Wednesday, 26th February 2020

ನೆರೆ ನೆರವಿಗೆ ಮೊರೆ

– ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಪರಿಹಾರಕ್ಕೆ 10 ಸಾವಿರ ಕೋಟಿಗೆ ಮನವಿ
– ತುರ್ತು ಎರಡು ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಬಿಎಸ್‌ವೈ ಮನವಿ
– ಸಂಪುಟ ರಚನೆ ಸಂಬಂಧ ಶನಿವಾರ ಶಾ ಭೇಟಿ. 19ಕ್ಕೆೆ ಸಂಪುಟ ರಚನೆ ಸಾಧ್ಯತೆ

ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿಿತಿ ನಿಭಾಯಿಸಲು ಅನುದಾನ ನೀಡುವಂತೆ ಮುಖ್ಯಮಂತ್ರಿಿ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾಾರೆ. ಈ ವೇಳೆ ರಾಜ್ಯ ಸಲ್ಲಿಸಿರುವ 10 ಸಾವಿರ ಕೋಟಿ ರು. ಅನುದಾನ ನೀಡುವ ಬಗ್ಗೆೆ ಕೇಂದ್ರದ ತಂಡ ಬಂದು ಪರಿಶೀಲಿಸುವ ಭರವಸೆ ದೊರೆಕಿದೆ.
ಶುಕ್ರವಾರ ದೆಹಲಿಯಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮುಖ್ಯಮಂತ್ರಿಿ ಯಡಿಯೂರಪ್ಪ ಅವರ ನಿಯೋಗ, ರಾಜ್ಯದ ಸುಮಾರು 17 ಜಿಲ್ಲೆೆಗಳಲ್ಲಿ ಉಂಟಾಗಿರುವ ಪ್ರವಾಹದಿಂದ 40 ಸಾವಿರ ಕೋಟಿ ರು. ನಷ್ಟವಾಗಿದ್ದು, ಸಂಕಷ್ಟ ಪರಿಸ್ಥಿಿತಿ ನಿಭಾಯಿಸಲು ಕೇಂದ್ರದಿಂದ 10 ಸಾವಿರ ಕೋಟಿ ರು. ನೆರವಿನ ಅಗತ್ಯವಿದೆ. ತುರ್ತಾಗಿ ಎರಡು ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನವಿ ಮಾಡಿದರು.

ಭೇಟಿ ವೇಳೆ ಯಡಿಯೂರಪ್ಪ ಅವರು ಸಲ್ಲಿಸಿರುವ ವರದಿ ಹಾಗೂ ಮನವಿಯನ್ನು ನರೇಂದ್ರ ಮೋದಿ ಅವರು ಸ್ವೀಕರಿಸಿದ್ದಾಾರೆ. ಈ ವೇಳೆ ಕೇಂದ್ರದಿಂದ ತಂಡವೊಂದನ್ನು ಕಳುಹಿಸಿ, ನೆರೆ ಪರಿಹಾರಕ್ಕೆೆ ಅನುದಾನವನ್ನು ತುರ್ತಾಗಿ ಬಿಡುಗಡೆಗೊಳಿಸುವಂತೆ ಯಡಿಯೂರಪ್ಪ ಅವರು ಕೇಳಿಕೊಂಡಿದ್ದಾಾರೆ. ಇದಕ್ಕೆೆ ಸಕಾರಾತ್ಮಕವಾಗಿ ಪ್ರಧಾನಿ ಸ್ಪಂಧಿಸಿದ್ದಾಾರೆ ಎಂದು ತಿಳಿದುಬಂದಿದೆ.

                                                                       40 ನಿಮಿಷ ಚರ್ಚೆ

ಯಡಿಯೂರಪ್ಪ ಅವರೊಂದಿಗೆ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಮಾಜಿ ಮುಖ್ಯಮಂತ್ರಿಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಸುರೇಶ್ ಅಂಗಡಿ, ಪ್ರಹ್ಲಾಾದ್ ಜೋಶಿ, ಮಾಜಿ ಉಪಮುಖ್ಯಮಂತ್ರಿಿ ಆರ್. ಅಶೋಕ್, ಗೋವಿಂದ ಕಾರಜೋಳ ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ಸುಮಾರು 40 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾಾರೆ. ಚರ್ಚೆಯಲ್ಲಿ ರಾಜ್ಯದಲ್ಲಿ ಪ್ರವಾಹದಿಂದ ಆಗಿರುವ ಅವಘಡದ ಬಗ್ಗೆೆ ಯಡಿಯೂರಪ್ಪ ಅವರು ಸಂಪೂರ್ಣ ಚಿತ್ರಣ ನೀಡಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಯಡಿಯೂರಪ್ಪ ಅವರು ತುರ್ತಾಗಿ ಎರಡು ಸಾವಿರ ಕೋಟಿ ಅನುದಾನವನ್ನು ರಾಜ್ಯಕ್ಕೆೆ ಬಿಡುಗಡೆ ಮಾಡಬೇಕು. ಇದರಿಂದ ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಅನುದಾನ ವಿಳಂಬವಾದರೆ, ರಾಜ್ಯ ಸರಕಾರದಿಂದಲೇ ಈ ಎಲ್ಲ ಕಾರ್ಯವನ್ನು ನಿಭಾಯಿಸುವುದು ಕಷ್ಟದ ಕೆಲಸವೆಂದು ಮನವರಿಕೆ ಮಾಡಿದ್ದಾಾರೆ. ಇದಕ್ಕೆೆ ಮೋದಿ ಅವರು ಯಾವುದೇ ಸ್ಪಷ್ಟ ಉತ್ತರ ನೀಡದಿದ್ದರೂ, ಶೀಘ್ರದಲ್ಲಿಯೇ ಕೇಂದ್ರದ ತಂಡ ಕಳುಹಿಸುವ ಭರವಸೆ ನೀಡಿದ್ದಾಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ ಭೇಟಿ ಬಳಿಕ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ತೀವ್ರ ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿಿದ್ದೇವೆ. ನೆರೆಹಾವಳಿಯಿಂದಾಗಿ ಸಂತ್ರಸ್ತರು ಸಂಕಷ್ಟ ಅನುಭವಿಸುತ್ತಿಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ಪ್ರಧಾನಿಗೆ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ಕೂಡ ಈ ಸಂದರ್ಭದಲ್ಲಿ ಇದ್ದು, ಮಾಹಿತಿ ನೀಡಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅಮಿತ್ ಶಾ ಕೂಡ ರಾಜ್ಯಕ್ಕೆೆ ಭೇಟಿ ನೀಡಿ ಪರಿಶೀಲಿಸಿ, ಕೇಂದ್ರಕ್ಕೆೆ ಮಾಹಿತಿ ನೀಡಿದ್ದಾರೆ. ಕೇಂದ್ರದಿಂದ ಮತ್ತೊೊಂದು ಅಧ್ಯಯನ ತಂಡ ರಾಜ್ಯಕ್ಕೆೆ ಶೀಘ್ರ ಆಗಮಿಸಲಿದೆ. ತಕ್ಷಣ ತಾತ್ಕಾಾಲಿಕ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಈ ಬಗ್ಗೆೆ ಚರ್ಚೆ ಮಾಡಿ ಹೇಳುತ್ತೇನೆ ಎಂದು ಮೋದಿ ಭರವಸೆ ನೀಡಿದ್ದಾರೆ. ಹಣ ಬಿಡುಗಡೆ ಮಾಡುವ ವಿಶ್ವಾಾಸವಿದೆ ಎಂದು ಹೇಳಿದರು.

ರಾಜ್ಯದಲ್ಲಿ 108 ವರ್ಷಗಳಲ್ಲೇ ಅತಿ ಹೆಚ್ಚಿಿನ ಅತಿವೃಷ್ಟಿಿ ಉಂಟಾಗಿದೆ. 15 ದಿನಗಳ ಹಿಂದೆ ಬರದ ಪರಿಸ್ಥಿಿತಿಯಿದ್ದ ರಾಜ್ಯದಲ್ಲಿ ಈಗ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಮಹಾರಾಷ್ಟ್ರದಿಂದ ಹೆಚ್ಚುವರಿ ನೀರನ್ನು ಬಿಟ್ಟಿಿರುವುದರಿಂದ ಆಗಿರುವ ಹಾನಿ ಮುಂತಾದ ವಿಷಯಗಳನ್ನು ಪ್ರಧಾನಿಗೆ ಮನವರಿಕೆ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು 40 ಸಾವಿರ ಕೋಟಿ ರೂ.ಗೂ ಅಧಿಕ ಹಾನಿ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ರಸ್ತೆೆ, ಮನೆ, ಸೇತುವೆ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಮತ್ತೆೆ ನಿರ್ಮಿಸಬೇಕಾಗಿದೆ ಎಂದರು ರಾಜ್ಯ ಸರಕಾರ ಕೈಗೊಂಡಿರುವ ಪರಿಹಾರ ಕಾರ್ಯಗಳ ಬಗ್ಗೆೆಯೂ ಮೋದಿ ಅವರಿಗೆ ಮಾಹಿತಿ ನೀಡಲಾಗಿದೆ. ಅವರು ಖಂಡಿತವಾಗಿಯೂ ಪರಿಹಾರ ಬಿಡುಗಡೆ ಮಾಡುವ ವಿಶ್ವಾಾಸವಿದೆ ಎಂದು ಹೇಳಿದರು.

ಇಂದು ಅಮಿತ್ ಶಾ ಭೇಟಿ?
ರಾಜ್ಯದಲ್ಲಿ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿ 20 ದಿನ ಕಳೆಯುತ್ತಾಾ ಬಂದರೂ, ಸಂಪುಟ ರಚನೆಯಾಗಿಲ್ಲ ಎನ್ನುವ ಬಗ್ಗೆೆ ವಿರೋಧ ಪಕ್ಷಗಳ ಆರೋಪದ ನಡುವೆ, ಶನಿವಾರ ಸಂಪುಟ ಪಟ್ಟಿಿ ಸಜ್ಜಾಾಗುವ ಸಾಧ್ಯತೆಯಿದೆ. ಸೋಮವಾರ ಮೊದಲ ಹಂತದಲ್ಲಿ ಸಂಪುಟ ರಚನೆಯಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಾಧ್ಯಕ್ಷ ಅಮಿತ್ ಶಾ ಅವರನ್ನು ಯಡಿಯೂರಪ್ಪ ಅವರು ಶನಿವಾರ ಭೇಟಿಯಾಗಲಿದ್ದು, ಈ ವೇಳೆ 10-15 ಶಾಸಕರನ್ನು ಮೊದಲ ಹಂತದಲ್ಲಿ ಸಂಪುಟಕ್ಕೆೆ ಸೇರಿಸಿಕೊಳ್ಳುವ ನಿರೀಕ್ಷೆೆಯಿದೆ. ಯಡಿಯೂರಪ್ಪ ಅವರೊಂದಿಗೆ ಸಂತೋಷ್, ಅಶೋಕ್, ಗೋವಿಂದಾ ಕಾರಜೋಳ ಸಹ ತೆರಳಲಿದ್ದಾಾರೆ ಎಂದು ಮೂಲಗಳು ತಿಳಿಸಿವೆ.
ಅಮಿತ್ ಶಾ ಭೇಟಿಗೂ ಮುನ್ನಾಾ ದಿನ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಾವೇರಿ ಭವನದಲ್ಲಿ ಸಭೆ ನಡೆಸಿದ್ದು, ಯಾರೆಲ್ಲ ಸಂಪುಟದಲ್ಲಿ ಇರಬೇಕು ಎನ್ನುವ ಬಗ್ಗೆೆ ಚರ್ಚೆ ನಡೆಸಿದ್ದಾಾರೆ ಎಂದು ತಿಳಿದುಬಂದಿದೆ. ಇಬ್ಬರ ಪಟ್ಟಿಿಯಲ್ಲಿರುವವರು ಸಚಿವರಾಗುವುದು ಖಚಿತವಾಗಿದ್ದು, ಇನ್ನು ಕೆಲವರ ಹೆಸರನ್ನು ಬದಲಾಯಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರಮುಖವಾಗಿ ಯಡಿಯೂರಪ್ಪ ಅವರ ಪಟ್ಟಿಿಯಲ್ಲಿದ್ದ ಕೆಲ ಹೆಸರುಗಳಿಗೆ ಸಂತೋಷ್ ಒಪ್ಪಿಿಲ್ಲ. ಆದ್ದರಿಂದ ಇವರು ಸಂಪುಟಕ್ಕೆೆ ಸೇರುವುದು ಕಷ್ಟ ಸಾಧ್ಯ ಎನ್ನಲಾಗಿದೆ.
ಗರಿಷ್ಠ 34 ಸಚಿವರ ಪೈಕಿ ಮೊದಲ ಹಂತದಲ್ಲಿ 20 ಮಂದಿಯನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಬಾಕಿಯಿರುವ ಸ್ಥಾಾನಗಳನ್ನು ಖಾಲಿ ಬಿಡುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಪ್ರದೇಶವಾರು, ಜಾತಿ, ಹಿರಿತನ, ಪಕ್ಷಕ್ಕೆೆ ಸಲ್ಲಿಸಿರುವ ಸೇವೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ಸಂಪುಟ ರಚಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸುಮಾರು 40 ನಿಮಿಷಗಳ ಕಾಲ ಪ್ರಧಾನಿಯೊಂದಿಗೆ ಚರ್ಚಿಸಲಾಗಿದೆ. ಪ್ರವಾಹದಿಂದ ಉಂಟಾದ ಸಾವು-ನೋವು, ಹಾನಿ, ಭೂಕುಸಿತ, ರಾಜ್ಯ ಸರಕಾರದ ಕ್ರಮಗಳ ಬಗ್ಗೆೆ ಸಂಪೂರ್ಣ ವಿವರಗಳನ್ನು ನೀಡಿದ್ದೇವೆ. ಪ್ರಾಾರಂಭಿಕವಾಗಿ 10 ಸಾವಿರ ಕೋಟಿ ರೂ.ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಸಂಪೂರ್ಣ ಮನೆ ನಿರ್ಮಿಸಲು ಐದು ಲಕ್ಷ ರು. ಪರಿಹಾರವನ್ನು ರಾಜ್ಯ ಸರಕಾರ ಘೋಷಿಸಿದೆ ಎಂಬ ಮಾಹಿತಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     ಆರ್. ಅಶೋಕ್, ಮಾಜಿ ಉಪಮುಖ್ಯಮಂತ್ರಿ

ಸಚಿವ ಸಂಪುಟ ರಚನೆಗೆ ಒಪ್ಪಿಿಗೆ ಪಡೆದೇ ಬರಬೇಕೆಂದು ದೆಹಲಿಗೆ ತೆರಳಿರುವ ಯಡಿಯೂರಪ್ಪ ಅವರು ಶನಿವಾರ ಅಮಿತ್ ಶಾರನ್ನು ಭೇಟಿಯಾಗಲಿದ್ದಾಾರೆ. ಇದಕ್ಕೂ ಮೊದಲು ಶುಕ್ರವಾರ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ರಹಸ್ಯ ಸಭೆ ನಡೆಸಿದ್ದಾಾರೆ.
ಸಂಪುಟ ರಚನೆ ಸಂಬಂಧ ತಮ್ಮನ್ನು ಭೇಟಿಯಾಗುವ ಮೊದಲು, ಸಂತೋಷ್ ಜತೆ ಸಭೆ ನಡೆಸುವಂತೆ ಯಡಿಯೂರಪ್ಪ ಅವರಿಗೆ ಅಮಿತ್ ಶಾ ಸೂಚನೆ ನೀಡಿದ್ದರು. ಆದ್ದರಿಂದ ಶುಕ್ರವಾರ ಸಂತೋಷ್ ಜತೆ ಸಚಿವ ಸಂಪುಟ ರಚನೆ ಬಗ್ಗೆೆ ಸುಧೀರ್ಘ ಚರ್ಚೆ ನಡೆಸಿದ್ದಾಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸಿದ ಬಳಿಕ ಸಂತೋಷ್ ಜತೆ ಸಭೆ ನಡೆಸಿರುವ ಯಡಿಯೂರಪ್ಪ ಅವರು, ಮೊದಲ ಹಂತದಲ್ಲಿ ಯಾರನ್ನು ಸಂಪುಟಕ್ಕೆೆ ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆೆ ಚರ್ಚಿಸಿದ್ದಾಾರೆ ಎನ್ನಲಾಗಿದೆ. ಸದ್ಯ ಬಿಜೆಪಿಯ ಆಯಕಟ್ಟಿಿನ ಸ್ಥಳದಲ್ಲಿ ಸಂತೋಷ್ ಇರುವುದರಿಂದ, ಇಬ್ಬರ ಸಭೆಯಲ್ಲಿಯೇ ಸಚಿವರು ಯಾರಾಗಬೇಕು ಎನ್ನುವ ಬಗ್ಗೆೆ ಬಹುತೇಕ ಅಂತಿಮವಾಗಲಿದೆ ಎನ್ನಲಾಗಿದೆ.
ಯಡಿಯೂರಪ್ಪ ಹಾಗೂ ಸಂತೋಷ್ ಪ್ರತ್ಯೇಕ ಪಟ್ಟಿಿಯನ್ನು ತಯಾರಿಸಿಕೊಂಡಿದ್ದಾಾರೆ. ಈ ಎರಡು ಪಟ್ಟಿಿಯಲ್ಲಿಯೂ ಕೆಲವರ ಹೆಸರಿದ್ದು, ಅಂತಹವರು ಸಚಿವರಾಗುವುದು ಬಹುತೇಕ ಖಚಿತ. ಆದರೆ, ಯಡಿಯೂರಪ್ಪ ಆಪ್ತ ವಲಯದಲ್ಲಿರುವ ಕೆಲವರನ್ನು ಸೇರಿಸಿಕೊಳ್ಳುವ ಬಗ್ಗೆೆ ಸಂತೋಷ್ ಒಪ್ಪಿಿಲ್ಲ. ಆದ್ದರಿಂದ ಕೆಲವರ ಹೆಸರನ್ನು ಬದಲಾಯಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಗರಿಷ್ಠ 34 ಸಚಿವರ ಪೈಕಿ ಮೊದಲ ಹಂತದಲ್ಲಿ 20 ಮಂದಿಯನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಬಾಕಿಯಿರುವ ಸ್ಥಾಾನಗಳನ್ನು ಖಾಲಿ ಬಿಡುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಪ್ರದೇಶವಾರು, ಜಾತಿ, ಹಿರಿತನ, ಪಕ್ಷಕ್ಕೆೆ ಸಲ್ಲಿಸಿರುವ ಸೇವೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ಸಂಪುಟ ರಚಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಅಮಿತ್ ಶಾರನ್ನು ಯಡಿಯೂರಪ್ಪ ಭೇಟಿಯಾದರೂ, ಇದಕ್ಕೂ ಮೊದಲು ಸಂತೋಷ್ ಅವರ ಬಳಿಕ ಮತ್ತೊೊಂದು ಸುತ್ತಿಿನ ಸಭೆಯನ್ನು ಶಾ ನಡೆಸಲಿದ್ದಾಾರೆ. ಈ ವೇಳೆ ಸಂತೋಷ್ ನೀಡುವ ಕೆಲವು ಸಲಹೆಗಳು, ಸಂಪುಟದಲ್ಲಿ ಯಾರ್ಯಾಾರು ಇರಬೇಕು ಎನ್ನುವುದನ್ನು ನಿರ್ಧರಿಸಲಿದೆ ಎನ್ನುವ ಬಹುತೇಕ ಖಚಿತ ಎನ್ನಲಾಗಿದೆ.

Leave a Reply

Your email address will not be published. Required fields are marked *