Tuesday, 26th October 2021

ಮೇಯರ್ ಸ್ಥಾನ ತಪ್ಪಲು ಪಕ್ಷದವರೇ ಕಾರಣ: ಯತೀಂದ್ರ ಸಿದ್ದರಾಮಯ್ಯ

ಚಾಮರಾಜನಗರ: ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದ, ನಮ್ಮ ಪಕ್ಷದವರೇ ಹುನ್ನಾರ ಮಾಡಿ ಮೈಸೂರು ಮೇಯರ್ ಸ್ಥಾನ ಪ್ರತಿಪಕ್ಷದವರಿಗೆ ಸಿಗುವಂತೆ ಮಾಡಿದರು ಎಂದು ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.

ನಗರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಮೇಯರ್ ಚುನಾವಣೆಯಲ್ಲಿ ನಡೆದ ಘಟನೆ ಬಹಳ ದುರದೃಷ್ಟಕರ. ಒಬ್ಬ ನಾಯಕನಿಗೆ ಹಿನ್ನಡೆ ಮಾಡಲು ನಮ್ಮ ಪಕ್ಷದವರೇ ಕೆಲಸ ಮಾಡಿದ್ದಾರೆ. ಮೇಯರ್ ಸ್ಥಾನ ಪ್ರತಿಪಕ್ಷಕ್ಕೆ ಸಿಗುವ ಹಾಗೆ ಮಾಡಿ ದ್ದಾರೆ. ಈ ಘಟನೆ ಮತ್ತೆ ಮರುಕಳಿಸಬಾರದು ಎಂದು ಹೇಳಿದರು.

ಇಂಥ ಘಟನೆಯಿಂದ ನಮ್ಮ ಒಗ್ಗಟ್ಟು ಒಡೆದಂತೆ ಆಗುತ್ತದೆ. ಹೀಗಾಗಿ ನಾಯಕರಲ್ಲಿ ಒಗ್ಗಟ್ಟು ಇರಬೇಕು ಎಂದು ಹೇಳಿದರು‌.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ‌ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಹಳಷ್ಟು ಒಳ್ಳೆಯ ಅವಕಾಶವಿದೆ. ನಮ್ಮ ನಾಯಕರಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಯತೀಂದ್ರ ಹೇಳಿದರು.

Leave a Reply

Your email address will not be published. Required fields are marked *