Sunday, 25th September 2022

ಸರ್ಕಾರದ ನಿರ್ಧಾರ ಅಭ್ಯರ್ಥಿಗಳಿಗೆ ಇಕ್ಕಟ್ಟಿಗೆ ಸಿಲುಕಿಸಿದೆ: ಪ್ರಿಯಾಂಕ್ ಖರ್ಗೆ

ಕಲಬುರಗಿ: ತನಿಖೆ ಮುಗಿಯೋ ಮುಂಚೆಯೇ ಮರು ಪರೀಕ್ಷೆ ಎಂದು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಮಾಜಿ ಸಚಿವ ಕೆಪಿಸಿಸಿ ವಕ್ತಾರ ಪ್ರೀಯಾಂಕ್ ಖರ್ಗೆ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಿಎಸ್ಐ ಅಕ್ರಮ ನಡೆದಿರುವುದು ಕಲಬುರಗಿಯಲ್ಲಿ ಅಷ್ಟೇ ಅಲ್ಲ. ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಿನಲ್ಲೂ ಸಹ ಅಕ್ರಮ ನಡೆದಿದೆ. ಈ ಬಗ್ಗೆ ಸಿಐಡಿ ಅವರಿಗೂ ಮಾಹಿತಿ ಇದೆ, ಇದೆ ವಿಚಾರವಾಗಿ ಅಭ್ಯರ್ಥಿಗಳು ಸರ್ಕಾರಕ್ಕೆ ದೂರು ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ನೂರಾರು ಜನ ಇರಬಹುದು. ತನಿಖೆ ನಡೆಯಲಿ ತನಿಖೆಗೂ ಮುನ್ನವೇ ಮರು ಪರೀಕ್ಷೆ ಘೋಷಿಸುವುದು ಸರಿಯಲ್ಲ.

ದಿವ್ಯ ಹಾಗರಗಿ ಬಂಧನ ಸರ್ಕಾರದ ದೊಡ್ಡ ಸಾಧನೆ ಏನಲ್ಲ. ದಿವ್ಯಾ ಬಂಧನದ ನಂತರ ಸರ್ಕಾರದವರು ಅವರ ಬೆನ್ನು ಅವರು ಚಪ್ಪರಿಸಿಕೊಳ್ತಿದ್ದಾರೆ. ಸಂಪೂರ್ಣ ತನಿಖೆ ಯಾವ ದಿಕ್ಕಿನಲ್ಲಿ ಹೋಗಿದೆ ಅಂತಾ ಗೃಹ ಮಂತ್ರಿಗಳಿಗೆ ಅರಿವಿಲ್ಲ ಎನಿಸುತ್ತಿದೆ. ಆರ್ ಡಿ ಪಾಟೀಲ್, ದಿವ್ಯಾ ಹಾಗರಗಿ ಬಂಧನ ಇದು ತನಿಖೆ ಹಂತದ ಪ್ರಥಮ ಪ್ರಯತ್ನ. ಹಣ ವರ್ಗಾವಣೆ ಬಗ್ಗೆ ಮಾಹಿತಿ ಎಲ್ಲಿದೆ ಎಂದು ಪ್ರಶ್ನಿಸಿದರು.

ಸರ್ಕಾರ ನಿರ್ಧಾರದಿಂದ ಗೊಂದಲ: ಪಿಎಸ್ ಐ ನೇಮಕಾತಿ ರದ್ದುಗೊಳಿಸಿರೋದಕ್ಕೆ ಸ್ವಾಗತ. ಆದರೆ, ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸುತ್ತಿದೆ, ಇದರಲ್ಲಿ ಸ್ಪಷ್ಟತೆ ಇಲ್ಲ. ಮರು ಪರೀಕ್ಷೆ ಅಂದ್ರೆ ಯಾವ ವಿಚಾರದಲ್ಲಿ. ಲಿಖಿತ ಪರೀಕ್ಷೆಯಾ ಅಥವ ದೈಹಿಕ ಪರೀಕ್ಷೆನಾ..? ತನಿಖೆ ಇನ್ನು ಮುಗಿ ದಿಲ್ಲ, ಓಎಮ್ ಆರ್ ತಿದ್ದುಪಡಿ ಯಿಂದ ಬ್ಲೂ ಟೂತ್ ವರೆಗೆ ಪ್ರಕರಣ ಬಂದು ನಿಂತಿದೆ‌ ಎಂದರು.

ದೈಹಿಕ ಪರೀಕ್ಷೆಯಲ್ಲೂ ಅಕ್ರಮ: ದೈಹಿಕ ಪರೀಕ್ಷೆಯಲ್ಲಿ ಕೂಡ ಅಕ್ರಮದಿಂದ ನೇಮಕಾತಿ ಪಟ್ಟಿಯಲ್ಲಿ ಬಂದಿದ್ದಾರೆ ಅನ್ನೋ ಮಾಹಿತಿ ಇದೆ. ಬೆಳಗಾವಿಯಲ್ಲಿ ಇಬ್ಬರು ಮೂವರು ವಿದ್ಯಾರ್ಥಿಗಳು ವಿಗ್ ಹಾಕಿ ಕೊಂಡು ಬದಿರೋ ಮಾಹಿತಿ ಸರ್ಕಾರದ ಬಳಿ ಇದೆ. ಲಿಖಿತ, ದೈಹಿಕ ಪರೀಕ್ಷೆ ಕೂಡ ಮರು ಮಾಡ್ತಾರಾ ಅನ್ನೋದು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದರು.

ಕೆಲ ಯುವಕರು ಕೋರ್ಟ್ ಮೊರೆ ಹೋಗೊದಾಗಿ ಹೇಳಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಸಮಯ ವ್ಯರ್ಥ ಆಗಿರ ಬಹುದು, ಏಜ್ ಮುಗಿಯಬಹುದು. ಇವತ್ತು ದಿವ್ಯಾ ಹಾಗರಗಿ ಬಂಧನ ನಂತ್ರ ಮರು ಪರೀಕ್ಷೆ ಘೋಷಣೆ ಮಾಡಿದ್ದಾರೆ. ಇದು ಕಲಬುರಗಿಯಲ್ಲಿ ದಾಖಲಾದ ಏಫ್ ಐ ಆರ್ ಬಗ್ಗೆ ಗೃಹ ಮಂತ್ರಿಗಳು ಮಾತಾಡ್ತಿದ್ದಾರೆ. ಬೇರೆ ಬೇರೆ ಕಡೆ ನಡೆದಿರೋ ಅಕ್ರಮದ ಬಗ್ಗೆ ತನಿಖೆ ನಡೆಸಬೇಕಿದೆ. ದೈಹಿಕ ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆ ಗೃಹ ಸಚಿವರ ನಿಲುವು ಏನು ಎಂಬುದು ಸ್ಪಷ್ಟಪಡಿಸ ಬೇಕು. ನೋಂದಿರುವ 57 ಸಾವಿರ ಯುವಕರಿಗೆ ಉತ್ತರ ಕೊಟ್ಟು ಗೊಂದಲ ತಿಳಿಗೊಳಿಸಬೇಕು ಎಂದಿದ್ದಾರೆ.

ವಿಚಾರಣೆಗೆ ಹಾಜರಾಗುವುದಿಲ್ಲ: ನಮ್ಮ ರಾಜ್ಯದಲ್ಲಿ 10 ಲಕ್ಷ ಜನ ಕೆಪಿಎಸ್ ಸಿ ಪರೀಕ್ಷೆ ಬರೆದಿದ್ದಾರೆ, ಇದರಲ್ಲಿ ಎಷ್ಟು ಜನ ಅಕ್ರಮ ಮಾಡಿದ್ದಾರೆ..,? ಈ ಬಗ್ಗೆ ಹೆಚ್ಚಿನ ಪ್ರಶ್ನೆ ಕೇಳಿದ್ರೆ ನನಗೆ ಮತ್ತೊಂದು ನೋಟಿಸ್ ಕಳಿಸ್ತಾರೆ ಎಂದು ವ್ಯಂಗ್ಯ ವಾಡಿದ ಪ್ರೀಯಾಂಕ್ ಖರ್ಗೆ ಅವರು, ಕಾನೂನಿನಲ್ಲಿ ನಾನು ಹಾಜರಾಗಬೇಕು ಅನ್ನೋದು ಇಲ್ಲವೆ ಇಲ್ಲ, ನಾನ್ಯಾಕೆ ಹಾಜರಾಗಬೇಕು.? ನೋಟಿಸ್ ಗೆ ಉತ್ತರ ಯಾಕೆ ಕೊಡಬೇಕು ಎಂದರು.