Friday, 1st December 2023

ಕರೋನಾ ನಿಯಂತ್ರಿಸಲು ಕಡ್ಡಾಯ ಮಾಸ್ಕ್ ಧರಿಸಿ: ಡಾ.ಸುಧಾಕರ್

ಬೆಂಗಳೂರು: ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರೋನಾ ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಸದ್ಯ ಡಂದ ಹಾಕಲ್ಲ. ಆದರೆ ಎಲ್ಲರೂ ಮಾಸ್ಕ್ ಧರಿಸಬೇಕು ಅಂದಿದ್ದಾರೆ. ಹಲವೆಡೆ ಜನರು ಮಾಸ್ಕ್ ಧರಿಸುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ದಂಡ ಪ್ರಯೋಗ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ನಾಲ್ಕನೇ ಅಲೆ ತಡೆಯಲು ಬಿಬಿಎಂಪಿ ಮೇ ಮೊದಲ ವಾರದಿಂದ ಮಾಸ್ಕ್ ಹಾಕದಿದ್ದರೆ ದಂಡ ಪ್ರಯೋಗ ಮಾಡಲು ನಿರ್ಧರಿಸಿದೆ. ಮಾಸ್ಕ್ ಹಾಕದೆ ಓಡಾಡುವವರಿಗೆ 250 ರೂಪಾ ಯಿ ದಂಡ ಹಾಕಲು ತೀರ್ಮಾನ ಮಾಡಲಾಗಿದೆ. ಏಪ್ರಿಲ್ ಅಂತ್ಯದವರೆಗೂ ಮಾಸ್ಕ್ ಹಾಕ ದಿದ್ದರೆ ವಿನಾಯಿತಿ ನೀಡಿ. ಜೊತೆಗೆ ಜಾಗೃತಿ ಮೂಡಿಸಿ ಕಳುಹಿಸಿ ಅಂತ ಮಾರ್ಷೆಲ್​ಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇಷ್ಟು ದಿನ ಮಾಸ್ಕ್ ಮರೆತಿದ್ದ ಜನರಿಗೆ ಈಗ ಮತ್ತೆ ಮಾಸ್ಕ್ ಬಿಸಿ ತಟ್ಟಲಿದೆ. ಇನ್ನು ಮುಂದೆ ಮಾಸ್ಕ್ ಧರಿಸಿದರೆ ಮಾತ್ರ ಬಿಎಂಟಿಸಿ ಬಸ್ ಹತ್ತಲು ಅವಕಾಶ ನೀಡಲಾಗುತ್ತದೆ. ಡ್ರೈವರ್, ಕಂಡಕ್ಟರ್ ಕಡ್ಡಾಯವಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಈ ಬಗ್ಗೆ ಬಿಎಂಟಿಸಿ ಶೀಘ್ರದಲ್ಲೇ ಗೈಡ್​ಲೈನ್ಸ್ ಜಾರಿಗೊಳಿಸುತ್ತದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,927 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 32 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಪ್ರಸ್ತುತ 16,279 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಸೋಂಕಿತರ ಒಟ್ಟು ಸಂಖ್ಯೆ 4,30,65,496ಕ್ಕೆ ಮುಟ್ಟಿದೆ.

ದೇಶದಲ್ಲಿ 2,483 ಮಂದಿಯಲ್ಲಿ ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಈವರೆಗೆ ಒಟ್ಟು 4,25,25,563 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

error: Content is protected !!