Saturday, 24th October 2020

ಎನ್ಐಎ ಕಚೇರಿ ಸ್ಥಾಪನೆ ಅಗತ್ಯ: ಸಚಿವ ಆನಂದ್ ಸಿಂಗ್ ಸಮರ್ಥನೆ

ಬಳ್ಳಾರಿ: ದೇಶದಲ್ಲಿ ಹೆಚ್ಚಾಗಿರುವ ಭಯೋತ್ಪಾಕರ ಉಪಟಳ ನಿಯಂತ್ರಿಸಲು ರಾಜಧಾನಿ ಬೆಂಗಳೂರಿನಲ್ಲಿ ಎನ್​ಐಎ ಶಾಶ್ವತ ಕಚೇರಿ ಸ್ಥಾಪಿಸುವುದು ಸೂಕ್ತ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ನನ್ನ ಸಹಮತ ಇದೆ ಎಂದು ಸಚಿವ ಆನಂದ್​ ಸಿಂಗ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಖನಿಜ ನಿಧಿ ‌(ಡಿಎಂಎಫ್) ಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿ, ಬೆಂಗಳೂರು ಉಗ್ರರ ಹಬ್ ಎಂದು ತೇಜಸ್ವಿ ಸೂರ್ಯ ಹೇಳಿಲ್ಲ. ಉಗ್ರರ ದಾಳಿ ತಡೆಗಟ್ಟಲು ಎನ್​ಐಎ ಕಚೇರಿ ಸ್ಥಾಪಿಸಬೇಕು ಎಂದು ಹೇಳಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿಕೆ ಸಮರ್ಥಿಸಿಕೊಂಡರು.

ಇನ್ನು ಶಾಲೆಗಳ ಪುನಾರಂಭದ ಬಗ್ಗೆ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ‌ ಸ್ವಷ್ಟವಾದ ನಿಲುವಿಗೆ ಬರಲು ಸಾಧ್ಯವಿಲ್ಲ. ಶಾಲೆ ಗಳ ಪುನಾರಂಭದ ಬಗ್ಗೆ ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ. ನನಗೂ ಈ ಸಮಯದಲ್ಲಿ ಶಾಲೆ ಆರಂಭ ಮಾಡುವುದು ಬೇಡ ಎನಿಸುತ್ತದೆ. ನಾವೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇನ್ನು ಶಾಲೆಗಳನ್ನು ತೆರೆದರೆ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. 8 ರಿಂದ 12 ತರಗತಿಗಳು ಪ್ರಾರಂಭ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಬುದ್ಧಿವಂತರಿದ್ದಾರೆ. ಅವರು ಏನು ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣ ಎಂದು ಹೇಳಿದರು. ಸುರೇಶ್​ ಅಂಗಡಿ ಸಿಎಂ ಮಾಡಲು ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿ, ಈಗ ಅವರೇ ಇಲ್ಲ, ಹಾಗಾಗಿ ಆ ಚರ್ಚೆ ಅಪ್ರಸ್ತುತ ಎಂದರು.

Leave a Reply

Your email address will not be published. Required fields are marked *