Friday, 30th September 2022

ನಿರ್ಮಾಪಕ ವಿಜಯ್ ಬಾಬು ಜಾಮೀನಿಗಿಲ್ಲ ತಡೆ

ತಿರುವನಂತಪುರಂ: ಮಲಯಾಳಂ ನಟ,  ನಿರ್ಮಾಪಕ ವಿಜಯ್ ಬಾಬು ಅವರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಜೂನ್ 27 ರಂದು ಎರ್ನಾಕುಲಂ ಸೌತ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದಾಗ ವಿಜಯ್ ಬಾಬು ಅವರನ್ನು ಬಂಧಿಸ ಲಾಗಿತ್ತು. ಜೂನ್ 22 ರಂದು ವಿಜಯ್ ಬಾಬು ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು.

ನಟಿಯೋರ್ರೂವರು ಚಲನಚಿತ್ರ ಪಾತ್ರಗಳಿಗಾಗಿ ತನ್ನನ್ನು ಲೈಂಗಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಿಜಯ್ ಬಾಬು ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದಾರೆ.