Tuesday, 7th July 2020

ಏಕದಿನ ಸರಣಿ: ಗೆಲುವಿನ ವಿಶ್ವಾಾಸದಲ್ಲಿ ಟೀಮ್ ಇಂಡಿಯಾ ವೆಸ್‌ಟ್‌ ಇಂಡೀಸ್ ತಂಡಕ್ಕೆೆ ಮರಳಿದ ಗೇಲ್

ಪ್ರೋೋವಿಡೆನ್‌ಸ್‌(ಗಯಾನ):

ವೆಸ್‌ಟ್‌ ಇಂಡೀಸ್ ವಿರುದ್ಧ ಟಿ-20 ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡು ಆತ್ಮವಿಶ್ವಾಾಸದಲ್ಲಿ ತೇಲುತ್ತಿಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಸಜ್ಜಾಾಗಿದೆ. ಇಲ್ಲಿನ ಪ್ರೋೋವಿಡೆನ್‌ಸ್‌ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಇಂದು ಮೊದಲ ಏಕದಿನ ಪಂದ್ಯದಲ್ಲಿ ಸೆಣಸಲಿವೆ.
ಹೆಬ್ಬೆೆರಳು ಗಾಯದಿಂದ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದ್ದ ಶಿಖರ್ ಧವನ್ ಇಂದು ಏಕದಿನ ಭಾರತ ತಂಡಕ್ಕೆೆ ಮರಳುತ್ತಿಿದ್ದಾಾರೆ. ರೋಹಿತ್ ಶರ್ಮಾ ಅವರ ಜತೆ 130 ಏಕದಿನ ಪಂದ್ಯಗಳಲ್ಲಿ ಒಟ್ಟು 17 ಶತಕಗಳ ಜತೆಯಾಟವಾಡಿರುವ ಶಿಖರ್ ಧವನ್ ಆರಂಭಿಕನಾಗಿ ಇಂದು ಕಣಕ್ಕೆೆ ಇಳಿಯುತ್ತಿಿದ್ದು, ಕನ್ನಡಿಗ ಕೆ.ಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಾಟಿಂಗ್‌ಗೆ ಇಳಿಯಲಿದ್ದಾಾರೆ.

ಕೇದಾರ್ ಜಾಧವ್ ಅವರು ಐದನೇ ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಾಟಿಂಗ್‌ಗೆ ಇಳಿಯಬಹುದು. ರಿಷಭ್ ಪಂತ್ ಅವರನ್ನು ಸನ್ನಿಿವೇಶಕ್ಕೆೆ ತಕ್ಕಂತೆ ಉಪಯೋಗಿಸಿಕೊಳ್ಳಬಹುದು. ಜತೆಗೆ, ಮನೀಶ್ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್ ಅವರಲ್ಲಿ ಒಬ್ಬರನ್ನು ಅಂತಿಮ 11ರಲ್ಲಿ ಪರಿಗಣಿಸಬಹುದು.
ಟಿ-20 ಸರಣಿಯಲ್ಲಿ ಮನೀಶ್ ಪಾಂಡೆಗೆ ಅವಕಾಶ ನೀಡಲಾಗಿತ್ತು. ಆದರೆ, ಅವರು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಹಾಗಾಗಿ ಶ್ರೇಯಸ್ ಅಯ್ಯರ್ ಅವರಿಗೆ ಟೀಮ್ ಮ್ಯಾಾನೇಜ್‌ಮೆಂಟ್ ಅವಕಾಶ ನೀಡುವುದು ದಟ್ಟವಾಗಿದೆ.

ಟಿ-20 ಸರಣಿ ಆಡಿ ದಣಿದಿರುವ ಭುವನೇಶ್ವರ್ ಕುಮಾರ್ ಅವರಿಗೆ ಮೊದಲ ಏಕದಿನ ಪಂದ್ಯದಲ್ಲಿ ವಿಶ್ರಾಾಂತಿ ನೀಡಬಹುದು. ಒಂದು ವೇಳೆ ಅವರು ವಿಶ್ರಾಾಂತಿ ಬಯಸಿದರೆ, ಹಿರಿಯ ವೇಗಿ ಮೊಹಮ್ಮದ್ ಶಮಿ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾಾರೆ. ಜತೆಗೆ, ಟಿ-20ಯಲ್ಲಿ ಮಿಂಚಿದ್ದ ನವದೀಪ್ ಸೈನಿ ಅವರು ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆೆ ಪದಾರ್ಪಣೆ ಮಾಡುವ ಸಂಭವವಿದೆ.
ಇಂಗ್ಲೆೆಂಡ್ ಹಾಗೂ ವೇಲ್‌ಸ್‌ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ಗೆ ಫೇವರಿಟ್ ತಂಡವಾಗಿ ಭಾಗವಹಿಸಿದ್ದ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಭಾರಿ ನಿರಾಸೆಯಲ್ಲಿದ್ದ ಭಾರತ ಕೆರಿಬಿಯನ್ ನಾಡಿನಲ್ಲಿ ವೆಸ್‌ಟ್‌ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಯನ್ನು 3-0 ಅಂತರದಲ್ಲಿ ವೈಟ್ ವಾಶ್ ಮಾಡಿಕೊಳ್ಳುವ ಮೂಲಕ ಕೊಂಚ ನಿರಾಳವಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ್ದ ರೋಹಿತ್ ಶರ್ಮಾ ಐದು ಶತಕ ಸಿಡಿಸಿ ದಾಖಲೆ ಬರೆದಿದ್ದರು. ಆದರೆ, ತಂಡ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿತ್ತು. ಇದೀಗ ವಿಶ್ವಕಪ್ ವೈಫಲ್ಯದ ನೋವಿನ ಗುಂಗಿನಲ್ಲಿರುವ ಅವರು ಇಂದಿನಿಂದ ಆರಂಭವಾಗುವ ಏಕದಿನ ಸರಣಿಯಲ್ಲಿಯೂ ಅದೇ ಲಯ ಮುಂದುವರಿಸುವ ಯೋಜನೆಯಲ್ಲಿದ್ದಾಾರೆ.
ವಿರಾಟ್ ಕೊಹ್ಲಿಿ ಕೂಡ ವಿಶ್ವಕಪ್‌ನಲ್ಲಿ ಉತ್ತಮ ಬ್ಯಾಾಟಿಂಗ್ ಪ್ರದರ್ಶನ ತೋರಿದ್ದರು. ಆದರೂ, ವಿಶ್ವಕಪ್‌ನಲ್ಲಿ ಭಾರತ ಯಶಸ್ವಿಿಯಾಗಿರಲಿಲ್ಲ. ಸೆಮಿಫೈನಲ್ ಪಂದ್ಯ ಸೋಲಿನ ಬಳಿಕ ಕೊಹ್ಲಿಿ ನಾಯಕತ್ವದ ಬಗ್ಗೆೆ ಪ್ರಶ್ನೆೆ ಮಾಡಿದ್ದರು. ಆದರೆ, ಬಿಸಿಸಿಐ ಕೊಹ್ಲಿಿ ಅವರನ್ನೇ ನಾಯಕನಾಗಿ ಮುಂದುವರಿಸಿದೆ.
ಟಿ-20 ಸರಣಿಯಲ್ಲಿ ಒಂದೂ ಪಂದ್ಯದಲ್ಲಿಯೂ ಗೆಲುವು ಕಾಣದೆ ನಿರಾಸೆಗೆ ಒಳಗಾಗಿರುವ ವೆಸ್‌ಟ್‌ ಇಂಡೀಸ್ ತಂಡ ಏಕದಿನ ಸರಣಿಯಲ್ಲಿ ಉತ್ತಮ ಪ್ರತಿರೋಧ ತೋರುವ ಯೋಜನೆಯಲ್ಲಿ ಕಣಕ್ಕೆೆ ಇಳಿಯಲಿದೆ.
ಚುಟುಕು ಸರಣಿಗೆ ಅಲಭ್ಯರಾಗಿದ್ದ ಕ್ರಿಿಸ್ ಗೇಲ್ ಅವರು ಏಕದಿನ ತಂಡಕ್ಕೆೆ ಮರಳಿದ್ದು, ಭಾರತದ ಬೌಲರ್‌ಗಳಿಗೆ ಕಾಡುವ ಸಾಧ್ಯತೆ ಇದೆ. ಪ್ರಸ್ತುತ ನಡೆಯುತ್ತಿಿರುವ ಸರಣಿ ಬಳಿಕ ಕ್ರಿಿಕೆಟ್ ವೃತ್ತಿಿ ಜೀವನಕ್ಕೆೆ ವದಾಯ ಹೇಳುವುದಾಗಿ ಘೋಷಿಸಿದ್ದರು. ಹಾಗಾಗಿ, ಯುನಿವರ್ಸಲ್ ಬಾಸ್‌ಗೆ ಇದು ವೃತ್ತಿಿ ಜೀವನದ ಕೊನೆಯ ಸರಣಿಯಾಗಲಿದೆ.

ಭಾರತ ತಂಡಗಳು:ವಿರಾಟ್ ಕೊಹ್ಲಿಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡ್ಯ, ರಿಷಭ್ ಪಂತ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಕೇದಾರ್ ಜಾಧವ್, ಯಜುವೇಂದ್ರ ಚಾಹಲ್,ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್, ನವದೀಪ್ ಸೈನಿ

ಸಮಯ: ಇಂದು ಸಂಜೆ 07:00
ಸ್ಥಳ: ಪೋವಿಡೆನ್‌ಸ್‌ ಕ್ರೀಡಾಂಗಣ, ಗಯಾನ

ವೆಸ್‌ಟ್‌ ಇಂಡೀಸ್ ತಂಡಗಳು:
ಜೇಸನ್ ಹೋಲ್ಡರ್(ನಾಯಕ), ಜಾನ್ ಕ್ಯಾಾಂಪ್‌ಬೆಲ್, ಕ್ರಿಿಸ್ ಗೇಲ್, ಎವಿನ್ ಲೆವಿಸ್, ಶಿಮ್ರಾಾನ್ ಹೆಟ್ಮೇರ್, ನಿಕೋಲಾಸ್ ಪೂರನ್, ಶಾಯ್ ಹೋಪ್, ಕಾರ್ಲೋಸ್ ಬ್ರಾಾಥ್‌ವೇಟ್, ಕಿಮೋ ಪಾಲ್, ಶೆಲ್ಡನ್ ಕಾಟ್ರೆೆಲ್, ಓಶೇನ್ ಥಾಮಸ್, ಕೇಮರ್ ರೋಚ್, ಫ್ಯಾಾಬಿಯನ್ ಅಲ್ಲೆೆನ್

 

ಬಾಕ್‌ಸ್‌
ಟಿ-20 ಸರಣಿ ವೈಟ್‌ವಾಶ್ ಮಾಡಿಕೊಂಡ ಕೊಹ್ಲಿಿ ಪಡೆ

 1. ಗಯಾನ:
  ದೀಪಕ್ ಚಾಹರ್(4ಕ್ಕೆೆ 3) ಮಾರಕ ದಾಳಿ ಹಾಗೂ ರಿಷಭ್ ಪಂತ್(65 ರನ್, 42 ಎಸೆತಗಳು) ಅವರ ಸ್ಫೋೋಟಕ ಬ್ಯಾಾಟಿಂಗ್ ನೆರವಿನಿಂದ ಭಾರತ ತಂಡ ಮೂರನೇ ಪಂದ್ಯದಲ್ಲಿ ವೆಸ್‌ಟ್‌ ಇಂಡೀಸ್ ವಿರುದ್ಧ 7 ವಿಕೆಟ್‌ಗಳಿಂದ ಜಯ ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಚುಟುಕು ಸರಣಿಯನ್ನು ಕೊಹ್ಲಿಿ 3-0
 2. ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.
  ಟಾಸ್ ಸೋತರೂ ಮೊದಲು ಬ್ಯಾಾಟಿಂಗ್ ಮಾಡುವ ಅವಕಾಶ ಪಡೆದ ವೆಸ್‌ಟ್‌ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆೆ 146 ರನ್ ಕಲೆಹಾಕಿತ್ತು. ಬಳಿಕ. ಗುರಿ ಹಿಂಬಾಲಿಸಿದ್ದ ಭಾರತ 19.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆೆ 150 ರನ್ ಗಳಿಸಿ ಏಳು ವಿಕೆಟ್‌ಗಳಿಂದ ಗೆದ್ದು
 3. ಸರಣಿ ವೈಟ್ ವಾಶ್ ಮಾಡಿಕೊಂಡಿತು.
  147 ರನ್ ಗುರಿ ಬೆನ್ನತ್ತಿಿದ್ದ ಭಾರತ ತಂಡದ ಮೊತ್ತ 27 ರನ್ ಇರುವಾಗಲೇ ಶಿಖರ್ ಧವನ್(3) ಹಾಗೂ ಕೆ.ಎಲ್ ರಾಹುಲ್(20) ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಜತೆಯಾದ ನಾಯಕ ವಿರಾಟ್ ಕೊಹ್ಲಿಿ ಹಾಗೂ ರಿಷಭ್ ಪಂತ್ ಜೋಡಿಯು ಮುರಿಯದ ಮೂರನೇ ವಿಕೆಟ್‌ಗೆ 109 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ಸಮೀಪ ತಂದಿತು. 45 ಎಸೆತಗಳಲ್ಲಿ ಆರು ಬೌಂಡರಿ ಸಹಿತಿ 59 ರನ್ ಗಳಿಸಿದ ಕೊಹ್ಲಿಿ ಭಾರತದ ಗೆಲುವಿನ ಮಹತ್ತರ ಪಾತ್ರವಹಿಸಿದರು. ಕಳೆದ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ರಿಷಭ್ ಪಂತ್ ಅವರು ಮೂರನೇ ಪಂದ್ಯದಲ್ಲಿ ನಾಯಕ ಕೊಹ್ಲಿಿ ಇಟ್ಟಿಿದ್ದ ನಂಬಿಕೆಯನ್ನು ಉಳಿಸಿಕೊಂಡರು. 42 ಎಸೆತಗಳನ್ನು ಎದುರಿಸಿದ ಪಂತ್ ನಾಲ್ಕು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ ಅಜೇಯ 65 ರನ್ ಗಳಿಸಿ ತಂಡವನ್ನು
 4. ಗೆಲುವಿನ ದಡ ಸೇರಿಸಿದರು.
  ಇದಕ್ಕೂ ಮುನ್ನ ಮೊದಲು ಬ್ಯಾಾಟಿಂಗ್ ಮಾಡಿದ್ದ ವೆಸ್‌ಟ್‌ ಇಂಡೀಸ್‌ಗೆ ಭಾರತದ ಆರಂಭಿಕ ಬೌಲರ್ ದೀಪಕ್ ಚಾಹರ್ ಆಘಾತ ನೀಡಿದ್ದರು. ಸುನೀಲ್ ನರೇನ್(2), ಎವಿನ್ ಲೆವಿಸ್(10) ಹಾಗೂ ಶಿಮ್ರಾಾನ್ ಹೆಟ್ಮೇರ್(1) ಅವರ ವಿಕೆಟ್‌ಗಳನ್ನು ತಂಡದ ಮೊತ್ತ 14 ರನ್ ಇರುವಾಗಲೇ ಕಿತ್ತರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿದ ಕಿರೋನ್ ಪೊಲಾರ್ಡ್ ಅವರು ಅದ್ಭುತ ಬ್ಯಾಾಟಿಂಗ್ ಮಾಡಿದರು. 45 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 58 ರನ್ ಗಳಿಸಿದರು. ಕೊನೆಯ ಹಂತದಲ್ಲಿ ರೋವ್ಮನ್ ಪೊವೆಲ್ ಅಜೇಯ 32 ರನ್‌ಗಳಿಸಿ ತಂಡದ
 5. ಮೊತ್ತವನ್ನು ಇನ್ನಷ್ಟು ಹಿಗ್ಗಿಿಸಿದ್ದರು.
  ಭಾರತದ ಪರ ಉತ್ತಮ ಬೌಲಿಂಗ್ ಮಾಡಿದ ದೀಪಕ್ ಚಾಹರ್ ಮೂರು ವಿಕೆಟ್, ನವದೀಪ್ ಸೈನಿ ಎರಡು ವಿಕೆಟ್ ಪಡೆದರು.ಸಂಕ್ಷಿಿಪ್ತ ಸ್ಕೋೋರ್
  ವೆಸ್‌ಟ್‌ ಇಂಡೀಸ್: 146
  ಕಿರೋನ್ ಪೊಲಾರ್ಡ್-58
  ರೋವ್ಮನ್ ಪೊವೆಲ್-32
  ಬೌಲಿಂಗ್: ದೀಪಕ್ ಚಾಹರ್ 4 ಕ್ಕೆೆ 3, ನವದೀಪ್ ಸೈನಿ 34 ಕ್ಕೆೆ 2, ರಾಹುಲ್ ಚಾಹರ್ 27 ಕ್ಕೆೆ 1
  ಭಾರತ: 150/3 (20)
  ರಿಷಭ್ ಪಂತ್-65*
  ವಿರಾಟ್ ಕೊಹ್ಲಿಿ-59
  ಕೆ.ಎಲ್ ರಾಹುಲ್-20
  ಬೌಲಿಂಗ್; ಓಶೇನ್ ಥಾಮಸ್ 29 ಕ್ಕೆೆ 2

Leave a Reply

Your email address will not be published. Required fields are marked *