Sunday, 29th November 2020

ವಿಂಡೀಸ್‌ ಸರಣಿಗೆ ಕಿವೀಸ್‌ ಟಿ20 ಹಾಗೂ ಟೆಸ್ಟ್ ತಂಡ ಪ್ರಕಟ

ಆಕ್ಲಂಡ್: ವಿಂಡೀಸ್ ವಿರುದ್ದ ಟಿ20 ಹಾಗೂ ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಇದೇ ವೇಳೆ, ನಾಯಕ ಕೇನ್ ವಿಲಿಯಮ್ಸನ್ ಮತ್ತು ವೇಗಿ ಟ್ರೆಂಟ್ ಬೌಲ್ಟ್ ಅವರಿಗೆ ಟಿ೨೦ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಗಾಯದಿಂದ ಬಳಲುತ್ತಿರುವ ಕೇನ್ ಅವರು ಟೆಸ್ಟ್ ಸರಣಿಗಾಗಿ ಸಿದ್ದತೆ ನಡೆಸಲಿದ್ದಾರೆ. ಬೌಲ್ಟ್ ಐಪಿಎಲ್‌ ಸರಣಿ ಮುಗಿಸಿ ಮರಳಿ ರುವುದರಿಂದ ಟಿ20 ಸರಣಿಗೆ ಆಯ್ಕೆ ಮಾಡಲಾಗಿಲ್ಲ ಎಂದು ವರದಿಯಾಗಿದೆ. ಕಿವೀಸ್‌ ಟಿ20 ತಂಡದಲ್ಲಿ ಈ ಬಾರಿ ಹೊಸ ಮುಖ ಗಳಿಗೆ ಅವಕಾಶ ನೀಡಲಾಗಿದೆ. ಕೈಲ್ ಜೆಮೀಸನ್ ಮತ್ತು ಡೆವೋನ್ ಕಾನ್ವೆ. ಅನುಭವಿ ವೇಗಿ ಟಿಂ ಸೌಥಿ ನಾಯಕತ್ವ ವಹಿಸ ಲಿದ್ದಾರೆ. ಕಳೆದ ಸೀಸನ್‌ ನಲ್ಲಿ ಮೂರು ಫಾರ್ಮೆಟ್‌ನ ಕ್ರಿಕೆಟ್‌ನಲ್ಲಿ ಉತ್ತಮ ರನ್‌ ಗಳಿಸಿದ್ದರೂ, ಕಾನ್ವೆ ರನ್ನು ಟೆಸ್ಟ್‌ ತಂಡಕ್ಕೆ ಪರಿಗಣಿಸಲಾಗಿಲ್ಲ. ಜೇಮೀಸನ್ ಹಾಗೂ ಅನುಭವಿ ರಾಸ್ ಟೈಲರ್‌ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದು, ಮೊದಲ ಎರಡು ಟಿ20 ಪಂದ್ಯಗಳಲ್ಲಿ ಸ್ಥಾನ ಪಡೆದಿದ್ದಾರೆ.

ಟಿ೨೦ ತಂಡ: ಟಿಂ ಸೌಥಿ (ನಾಯಕ), ಡೇವೊನ್ ಕಾನ್ವೆ, ಲ್ಯೂಕಿ ಫರ್ಗ್ಯೂಸನ್, ಮಾರ್ಟಿನ್ ಗುಪ್ಟಿಲ್, ಕೈಲ್ ಜೆಮೀಸನ್, ಡೆರಿಲ್ ಮಿಶೆಲ್, ಜಿಮ್ಮಿ ನಿಶಮ್‌, ಗ್ಲೆನ್‌ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್‌, ಇಶ್‌ ಸೋಧಿ, ಟಿಂ ಸೀಫರ್ಟ್‌ (ವಿ.ಕೀ), ರೋಸ್ ಟಯ್ಲರ್‌.

ಟೆಸ್ಟ್ ತಂಡ: ಕೇನ್‌ ವಿಲಿಯಮ್ಸನ್ (ನಾ), ಟಾಂ ಬ್ಲಂಡೆಲ್‌, ಟ್ರೆಂಟ್‌ ಬೌಲ್ಟ್, ಕಾಲಿನ್ ಡಿ’ಗ್ರ‍್ಯಾಂಡ್‌ಹೋಂ, ಕೈಲ್ ಜೆಮೀಸನ್, ಟಾಂ ಲಾಥಮ್‌, ಹೆನ್ರಿ ನಿಕೋಲಸ್‌, ಅಜಾಜ್‌ ಪಟೇಲ್‌, ಟಿಂ ಸೌಥಿ, ರೋಸ್ ಟಯ್ಲರ್‌, ನೀಲ್‌ ವ್ಯಾಗ್ನರ್‌, ಬಿಜೆ ವಾಟ್ಲಿಂಗ್‌ (ವಿ.ಕೀ), ವಿಲ್‌ ಯಂಗ್‌.

 

 

Leave a Reply

Your email address will not be published. Required fields are marked *