Friday, 3rd April 2020

ಮತ್ತೆ ಆಪರೇಷನ್ ಕಮಲ?

ಸುಳಿವು ನೀಡಿದ ಲಿಂಬಾವಳಿ ಕೈ-ದಳ ತಳಮಳ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ರಾಜ್ಯದಲ್ಲಿ ಬಿಜೆಪಿ ಸರಕಾರದ ಅಳಿವು-ಉಳಿವಿನ ಪ್ರಶ್ನೆೆಯಾಗಿರುವ ಉಪಚುನಾವಣೆಯಲ್ಲಿ ನಿರೀಕ್ಷಿಿತ ಫಲ ಸಿಗದಿದ್ದರೆ, ಮತ್ತೊೊಂದು ಸುತ್ತಿಿನ ಆಪರೇಷನ್ ಕಮಲಕ್ಕೆೆ ಬಿಜೆಪಿ ಸಜ್ಜಾಾಗಿದೆಯೇ ಎನ್ನುವ ಪ್ರಶ್ನೆೆಗಳು ಹುಟ್ಟಿಿಕೊಂಡಿವೆ.
ಉಪಚುನಾವಣೆಯಲ್ಲಿ 12 ಕ್ಷೇತ್ರ ಗೆಲ್ಲುವ ನಿರೀಕ್ಷೆೆಯಲ್ಲಿದ್ದ ಬಿಜೆಪಿಯ ಆಂತರಿಕ ಸಮೀಕ್ಷೆೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆಗಳಿವೆ ಎನ್ನುವ ವರದಿಗಳು ಬರುತ್ತಿಿದ್ದಂತೆ, ಇದೀಗ ಮತ್ತೊೊಮ್ಮೆೆ ಆಪರೇಷನ್ ಕಮಲದ ಆತಂಕ ಕಾಂಗ್ರೆೆಸ್-ಜೆಡಿಎಸ್ ನಾಯಕರಲ್ಲಿ ಶುರುವಾಗಿದೆ.
ಆಪರೇಷನ್ ಕಮಲದಿಂದ ತಪ್ಪಿಿಸಿಕೊಳ್ಳುವ ಉದ್ದೇಶದಿಂದ ಈಗಾಗಲೇ ಜೆಡಿಎಸ್ ನಾಯಕರು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಮಾತುಗಳನ್ನು ಹರಿಬಿಟ್ಟಿಿದ್ದಾಾರೆ. ಆದರೂ ಜೆಡಿಎಸ್ ಅನ್ನು ಪೂರ್ಣ ಪ್ರಮಾಣದಲ್ಲಿ ನಂಬಲು ಬಿಜೆಪಿ ವರಿಷ್ಠರು ಸಿದ್ಧರಿಲ್ಲದೆ ಮತ್ತೊೊಮ್ಮೆೆ ಈ ಪ್ರಯತ್ನಕ್ಕೆೆ ಕೈಹಾಕಿದ್ದಾಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಈಗಾಗಲೇ ಈ ಸಂಬಂಧ ಬಿಜೆಪಿ ವರಿಷ್ಠರು ರಾಜ್ಯ ನಾಯಕರೊಂದಿಗೆ ಒಂದು ಸುತ್ತಿಿನ ಮಾತುಕತೆ ನಡೆಸಿದ್ದು, ಯಾವ ಶಾಸಕರು ಪಕ್ಷಾಾಂತರ ಮಾಡಲು ಸಜ್ಜಾಾಗಿದ್ದಾಾರೆ? ಅವರ ಬೇಡಿಕೆಗಳೇನು ಎನ್ನುವ ಬಗ್ಗೆೆ ಮಾಹಿತಿ ಕಲೆಹಾಕಲು ಸೂಚನೆ ನೀಡಿದ್ದಾಾರೆ. ಮೈತ್ರಿಿ ಸರಕಾರ ಬೀಳಿಸಲು ಸಿದ್ಧಪಡಿಸಿದ್ದ ತಂಡವೇ ಇದೀಗ ಮತ್ತೊೊಂದು ಸುತ್ತಿಿನ ಆಪರೇಷನ್ ಕಮಲಕ್ಕೆೆ ಸಜ್ಜಾಾಗಿದೆ ಎನ್ನುವ ಅನುಮಾನಗಳು ಇದೀಗ ಶುರುವಾಗಿದೆ.

ಜೆಡಿಎಸ್ ಶಾಸಕರು ಸಂಪರ್ಕದಲ್ಲಿದ್ದಾಾರೆ:
ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿಿರುವ ಆಪರೇಷನ್ ಕಮಲಕ್ಕೆೆ ಪೂರಕ ಎನ್ನುವ ರೀತಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರು ಸುಳಿವು ನೀಡಿದ್ದು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸರಕಾರ ಪತನವಾಗುವುದಿಲ್ಲ ಎನ್ನುವ ವಿಶ್ವಾಾಸದ ಮಾತುಗಳನ್ನು ಆಡಿದ್ದಾಾರೆ. ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರ ಪ್ರಚಾರ ನಡೆಸುವ ವೇಳೆ ಮಾತನಾಡಿದ ಅವರು, ಜೆಡಿಎಸ್‌ನ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಫಲಿತಾಂಶ ಬಂದ ಬಳಿಕ ರಾಜಕೀಯ ಧ್ರುವೀಕರಣ ಆಗಲಿದೆ. ಯಾವ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾಾರೆ? ಎಷ್ಟು ಜನ ಇದ್ದಾರೆ ಎಂಬುದು ಚುನಾವಣೆ ಫಲಿತಾಂಶದ ಬಳಿಕ ತಿಳಿಯಲಿದೆ ಎನ್ನುವ ಮೂಲಕ ಜೆಡಿಎಸ್‌ಗೆ ಶಾಕ್ ನೀಡಿದ್ದಾಾರೆ.

ಬಿಜೆಪಿ ಸರಕಾರ ರಕ್ಷಣೆಗೆ ಬದ್ಧ ಎಂದು ಎಚ್‌ಡಿಕೆ ಹೇಳುತ್ತಾಾರೆ. ರಾಜಕೀಯ ಧ್ರುವೀಕರಣ ಆಗುವಾಗ ಜೆಡಿಎಸ್ ಶಾಸಕರು ಬಿಜೆಪಿಗೆ ಬರುವ ಮನಸ್ಸು ಮಾಡಿದ್ದಾರೆ. ಇದೀಗ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೇ ಈ ರೀತಿ ಹೇಳುತ್ತಿಿದ್ದಾರೆ.
ರವಿಂದ ಲಿಂಬಾವಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *