Sunday, 31st May 2020

ಪೆಗಾಸಸ್ ಸ್ಪೈವೇರ್ ಖಾಸಗಿ ಮಾಹಿತಿಗೆ ಕನ್ನ?

ಎಲ್.ಪಿ.ಕುಲಕರ್ಣಿ, ಬಾದಾಮಿ

 ಅಂತರ್ಜಾಲ ಜಗತ್ತಿಿನ ಇತ್ತೀಚಿನ ಸುದ್ದಿಗಳನ್ನು ನೋಡಿದರೆ ಒಮ್ಮೊೊಮ್ಮೆೆ ಗಾಬರಿ ಆಗುತ್ತದೆ; ದಿಗಿಲೂ ಆಗುತ್ತದೆ. ನಮ್ಮ ಸುತ್ತಲೂ ಕಳ್ಳರೇ ತುಂಬಿದ್ದಾಾರೇನೋ ಎಂಬ ಶಂಕೆಯೂ ಉತ್ಪತ್ತಿಿಯಾಗುತ್ತದೆ. ನಮ್ಮ ದಿನಚರಿಯು ಆಧುನಿಕವಾದಂತೆಲ್ಲಾಾ, ನಮ್ಮ ಸುತ್ತಲಿನ ಕಳ್ಳರೂ ಅತ್ಯಾಾಧುನಿಕ ವಿಧಾನ ಬಳಸುತ್ತಿಿದ್ದಾಾರೆ. ಇಸ್ರೇಲಿ ಮೂಲದ, ಅತಿ ದುಬಾರಿ ಸ್ಪೈವೇರ್, ನಮ್ಮ ದೇಶದ 121 ಜನರ ಮಾಹಿತಿಯನ್ನು ವಾಟ್‌ಸ್‌‌ಆ್ಯಪ್ ಮೂಲಕ ಕದ್ದಿದೆ ಎಂಬ ಆರೋಪವೂ ಕೇಳಿಬಂದಿದೆ. ಅಂತರ್ಜಾಲದ ಮೂಲಕ ಮಾಹಿತಿ ಕದ್ದು, ಅದನ್ನು ದುರುಪಯೋಗಪಡಿಸಿಕೊಳ್ಳುವ ಖೂಳರ ಬಲೆಯಿಂದ ಬಚಾವಾಗುವುದು ಹೇಗೆ?

ಇಂದಿನ ಜಗತ್ತು ಅಂತರ್ಜಾಲದ ಮೇಲೆ ಅವಲಂಬಿತ. ದಿನಚರಿಯ ಬಹಳಷ್ಟು ಹೆಜ್ಜೆೆಗಳನ್ನು ಇಡಲು ಅಂತರ್ಜಾಲ ಮತ್ತು ಜಾಲತಾಣಗಳ ಅವಶ್ಯಕತೆ ಇದೆ. ಅಡುಗೆ ಮಾಡುವ ಗ್ಯಾಾಸ್ ಬುಕ್ ಮಾಡುವಲ್ಲಿಂದ ಹಿಡಿದು, ವಿದ್ಯೆೆ ಕಲಿತ ನಂತರ ಕೆಲಸಕ್ಕೆೆ ಅರ್ಜಿ ಗುಜರಾಯಿಸುವ ತನಕವೂ ಅಂತರ್ಜಾಲ ಅಗತ್ಯ ಎನಿಸಿದೆ. ಆದರೆ

ನಾವು ಸದ್ಯ ಬಳಸುತ್ತಿಿರುವ ಯಾವುದೇ ಸಾಮಾಜಿಕ ಜಾಲತಾಣವೂ ಸುರಕ್ಷಿತವಲ್ಲ ಎಂದೆನಿಸುತ್ತಿಿದೆ. ಕಾರಣ ನಮ್ಮ ಪ್ರೋೋಫೈಲ್ ನಲ್ಲಿ ಸಂರಕ್ಷಿಸಿಟ್ಟ ಖಾಸಗೀ ಮಾಹಿತಿಗಳಿಗೆ ಕನ್ನ ಹಾಕಿ ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿಿದ್ದಾರೆ!
ಸಾಮಾಜಿಕ ಜಾಲತಾಣ ವಾಟ್ಸಪ್ ಬಳಸಿ ಹ್ಯಾಾಕರ್‌ಗಳು, ಭಾರತದ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರ ಮೊಬೈಲ್ ಮಾಹಿತಿ ಕದ್ದ ಪ್ರಕರಣದ ಬಗ್ಗೆೆ ವಾಟ್ಸಪ್ ಕಂಪನಿಯ ಮೇಲೆ ಕೇಂದ್ರ ಸರ್ಕಾರ ಆಕ್ರೋೋಶ ವ್ಯಕ್ತಪಡಿಸಿದೆ. ಜೂನ್ ತಿಂಗಳಲ್ಲಿ ವಾಟ್ಸಪ್ ಮಾತೃ ಕಂಪನಿ ಫೇಸ್ಬುಕ್ ಅಧಿಕಾರಿಗಳು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ರನ್ನು ಭೇಟಿಯಾಗಿದ್ದರು. ಆದರೆ ಆಗ ಈ ಮೊಬೈಲ್ ಬೇಹುಗಾರಿಕೆ ಪ್ರಕರಣದ ಬಗ್ಗೆೆ ಅವರು ಮಾಹಿತಿಯನ್ನೇ ನೀಡಲಿಲ್ಲ. ಭಾರತ ಸರ್ಕಾರವು ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ತಡೆಯಲು ನಿಯಮ ಬಿಗಿಗೊಳಿಸುತ್ತಿಿದ್ದು, ಇದನ್ನು ತಡೆಯುವ ಉದ್ದೇಶದಿಂದಲೇ ಮಾಹಿತಿ ಬಹಿರಂಗಪಡಿಸಲು ವಾಟ್ಸಪ್ ಅಧಿಕಾರಿಗಳು ಹಿಂದೇಟು ಹಾಕಿದ್ದರು, ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಶಂಕಿಸಿದ್ದಾರೆ.

ಪೆಗಾಸಸ್ ಎಂಬ ಪೆಡಂಭೂತ
ಈ ರೀತಿ ಬೇಹುಗಾರಿಕೆ ಮಾಡುವವರ ಮೂಲ ಪತ್ತೆೆ ಹೇಳಿದ್ದಾರೆ. ಸುರಕ್ಷತೆಗೆ ತಕ್ಕಂತಹ ಸಾಫ್‌ಟ್‌‌ವೇರ್ ರೂಪಿಸಬೇಕು ಎಂದು ಭಾರತ ಸರ್ಕಾರ ಈ ಹಿಂದೆಯೇ ವಾಟ್‌ಸ್‌‌ಆ್ಯಪ್‌ಗೆ ತಾಕೀತು ಮಾಡಿತ್ತು. ಆದರೆ ಬಳಕೆದಾರರ ಖಾಸಗಿತನಕ್ಕೆೆ ಧಕ್ಕೆೆ ಬರುತ್ತದೆ ಎಂಬ ನೆಪ ಹೇಳಿ ಸಾಫ್‌ಟ್‌‌ವೇರ್ ರೂಪಿಸಲು ಅದು ಹಿಂದೇಟು ಹಾಕಿತ್ತು. ಈ ನಡುವೆ, ವಾಟ್ಸಪ್ ದುರ್ಬಳಕೆ ಮಾಡಿಕೊಂಡು ಮೊಬೆಲ್ನಲ್ಲಿನ ಮಾಹಿತಿ ಕದಿಯುತ್ತಿಿರುವ ಸೈಬರ್ ದಾಳಿಕೋರರ ಮೂಲ ಪತ್ತೆೆ ಮಾಡಿ ಅವರ ಮೇಲೆ ಕಂಪನಿ ಕ್ರಮ ಜರುಗಿಸಲಿದೆ, ಬಳಕೆದಾರರ ಹಿತರಕ್ಷಣೆಗೆ ಕ್ರಮ ಜರುಗಿಸಲಿದೆ ಎಂದು ವಾಟ್ಸಪ್ ವಕ್ತಾಾರರರು ಹೇಳಿದ್ದಾರೆ . ಇದೆಲ್ಲ ಸರಿ, ಆದರೆ ಇತ್ತೀಚೆಗೆ ಇಸ್ರೇಲ್‌ನ ಪೆಗಾಸಸ್ ಎಂಬ ಸ್ಪೈ ಸಾಫ್‌ಟ್‌‌ವೇರ್ ವಾಟ್ಸಪ್ ಮೂಲಕ ಸದಮಾರ್ಟ್ ಫೋನ್ ಪ್ರವೇಶಿಸಿ ವೈಯ್ಯಕ್ತಿಿಕ ಮಾಹಿತಿ ಕದಿಯುತ್ತಿಿದೆ ಎಂಬ ಹೊಸ ಸುದ್ದಿ ತಜ್ಞರಿಗೆ ತಲೆನೋವಾಗಿ ಪರಿಣಮಿಸಿದೆ. ಸದ್ಯ ಈ ಪೇಗಾಸಸ್ ಮೂಲಕ ಮಾಹಿತಿ ಕಳವಿಗೆ ಒಳಗಾದವರಲ್ಲಿ ಭಾರತೀಯರೂ ಇದ್ದು, ಅವರಲ್ಲಿ ಪತ್ರಕರ್ತರು,ಸಾಮಾಜಿಕ ಕಾರ್ಯಕರ್ತರು, ಸಿಲೆಬ್ರೆೆಟಿಗಳೆಲ್ಲರ ಮೇಲೆ ಸರ್ಕಾರ ನಿಗ ಇಟ್ಟಿಿದೆ. ಹಾಗಾದರೆ ಪೆಗಾಸಸ್ ಎಂದರೇನು? ಅದು ಹೇಗೆ ಮಾಹಿತಿ ಕಳವು ಮಾಡುತ್ತದೆ? ಎಂಬ ಬಗ್ಗೆೆ ತಿಳಿಯೋಣ.

ಪೆಗಾಸಸ್ ಎನ್ನುವುದು ಇಸ್ರೇಲ್‌ನ ಎನ್ ಎಸ್ ಒ ಗ್ರೂಪ್ (ಘೆಖ ಎ್ಟಟ್ಠ) ಅಭಿವೃದ್ಧಿಿಪಡಿಸಿರುವ ಒಂದು ಗೂಢಚರ ತಂತ್ರಾಾಂಶ. ಇದು ಮೊಬೈಲ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಕಳುವುಮಾಡಲು ಸಹಕರಿಸುವ ತಂತ್ರಜ್ಞಾನ. ಮೊಬೈಲ್ ಬಳಕೆದಾರರಿಗೆ ಗೊತ್ತಾಾಗದೇ ಮೊಬೈಲ್ ಒಳಗೆ ಸೇರಿ ಅಲ್ಲಿರುವ ಮಾಹಿತಿಯನ್ನು ಈ ತಂಡಕ್ಕೆೆ ರವಾನಿಸುತ್ತದೆ.
ವಾಟ್ಸಪ್ ಮೂಲಕ ಮಾಹಿತಿ ಕದಿಯಾಲಾಗುತ್ತಿಿದೆ, ಎಂಬ ಪ್ರಕರಣಕ್ಕೆೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿದ ಎನ್ ಎಸ್ ಒ ಗ್ರುಪ್, ‘ಪೆಗಾಸಸ್ ತಂತ್ರಜ್ಞಾವನ್ನು ಉಗ್ರರ ಚಟುವಟಿಕೆಗಳ, ಚಲನವಲನಗಳ ಮೇಲೆ ನಿಗಾ ಇಡಲು ಅಭಿವೃದ್ಧಿಿಪಡಿಸಿ ಸರ್ಕಾರಕ್ಕೆೆ ನೀಡಲಾಗಿದೆ. ಆದರೆ ಈ ನಿಟ್ಟಿಿನಲ್ಲಿ ಸರಕಾರಗಳು ಸರಿಯಾಗಿ ಕಾರ್ಯನಿರ್ವಹಿಸದೆ, ವಾಟ್ಸಪ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದ್ದಿರಬಹುದು’ ಎಂದು ಉತ್ತರಿಸಿದೆ.

ಈ ಪೆಗಾಸಸ್ ಹೇಗೆ ಮಾಹಿತಿಯನ್ನು ಕದಿಯುತ್ತದೆ? ವಾಟ್ಸಪ್‌ಗೆ ವಿಡಿಯೋ ಕರೆಯೊಂದು ಬರುತ್ತದೆ. ಆ ಕರೆ ರಿಸೀವ್ ಮಾಡದೇ ಇದ್ದರೂ ಕೂಡ ಆ್ಯಕ್ಟಿಿವ್ ಆಗಿರುತ್ತದೆ. ಇಲ್ಲಿರುವ ನಿಗೂಢ ತಂತ್ರಾಾಂಶ ಫೋನ್ ಪ್ರವೇಶಿಸುತ್ತಾಾ ಅಲ್ಲಿರುವ ಮಾಹಿತಿಯನ್ನು ಸರ್ವರ್ ನಿಯಂತ್ರಿಿಸುವ ವ್ಯಕ್ತಿಿಗೆ ಕಳುಹಿಸುತ್ತದೆ. ಇದರಲ್ಲಿ ಪಾಸ್ ವರ್ಡ್, ಕಾಂಟ್ಯಾಾಕ್‌ಟ್ಸ್‌, ಖಾಸಗಿ ದತ್ತಾಾಂಶಗಳು, ಕ್ಯಾಾಲೆಂಡರ್ ಮಾಹಿತಿಗಳು, ನೋಟ್ಸ್, ಟೆಕ್‌ಸ್ಟ್‌ ಮೆಸೇಜ್, ಕ್ಲೌೌಡ್ ದತ್ತಾಾಂಶಗಳು, ಮೆಸೆಂಜಿಂಗ್ ಆ್ಯಪ್ ಗಳ ಮೂಲಕ ಸ್ವೀಕರಿಸುವ – ಸ್ವೀಕರಿಸಿದ, ಹೊರ ಹೋದ ಕಾಲ್ ಗಳ ಸಂಪೂರ್ಣ ವಿವರಗಳುನಲ್ಲಿ ದಾಖಲಾಗುವ ಮೂಲಕ ಕದಿಯಲ್ಪಡುತ್ತವೆ.
ಕದಿಯುವುದೇ ಇವರ ಉದ್ದೇಶ

ಅಷ್ಟೇ ಅಲ್ಲಾ ಸದ್ಯ ನೀವು ಈಗ ಎಲ್ಲಿದ್ದೀರಿ ಎಂಬ ಮಾಹಿತಿಯು ‘ಗೂಗಲ್ ಲೊಕೇಶನ್’ ಮೂಲಕ ಹಂಚಿಕೆಯಾಗುತ್ತದೆ. ಸಿಕ್ರೇಟ್ ಸ್ಥಳದಲ್ಲಿ ನಿವೇನಾದರೂ ಇದ್ದರೆ ನಿಮ್ಮ ಗಮನಕ್ಕೆೆ ಬಾರದೇ ನಿಮ್ಮ ಮೊಬೈಲ್ ಕ್ಯಾಾಮರಾಗಳು, ಮೈಕ್ರೊೊಫೋನ್‌ಗಳು ತನ್ನಿಿಂತಾನಾಗಿಯೇ ಆನ್ ಆಗುತ್ತವೆ. ಈ ಮೂಲಕ ನೀವಿರುವ ಸ್ಥಳದ ಮಾಹಿತಿಯನ್ನು ಪಡೆಯಲಾಗುತ್ತದೆ. ಮಾಹಿತಿ-ದತ್ತಾಾಂಶಗಳನ್ನು ಕದಿಯಲೆಂದೇ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಾಫ್‌ಟ್‌‌ವೇರ್‌ಗಳು ಅಭಿವೃದ್ಧಿಿಯಾಗಿವೆ. ಇವುಗಳು ನಿರ್ದಿಷ್ಟ ಕಂಪೆನಿಯ ಆ್ಯಪ್ ಗಳಲ್ಲದೆ ಥರ್ಡ್ ಪಾರ್ಟಿ ಆ್ಯಪ್ ಗಳನ್ನು ಇನ್ ಸ್ಟಾಾಲ್ ಮಾಡಿದಾಗ ಫೋನ್‌ನಲ್ಲಿ ಇನ್‌ಸ್ಟಾಾಲ್ ಆಗಬಹುದು. ಆದರೆ ಪೆಗಾಸಸ್ ತಂತ್ರಜ್ಞಾನ ಹಾಗಲ್ಲ. ಯಾವುದೇ ಆ್ಯಪ್ ಗಳನ್ನು ಇನ್ ಸ್ಟಾಾಲ್ ಮಾಡದೇ ಇದ್ದರೂ ವಾಟ್ಸಪ್ ಮೂಲಕ ಅದು ಮೊಬೈಲ್‌ಗೆ ಕನ್ನಹಾಕಲು ಶುರುಹಚ್ಚಿಿಕೊಳ್ಳುತ್ತದೆ.

ಪೆಗಾಸಸ್ ಏಕಕಾಲದಲ್ಲಿ ಸುಮಾರು 50 ಫೋನ್‌ಗಳನ್ನು ಹ್ಯಾಾಕ್ ಮಾಡುವ ಸಾಮರ್ಥ್ಯ ಹೊಂದಿದೆ. ಇನ್ನು ಜಗತ್ತಿಿನ ಹಲವು ದೇಶಗಳು ಈ ಪೆಗಾಸಸ್ ಸ್ಪೈವೇರ್ ಬಳಕೆ ಮಾಡುತ್ತಿಿವೆ. ಮೆಕ್ಸಿಿಕೊ ದೇಶ ಅತಿ ಹೆಚ್ಚಿಿನ ಪ್ರಮಾಣದಲ್ಲಿ ಈ ಸ್ಪೈವೇರ್ ಗೂಢಚರ್ಯೆ ನಡೆಸಿದೆ. ಅಲ್ಲಿನ ಸರ್ಕಾರ 2016-17 ರಿಂದ ಅಂದಾಜು 220 ಕೋಟಿ ರೂಪಾಯಿ ವೆಚ್ಚ ಮಾಡಿ, 500 ಕ್ಕೂ ಹೆಚ್ಚು ಮೋಸ್‌ಟ್‌ ವಾಂಟೆಡ್ ಮಂದಿಯ ಫೋನ್‌ಗಳನ್ನು ಟ್ರ್ಯಾಾಪ್ ಮಾಡಿ ಗೂಢಚರ್ಯೆ ನಡೆಸಿತ್ತು. ಇಸ್ರೇಲ್ ಮೂಲದ ಈ ಸ್ಪೈವೇರ್ ಪೆಗಾಸಸ್ 2016 ರಲ್ಲಿ ಆರಂಭವಾಗಿದೆ. ಇಲ್ಲಿಯ ತನಕ ಒಟ್ಟು 20 ದೇಶಗಳ 1400 ಬಳಕೆದಾರರಿಂದ ಮಾಹಿತಿ ಕದ್ದಿದೆ ಎಂದು ಗುರುತಿಸಲಾಗಿದೆ. ಇದೇ ಮೇ ತಿಂಗಳ ಅಂತ್ಯದವರೆಗೆ ಈ ಪೆಗಾಸಸ್, ಜನರನ್ನು ತನ್ನ ಅಂಕಿತದಲ್ಲಿರಿಸಿಕೊಂಡಿದೆ ಎಂಬುದು ತಜ್ಞರೆಲ್ಲರ ವಾದ.

ಈ ತಂತ್ರಜ್ಞಾನವನ್ನು ಖರೀದಿಸಲು ಸುಮಾರು. 8.15 ಕೋಟಿ ರುಪಾಯಿಗಳನ್ನು ನೀಡಬೇಕು; ಅದನ್ನು ಅಳವಡಿಸಲು ಮತ್ತೆೆ ಸುಮಾರು ರು.3.5 ಕೋಟಿ ನೀಡಬೇಕಾಗುತ್ತದೆ. ಇಷ್ಟು ವೆಚ್ಚ ಮಾಡಿದರೆ, 10 ಜನರ ಮಾಹಿತಿಯನ್ನು ಪಡೆಯಬಹುದು! ಪೆಗಾಸಸ್ ಸಂಸ್ಥೆೆಯ ಹೇಳಿಕೆಯ ಪ್ರಕಾರ, ಈ ಸ್ಪೈವೇರ್‌ನ್ನು ಸರಕಾರಗಳಿಗೆ ಮಾತ್ರ ಮಾರಲಾಗುವುದು ಮತ್ತು ಸರಕಾರಗಳು ಇದನ್ನು ಸಮಾಜ ವಿರೋಧಿ ಶಕ್ತಿಿಗಳ ದಮನಕ್ಕೆೆ ಉಪಯೋಗಿಸಬಹುದಂತೆ.

ಎಚ್ಚರಿಕೆಯಿಂದಿರುವುದು ಹೇಗೆ?
ಆಗಾಗ ನಮ್ಮ ಸ್ಮಾಾರ್ಟ್ ಫೋನ್‌ಗಳನ್ನು, ವಾಟ್ಸಪ್ ನಂತಹ ಆ್ಯಪ್‌ಗಳನ್ನು ಅಪ್ಡೇಟ್ ಮಾಡಿಕೊಳ್ಳುತ್ತಿಿರುವುದು ಒಳ್ಳೆೆಯದು. ಮಾತ್ರವಲ್ಲದೇ ಯಾವುದಾದರೂ ಅನ್ಯ ಮತ್ತು ಹೆಚ್ಚು ಬಳಕೆಗೆ ಬಾರದ ಆ್ಯಪ್‌ಗಳಿದ್ದರೆ ಅದನ್ನು ಆ್ಯಪ್ ಸೆಟ್ಟಿಿಂಗ್ ನಲ್ಲಿ ನೋಡಬಹುದು ಮತ್ತು ಅನಪೇಕ್ಷಿತ ಆ್ಯಪ್‌ಗಳನ್ನು ರಿಮೂವ್ ಇಲ್ಲವೇ ಅನ್ ಇನ್‌ಸ್ಟಾಾಲ್ ಮಾಡುವುದೊಳಿತು. ಪ್ರವಾಸ ಮಾಡುತ್ತಿಿದ್ದಾಗ, ಮಲಗುವಾಗ ಅವಶ್ಯಕವಿಲ್ಲದ ಸಂದರ್ಭಗಳಲ್ಲಿ ವಿನಾಕಾರಣ ಇಂಟರ್‌ನೆಟ್‌ನ್ನು ಆನ್ ಮಾಡಿ ಜೇಬಿನಲ್ಲಿಡದೇ, ಆಫ್ ಮಾಡಿಡುವುದು ಒಳ್ಳೆೆಯದು.

ಪೆಗಾಸಸ್ ಎಂಬ ಹಾರುವ ಕುದುರೆ
ಗ್ರೀಕ್ ಪೌರಾಣಿಕ ಕಥೆಗಳಲ್ಲಿ ಬರುವ, ಅತೀಂದ್ರಿಿಯ ಶಕ್ತಿಿ ಹೊಂದಿದ ಪ್ರಾಾಣಿಯೇ ಪೆಗಾಸಸ್. ಸರಳವಾಗಿ ಹೇಳಬಹುದಾದರೆ, ಇದು ಒಂದು ಹಾರುವ ಕುದುರೆ. ಗುಡುಗು, ಸಿಡಿಲುಗಳನ್ನು ಉತ್ಪತ್ತಿಿ ಮಾಡಲು ಶಕ್ತಿಿ ಹೊಂದಿದ್ದ ಪೆಗಾಸಸ್, ತನ್ನ ಕಾಲಿನಿಂದ ತುಳಿದು ನೆಲದಿಂದ ನೀರನ್ನು ಚಿಮ್ಮಿಿಸುವ ಶಕ್ತಿಿಯನ್ನು ಹೊಂದಿತ್ತು. ಯುದ್ಧ ಸಂಬಂಧೀ ಕಥನಗಳಲ್ಲಿ ಪೆಗಾಸಸ್ ಕುದುರೆಯ ಸಾಹಸಗಾಥೆಗಳು ಕಂಡುಬರುತ್ತವೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ, ಬ್ರಿಿಟಿಷ್ ಪ್ಯಾಾರಾಚೂಟ್ ಸೈನ್ಯವು ಹಾರುವ ಕುದುರೆಯನ್ನು ಸಂಕೇತವಾಗಿ ಬಳಸುತ್ತಿಿತ್ತು. ಈಗ ಇಸ್ರೇಲ್‌ನ ಸ್ಪೈವೇರ್‌ನ್ನು ಪೆಗಾಸಸ್ ಎಂದು ಹೆಸರಿಸಲಾಗಿದ್ದು, ಅದು ನಡೆಸುತ್ತಿಿರುವ ಮಾಹಿತಿ ಕನ್ನವು ಎಲ್ಲೆೆಡೆ ಸಂಚಲನ ಸೃಷ್ಟಿಿಸಿದೆ.

Leave a Reply

Your email address will not be published. Required fields are marked *