Monday, 19th August 2019

ಪರಿಹಾರ ಕಾರ್ಯಗಳು ತ್ವರಿತ ಗೊಳ್ಳಲಿ…

ಕಳೆದೊಂದು ವಾರದಿಂದ ಸುರಿದ ಧಾರಾಕಾರ ಮಹಾಮಳೆಗೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಕಣ್ಣಮುಂದೆಯೇ ಆಸ್ತಿಿಪಾಸ್ತಿಿ, ಮನೆಗಳು, ಜಾನುವಾರು, ವಿದ್ಯುತ್ ಕಂಬ, ರಸ್ತೆೆ, ಸೇತುವೆ, ಅಣೆಕಟ್ಟು ಪ್ರವಾಹಕ್ಕೆೆ ಕೊಚ್ಚಿಿ ಹೋಗಿವೆ. ಸಂತ್ರಸ್ತರು ಮನೆಮಠಗಳನ್ನು ಕಳೆದುಕೊಂಡು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿಿದ್ದರೆ, ರಕ್ಷಣಾ ಪಡೆಗಳು, ಜಿಲ್ಲಾಡಳಿತ, ಕಂದಾಯ ಇಲಾಖೆ, ಮೆಸ್ಕಾಾಂ, ಗೃಹರಕ್ಷಕ ದಳ, ಪೊಲೀಸ್ ಇಲಾಖೆಗಳು ಹಗಲು ಇರುಳು ನಿದ್ದೆಯಿಲ್ಲದೆ ನಿರಂತರ ಸಂತ್ರಸ್ತರಿಗೆ ಸ್ಪಂದಿಸುತ್ತಿಿವೆ. ಇನ್ನುಳಿದಿರುವುದು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಿಸುವಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಎಚ್ಚರ ವಹಿಸುವ ಅವಶ್ಯಕತೆಯಿದೆ. ಏಕೆಂದರೆ ಕಳೆದ ಬಾರಿಯ ಕೊಡಗು ವಿಪತ್ತಿಿನ ಪರಿಹಾರ ಕಾರ್ಯದಲ್ಲೂ ವಿಳಂಬ, ಸಾಕಷ್ಟು ವ್ಯತ್ಯಾಾಸಗಳು ನಡೆದಿರುವುದರಿಂದ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಿಕೊಳ್ಳಲು ಸಂಬಂಧಪಟ್ಟ ವ್ಯವಸ್ಥೆೆಗಳು ಹೆಚ್ಚು ಕಾಳಜಿ ವಹಿಸುವ ಅವಶ್ಯಕತೆಯಿದೆ. ಸಂಘಟನೆಗಳು, ಸಂಘಸಂಸ್ಥೆೆಗಳು ಕೂಡ ನೊಂದವರ ಪಾಲಿಗೆ ಆಶಾಕಿರಣವಾಗಬೇಕಿದೆ.

ಆದರ್ಶ್ ಶೆಟ್ಟಿಿ ಉಪ್ಪಿನಂಗಡಿ, ಪುತ್ತೂರು

Leave a Reply

Your email address will not be published. Required fields are marked *