Tuesday, 25th February 2020

ಇಸ್ಕಾನ್ ದಸರಾದಲ್ಲಿ ಜನತೆ ಭಾವಪರವಶ

ರಾಮ, ಸೀತೆ, ಹನುಮಂತ ಹೀಗೆ ನಾನಾ ಬಗೆಯ ವೇಷ ತೊಟ್ಟಿದ್ದ ಮಕ್ಕಳು

ಇಸ್ಕಾನ್ ಸಂಸ್ಥೆೆಯು ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ವಿಜಯದಶಮಿಯನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿತು. ಸಂಭ್ರಮ, ಸಡಗರ, ಭಕ್ತಿ ಎಲ್ಲವನ್ನೂ ಮೇಳೈಸಿಕೊಂಡಿದ್ದ ಬಸವನಗುಡಿ ನ್ಯಾಾಷನಲ್ ಕಾಲೇಜು ಮೈದಾನ ಜನರನ್ನು ಹೊಸ ವಾತಾವರಣಕ್ಕೆೆ ಕೊಂಡೊಯ್ದಿಿತ್ತು.

ಉತ್ಸವ ಆರಂಭದಲ್ಲಿ ವೇಷಭೂಷಣ ಸ್ಪರ್ಧೆ, ಭಕ್ತಿಿ ಸಂಗೀತ, ಯಜ್ಞ, ಶ್ರೀರಾಮ ಸ್ಮರಣೆ, ಭಜನೆ, ಉಪನ್ಯಾಾಸ, ರಾವಣ- ಕುಂಭಕರ್ಣ ದಹನದಂಥ ಸಾಂಪ್ರದಾಯಿಕ ಆಚರಣೆ ಮೆರಗು ನೀಡಿತಲ್ಲದೇ ಜನತೆ ಸಡಗರದಲ್ಲಿ ತೇಲುವಂತೆ ಮಧ್ಯಾಾಹ್ನ ರಾಮಾಯಣ ವೇಷಭೂಷಣ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊೊಂಡು ಸಂಭ್ರಮಿಸಿದರು. ರಾಮ, ಸೀತೆ, ಹನುಮಂತ ಹೀಗೆ ನಾನಾ ಬಗೆಯ ವೇಷ ತೊಟ್ಟಿಿದ್ದ ಮಕ್ಕಳು ಕಾರ್ಯಕ್ರಮದ ಕಳೆ ಹೆಚ್ಚಿಿಸಿದರು.

ಸಂಜೆ ನಾಲ್ಕು ಗಂಟೆಯಿಂದ ಭಜನೆ ಮತ್ತು ರಾಮತಾರಕ ಯಜ್ಞ ಶಾಸ್ತ್ರೋೋಕ್ತವಾಗಿ ನೆರವೇರಿತು. ವಿಶ್ವಶಾಂತಿಗಾಗಿ ವೇದಿಕ ವಿಧಿವಿಧಾನಗಳೊಂದಿಗೆ ಯಜ್ಞ ನಡೆಯಿತು. ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಶ್ರೀರಾಮನ ಪವಿತ್ರ ನಾಮ ಸ್ಮರಣೆ ಮಾಡಲಾಯಿತು. ಖ್ಯಾಾತ ಗಾಯಕ ವಿಜಯ್ ಪ್ರಕಾಶ್ ತಂಡದ ಭಕ್ತಿಿ ಸಂಗೀತ ಇಡೀ ಕಾರ್ಯಕ್ರಮ ಭಾವಪರವಶವಾಗಿಸಿತು.
ಅಂತಿಮವಾಗಿ ರಾವಣ ಕುಂಭಕರ್ಣ ಪ್ರತಿಕೃತಿ ದಹನ ಗಮನ ಸೆಳೆಯಿತು. ಉತ್ತರ ಭಾರತದಲ್ಲಿ ಹೆಚ್ಚಾಾಗಿ ಆಚರಿಸುವ ಈ ಪರಂಪರೆಯನ್ನು ಇಲ್ಲಿ ವೈಶಿಷ್ಟ್ಯಪೂರ್ಣವಾಗಿ ಪರಿಚಯಿಸಲಾಯಿತು. 50 ಅಡಿ ಎತ್ತರದ ರಾವಣ ಕುಂಭಕರ್ಣರ ಪ್ರತಿಕೃತಿಯನ್ನು ಸುಡುವ ಮೂಲಕ, ಆ ಎರಡು ವ್ಯಕ್ತಿಿತ್ವದ ಕೆಟ್ಟ ಗುಣಗಳನ್ನು ನಾವು ಬಿಡೋಣ ಎಂಬ ಸಂದೇಶ ಸಾರಲಾಯಿತು. ವಿಶೇಷವಾಗಿ ಪರಿಸರ ಸ್ನೇಹಿ ಪಟಾಕಿ ಬಳಸಿ ದಹನ ಕಾರ್ಯಮಾಡಿದ್ದು, ಸೇರಿದ್ದ ಸಾವಿರಾರು ಜನರ ಹರ್ಷೋದ್ಗಾಾರದ ನಡುವೆ

ಇದಕ್ಕೂ ಮುನ್ನ ಇಸ್ಕಾಾನ್ ಅಧ್ಯಕ್ಷ ಮಧು ಪಂಡಿತ ದಾಸ್ ಅವರು ಸ್ಫೂರ್ತಿದಾಯಕ ಉಪನ್ಯಾಾಸ ನೀಡಿದರು. ನಮ್ಮ ಪರಂಪರೆ ಹಾಗೂ ಇಂದಿಗೆ ಅವುಗಳ ಅನಿವಾರ್ಯತೆ ಬಗ್ಗೆೆ ಮನಮುಟ್ಟುವಂತೆ ಸಂದೇಶ ನೀಡಿದರು. ನಮ್ಮೊೊಳಗಿನ ರಾಮ ರಾವಣರ ವರ್ತನೆಗಳು ಬದಲಾಯಿಸಿಕೊಳ್ಳುವ ಅನಿವಾರ್ಯತೆಗಳು ಏನೆಂಬುದನ್ನು ಪ್ರಸ್ತುತಪಡಿಸಿದರು.
ಸಂಜೆ ಸರಿಸುಮಾರು ಐದು ಗಂಟೆಯಿಂದ ಆರಂಭವಾಗಿ ರಾತ್ರಿಿ ಒಂಬತ್ತೂವರೆವರೆಗೂ ಇಡೀ ಮೈದಾನ ಸಂಭ್ರಮದಲ್ಲಿ ಮಿಂದೆದ್ದಿತು. ಸಾವಿರಾರು ಜನ ಈ ವಿವಿಧ ರೀತಿಯ ಕಾರ್ಯಕ್ರಮಕ್ಕೆೆ ಸಾಕ್ಷಿಯಾಗಿ ಕಣ್ತುಂಬಿಕೊಂಡರು. ವಿವಿಧ ಶ್ರೀರಾಮ ಸಂಕೀರ್ತನೆ ಗಮನ ಸೆಳೆಯಿತು.

ರಾವಣನ ಪ್ರತಿಕೃತಿ ದಹನ ಕಲೆ
ರಾವಣ ಕುಂಭಕರ್ಣರ ಪ್ರತಿಕೃತಿ, ಇದನ್ನು ತಯಾರಿಸುವುದು ಒಂದು ಕಲೆಯೂ ಹೌದು. ರಾಜಸ್ಥಾಾನದ ಸಮುದಾಯವೊಂದು ಈ ಕಲೆಯನ್ನು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಬಂದಿದೆ. ಇದೇ ಸಮುದಾಯಕ್ಕೆೆ ಸೇರಿದ ಅರ್ಮ ಮತ್ತು ಸಂಗಡಿಗರು ಇಸ್ಕಾಾನ್ ನ ಸೌಲಭ್ಯ ಮತ್ತು ವಿನ್ಯಾಾಸ ತಂಡದ ಸಹಾಯದಿಂದ ಪ್ರತಿಕೃತಿ ತಯಾರಿಸಿದ್ದರು. ಪ್ರತಿಕೃತಿ ತಯಾರಕರು ಅಗತ್ಯವಾದ ಸೂಕ್ತ ಸಾಮಗ್ರಿಿಗಳ ಆಯ್ಕೆೆಯಲ್ಲಿ ಅಪಾರವಾದ ತೋರಿಸಿದ್ದಾರೆ. ಪ್ರತಿಕೃತಿಗಳನ್ನು ತಯಾರಿಸಲು ಬಿದಿರಿನ ಕೋಲು, ಒಣಹುಲ್ಲು, ಕಾರ್ಡ್ ಬೋರ್ಡ್ ಮುಂತಾದವುಗಳನ್ನು ಆಯ್ಕೆೆ ಮಾಡಿಕೊಂಡಿದ್ದಾರೆ ಎಂದು ಇಸ್ಕಾಾನ್ ಬೆಂಗಳೂರು ಮತ್ತು ಅಕ್ಷಯ ಪಾತ್ರದ ವಿಶ್ವ ಕಾರ್ಯಕ್ರಮ ಪ್ರವರ್ತಕ ಮುಖ್ಯಸ್ಥ ನವೀನ ನೀರದ ದಾಸ ಅವರು ತಿಳಿಸಿದರು.

ರಾವಣ ಕುಂಭಕರ್ಣ ಪ್ರತಿಕೃತಿ ದಹನಕ್ಕೆೆ ಸಿದ್ಧಪಡಿಸಲಾಗಿರುವ ಚಿತ್ರ

Leave a Reply

Your email address will not be published. Required fields are marked *