Tuesday, 9th August 2022

ಟಾಲಿವುಡ್ ನಿರ್ದೇಶಕ ಪಿ.ಚಂದ್ರಶೇಖರ್ ರೆಡ್ಡಿ ನಿಧನ

ಚೆನ್ನೈ: ಟಾಲಿವುಡ್ ಚಲನ ಚಿತ್ರ ನಿರ್ದೇಶಕ ಪಿ.ಚಂದ್ರಶೇಖರ್ ರೆಡ್ಡಿ(86) ಚೆನ್ನೈನಲ್ಲಿ ನಿಧನರಾಗಿದ್ದಾರೆ.

ಸುಮಾರು 80 ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ತೆಲುಗು ಚಿತ್ರ ರಂಗದ ಮೇರು ನಟರುಗಳಾದ ಡಾ.ಎನ್.‌ ಟಿ. ರಾಮರಾವ್‌, ಡಾ. ಅಕ್ಕಿನೇನಿ ನಾಗೇಶ್ವರರಾವ್‌, ಕೃಷ್ಣ, ಶೋಭನ್ ಬಾಬು, ಕೃಷ್ಣಂ ರಾಜು ರಂತಹ ಅಂದಿನ ಸುಪ್ರಿಸಿದ್ದ ನಾಯಕರೆಲ್ಲರ ಚಿತ್ರಗಳನ್ನು ನಿರ್ದೇಶಿಸಿದ್ದರು.

ಸೂಪರ್ ಸ್ಟಾರ್ ಕೃಷ್ಣ ಅವರ ಬಹುತೇಕ ಚಿತ್ರಗಳನ್ನು ನಿರ್ದೇಶಿಸಿದ್ದರು. ಪಿ.ಸಿ ರೆಡ್ಡಿ ಅವರ ನಿಧನಕ್ಕೆ ಟಾಲಿವುಡ್ ಕಲಾವಿದರು ಸಂತಾಪ ಸೂಚಿಸಿದ್ದಾರೆ.