Monday, 20th January 2020

ಆಹ್ವಾನ ನೀಡಿರಲಿಲ್ಲ ಅದಕ್ಕಾಗಿ ಭಾಗವಹಿಸಲಿಲ್ಲ…

ರಾಮನಗರ: ಜೀವನದಲ್ಲಿ ತಪ್ಪನ್ನು ಮಾಡದ ತಮ್ಮನ್ನು ಯಾವುದರಲ್ಲಿಯೂ ಸಿಲುಕಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿಿ ಎಚ್.ಡಿ.ಕುಮಾರಸ್ವಾಾಮಿ ಬಿಜೆಪಿಗೆ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿಿದೆ. ಮುಂದೆ ಬಂಧಿಸಬಹುದೆಂದು ಪ್ರತಿಭಟನಾ ಕಾರ್ಯಕ್ರಮದ ನನ್ನ ಭಾವಚಿತ್ರ ಹಾಕಿದ್ದಾಾರಂತೆ. ಆದರೆ ಕುಮಾರಸ್ವಾಾಮಿಯನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಕಾಂಗ್ರೆೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ತಮಗೆ ಆಹ್ವಾಾನ ನೀಡಿರಲಿಲ್ಲ. ಚನ್ನಪಟ್ಟಣ ತಾಲೂಕಿನ ಕಾರ್ಯಕ್ರಮಗಳು ಮೊದಲೇ ನಿಗದಿಯಾಗಿದ್ದವು. ಮೊದಲೇ ಆಹ್ವಾಾನ ನೀಡಿದ್ದರೆ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿಿದ್ದೆ. ತರಾತುರಿಯಲ್ಲಿ ಪ್ರತಿಭಟನೆ ಹಮ್ಮಿಿಕೊಳ್ಳಲಾಗಿದೆ. ನಾನು ಭಾಗವಹಿಸದೇ ಇದ್ದರೂ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊೊಂಡಿದ್ದಾಾರೆ ಎಂದರು.

Leave a Reply

Your email address will not be published. Required fields are marked *