Monday, 5th December 2022

ಲಾಫ್ಟರ್ ಚಾಲೆಂಜ್’ ಖ್ಯಾತಿಯ ಪರಾಗ್ ಕಾನ್ಸಾರ ನಿಧನ

ಮುಂಬೈ: ಹಾಸ್ಯನಟ ರಾಜು ಶ್ರೀವಾಸ್ತವ್ ಅವರ ನಿಧನದ ಸಾವಿನ ಸುದ್ದಿ ಮಾಸುವ ಮುನ್ನವೇ ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ಖ್ಯಾತಿಯ ಪರಾಗ್ ಕಾನ್ಸಾರ ನಿಧನರಾಗಿದ್ದಾರೆ.

51 ವರ್ಷದ ಪರಾಗ್ ಕಾನ್ಸಾರ ಸಾವಿನ ಸುದ್ದಿಯನ್ನು ಅವರ ಸ್ನೇಹಿತ ಮತ್ತು ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸುನಿಲ್ ಪಾಲ್ ಖಚಿತಪಡಿಸಿ ದ್ದಾರೆ.

ಮಾಹಿತಿ ಹಂಚಿಕೊಂಡಿರುವ ಸುನೀಲ್ ʻಹಲೋ ಸ್ನೇಹಿತರೇ, ಕಾಮಿಡಿ ಪ್ರಪಂಚದಿಂದ ಮತ್ತೊಂದು ಆಘಾತಕಾರಿ ಮತ್ತು ಕೆಟ್ಟ ಸುದ್ದಿ ಹೊರಬಿದ್ದಿದೆ. ಪರಾಗ್ ಕಂಸಾರಾ ಜೀ ನಮ್ಮ ‘ಲಾಫ್ಟರ್ ಚಾಲೆಂಜ್’ ಸಹ ಸ್ಪರ್ಧಿ ವಿಧಿವಶ ರಾಗಿದ್ದಾರೆ.

ರಿವರ್ಸ್ ಥಿಂಕಿಂಗ್ ಕಾಮಿಡಿ ಮತ್ತು ನಮ್ಮನ್ನು ನಗಿಸುತ್ತಿದ್ದ ಪರಾಗ್ ಇನ್ನಿಲ್ಲ. ಕಳೆದ ಕೆಲವು ದಿನಗಳಿಂದ ಹಾಸ್ಯ ಲೋಕದಲ್ಲಿ ಆಗಿರುವ ದೊಡ್ಡ ನಷ್ಟಗಳ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ಒಂದೊಂದಾಗಿ ಹಾಸ್ಯದ ಆಧಾರಸ್ತಂಭಗಳು ನಮ್ಮಿಂದ ದೂರ ಸರಿಯುತ್ತಿದೆ’ ಎಂದು ಬರೆದುಕೊಂಡಿದ್ದಾರೆ.