ಬೆಂಗಳೂರು: ಅತ್ಯಂತ ಜನಜಂಗುಳಿಯ ಪ್ರತಿಷ್ಠಿತ ರಸ್ತೆ ಚರ್ಚ್ ಸ್ಟ್ರೀಟ್ ನಲ್ಲಿ ವಾರಾಂತ್ಯಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ನಗರ ಭೂ ಸಾರಿಗೆ ನಿರ್ದೇಶನಾಲಯ(ಡಿಯುಎಲ್ ಟಿ) ಆದೇಶ ಹೊರಡಿಸಿದೆ.
ಈ ನಿರ್ಬಂಧ ನವೆಂಬರ್ 7ರಿಂದ 5 ತಿಂಗಳವರೆಗೆ ಜಾರಿಯಲ್ಲಿರುತ್ತದೆ. ಸ್ವಚ್ಛ ವಾಯು ರಸ್ತೆ ಅಭಿಯಾನದ ಭಾಗವಾಗಿ ನಿರ್ದೇಶ ನಾಲಯ ಈ ಆದೇಶ ಜಾರಿಗೆ ತಂದಿದೆ.
ವಾಹನ ಸಂಚಾರ, ಮಾಲಿನ್ಯದ ಮಧ್ಯೆ ಆಗಾಗ ಈ ರೀತಿ ಕೆಲ ಸಮಯಗಳವರೆಗೆ ಸಂಚಾರ ನಿರ್ಬಂಧಿಸಿದರೆ ರಸ್ತೆ, ನಗರ ಸ್ವಚ್ಛ ವಾಗುತ್ತದೆ ಎಂದು ಸ್ಥಳೀಯ ಯುವತಿ ದಿವ್ಯ ಹೇಳುತ್ತಾರೆ. ಈ ನಿರ್ಬಂಧ ಇನ್ನು 5 ತಿಂಗಳು ಕಳೆದ ನಂತರ ಗಾಂಧಿ ಬಜಾರ್ ನಲ್ಲಿ ಜಾರಿಗೆ ಬರಲಿದೆ.