Saturday, 8th August 2020

ಭಾರತದ ರಸ್ತೆಗಳಲ್ಲಿ ಕೊರಿಯಾದ ಕಿಯಾ ಮೋಟಾರ್‌ಸ್‌

*ಶಶಿಧರ ಹಾಲಾಡಿ

ಕಾರುಗಳ ಮಾರಾಟ ಕುಸಿತ ಕಂಡಿದೆ ಎಂಬ ಹುಯಿಲು ಎದ್ದಿರುವ ಸಮಯದಲ್ಲೇ, ದಕ್ಷಿಿಣ ಕೊರಿಯಾದ ಕಾರು ತಯಾರಿಕಾ ಸಂಸ್ಥೆೆಯ ಕಿಯಾ ಮೋಟಾರ್‌ಸ್‌, ತನ್ನ ಮೊದಲ ಎಸ್‌ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಬೆಂಗಳೂರಿಗೆ ಅಂಟಿಕೊಂಡತೆ, ಪೆನುಕೊಂಡದ ಬಳಿ ಇರುವ ಕಿಯಾ ಮೋಟಾರ್‌ಸ್‌ ಫ್ಯಾಾಕ್ಟರಿ, ವರ್ಷಕ್ಕೆೆ ಸುಮಾರು 3,00,000 ಕಾರುಗಳನ್ನು ತಯಾರಿಸಬಲ್ಲದು.

ನಮ್ಮ ದೇಶದಲ್ಲಿ ಕಾರುಗಳ ಮಾರಾಟದ ಸಂಖ್ಯೆೆಯಲ್ಲಿ ಈ ವರ್ಷ ಕುಸಿತ ಕಂಡಿದ್ದು ನಿಜವಾಗಿದ್ದರೂ, ಜನರ ಅಭಿರುಚಿ, ಮಾರುಕಟ್ಟೆೆ ಅಂಕಿ ಸಂಕಿಗಳನ್ನು ಕಂಡಾಗ ಕೆಲವು ಬಾರಿ ಮೋಜು ಎನಿಸುತ್ತದೆ. ಏಕೆಂದರೆ, ಇತ್ತ ಕಳೆದ ಕೆಲವು ತಿಂಗಳುಗಳಿಂದ ಕಾರುಗಳ ಮಾರಾಟ ಕಡಿಮೆ ಆಗಿದೆ ಎಂಬ ಬೊಬ್ಬೆೆಯ ನಡುವೆಯೇ, ಜಾಗತಿಕ ಕಾರು ತಯಾರಿಕಾ ಸಂಸ್ಥೆೆ ಕಿಯಾ ಮೋಟಾರ್‌ಸ್‌ ಭಾರತದಲ್ಲಿ ತನ್ನ ವ್ಯವಹಾರವನ್ನು ಆರಂಭಿಸಿದೆ.

ಈ ವರ್ಷದ ಆಷಾಢದಲ್ಲಿ ಅಂದರೆ, ಜುಲೈ 2019ರಲ್ಲಿ ಕಿಯಾ ತನ್ನ ಕಾರುಗಳನ್ನು ಭಾರತದ ಷೋರೂಂಗಳಲ್ಲಿ ಮಾರಾಟಕ್ಕೆೆ ಇಟ್ಟಿಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ, ಆಷಾಢದಲ್ಲಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದು ಕಡಿಮೆ. ಆದರೆ, ದಕ್ಷಿಿಣ ಕೊರಿಯಾದ ಈ ದೈತ್ಯ ಸಂಸ್ಥೆೆ, ಜುಲೈನಲ್ಲಿ ಭಾರತದ ಮಾರುಕಟ್ಟೆೆಯನ್ನು ಪ್ರವೇಶಿಸಿದ್ದು, ಕಿಯಾ ಕಾರುಗಳ ಅಂದ ಚಂದಕ್ಕೆೆ ಭಾರತೀಯ ಗ್ರಾಾಹಕರು ಬೆರಗಾಗಿದ್ದಾಾರೆ. ಭಾರತದ ಮಟ್ಟಿಿಗೆ ಹೊಚ್ಚ ಹೊಸ ಕಂಪೆನಿ ಎನಿಸಿರುವ ಕಿಯಾ ಮೋಟಾರ್‌ಸ್‌ ತಯಾರಿಸಿದ ಕಾರುಗಳನ್ನು ಭಾರತೀಯರು ಸ್ವಾಾಗತಿಸಿದ್ದಾಾರೆ, ಸಾಕಷ್ಟು ಸಂಖ್ಯೆೆಯಲ್ಲಿ ಖರೀದಿಸಿದ್ದಾಾರೆ. ಹೊಸ ತಂತ್ರಜ್ಞಾಾನದ ಬಳಕೆ, ಆಧುನಿಕ ಎನಿಸುವ ವಿನ್ಯಾಾಸ ಮತ್ತು ಜಾಗತಿಕವಾಗಿ ಕಿಯಾ ಹೊಂದಿರುವ ಬ್ರಾಾಂಡ್‌ನಿಂದಾಗಿ, ಒಟ್ಟಾಾರೆ ಕಾರು ಮಾರುಕಟ್ಟೆೆ ಕುಸಿತದಲ್ಲಿದ್ದರೂ, ಕಿಯಾ ಕಾರುಗಳ ಮಾರಾಟ ನಡೆದಿದೆ.

ಬೆಂಗಳೂರಿನ ಪಕ್ಕದಲ್ಲೇ ತಯಾರಿ
ಕಿಯಾ ಮೋಟಾರ್‌ಸ್‌ ಇಂಡಿಯಾ ಕುರಿತು ನೀವೆಲ್ಲಾಾ ಸಾಕಷ್ಟು ಕೇಳಿದ್ದರೂ, ಅದು ಅನುಸರಿಸುತ್ತಿಿರುವ ಮಾರುಕಟ್ಟೆೆ ತಂತ್ರ ಹೆಚ್ಚಿಿನವರಿಗೆ ತಿಳಿದಿರಲಿಕ್ಕಿಿಲ್ಲ. ಬೆಂಗಳೂರಿಗೆ ತಾಗಿಕೊಂಡಂತೆ, ಆದರೆ ಕರ್ನಾಟಕದ ಗಡಿಯಿಂದ ಹೊರಗೆ ಕಿಯಾ ಮೋಟಾರ್‌ಸ್‌ ತನ್ನ ಫ್ಯಾಾಕ್ಟರಿಯನ್ನು ಆರಂಭಿಸಿದೆ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆೆಯ ಪೆನುಕೊಂಡದ ಬಳಿ ಇರುವ ಕಿಯಾ ಸಂಸ್ಥೆೆಯ ಬೃಹತ್ ಕಾರು ತಯಾರಿಕಾ ಘಟಕದ ಅಗಾಧತೆಯನ್ನು ತಿಳಿಯಲು, ಅದನ್ನು ಒಮ್ಮೆೆ ಕಣ್ಣಿಿನಿಂದ ನೋಡಬೇಕು. ಬೆಂಗಳೂರಿನಿಂದ ಅನಂತಪುರದ ಕಡೆ ಸಾಗಿದರೆ, ದಾರಿಯ ಇಕ್ಕೆೆಲಗಳಲ್ಲೂ ಕಿಯಾ ಮೋಟಾರ್‌ಸ್‌‌ನ ದೊಡ್ಡ ಗಾತ್ರದ ಫ್ಯಾಾಕ್ಟರಿ ಮತ್ತು ಇತರ ಕಟ್ಟಡಗಳು ಕಾಣಿಸುತ್ತವೆ. ವರ್ಷಕ್ಕೆೆ ಸುಮಾರು 3,00,000 ಕಾರುಗಳನ್ನು ಇಲ್ಲಿ ತಯಾರಿಸುವ ಇರಾದೆ ಕಿಯಾ ಸಂಸ್ಥೆೆಯದ್ದು! ಪೆನುಕೊಂಡ ಬಳಿಯ ಬಂಜರು ಭೂಮಿಯಲ್ಲಿ ಕಿಯಾ ತನ್ನ ತಯಾರಿಕಾ ಘಟಕವನ್ನು ಆರಂಭಿಸಲು ಮುಖ್ಯ ಕಾರಣ – ಪ್ರಮುಖ ಕಾರು ಮಾರುಕಟ್ಟೆೆಯಾದ ಬೆಂಗಳೂರಿಗೆ ಅತಿ ಸನಿಹ, ರೈಲು ಸಂಪರ್ಕ, ಹೆದ್ದಾಾರಿ ಸಂಪರ್ಕ. ಹೆಚ್ಚಿಿನ ಸೌಲಭ್ಯಕ್ಕಾಾಗಿ ಬೆಂಗಳೂರನ್ನು ಆಶ್ರಯಿಸಿರುವ ಈ ಫ್ಯಾಾಕ್ಟರಿಯ ಜಾಗವನ್ನು ಆಂಧ್ರ ಪ್ರದೇಶದ ಸರಕಾರವು ಕಿಯಾ ಸಂಸ್ಥೆೆಗೆ ಹೆಚ್ಚಿಿನ ಪ್ರಾಾಶಸ್ತ್ಯದಿಂದ ನೀಡಿದೆ.

ಗ್ರಾಹಕರನ್ನು ಸೆಳೆದ ಕಿಯಾ
ಭಾರತದ ಮಟ್ಟಿಿಗೆ ಹೊಸ ಸಂಸ್ಥೆೆ ಎನಿಸಿದರೂ, ಇಲ್ಲಿನ ಗ್ರಾಾಹಕರು ಕಿಯಾ ತಯಾರಿಸಿದ ಕಾರುಗಳನ್ನು ಕೊಳ್ಳಲು ಮುಗಿಬೀಳುವುದಾದರೂ ಏತಕ್ಕೆೆ? ದಕ್ಷಿಿಣ ಕೊರಿಯಾದ ಈ ಜಾಗತಿಕ ಕಾರು ತಯಾರಿಕಾ ಸಂಸ್ಥೆೆ, ಭಾರತೀಯರ ಮೇಲೆ ಮಾಡಿದ ಮೋಡಿಯಾದರೂ ಅದೇನು? ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಿಯಾ ಮೋಟಾರ್‌ಸ್‌‌ಗೆ ಇರುವ ಬ್ರಾಾಂಡ್ ನೇಮ್, ಇಲ್ಲೂ ಕೆಲಸ ಮಾಡಿದೆ.

ಕಿಯಾ ಈಗ ಭಾರತದ ಮಾರುಕಟ್ಟೆೆಗೆ ಬಿಡುಗಡೆ ಮಾಡಿರುವ ಕಾರು ಕಿಯಾ ಸೆಲ್ಟೋೋಸ್. ಆರಂಭಿಕ ಬೆಲೆ ರು.9.69 ಲಕ್ಷದಿಂದ ಆರಂಭಿಸಿ, ಕಾರಿನಲ್ಲಿ ಅಳವಡಿಸಿರುವ ಸೌಲಭ್ಯಗಳನ್ನು ಅನುಸರಿಸಿ ಈ ಕಾರಿನ ಬೆಲೆ ರು.15.99 ಲಕ್ಷ ದಾಟಬಹುದು. ಎಸ್‌ಯುವಿ ಸ್ವರೂಪದಲ್ಲಿ ಹೊರಬಂದಿರುವ ಕಿಯಾ ಸೆಲ್ಟೋೋಸ್ ಈಗ ಭಾರತೀಯರ ಮನ ಸೆಳೆದಿದೆ ಎಂದೇ ಹೇಳಬೇಕು. ಬೆಂಗಳೂರು ಸೇರಿದಂತೆ, ಭಾರತದ ಹಲವು ನಗರಗಳಲ್ಲಿ ಕಿಯಾ ಸೆಲ್ಟೋೋಸ್ ಜನಮೆಚ್ಚುಗೆ ಗಳಿಸಿದ್ದು, ಭಾರತದ ರಸ್ತೆೆಗಳಲ್ಲಿ ತನ್ನ ಸಂಚಾರ ಆರಂಭಿಸಿದೆ.

16 ಮಾದರಿಯಲ್ಲಿ ಸೆಲ್ಟೋಸ್
ಕಿಯಾ ಸೆಲ್ಟೋೋಸ್ ಭಾರತದಲ್ಲಿ ಸುಮಾರು 16 ಅವರತಣಿಕೆಗಳಲ್ಲಿ ಲಭ್ಯ. ಪೆಟ್ರೋೋಲ್ ಎಂಜಿನ್‌ಗಳಲ್ಲಿ ಎರಡು ಮಾದರಿ, ಡೀಜಲ್ ಎಂಜಿನ್‌ನ ಒಂದು ಮಾದರಿ ಹೊಂದಿರುವ ಈ ಕಾರುಗಳು ಮೂರನೆಯ ತಲೆಮಾರಿನ ಸ್ಮಾಾರ್ಟ್‌ಸ್ಟ್ರೀಮ್ ಎಂಜಿನ್‌ಗಳಾಗಿವೆ. ಇವೆಲ್ಲವೂ ಬಿಎಸ್6 ಗುಣಮಟ್ಟದಲ್ಲಿವೆ. ಎರಡು ಕೀ ಟ್ರಿಿಮ್‌ಗಳಲ್ಲಿ ಕಿಯಾ ಸೆಲ್ಟೋೋಸ್ ಲಭ್ಯ – ಟೆಕ್ ಲೈನ್ ಮತ್ತು ಜಿಟಿ ಲೈನ್. ಇವುಗಳಲ್ಲಿ ತಲಾ ಐದು ಅವತರಣಿಕೆಗಳಿವೆ. ಎಲ್‌ಇಡಿ ಹೆಡ್ ಲ್ಯಾಾಂಪ್ ಹೊಂದಿರುವ ಈ ಎಸ್‌ಯುವಿ, ಎಲ್‌ಇಡಿ ಟೈಲ್‌ಲೈಟ್, 17 ಇಂಚು ಚಕ್ರ, ಎಲ್‌ಇಡಿ ಫಾಗ್ ಲ್ಯಾಾಂಪ್ ಮೊದಲಾದ ಸೌಲಭ್ಯ ಹೊಂದಿದೆ. 10.25 ಇಂಚಿನ ಇನ್‌ಫೋಟೈನ್‌ಮೆಂಟ್, ಆ್ಯಪಲ್ ಕಾರ್‌ಪ್ಲೇ, ಅಂದ್ರೋಯ್‌ದ್‌ ಆಟೊ, 8 ಸ್ಪೀಕರ್‌ನ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮೊದಲಾದವು ಹೊಸ ತಲೆಮಾರಿನ ಯುವ ಗ್ರಾಾಹಕರ ಮನ ಗೆಲ್ಲಬಲ್ಲವು.

ರಿಮೋಟ್ ಇಂಜನ್ ಸ್ಟಾಾರ್ಟ್, ಎಸಿ ಕಂಟ್ರೋೋಲ್, ಟೈರ್ ಪ್ರೆೆಷರ್ ಮಾನಿಟರಿಂಗ್ ಸಿಸ್ಟಂ, ಡೈವಿಂಗ್ ವಿಧಾನದಲ್ಲಿ ನಾರ್ಮಲ್, ಇಕೋ ಮತ್ತು ಸ್ಪೋೋರ್ಟ್, ಕೆಸರು ಮತ್ತು ಹಿಮದಲ್ಲಿ ಚಲಿಸಲು ಅಗತ್ಯ ಎನಿಸುವ ಟ್ರಾಾಕ್ಷನ್ ಮೋಡ್ ಮೊದಲಾದವು ಕಾರಿನ ಯುಟಿಲಿಟಿಯನ್ನು ಹೆಚ್ಚಿಿಸಿವೆ. ಹೊಸ ತಂತ್ರಜ್ಞಾಾನ, ಆಧುನಿಕ ಸೌಲಭ್ಯಗಳೇ ಕಿಯಾ ಸೆಲ್ಟೋೋಸ್ ಯಶಸ್ಸಿಿನ ಕೀಲಿ ಕೈ ಎನ್ನಬಹುದು.

ಕಿಯಾ ದಿಂದ ಹೊಸ ಕಾರುಗಳು
ಕಿಯಾ ಮೋಟಾರ್‌ಸ್‌ ಭಾರತದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಕಿಯಾ ಪಿಕಾಂಟೋ (ರು.5 ರಿಂದ 8 ಲಕ್ಷ), ಕಿಯಾ ರಿಯೋ (ರು.6 ರಿಂದ ರು.10 ಲಕ್ಷ), ಕಿಯಾ ಸ್ಟೋೋನಿಕ್ (ರು.9 ರಿಂದ ರು.10 ಲಕ್ಷ), ಕಿಯಾ ಸ್ಪೋೋರ್ಟೇಜ್ (ರು. 15ರಿಂದ ರು.20 ಲಕ್ಷ), ಕಿಯಾ ಸೆರಾಟೋ (ರು.15ರಿಂದ ರು.19ಲಕ್ಷ), ಕಿಯಾ ಸ್ಟಿಿಂಜರ್ ಜಿಟಿ (ರು. 40ರಿಂದ ರು.45 ಲಕ್ಷ) – ಇವು ಕಿಯಾದಿಂದ ಹೊರಬರಲಿರುವ ಕೆಲವು ಮಾದರಿಗಳು. ಕಡಿಮೆ ಬೆಲೆಯ ಮಾದರಿಗಳಿಂದ ಆರಂಭಿಸಿ, ದುಬಾರಿ ಬೆಲೆಯ ಕಾರುಗಳು ಕಿಯಾದ ಬತ್ತಳಿಕೆಯಲ್ಲಿದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ಭಾರತದ ಮಾರುಕಟ್ಟೆೆಯಲ್ಲಿ ಸಾಕಷ್ಟು ಹವಾ ಸೃಷ್ಟಿಿಸಬಲ್ಲದು. ಜತೆಗೆ, ಈಗ ಭಾರತದಲ್ಲಿ ಸ್ಥಾಾಪಿತವಾಗಿರುವ ಮಾರುತಿ, ಹುಂಡೈ ಸೇರಿದಂತೆ ಪ್ರಮುಖ ಕಾರು ತಯಾರಿಕಾ ಸಂಸ್ಥೆೆಗಳಿಗೆ ಕಿಯಾ ಕಠಿಣ ಸ್ಪರ್ಧೆ ನೀಡಬಲ್ಲದು.

Leave a Reply

Your email address will not be published. Required fields are marked *