭಟ್ಟಂಗಿಗಳನ್ನು ದಯವಿಟ್ಟು ದೂರವಿಡಿ, ನಾನು ನಿಮ್ಮ ದೂರದರ್ಶನ ಹಲವು ಕಾರ್ಯಕ್ರಮಗಳಲ್ಲಿ ಬಾಗವಹಿಸಿದ್ದೇನೆ. ನಡುವೆ ಕೆಲವರು ನಿಮ್ಮನ್ನು ಇಂದ್ರ ಚಂದ್ರ ಎಂದು ಜೋರಾಗಿ ರಾಜಕೀಯ ನಾಯಕರನ್ನು ಕೂಗುವಂತೆ ಕೂಗುತ್ತಿದ್ದರು. ನೀವು ಕೂಡ ಅದನ್ನು ತಡೆ ಯಲು ಹೋಗುತ್ತಿರಲಿಲ್ಲ. ಬಹುಶಃ ಅದನ್ನೂ ನೀವು ಮನದ ಇಷ್ಟ ಪಟ್ಟಿದಿರಿ ಅಂದುಕೊಳ್ಳುವೆ. ಆದರೆ ಈ ಭಟ್ಟಂಗಿಗಳು ಅಧಿಕಾರ ಇದ್ದಾಗ ಮಾತ್ರ ನಿಮ್ಮ ಸ್ತುತಿ ಮಾಡುತ್ತವೆ ಇದು ಈವಾಗ ನಿಮಗೂ ಅರ್ಥ ಆಗಿರಬಹುದು. ನಿಮ್ಮಿಂದ ಕಸಾಪ ಹೊಸ ಹೊಳಪು ಪಡೆಯಲಿ ಎಂದು ಹಾರೈಸುತ್ತ.

-ನರಸಿಂಹಮೂರ್ತಿ ಕಿತ್ತಾಗನೂರು