Wednesday, 29th June 2022

ನಾಯಕತ್ವ ಬದಲಾವಣೆ ಸುದ್ದಿ ಅಧಿಕೃತ ಅಲ್ಲ, ಎಲ್ಲವೂ ಊಹಾಪೋಹ: ಬೊಮ್ಮಾಯಿ

ಬೆಂಗಳೂರು: ನಾಯಕತ್ವ ಬದಲಾವಣೆ ಸುದ್ದಿ ಅಧಿಕೃತ ಅಲ್ಲ, ಎಲ್ಲ ಊಹಾಪೋಹವಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಬುಧವಾರ ಹೇಳಿದರು.

ನಗರದ ಟೌನ್‌ ಹಾಲ್‌ ಬಳಿ ಗೃಹ ಸಚಿವ ಬೊಮ್ಮಾಯಿ ಅವರು ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಎಲ್ಲವೂ ಊಹಾಪೋಹಗಳು. ಊಹಾಪೋಹಗಳಿಗೆ ಉತ್ತರ ಕೊಡಲಾಗುವುದಿಲ್ಲ, ಉತ್ತರ ಕೊಡಲು ಬರುವುದಿಲ್ಲ. ನಾನು ಉತ್ತರ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಸ್ಥಾನಕ್ಕೆ ಯಾರ ಹೆಸರಿದೆಯೋ ಅವರನ್ನು ಕೇಳಿ ಎಂದು ಊಹಾಪೋಹಕ್ಕೆ ತೆರೆ ಎಳೆದರು.