Monday, 20th January 2020

ಸರಕಾರಿ ಶಾಲೆ ಮತ್ತು ಶಿಕ್ಷಕರ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ.

 ಸಮಸ್ಯೆೆ

ಶಿಕ್ಷಣ ಎಂಬ ಮೂರಕ್ಷರ ಮನುಷ್ಯನ ಬದುಕನ್ನು, ವ್ಯಕ್ತಿತ್ವವನ್ನು ರೂಪಿಸುವಂಥದ್ದು. ಜತೆಗೆ ಮನುಷ್ಯನ ಬದುಕಿನ ಆಚೆಗೆ ಉತ್ತಮ ಸಮಾಜ, ಪರಿಪೂರ್ಣ ರಾಷ್ಟ್ರವಾಗಿ ಮುಂದಡಿಯಿಡಲು ಪೂರಕ ಮಾರ್ಗವನ್ನು ಒದಗಿಸುವ ವ್ಯವಸ್ಥೆೆಯೆನ್ನಬಹುದು. ಜತೆಗೆ ಉದ್ಯೋೋಗದ ಹಾದಿಗೂ ಅಡಿಪಾಯ ನಮ್ಮ ಶಿಕ್ಷಣ. ಹಾಗೆಂದ ಮಾತ್ರಕ್ಕೆೆ ಶಿಕ್ಷಣ ಅಥವಾ ಒಂದಕ್ಷರ ವಿದ್ಯೆೆಯನ್ನು ಕಲಿಯದವರೂ ಕೂಡ ಉದ್ಯಮ ಕ್ಷೇತ್ರ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಮೈಲಿಗಲ್ಲು ಸಾಧಿಸಿದವರಿದ್ದಾರೆ. ಆದರೆ ನೈತಿಕ ಬದುಕನ್ನು ಕಟ್ಟಿಿಕೊಳ್ಳಲು ಶಿಕ್ಷಣ ಅತ್ಯವಶ್ಯಕ. ನಮ್ಮ ಹಿರಿಯರ ಕಾಲದ ಶಿಕ್ಷಣವನ್ನು ಮತ್ತು ಆಧುನಿಕ ಕಾಲದ ಶಿಕ್ಷಣ ವ್ಯವಸ್ಥೆೆಯನ್ನು, ಪಠ್ಯ ಚಟುವಟಿಕೆಗಳನ್ನು ತುಲನೆ ಮಾಡಿದಾಗ ಅಜಗಜಾಂತರ ವ್ಯತ್ಯಾಾಸವನ್ನು ಕಾಣಬಹುದು.

ಹಿಂದಿನ ಕಾಲದ ಮೂರನೆಯ ತರಗತಿಯ ಶಿಕ್ಷಣಕ್ಕೆೆ ಆಧುನಿಕ ಶಿಕ್ಷಣದ ಹತ್ತನೆಯ ತರಗತಿಯ ಶಿಕ್ಷಣದಷ್ಟರ ಮಟ್ಟಿಿಗಿನ ಮೌಲ್ಯವಿದೆ. ಕಾಲ ಬದಲಾಗಿದೆ. ಆಧುನಿಕತೆಯ, ತಂತ್ರಜ್ಞಾನದ ಯುಗದಲ್ಲಿ ಸ್ಪರ್ಧಾತ್ಮಕ ಬದುಕನ್ನು ಮನುಷ್ಯ ಇಂದು ಎದುರಿಸಬೇಕಾದ ಸ್ಥಿಿತಿಗತಿಗಳಿವೆ. ವಿದ್ಯೆೆ ಎಂಬುವುದು ಕೇವಲ ಉದ್ಯೋೋಗಕ್ಕೆೆ ಸೀಮಿತ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ನಮ್ಮ ಹಿರಿಯರ ಕಾಲಘಟ್ಟದಲ್ಲಿ ಬಡತನದ ಕಾರಣಕ್ಕೋೋ ಅಥವಾ ಪರಿಸ್ಥಿಿತಿಯ ಕಾರಣಕ್ಕೋೋ ವಿದ್ಯಾಾರ್ಜನೆ ಎಂಬುವುದು ಕಬ್ಬಿಿಣದ ಕಡಲೆಯೇ ಆಗಿತ್ತು. ಆದರೆ ಇಂದಿನ ವ್ಯವಸ್ಥೆೆಗಳು ಹಾಗಿಲ್ಲ.

ಪ್ರತಿ ಬಡವನ ಮನೆಯು ಇಂದು ಸಾಮಾನ್ಯ ಅಂದರೆ ಪದವಿ ಶಿಕ್ಷಣವನ್ನು ಹೊಂದಿದೆ. ತಂದೆ-ತಾಯಂದಿರು ಕೂಡ ತಮ್ಮ ಕಾಲದ ಬಡತನದ ಕಾರಣಕ್ಕೆೆ ಬವಣೆ ಪಟ್ಟ ಸ್ಥಿಿತಿಗತಿಗಳನ್ನು ನೆನೆದು ತಮ್ಮ ಸ್ಥಿಿತಿಗತಿಗಳು ತಮ್ಮ ಮಕ್ಕಳಿಗೆ ಬಾರದಿರಲಿ ಎಂಬ ಸದುದ್ದೇಶದಿಂದ ಹಗಲಿರುಳು ಬೆವರು ಸುರಿಸಿ ಶಿಕ್ಷಣ ನೀಡುತ್ತಿಿರುವ ಈ ಕಾಲಘಟ್ಟದ ಬಗ್ಗೆೆ ಹೆಮ್ಮೆೆ ಪಡುವಂತಹ ವಿಚಾರವೇ ಸರಿ.

ಆದರೆ ಪ್ರಸ್ತುತ ಸರಕಾರದ ಶಿಕ್ಷಣ ವ್ಯವಸ್ಥೆೆಗಳು ಸಾಕಷ್ಟು ಸಮಸ್ಯೆೆಗಳನ್ನು ಎದುರಿಸುತ್ತಿಿದ್ದು, ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆ ಎಂಬುದು ಮರೀಚಿಕೆಯಾದ ಕಾರಣ ರಾಜ್ಯದ ಸಾವಿರಾರು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆೆ ತಲುಪಿರುವುದು ವಿಪರ್ಯಾಸ. ಇಂದು ರಾಜ್ಯದ ಅದೆಷ್ಟೋೋ ಸರಕಾರಿ ಕನ್ನಡ ಶಾಲೆಗಳಲ್ಲಿ ಹಾಜರಾತಿ ಕೊರತೆ, ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಸರಕಾರಿ ಶಾಲೆಗಳ ಕುರಿತಾದ ಜನಸಾಮಾನ್ಯರಲ್ಲಿ ಅಸಡ್ಡೆೆ, ಪ್ರತಿಷ್ಠೆೆಯ ಕಾರಣಕ್ಕಾಾಗಿ ಆಂಗ್ಲ ಮಾಧ್ಯಮದ ಮೊರೆ ಹೋಗುವ ಕಾರಣಕ್ಕೆೆ ಸರಕಾರಿ ಶಾಲೆಗಳೆಂದರೆ ಬಡವರ ಶಾಲೆ ಎಂಬ ಕೀಳರಿಮೆಗೆ ಪಾತ್ರವಾಗುತ್ತಿಿದೆ.

ರಾಜ್ಯದ ಕೆಲ ಭಾಗದ ಸರಕಾರಿ ಶಾಲೆಗಳಲ್ಲಿ ಶಿಥಿಲಾವಸ್ಥೆೆಯಲ್ಲಿರುವ ಗೋಡೆಗಳು, ಶಾಲೆಗಳಲ್ಲಿ ಕಿಟಕಿ, ಬಾಗಿಲುಗಳಿಲ್ಲದಿರುವುದು, ಬೆಂಚು ಡೆಸ್ಕುಗಳಿಲ್ಲದಿರುವುದು, ಒಂದು ಶಾಲೆಗೆ ಒಬ್ಬರೇ ಶಿಕ್ಷಕರು ಇಂತಹ ಸಂದಿಗ್ಧ ಪರಿಸ್ಥಿಿತಿಗಳು ಬೆಳೆಯುವ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತಿಿಲ್ಲ.ಇವು ಶಾಲಾ ಅವ್ಯವಸ್ಥೆೆಯ ಗೋಳಾದರೆ, ಇನ್ನೊೊಂದೆಡೆ ಶಿಕ್ಷಕ ವೃಂದವೂ ಸರಕಾರಿ ವ್ಯವಸ್ಥೆೆಗಳ ದಿನಕ್ಕೊೊಂದರ ಕಾನೂನುಗಳು, ಹಲವು ವರ್ಷಗಳಿಂದ ಹಳ್ಳ ಹಿಡಿದ ವರ್ಗಾವಣೆ ಪ್ರಕ್ರಿಿಯೆಗಳು, ವರ್ಗಾವಣೆ ಪ್ರಕ್ರಿಿಯೆ ಕುರಿತಂತೆ ನೂರಾರು ಷರತ್ತುಗಳು, ಸಮಸ್ಯೆೆಗಳನ್ನು ಎದುರಿಸುತ್ತಿಿದೆ.
ಶಿಕ್ಷಣ ವ್ಯವಸ್ಥೆೆಗಳನ್ನು ಉತ್ತಮಗೊಳಿಸುವಲ್ಲಿ ರಾಜ್ಯದಲ್ಲಿ ಖಾಲಿ ಬಿದ್ದಿರುವ ಸಾವಿರಾರು ಹುದ್ದೆಗಳನ್ನು ಭರ್ತಿಗೊಳಿಸುವಲ್ಲಿ ಸರಕಾರಗಳು ಮೀನಾಮೇಷ ಎಣಿಸುತ್ತಿಿವೆ.

ಕಳೆದ ಸರಕಾರ ಜಾರಿಗೊಳಿಸಿದ್ದ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಆಂಗ್ಲ ಶಿಕ್ಷಣ ಕುರಿತಂತೆ ಹಲವಾರು ಗೊಂದಲ ಏರ್ಪಟ್ಟಿಿದ್ದು, ಈಗಾಗಲೇ ಸಾಹಿತಿಗಳ, ಕನ್ನಡ ಪರ ಹೋರಾಟಗಾರರ ಒಂದು ಗುಂಪು ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು, ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆಯಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿಿದೆ, ಖಾಸಗಿ ಶಾಲೆಗೆ ಹೋಗುವ ಮಕ್ಕಳಿಗಿಂತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುವ ವಿದ್ಯಾಾರ್ಥಿಗಳ ಸಂಖ್ಯೆೆ ಕಡಿಮೆಯಿದೆ ಮತ್ತು ಒಂದನೆಯ ತರಗತಿಯಿಂದ ಏಳನೆಯ ತರಗತಿಯವರೆಗಿನ ಶಿಕ್ಷಣದಲ್ಲಿ ಭಾಷೆ ಬದಲಾವಣೆ ಮಾಡದಂತೆ ರಾಜ್ಯದ ಮುಖ್ಯಮಂತ್ರಿಿಗಳನ್ನು ಆಗ್ರಹಿಸಿದೆ.

ಸರಕಾರ ರಾಜ್ಯದ ಶಿಕ್ಷಣ ತಜ್ಞರುಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನಿಯೋಗಕ್ಕೆೆ ನೀಡಿದೆ. ಆಧುನಿಕ ಕಾಲದ ಸ್ಥಿಿತಿಗತಿಗೆ ಸಂಬಂಧಿಸಿದಂತೆ ಆಂಗ್ಲ ಶಿಕ್ಷಣದ ಅವಶ್ಯಕತೆ ಎಲ್ಲಾ ವಿದ್ಯಾಾರ್ಥಿಗಳಿಗೂ ಕಡ್ಡಾಾಯವಾಗಿ ಇದೆ. ಆದರೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಬೋಧನೆಗೆ ಸಂಬಂಧಿಸಿದಂತೆ ಹಾಲಿ ಶಾಲೆಗಳ ಇನ್ನಿಿತರ ವಿಷಯದ ಶಿಕ್ಷಕರನ್ನೇ ನಿಯೋಜಿಸಬೇಕೆಂಬುದು ಹಿಂದಿನ ಸರಕಾರ ಜಾರಿಗೊಳಿಸಿರುವ ಕಾನೂನಿನಿಂದ ಸಮಾಜ ವಿಷಯವೋ ಅಥವಾ ವಿಜ್ಞಾನ ವಿಷಯದ ಶಿಕ್ಷಕರಿಂದಲೋ ಉತ್ತಮ ಗುಣಮಟ್ಟದ ಆಂಗ್ಲ ಶಿಕ್ಷಣವನ್ನು ವಿದ್ಯಾಾರ್ಥಿಗಳು ನಿರೀಕ್ಷಿಸಲು ಅಸಾಧ್ಯ. ಇದೊಂದು ರೀತಿಯಲ್ಲಿ ಶಿಕ್ಷಕರು ಕಾಟಾಚಾರಕ್ಕೆೆಂಬಂತೆ ಬೋಧಿಸಬೇಕಷ್ಟೇ.

ಬೋಧಿಸುವುದೇ ಆದರೂ ಆಂಗ್ಲ ವಿಷಯಕ್ಕೆೆ ಸಂಬಂಧಿಸಿದಂತೆ ಪ್ರತ್ಯೇಕ ಶಿಕ್ಷಕರನ್ನು ಸರಕಾರ ಹೊಸದಾಗಿ ನೇಮಕಗೊಳಿಸಬೇಕು. ಜತೆಗೆ ಇನ್ನೂ ಈ ಯೋಜನೆಗಳನ್ನು ಬಲವರ್ಧನೆಗೊಳಿಸುವುದರೊಂದಿಗೆ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ಬಡ್ತಿಿ ಸೇರಿದಂತೆ ಸಾಮಾಜಿಕ ಬದಲಾವಣೆ, ಶೈಕ್ಷಣಿಕ ಸುಧಾರಣೆಗೆ ರಾಜ್ಯ, ಕೇಂದ್ರ ಸರಕಾರಗಳು ಹೆಚ್ಚು ಆಧ್ಯತೆ ನೀಡುವಂತಾಗಬೇಕು.

ಗ್ರಾಮೀಣ, ನಗರ ಪ್ರದೇಶದ ಮಕ್ಕಳನ್ನು ಸರಕಾರಿ ಶಾಲೆಗಳೆಡೆಗೆ ಆಕರ್ಷಿಸಲು ಸರಕಾರಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳುವುದರೊಂದಿಗೆ ಕೀಳರಿಮೆಯನ್ನು ಹೋಗಲಾಡಿಸುವಂತಾಗಬೇಕು. ಮನುಷ್ಯನ ಮೂಲಭೂತ ಕರ್ತವ್ಯವಾದ ಶಿಕ್ಷಣದಲ್ಲಿ ಹೊಸ ಚೈತನ್ಯ ಮೂಡುವಂತಾಗಬೇಕು. ಶಿಕ್ಷಣವೆಂಬುವುದು ಸರ್ವವ್ಯಾಾಪಿ, ಸರ್ವಸ್ಪರ್ಶಿಯಾಗಬೇಕು. ಪಠ್ಯಪುಸ್ತಕಗಳಲ್ಲೂ ಮೌಲ್ಯಯುತ ಪಾಠಗಳ ಜತೆಗೆ ವೀರಪುರುಷರ, ಸಾಧಕರ ಪ್ರೇರಣಾದಾಯಿ ವಿಚಾರಗಳನ್ನೇ ವಿಷಯವಾಗಿಸುವೆಡೆಗೆ ಸರಕಾರಗಳು ಆಧ್ಯತೆ ನೀಡಬೇಕು.

ಆದರ್ಶ್ ಶೆಟ್ಟಿಿ ಉಪ್ಪಿನಂಗಡಿ.

Leave a Reply

Your email address will not be published. Required fields are marked *