Friday, 19th August 2022

ಪೆಟ್ರೋಮ್ಯಾಕ್ಸ್’ನಲ್ಲಿ ಕಾಮಿಡಿ ಕಚಗುಳಿ

ನೀನಾಸಂ ಸತೀಶ್ ನಾಯಕನಾಗಿ ನಟಿಸಿರುವ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಕಾಮಿಡಿ ಕಚಗುಳಿ ಇಡುತ್ತಿದೆ.

ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ನೀನಾಸಂ ಸತೀಶ್ ಚಿತ್ರ ಎಂದಮೇಲೆ ಯಾವೆಲ್ಲಾ ಅಂಶಗಳು ಚಿತ್ರದಲ್ಲಿ ಇರಬೇಕೋ ಅದೆಲ್ಲವೂ ಪೆಟ್ರೋಮ್ಯಾಕ್ಸ್‌ನಲ್ಲಿದೆ. ಹರಿಪ್ರಿಯಾ ನಾಯಕಿಯಾಗಿ ಬಣಹಚ್ಚಿದ್ದಾರೆ. ನೀರ್ ದೋಸೆ ಬಳಿಕ ಬಲು ಹಾಟ್ ಆಗಿ, ಬೋಲ್ಡ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.

ಅಚ್ಯುತ್ ಕುಮಾರ್, ಕಾರುಣ್ಯಾ ರಾಮ್, ನಾಗಭೂಷಣ್ ಮತ್ತಿತರರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಪೆಟ್ರೋಮ್ಯಾಕ್ಸ್ ಮೂಡಿಬರುತ್ತಿದೆ ಎಂದಾಗಲೇ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿತ್ತು. ಟ್ರೇಲರ್ ರಿಲೀಸ್ ಆದ ಬಳಿಕ ಕ್ಯೂರಿಯಾಸಿಟಿ ಇಮ್ಮಡಿಗೊಂಡಿದೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ ಪೆಟ್ರೋಮ್ಯಾಕ್ಸ್ ಮುಂದಿನ ಶುಕ್ರವಾರ ತೆರೆಗೆ ಬರಲಿದೆ. ಹಾಸ್ಯದ ಜತೆಗೆ ಬಾಂಧವ್ಯದ ಕಥೆಯೂ ಚಿತ್ರದಲ್ಲಿದೆ. ಒಂದಷ್ಟು ಥ್ರಿಲ್ಲರ್ ಅಂಶಗಳು ಕೂಡ ಚಿತ್ರದ ಕಥೆಯಲ್ಲಿ ಅಡಕವಾಗಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಸುರೇಶ್ ಅರಸ್ ಸಂಕಲನ, ಹೊಸಮನೆ ಮೂರ್ತಿ ಕಲಾ ನಿರ್ದೇಶನ, ಎ.ಆರ್. ನಿರಂಜನ್ ಬಾಬು ಛಾಯಾಗ್ರಹಣ ಈ ಚಿತ್ರಕ್ಕಿದೆ.