Thursday, 23rd March 2023

ಸ್ವಚ್ಛಗೊಂಡ ಪಾರ್ಕ್

ವಿಶ್ವವಾಣಿ ವರದಿ ಪರಿಣಾಮ

ತುಮಕೂರು: ಇಲ್ಲಿನ ಕುವೆಂಪುನಗರದಲ್ಲಿರುವ ನೇತಾಜಿ ಪಾರ್ಕಿನಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಪಾಲಿಕೆ ಸಿಬ್ಬಂದಿ ಸ್ವಚ್ಚಗೊಳಿಸಿದ್ದಾರೆ.

ಪಾರ್ಕ್ನಲ್ಲಿ ಸ್ವಚ್ಚತೆ ಮಾಯ ಎಂಬ ಶೀರ್ಷಿಕೆಯಡಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಪರಿಣಾಮ ದಿಂದಾಗಿ, ಪಾರ್ಕ್ ತುಂಬಾ ಬಿದ್ದಿದ್ದ ಕಸವನ್ನು ತೆರವು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಲಾಗಿದೆ.

ಇತ್ತೀಚೆಗೆ ಹೊಸ ಉಪಕರಣಗಳನ್ನು ಪಾರ್ಕಿನಲ್ಲಿ ಅಳವಡಿಸಿ ಮಕ್ಕಳು, ಸಾರ್ವಜನಿಕರಿಗೆ ಅನು ಕೂಲ ಮಾಡಿಕೊಡಲಾಗಿತ್ತು. ಆದರೆ ಎಲ್ಲೆಂದರಲ್ಲಿ ಬಿದ್ದಿದ್ದ ಕಸ ಕಿರಿಕಿರಿ ಉಂಟುಮಾಡುತ್ತಿತ್ತು. ಬುಧವಾರ ಬೆಳ್ಳಂಬೆಳಗ್ಗೆ ಪಾರ್ಕಿನ ಒಳ ಮತ್ತು ಹೊರಗೆ ಸ್ವಚ್ಚತೆ ಮಾಡಲಾಗಿದೆ.

error: Content is protected !!